Site icon Vistara News

Star Street Fashion: ಬೆಂಗಳೂರಿನ ರಸ್ತೆಯಲ್ಲಿ ಕಾಂತಾರ ಬೆಡಗಿಯ ಹೈ ಸ್ಟ್ರೀಟ್‌ ಫ್ಯಾಷನ್‌!

Star Street Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಸಪ್ತಮಿ ಗೌಡರ ಹೈ ಸ್ಟ್ರೀಟ್‌ ಫ್ಯಾಷನ್‌ಗೆ (Star Street Fashion) ಅಭಿಮಾನಿಗಳು ಫಿದಾ ಆಗಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ, ನೆವಿ ಬ್ಲ್ಯೂ ಶೇಡ್‌ನ ಮಿನಿ ಸ್ಕರ್ಟ್, ಕಾಲರ್‌ ಬಟನ್‌ ಜಾಕೆಟ್‌ ಧರಿಸಿ, ಹೈ ಸ್ಟ್ರೀಟ್‌ ಫ್ಯಾಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅವರ ಈ ಸ್ಟೈಲಿಂಗ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ.

ಮೂಗುತಿ ತೆಗೆದ ಕಾಂತಾರ ಸುಂದರಿ

ʼಕಾಂತಾರʼ ಚಿತ್ರದಲ್ಲಿ ಟ್ರೆಡಿಷನಲ್‌ ಲುಕ್‌ನಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವ ಸಪ್ತಮಿ ಗೌಡ, ಕೆಲಕಾಲ ಸಿಂಪಲ್‌ ಲುಕ್‌ನಿಂದಲೇ ಎಲ್ಲರನ್ನೂ ಬರ ಸೆಳೆದುಕೊಂಡಿದ್ದರು. ಎಲ್ಲಿಗೆ ಹೋದರೂ ʼಕಾಂತಾರʼ ಸಿನಿಮಾದ ಮೂಗುತಿ ಸುಂದರಿ ಎಂದೇ ಅಭಿಮಾನಿಗಳು ಗುರುತಿಸುತ್ತಿದ್ದರು. ನಂತರದ ಸಿನಿಮಾಗಳಲ್ಲಿ ಮೂಗುತಿ ಇಲ್ಲದೆಯೇ ಕಾಣಿಸಿಕೊಂಡರು. ʼಕಾಂತಾರʼ ಇಮೇಜಿನಿಂದ ಹೊರ ಬಂದು ನಾನಾ ಬಗೆಯ ಹೊಸ ಲುಕ್‌ನಲ್ಲಿಯೂ ಕಾಣಿಸಿಕೊಂಡರು. ಒಂದಿಷ್ಟು ಜಾಹೀರಾತುಗಳಲ್ಲಿ, ಫ್ಯಾಷನ್‌ ಶೋಗಳಲ್ಲೂ ಕಾಣಿಸಿಕೊಂಡರು. ಕೇವಲ ಟ್ರೆಡಿಷನಲ್‌ ಲುಕ್‌ ಮಾತ್ರವಲ್ಲ, ತಾವು ವೆಸ್ಟರ್ನ್ ಲುಕ್‌ನಲ್ಲೂ ಆಕರ್ಷಕವಾಗಿ ಕಾಣಿಸುತ್ತೆನೆಂಬುದನ್ನು ಪ್ರೂವ್‌ ಮಾಡಿದರು. ಮೂಗುತಿ ತೆಗೆದ ನಂತರವೂ ಅವರ ಸೌಂದರ್ಯಕ್ಕೆನೂ ಧಕ್ಕೆಯಾಗಲಿಲ್ಲ! ಎಲ್ಲಾ ಪಾತ್ರಗಳಿಗೂ ಸೈ ಎಂಬಂತೆ, ಅವರು ಮತ್ತಷ್ಟು ಅಂದವಾಗಿ ಕಾಣಿಸಲಾರಂಭಿಸಿದರು. ಮೊದಲು ಹಾಗೂ ಮೂಗುತಿ ತೆಗೆದ ನಂತರ ಡಿಫರೆಂಟ್‌ ಇಮೇಜ್‌ಗಳಲ್ಲಿ ಕಾಣಿಸಿಕೊಂಡರು. ಇದು ಅವರಿಗಿರುವ ಫ್ಯಾಷನ್‌ ಸೆನ್ಸ್‌ ಅನ್ನು ಹೈಲೈಟ್‌ ಮಾಡಿದೆ. ಅವರು ಕೂಡ ಆಯಾ ಇಮೇಜ್‌ಗೆ ತಕ್ಕಂತೆ ಬದಲಾಗಬಲ್ಲರು ಎಂಬುದನ್ನು ತೋರ್ಪಡಿಸಿದೆ ಎಂದು ರಿವ್ಯೂ ಮಾಡಿರುವ ಫ್ಯಾಷನ್‌ ವಿಮರ್ಶಕಿ ನಿಶಾ ಪ್ರಕಾರ, ಮಾಡರ್ನ್ ಲುಕ್‌ ಸಪ್ತಮಿ ಅವರ ಪರ್ಸನಾಲಿಟಿಗೆ ಪರ್ಫೆಕ್ಟಾಗಿ ಹೊಂದುತ್ತದೆ ಎಂದಿದ್ದಾರೆ.

ಸಪ್ತಮಿ ಗೌಡರ ಹೈ ಸ್ಟ್ರೀಟ್‌ ಫ್ಯಾಷನ್‌

ಅಂದಹಾಗೆ, ಸಪ್ತಮಿ ಗೌಡರ ಈ ಹೈ ಸ್ಟ್ರೀಟ್‌ ಫ್ಯಾಷನ್‌ನಲ್ಲಿ ಅವರು ಧರಿಸಿರುವ ಮಿನಿ ಸ್ಲಿಟ್‌ ಸ್ಕರ್ಟ್, ಕಾಲರ್‌ ಬಟನ್‌ ಜಾಕೆಟ್‌ ಹಾಗೂ ವೈಟ್‌ ಟಾಪ್‌ ಕಾಂಬಿನೇಷನ್‌ ಕಾಲೇಜು ಹುಡುಗಿಯರ ಲಕ್ಷುರಿ ಸ್ಟ್ರೀಟ್‌ ಫ್ಯಾಷನ್‌ ನೆನಪಿಸಿದೆ. ಅವರ ಎತ್ತರಕ್ಕೆ ಈ ಸ್ಟೈಲಿಂಗ್‌ ಪರ್ಫೆಕ್ಟ್ ಮ್ಯಾಚ್‌ ಆಗಿದೆ. ಇನ್ನು, ಮೇಕಪ್‌ ಇಲ್ಲದ ಅವರ ವಧನ ನ್ಯಾಚುರಲ್‌ ಲುಕ್‌ ನೀಡಿದೆ. ಲಿಪ್‌ಸ್ಟಿಕ್‌ ಇಲ್ಲದ ತುಟಿಗಳು ಸಿಂಪಲ್‌ ಲುಕ್‌ ನೀಡಿವೆ. ಫ್ರೀ ಹೇರ್‌ಸ್ಟೈಲ್‌ ಕಾಲೇಜು ಹುಡುಗಿಯರ ಬಿಂದಾಸ್‌ ಲುಕ್‌ನಂತೆ ಪ್ರತಿಬಿಂಬಿಸಿದೆ ಎಂದಿದ್ದಾರೆ ಫ್ಯಾಷನ್‌ ವಿಮಶರ್ಕರು. ಟ್ರೆಡಿಷನಲ್‌ ಲುಕ್‌ಗೂ ಸೈ, ವೆಸ್ಟರ್ನ್ ಲುಕ್‌ಗೂ ಸೈ ಎಂಬಂತಿದ್ದಾರೆ ನಟಿ ಸಪ್ತಮಿ ಗೌಡ ಎಂಬುದು ಫ್ಯಾಷನಿಸ್ಟ್‌ಗಳ ಒಟ್ಟಾರೆ ಅಭಿಪ್ರಾಯವಾಗಿದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: World Environment Day: ಪರಿಸರಕ್ಕೆ ಕೊಡುಗೆ ನೀಡಲು ಫ್ಯಾಷನ್‌ ಪ್ರಿಯರಿಗೆ ಇಲ್ಲಿದೆ ಸಲಹೆ

Exit mobile version