Site icon Vistara News

Stars Womens day celebration in saree: ಸೀರೆಯಲ್ಲಿ ತಾರೆಯರ ಮಹಿಳಾ ದಿನಾಚಾರಣೆ ಸಂಭ್ರಮ

Stars Womens day celebration in saree

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆಯಂದು ಸ್ಯಾಂಡಲ್‌ವುಡ್‌ ತಾರೆಯರು, ಫ್ಯಾಷನ್ ಲೋಕದ ಮಾಡೆಲ್‌ಗಳು, ಪೇಜ್ 3 ಸೆಲೆಬ್ರೆಟಿಗಳು ಸೀರೆಯಲ್ಲಿ ಸಂಭ್ರಮಿಸಿದರು. ಸ್ತ್ರೀ ಶಕ್ತಿ ದ್ಯೋತಕವಾದ ಸೀರೆಯಲ್ಲಿ ಕಾಣಿಸಿಕೊಂಡು ಸ್ತ್ರೀತನದ ಕಳೆ ಹೆಚ್ಚಿಸಿದರು. ಕೆಲವು ತಾರೆಯರು ಪಬ್ಲಿಕ್ ಕಾರ್ಯಕ್ರಮಗಳಲ್ಲಿ ಸೀರೆಯಲ್ಲಿ ಪಾಲ್ಗೊಂಡರೆ, ಇನ್ನು ಕೆಲವರು ತಮ್ಮ ಆಪ್ತರೊಡನೆ, ಇತರೇ ಮಹಿಳಾ ಗುಂಪಿನೊಡನೆ ಸೀರೆ ಉಟ್ಟು ಬೆರೆತರು. ಮತ್ತೆ ಕೆಲವರು ತಮ್ಮ ಸೀರೆಯಲ್ಲಿನ ಆಕರ್ಷಕ ಫೋಟೋಶೂಟ್ ಚಿತ್ರಗಳನ್ನು ಅಪ್ಲೋಡ್ ಮಾಡಿ (Womens day celebration in saree) ದಿನಾಚರಣೆಯ ರಂಗು ಹೆಚ್ಚಿಸಿದರು.

ಯುವತಿಯರಿಗೆ ಮಾದರಿ

“ಇತ್ತೀಚೆಗೆ ಯಾವುದೇ ದಿನವಾಗಲಿ, ಅದರಲ್ಲೂ ಹಬ್ಬ ಹಾಗೂ ನಾರಿ ಶಕ್ತಿಯನ್ನು ಹೈಲೈಟ್ ಮಾಡುವ ದಿನ ಮಹಿಳಾ ದಿನಾಚರಣೆಯಂದು ಸೆಲೆಬ್ರೆಟಿಗಳು ಗ್ಲಾಮರಸ್ ಔಟ್‌ಫಿಟ್‌ ಬದಿಗಿಟ್ಟು, ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಇಂದಿನ ಯುವತಿಯರಿಗೆ ಮಾದರಿಯಾಗಲು ಸೂಕ್ತ ಎನ್ನಬಹುದು. ಅಲ್ಲದೇ, ನಮ್ಮ ಸಂಸ್ಕೃತಿ ಬಿಂಬಿಸುವ ಸೀರೆಯನ್ನು ಪ್ರಮೋಟ್ ಮಾಡಲು ಇದು ಸಹಕಾರಿಯಾಗಬಹುದು. ಇದೊಂದು ಉತ್ತಮ ಬೆಳವಣಿಗೆ. ಉಡುವ ಸ್ಟೈಲಿಂಗ್ ಯಾವುದಾದರೇನು? ಸೀರೆ ಉಟ್ಟು ಕಾಣಿಸಿಕೊಳ್ಳುವುದು ಮುಖ್ಯ. ಇದು ಪ್ರಶಂಸನೀಯ” ಎನ್ನುತ್ತಾರೆ ಫ್ಯಾಷನ್‌ವಿಮರ್ಶಕರಾದ ವಿದ್ಯಾ ವಿವೇಕ್. ಅವರ ಪ್ರಕಾರ, ಸೀರೆ ಎಂಬುದು ಎಂತಹವರನ್ನು ಸೆಳೆಯುತ್ತದಂತೆ.

ಮಹಿಳಾ ದಿನಾಚರಣೆಯಂದು ತಾರೆಯರ ಸೀರೆ

ನಟಿ ಅಮೂಲ್ಯ ಶ್ವೇತ ವರ್ಣದ ಗೋಲ್ಡನ್ ಬಾರ್ಡರ್‌ನ ನಾನ್ ಸಿಲ್ಕ್ ಸೀರೆಯಲ್ಲಿ ಕಾಣಿಸಿಕೊಳ್ಳುವುದರೊಂದಿಗೆ, ತನ್ನನ್ನು ಸ್ಟ್ರಾಂಗ್ ವುಮೆನ್ ಮಾಡಿದವರಿಗೆಲ್ಲಾ ಆಭಾರಿ ಎಂದು ಕೃತಜ್ಞತೆ ತಿಳಿಸಿದ್ದಾರೆ. ನಟಿ ಪ್ರಣೀತಾ ಮಹಿಳಾ ದಿನಾಚರಣೆ ಹಾಗೂ ಶಿವರಾತ್ರಿ ಎರಡಕ್ಕೂ ಹೊಂದುವಂತೆ ಎಥ್ನಿಕ್ ಲುಕ್ ನೀಡುವ ಹಸಿರು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ನಟಿ ಅಶಿಕಾ ರಂಗನಾಥ್ ಅರ್ಗಾನ್ಜಾ ಸ್ಕೈ ಬ್ಲ್ಯೂ ಶೀರ್ ಸೀರೆ ಎಲ್ಲೋ ಡಿಸೈನರ್ ಬ್ಲೌಸ್‌ನಲ್ಲಿ ಕಾಣಿಸಿಕೊಂಡು ಸೀರೆ ಪ್ರೇಮಿಗಳನ್ನು ಸೆಳೆದಿದ್ದಾರೆ. ಸಂಗೀತಾ ಶೃಂಗೇರಿ ತಮ್ಮ ಸೀರೆ ಫೋಟೋಗಳನ್ನು ಶೇಡ್ ಮಾಡಿ ಸೀರೆ ಪ್ರೇಮ ಮರೆದಿದ್ದಾರೆ. ಇವರೊಂದಿಗೆ ನಟಿಯರಾದ ಪ್ರಿಯಾಂಕಾ ಉಪೇಂದ್ರ, ರಾಗಿಣಿ, ರಕ್ಷಿತಾ, ಶ್ರೀನಿಧಿ ಶೆಟ್ಟಿ ಸೇರಿದಂತೆ ಸಾಕಷ್ಟು ತಾರೆಯರು ತಾವು ಇರುವ ಸ್ಥಳದಲ್ಲೆ ಮಹಿಳಾ ಟೀಮ್‌ಗೆ ಶುಭ ಹಾರೈಸಿ, ಸಂಭ್ರಮಿಸಿದ್ದಾರೆ.

ಫ್ಯಾಷನ್ ಲೋಕದವರ ಗ್ಲಾಮರಸ್ ಸೀರೆ ಲುಕ್

ಎಂದಿನಂತೆ ಈ ದಿನಾಚರಣೆಯಂದು ಗ್ಲಾಮರಸ್ ಲೋಕದ ಮಹಿಳೆಯರು ಕೂಡ ತಮ್ಮದೇ ಆದ ಇಂಡೋ-ವೆಸ್ಟರ್ನ್ ಶೈಲಿ ಸೇರಿದಂತೆ ನಾನಾ ಬಗೆಯಲ್ಲಿ ಸೀರೆ ಉಟ್ಟು ಸಂಭ್ರಮಿಸಿದ್ದಾರೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Milk With Banana Side Effects: ಬಾಳೆಹಣ್ಣನ್ನೂ ಹಾಲನ್ನೂ ಜೊತೆಯಾಗಿ ಸೇವಿಸಬಾರದು, ಯಾಕೆ ಗೊತ್ತೆ?

Exit mobile version