-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾರ್ಬಲ್ ಪ್ರಿಂಟೆಡ್ ಕ್ರಾಪ್ ಟಾಪ್‌ಗಳು ಇದೀಗ ಕಾಲೇಜು ಹುಡುಗಿಯರನ್ನು (Students Fashion) ಆವರಿಸಿಕೊಂಡಿವೆ. ನೋಡಲು ಬ್ರಶ್ ಸ್ಟ್ರೋಕ್ಸ್ ಅಥವಾ ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್‌ನಂತೆ ಕಾಣುವ ಈ ಕಲರ್‌ಫುಲ್ ಮಲ್ಟಿ ಶೇಡ್‌ನ ಮಾರ್ಬಲ್ ಪ್ರಿಂಟ್ಸ್ ಕ್ರಾಪ್ ಟಾಪ್‌ಗಳು ವೈವಿಧ್ಯಮಯ ಮಿಕ್ಸ್ ಮ್ಯಾಚ್ ಫ್ಯಾಷನ್‌ಗೆ ನಾಂದಿ ಹಾಡಿವೆ.
ಯುವತಿಯರಿಗೆ ಪ್ರಿಯವಾದ ಮಾರ್ಬಲ್ ಪ್ರಿಂಟ್ಸ್
“ನಾನಾ ಶೈಲಿಯ ಫ್ಯಾಬ್ರಿಕ್‌ನಲ್ಲಿ ಲಭ್ಯವಿರುವ ಈ ಮಾರ್ಬಲ್ ಪ್ರಿಂಟೆಡ್ ಕ್ರಾಪ್ ಟಾಪ್‌ಗಳು ಈ ಮೊದಲು ಟೀ ಶರ್ಟ್‌ಗಳಲ್ಲಿ ಕಾಣಬಹುದಾಗಿತ್ತು. ಇನ್ನು, ಕೆಲವು ಹಾಲಿ ಡೇ ಡಿಸೈನರ್‌ವೇರ್‌ಗಳಲ್ಲಿಯೂ ಬಂದಿದ್ದವು. ಸಾಕಷ್ಟು, ರೆಸಾರ್ಟ್ ವೇರ್‌ಗಳಲ್ಲೂ ಪ್ರಚಲಿತದಲ್ಲಿದ್ದವು. ಇದೀಗ ಡಿಸೈನರ್‌ಗಳು ಪ್ರಯೋಗಾತ್ಮಕವಾಗಿ ಇದೇ ಬಗೆಯ ಪ್ರಿಂಟ್ಸ್‌ಗಳನ್ನು ಕ್ರಾಪ್ ಟಾಪ್‌ಗಳಲ್ಲಿ ಬಳಸಿದ್ದು, ಹಿಟ್ ಲಿಸ್ಟ್‌ಗೆ ಸೇರಿದೆ. ಇದು ಕಾಲೇಜು ಹುಡುಗಿಯರಿಗೂ ಪ್ರಿಯವಾಗಿವೆ. ಪರಿಣಾಮ, ನಾನಾ ಬಗೆಯವು ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ” ಎನ್ನುತ್ತಾರೆ ಫ್ಯಾಷನಿಸ್ಟ್ ಧವನ್. ಅವರ ಪ್ರಕಾರ, ಇವು ಬಿಂದಾಸ್ ಲುಕ್ ನೀಡುತ್ತವಂತೆ .
ಏನಿದು ಮಾರ್ಬಲ್ ಪ್ರಿಂಟೆಡ್ ಕ್ರಾಪ್ ಟಾಪ್ಸ್
ನೆಲಕ್ಕೆ ಹಾಕುವ ಮಾರ್ಬಲ್ ಕಲ್ಲುಗಳ ನೈಜ ರೂಪವನ್ನ, ಫ್ಯಾಬ್ರಿಕ್ ಮೇಲೆ ಬಳಸಲಾಗಿರುವುದು, ಮಾರ್ಬಲ್ ಪ್ರಿಂಟ್ಸ್ ಕ್ರಾಪ್ ಟಾಪ್‌ಗಳ ಹುಟ್ಟಿಗೆ ಕಾರಣ. ತಕ್ಷಣಕ್ಕೆ ಇವು ನೋಡಲು ಅಬ್‌ಸ್ಟ್ರಾಕ್ಟ್ ಪ್ರಿಂಟ್ ಎಂದೆನಿಸಿದರೂ ಇವು ಅವಲ್ಲ! ಮಾರ್ಬಲ್ ಪ್ರಿಂಟ್ಸ್‌ನವೆಲ್ಲವೂ ನೋಡಲು ಒಂದೇ ಬಗೆಯವೆನಿಸಬಹುದು. ಆದರೆ, ಇವುಗಳಲ್ಲೆ ನಾನಾ ಬಗೆಯ ಶೇಡ್‌ಗಳು ಲಭ್ಯ. ಲೈಟ್ ಅಥವಾ ಡಾರ್ಕ್ ಶೇಡ್‌ನಲ್ಲೂ ಕಾಣಬಹುದು. ಹರಿಯುವ ನೀರಿನಂತೆಯು ಕೆಲವು ಕಾಣಿಸುತ್ತವೆ. ಒಟ್ಟಿನಲ್ಲಿ, ಈ ಶೈಲಿಯ ಪ್ರಿಂಟ್ಸ್ ಇಂದಿನ ಯುವತಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಇದನ್ನೂ ಓದಿ: Kangana Ranaut Saree Fashion: ದೇಸಿ ಸೀರೆ ನೇಯ್ದ ನೇಕಾರರಿಗೆ ಥ್ಯಾಂಕ್ಸ್ ಹೇಳಿದ ಕಂಗನಾ ರಣಾವತ್!
ಮಾರ್ಬಲ್ ಪ್ರಿಂಟೆಡ್ ಕ್ರಾಪ್ ಟಾಪ್ ಮಿಕ್ಸ್ ಮ್ಯಾಚ್
ಮಾರ್ಬಲ್ ಪ್ರಿಂಟ್ಸ್ ಇರುವಂತಹ ಫ್ಯಾಬ್ರಿಕ್ ಆಧಾರದ ಮೇಲೆ ಮಿಕ್ಸ್ ಮ್ಯಾಚ್ ಮಾಡಬಹುದು. ನಾನಾ ಬಗೆಯ ಫ್ಯಾಬ್ರಿಕ್‌ನಲ್ಲಿ ಈ ಕ್ರಾಪ್ ಟೀ ಶರ್ಟ್‌ಗಳು ಲಭ್ಯ. ಹಾಗಾಗಿ ಅವುಗಳ ಫ್ಯಾಬ್ರಿಕ್ ಹಾಗೂ ಡಿಸೈನ್ಸ್‌ಗೆ ಅನುಗುಣವಾಗಿ ಮ್ಯಾಚ್ ಮಾಡಬಹುದು ಎಂದು ಸಿಂಪಲ್ ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ಧೀಮಂತ್.
- ಸಿಂಥೆಟಿಕ್ ಮಾರ್ಬಲ್ ಪ್ರಿಂಟೆಡ್ ಕ್ರಾಫ್ ಟಾಪ್ಗೆ ಕಾಟನ್, ಜೆನ್ಸ್ ಪ್ಯಾಂಟ್ ಮ್ಯಾಚ್ ಮಾಡಬಹುದು.
- ಲೆನಿನ್ ಹಾಗೂ ಕಾಟನ್ ಪ್ಯಾಂಟ್ಗಳಿಗೆ ಕಾಟನ್ ಮಾರ್ಬಲ್ ಪ್ಯಾಂಟ್ ಧರಿಸಬಹುದು.
- ಮಿನಿ ಸ್ಕರ್ಟ್ಗಳಿಗೆ ಆದಷ್ಟೂ ರಯಾನ್ ಅಥವಾ ಸ್ಪನ್ ಫ್ಯಾಬ್ರಿಕ್ನವನ್ನು ಧರಿಸಬಹುದು.
- ಕ್ರಾಪ್ ಟಾಪ್ ಫುಲ್ ಸ್ಲೀವ್ದ್ದಾದಲ್ಲಿ ಆದಷ್ಟೂ ಪ್ಯಾಂಟ್ ಅಥವಾ ಸ್ಕರ್ಟ್ ಲೈಟ್ ಶೇಡ್ನದ್ದಾಗಿರಬೇಕು.
- ಲಾಂಗ್ ಮಿಡಿ ಸ್ಕರ್ಟ್ಗೆ ಲೈಟ್ ಶೇಡ್ ಮಾರ್ಬಲ್ ಟಾಪ್ ಬೆಸ್ಟ್ ಮ್ಯಾಚ್ ಎನ್ನಬಹುದು.
( ಲೇಖಕಿ ಫ್ಯಾಷನ್ ಪತ್ರಕರ್ತೆ )