ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿರುತೆರೆಯಲ್ಲಿ ಪಾರೂ ಎಂದೇ ಖ್ಯಾತಿ ಗಳಿಸಿರುವ ನಟಿ ಮೋಕ್ಷಿತಾ ಪೈ ಈ ಸೀಸನ್‌ನಲ್ಲಿ ಮಹಿಳೆಯರ ಪ್ರೀತಿಗೆ ಪಾತ್ರವಾಗಿರುವ ಟ್ರಾನ್ಸಪರೆಂಟ್ ಅರ್ಗಾನ್ಜಾ ಸೀರೆಯಲ್ಲಿ (Star Saree Fashion) ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸೀರೆ ಪ್ರಿಯರ ಲಿಸ್ಟ್‌ನಲ್ಲಿರುವ ಈ ಅರ್ಗಾನ್ಜಾ ಪಾಸ್ಟೆಲ್ ಸೀರೆಗಳು ಈ ಸೀಸನ್‌ನಲ್ಲಿ ಯಾವ ಮಟ್ಟಿಗೆ ಟ್ರೆಂಡಿಯಾಗಿವೆ, ಎಂದರೇ ನೋಡಲು ಆಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ, ಜೊತೆಗೆ ಬ್ರಿಥೆಬಲ್ ಫ್ಯಾಬ್ರಿಕ್‌ನಲ್ಲಿ ಬಂದಿವೆ. ಹಾಗಾಗಿ ಮಾನಿನಿಯರನ್ನು, ಅದರಲ್ಲೂ ಸೀರೆ ಪ್ರಿಯರನ್ನು ಬರಸೆಳೆದಿವೆ.
ನಟಿ ಮೋಕ್ಷಿತಾ ಸೀರೆ ಲವ್
ಪಾರೂ ಸೀರಿಯಲ್‌ನಲ್ಲಿ ಕರಾರುವಕ್ಕಾಗಿ ಸೀರೆಗಳನ್ನು ಉಟ್ಟು ಕಾಣಿಸಿಕೊಳ್ಳುತ್ತಿದ್ದ, ನಟಿ ಪಾರು ಅಲಿಯಾಸ್ ಮೋಕ್ಷಿತಾಗೆ ಸಾಕಷ್ಟು ಮಂದಿ ಯಾವ ಸೀರೆ ಉಟ್ಟಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಹುಟ್ಟಿಕೊಂಡಿದ್ದರಂತೆ. ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಇವರ ಸೀರೆಗಳ ಡ್ರೇಪಿಂಗ್ ಹಾಗೂ ಅವುಗಳ ಸ್ಟೈಲಿಂಗ್‌ಗನ್ನು ಗಮನಿಸುತ್ತಿದ್ದರಂತೆ. ಆ ಮಟ್ಟಿಗೆ ರೂರಲ್ ಹೆಣ್ಣುಮಕ್ಕಳು ಇವರ ಸೀರೆಗಳ ಅಭಿಮಾನಿಯಾಗಿದ್ದರಂತೆ. ಹಾಗೆಂದು ಟೆಲಿವಿಷನ್ ಸ್ಟೈಲಿಸ್ಟ್‌ಗಳೇ ಹೇಳುತ್ತಾರೆ. ಇನ್ನು, ಮೋಕ್ಷಿತಾ ಕೂಡ ಕೇವಲ ಧಾರವಾಹಿಯಲ್ಲಿ ಮಾತ್ರವಲ್ಲ, ಸಾಕಷ್ಟು ಬಾರಿ ಸೋಷಿಯಲ್ ಮೀಡಿಯಾದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ನನಗಂತೂ ಸೀರೆಗಳೆಂದರೇ ಸಖತ್ ಇಷ್ಟ. ಇವು ನಮ್ಮ ಸಂಸ್ಕೃತಿಯ ಧ್ಯೋತಕ ಎನ್ನುತ್ತಾರೆ ಮೋಕ್ಷಿತಾ. ಡಿಫರೆಂಟ್ ಸೀರೆಗಳನ್ನು ಉಡುವುದು, ವಿಭಿನ್ನವಾದ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಳ್ಳುವುದು ತುಂಬಾ ಇಷ್ಟ ಎನ್ನುತ್ತಾರೆ ಮೋಕ್ಷಿತಾ.
ಈ ಪಾಸ್ಟೆಲ್ ಸೀರೆ ಪ್ರಿಯರಿಗೆ ಆಕರ್ಷಕವಾಗಿ ಕಾಣಿಸಿಕೊಳ್ಳಲು ಒಂದಿಷ್ಟು ಸಿಂಪಲ್ ಐಡಿಯಾಗಳನ್ನು ನೀಡಿದ್ದಾರೆ.
ಪಾಸ್ಟೆಲ್ ಸೀರೆಗಿರಲಿ ಕಾಂಟ್ರಾಸ್ಟ್ ಬ್ಲೌಸ್
ಧರಿಸುವ ಅರ್ಗಾನ್ಜಾ ಸೀರೆ ಹಾಗೂ ಅದಕ್ಕೆ ಧರಿಸುವ ಬ್ಲೌಸ್ ಮ್ಯಾಚಿಂಗ್ ಕಾಂಟ್ರಾಸ್ಟ್ ಆಗಿದ್ದರೇ ಉತ್ತಮ. ಆಗ ಸೀರೆ ನೋಡಲು ಎದ್ದು ಕಾಣುತ್ತದೆ. ಪಾಸ್ಟೆಲ್ ಶೇಡ್‌ನ ಸೀರೆ ಹೈಲೈಟಾಗುತ್ತದೆ.
ಸಿಂಪಲ್ ಮೇಕಪ್ ಹಾಗೂ ಹೇರ್‌ಸ್ಟೈಲ್
ಅರ್ಗಾನ್ಜಾ ಸೀರೆಗೆ ಸಿಂಪಲ್ ಮೇಕಪ್ ಮಾಡಿದರೂ ಸಾಕು. ಡಾರ್ಕ್ ಮೇಕಪ್ ಸೂಟ್ ಆಗದು. ಹಾಗಾಗಿ ಮೇಕಪ್ ಹಿತಮಿತವಾಗಿರಲಿ. ಇನ್ನು ಹೇರ್‌ಸ್ಟೈಲ್ ಕೂಡ ಅಷ್ಟೇ, ತೀರಾ ಕಾಂಪ್ಲಿಕೇಟೆಡ್ ಹೇರ್‌ಸ್ಟೈಲ್ ಮಾಡಕೂಡದು.
ಜ್ಯುವೆಲರಿ ಮಿನಿಮಲ್ ಆಗಿರಲಿ
ಈ ಪಾಸ್ಟೆಲ್ ಸೀರೆ ಎದ್ದು ಕಾಣಬೇಕಾದಲ್ಲಿ ಆದಷ್ಟೂ ಕಡಿಮೆ ಜ್ಯುವೆಲರಿ ಧರಿಸುವುದು ಉತ್ತಮ. ಅದರಲ್ಲೂ ಸಿಂಪಲ್ ನೆಕ್‌ಪೀಸ್ ಹಾಗೂ ಕಡ, ಇಯರಿಂಗ್ಸ್ ಹಾಕಿದರೇ ಸಾಕು. ಇನ್ನು ಬ್ಲೌಸ್ ಹೈ ನೆಕ್ ಅಥವಾ ಫುಲ್ ನೆಕ್ ಇದ್ದಲ್ಲಿ, ಎಂಬ್ರಾಯ್ಡರಿ ಡಿಸೈನ್ ಮಾಡಿಸಿದ್ದಲ್ಲಿ ನೋಡಿಕೊಂಡು ಆಭರಣಗಳನ್ನು ಧರಿಸುವುದು ಉತ್ತಮ. ಹೆಚ್ಚು ಆಭರಣಗಳ ಅಗತ್ಯವಿರುವುದಿಲ್ಲ.
ಅರ್ಗಾನ್ಜಾ ಸೀರೆ ಪಾಸ್ಟೆಲ್ ಶೇಡ್‌ನದ್ದಾಗಿರಲಿ
ನೀವು ಆಯ್ಕೆ ಮಾಡುವ ಅರ್ಗಾನ್ಜಾ ಸೀರೆ ಪಾಸ್ಟೆಲ್ ಶೇಡ್‌ನದ್ದಾಗಿರಲಿ. ಸೀರೆಯು ಡಿಸೈನರ್ ಡಿಸೈನ್ ಹೊಂದಿದ್ದಲ್ಲಿ ಅದಕ್ಕೆ ತಕ್ಕಂತೆ ಮೇಕೋವರ್ ಮಾಡುವುದು ಅಗತ್ಯ. ಇನ್ನು ಪಾಸ್ಟೆಲ್ ಶೇಡ್‌ಗಳು ಸಮ್ಮರ್‌ನಲ್ಲಿ ಫ್ರೆಶ್ ಲುಕ್ ನೀಡುವುದರೊಂದಿಗೆ ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ.
ಡ್ರೇಪಿಂಗ್ ಹೀಗಿರಲಿ
ಅರ್ಗಾನ್ಜಾ ಸೀರೆಗಳನ್ನು ಆದಷ್ಟೂ ಒಟ್ಟೊಟ್ಟಿಗೆ ಪಿನ್ ಮಾಡುವುದಕ್ಕಿಂತ, ಸಿಂಗಲ್ ಪಿನ್ ಮಾಡುವುದು ಉತ್ತಮ. ಯಾಕೆಂದರೇ ಅದರ ಡಿಸೈನ್ ಹಾಗೂ ಲುಕ್ ಹೈ ಲೈಟಾಗುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಕ್ರಾಪ್ ಟೀ ಶರ್ಟ್ ಸ್ಟೈಲಿಂಗ್‌ಗೆ 3 ಐಡಿಯಾ