-ಶೀಲಾ ಸಿ. ಶೆಟ್ಟಿ, ಬೆಂಗಳೂರು
ʼಮಹಾ ನಟಿʼ ಕೀರ್ತಿ ಸುರೇಶ್‌ರಂತೆ ರೇಷ್ಮೆ ಸೀರೆಯಲ್ಲೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಯಾರಿಗೆ ಇಷ್ಟವಿಲ್ಲ, ಹೇಳಿ ನೋಡೋಣ! ಪ್ರತಿ ಮಹಿಳೆಗೂ ತಾನು ಕೂಡ ತಾನು ರೇಷ್ಮೆ ಸೀರೆಯಲ್ಲೂ ಅಂದವಾಗಿ, ಅದರಲ್ಲೂ ಗ್ಲಾಮರಸ್ ಆಗಿ, ಸೆಲೆಬ್ರೆಟಿ ಲುಕ್‌ನಲ್ಲಿ ಕಾಣಿಸಬೇಕೆಂಬ ಬಯಕೆ ಇದ್ದೇ ಇರುತ್ತದೆ. ಇದಕ್ಕಾಗಿ ಹೆಚ್ಚೆನೂ ಮಾಡಬೇಕಾಗಿಲ್ಲ! ಸೆಲೆಬ್ರೆಟಿಗಳು ಪಾಲಿಸುವ ಸೀರೆ ಸೆಲೆಕ್ಷನ್‌ನ ಐಡಿಯಾ, ಸ್ಟೈಲಿಂಗ್ ಟಿಪ್ಸ್ ಹಾಗೂ ಡ್ರೇಪಿಂಗ್ ಟಿಪ್ಸ್ ಫಾಲೋ ಮಾಡಿದರೇ ಸಾಕು, ಅವರಂತೆಯೇ ನೀವೂ ಕೂಡ ಗ್ಲಾಮರಸ್ ಆಗಿ ಕಾಣಿಸಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ ಮಂಗಲಾ. ಈ ಕುರಿತಂತೆ ಒಂದೈದು ಸಿಂಪಲ್ (Star Saree Fashion) ಐಡಿಯಾಗಳನ್ನು ನೀಡಿದ್ದಾರೆ.
ವೆಡ್ಡಿಂಗ್‌ಗೆ ರೇಷ್ಮೆ ಸೀರೆಯ ಆಯ್ಕೆ ಹೀಗಿರಲಿ
ರೇಷ್ಮೆ ಸೀರೆಗಳಲ್ಲಿ ಕೆಲವು ಸಾಫ್ಟ್ ಫ್ಯಾಬ್ರಿಕ್‌ನವು ದೊರೆಯುತ್ತವೆ. ಇವನ್ನು ಉಟ್ಟಾಗ ದೇಹ ಪ್ಲಂಪಿಯಾಗಿ ಕಾಣಿಸುವುದಿಲ್ಲ. ಅಂತಹ ಫ್ಯಾಬ್ರಿಕ್‌ನ ಸೀರೆಗಳನ್ನೇ ಆಯ್ಕೆ ಮಾಡಿ, ಉಡಿ.
ಪಾಸ್ಟೆಲ್ ಶೇಡ್ ಹಾಗೂ ಪ್ರಿಂಟ್ಸ್ ಸೀರೆ ಆಯ್ಕೆ
ಈ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಪೀಚ್, ಪಿಂಕ್, ಪಿಸ್ತಾದಂತಹ ಪಾಸ್ಟೆಲ್ ಶೇಡ್ ಇರುವಂತಹ ಅಥವಾ ಲೈಟ್ ಪ್ರಿಂಟ್ಸ್ ಇರುವಂತಹ ರೇಷ್ಮೆ ಸೀರೆಗಳನ್ನು ಉಡಿ. ಇದು ಟ್ರೆಂಡಿಯಾಗಿ ಕಾಣಿಸುವುರೊಂದಿಗೆ ಯಂಗ್ ಲುಕ್ ನೀಡುತ್ತದೆ.
ಗ್ಲಾಮರಸ್ ಲುಕ್‌ಗಾಗಿ ಡಿಸೈನರ್ ಬ್ಲೌಸ್
ರೇಷ್ಮೆ ಸೀರೆಗೂ ಗ್ಲಾಮರಸ್ ಲುಕ್ ಬೇಕಾದಲ್ಲಿ, ಹಾಲ್ಟರ್ ನೆಕ್, ಸ್ಲೀವ್‌ಲೆಸ್ ಅಥವಾ ಮೆಗಾ ಸ್ಲೀವ್, ಬಿಕಿನಿ ಬ್ಲೌಸ್ ಡಿಸೈನ್‌ನವನ್ನು ಆಯ್ಕೆ ಮಾಡಬಹುದು. ಆಗ ರೇಷ್ಮೆ ಸೀರೆಗೂ ಗ್ಲಾಮರಸ್ ಟಚ್ ಸಿಗುತ್ತದೆ.
ಸೀರೆ ಡ್ರೇಪಿಂಗ್ ಹೀಗಿರಲಿ
ಮದುವೆಯಲ್ಲಿ ಉಡುವ ರೇಷ್ಮೆ ಸೀರೆಯ ಡ್ರೇಪಿಂಗ್ ಪರ್ಫೆಕ್ಟ್ ಆಗಿರಬೇಕು. ಇದಕ್ಕಾಗಿ ಮೊದಲೇ ಸೀರೆಯ ನೆರಿಗೆ ಹಾಗೂ ಸೆರಗನ್ನು ರೆಡಿ ಮಾಡಿಟ್ಟುಕೊಳ್ಳಬಹುದು. ಫಿಟ್ ಆಗಿ ಕೂರುವಂತೆ ಸೀರೆಯನ್ನು ಉಡುವುದು ಒಂದು ಕಲೆ. ಸರಿಯಾದ ಡ್ರೇಪಿಂಗ್ ಕೂಡ ನೋಡಲು ಆಕರ್ಷಕವಾಗಿ ಬಿಂಬಿಸುತ್ತದೆ.
ಸೆಲೆಬ್ರೆಟಿ ಮೇಕೋವರ್
ಸೆಲೆಬ್ರೆಟಿ ಲುಕ್‌ಗಾಗಿ ಆದಷ್ಟೂ ಟ್ರೆಂಡಿಯಾಗಿರುವ ಸ್ಟೇಟ್‌ಮೆಂಟ್ ಜ್ಯುವೆಲರಿಗಳನ್ನು ಧರಿಸಿ. ಹೇರ್‌ಸ್ಟೈಲ್ ಮೇಕಪ್‌ಗೆ ಮ್ಯಾಚ್ ಆಗುವಂತಿರಲಿ. ತುಟಿಗಳ ವರ್ಣ ತಿಳಿಯಾಗಿರಲಿ. ಮ್ಯಾಚಿಂಗ್ ಫುಟ್‌ವೇರ್ ಹಾಗೂ ಆಕ್ಸೆಸರೀಸ್ ಕೂಡ ಅಂದ ಹೆಚ್ಚಿಸಬಲ್ಲವು.
( ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Celebrity Fashion: ಬ್ಲೇಜರ್‌ನಲ್ಲಿ ನಟ ಸುದೀಪ್ ಪುತ್ರಿ ಸಾನ್ವಿ ಕ್ಲಾಸಿ ಲುಕ್!