Site icon Vistara News

Model Fashion Life: ಸ್ಟೈಲಿಶ್ ಸ್ಯಾಕ್ಸೋಫೋನಿಸ್ಟ್ ಭಾರತಿ ಗೋಪಾಲ್‌ ವಿಂಟರ್‌ ಫ್ಯಾಷನ್‌ ಟಿಪ್ಸ್‌ ಹೀಗಿದೆ…

Model Fashion Life

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೃತ್ತಿಯಲ್ಲಿ ಸ್ಯಾಕ್ಸೋಫೋನಿಸ್ಟ್, ಪ್ರವೃತ್ತಿಯಿಂದ ಫ್ಯಾಷನ್‌ ಮಾಡೆಲ್‌, ನಟಿ. ಮಿಸೆಸ್‌ ಇಂಡಿಯಾ ಕರ್ನಾಟಕ ಪೇಜೆಂಟ್‌ನಲ್ಲಿ ಪಾಲ್ಗೊಂಡು ಮಿಸೆಸ್ ಇಂಡಿಯಾ ಕರ್ನಾಟಕ ಉಡುಪಿ ಡಿಸ್ಟ್ರಿಕ್ಟ್ ಕ್ವೀನ್, ಮಿಸೆಸ್ ಇಂಡಿಯಾ ಕರ್ನಾಟಕ – ಫೋಟೋಜೆನಿಕ್, ಮಿಸೆಸ್ ಇಂಡಿಯಾ ಕರ್ನಾಟಕ ಬೆಸ್ಟ್ ವಾಕ್ -2022 ಟೈಟಲ್‌ಗಳನ್ನು ಗೆದ್ದ ಕಲಾವಿದೆ. ಈಗಾಗಲೇ ಕರ್ನಾಟಕ ಯುವರತ್ನ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಭಾರತ ಗೌರವ ಪ್ರಶಸ್ತಿ ಸೇರಿದಂತೆ ನಾನಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಚಂದನದಲ್ಲಿ ಪ್ರಸಾರವಾದ ಕಟೀಲು ಶ್ರೀ ದೇವಿ ಚರಿತೆಯಲ್ಲಿ ಮಹಾಲಕ್ಷ್ಮಿಯಾಗಿ ಅಭಿನಯಿಸಿದ್ದಾರೆ. ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕಾಂತಾರ ನಟ ನಿರ್ದೇಶಕರಾದ ರಿಷಬ್‌ ಶೆಟ್ಟಿ ವಿವಾಹ ಸಮಾರಂಭದಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಈ ಬಾರಿಯ ಮಾಡೆಲ್‌ ಫ್ಯಾಷನ್‌ ಲೈಫ್‌ (Model Fashion Life) ಕಾಲಂಗಾಗಿ ವಿಸ್ತಾರ ನ್ಯೂಸ್‌ನೊಂದಿಗೆ ತಮ್ಮ ಫ್ಯಾಷನ್‌ –ಪ್ಯಾಷನ್‌ ಬಗ್ಗೆ ಹಂಚಿಕೊಂಡಿದ್ದಾರೆ.

ಸ್ಟೈಲಿಶ್‌ ಸ್ಯಾಕ್ಸೋಫೋನಿಸ್ಟ್ ಆಗಿರುವ ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಏನು ?

ಸಂದರ್ಭಕ್ಕೆ ತಕ್ಕಂತೆ ಉಡುಪು ಧರಿಸುತ್ತೇನೆ. ಸಾಂಪ್ರದಾಯಿಕ ಉಡುಗೆ ಹೆಚ್ಚು ಇಷ್ಟ. ವೆಸ್ಟರ್ನ್ ಸ್ಟೈಲ್ ಕಾರ್ಯಕ್ರಮ ಮತ್ತು ಮಾಡೆಲಿಂಗ್ ಇದ್ದಾಗ ಇಂಡೋ-ವೆಸ್ಟರ್ನ್ ಔಟ್ ಫಿಟ್ ಇಷ್ಟ ಪಡುತ್ತೇನೆ. ಉಳಿದಂತೆ ಮಿಕ್ಸ್ ಮ್ಯಾಚ್ ಮಾಡಿ ಧರಿಸುವುದು ಡಿಫರೆಂಟ್ ವೈಬ್ ನೀಡುತ್ತದೆ. ಸ್ಟೈಲಿಶ್ ಸ್ಯಾಕ್ಸೋಫೋನಿಸ್ಟ್ ಎನ್ನುವ ಹೊಗಳಿಕೆ ಮಾತು ಕೇಳಿದಾಗ ಖುಷಿ ಆಗುತ್ತದೆ.

ಚಳಿಗಾಲಕ್ಕೆ ಯಾವ ರೀತಿ ಸ್ಟೈಲಿಂಗ್‌ ಮಾಡುತ್ತೀರಾ?

ಚಳಿಗಾಲದಲ್ಲಿ ಚಳಿಯ ಜೊತೆಗೆ ಸೂರ್ಯನ ಕಿರಣಗಳು ತೀಕ್ಷ್ಣವಾಗಿರುವುದರಿಂದ ಜೀನ್ಸ್ ಜೊತೆಗೆ ಹೂಡಿ, ಜಾಕೆಟ್, ಕ್ಯಾಪ್, ಶೂ/ಬೂಟ್ ಧರಿಸುತ್ತೇನೆ. ಇದರಿಂದ ಚಳಿಗಾಲದಲ್ಲಿ ಸ್ಟೈಲಿಶ್ ಆಗಿ ಕಾಣಿಸಬಹುದು.

ಚಳಿಗಾಲಕ್ಕೆ ನೀವು ನೀಡುವ ಟಿಪ್ಸ್ ಏನು?

ಈ ಸೀಸನ್‌ನಲ್ಲಿ ಚರ್ಮ ಒಣಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ಒಂದು ಚಮಚ ನಾಟಿ ತುಪ್ಪ,/ ಶುದ್ಧ ಕೊಬ್ಬರಿ ಎಣ್ಣೆ ಸೇವನೆ ಮಾಡುವುದು ಉತ್ತಮ. ಇದು ತ್ವಚೆ ಯಂಗ್ ಆಗಿರಲು ಸಹಾಯ ಮಾಡುತ್ತದೆ. ಜಂಕ್ ಫುಡ್ ಬೇಡ. ಆರ್ಗಾನಿಕ್ ತರಕಾರಿ ಹಣ್ಣು ಸೇವಿಸಿ. ಕಾಫಿ ಟೀ ಬದಲು ಬಿಸಿಬಿಸಿ ನೀರು ಸೇವಿಸಿ.

ನಿಮ್ಮ ಪ್ರಕಾರ ಫ್ಯಾಷನ್‌ ಅಂದ್ರೆ ಏನು ?

ಅಂಗಾಂಗ ಪ್ರದರ್ಶನವಷ್ಟೇ ಫ್ಯಾಷನ್ ಅಲ್ಲ. ಉಡುಪನ್ನು ಹೇಗೆ ಧರಿಸಿ, ಕ್ಯಾರಿ ಮಾಡುತ್ತೀವಿ ಎಂಬುದು ಮುಖ್ಯ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sheer Puff Sleeve Blouse Fashion: ಮಹಿಳೆಯರ ಡಿಸೈನರ್‌ ಸೀರೆಗೆ ಬಂತು ಪಾರದರ್ಶಕ ಶೀರ್‌ ಪಫ್‌ ಬ್ಲೌಸ್‌ ಫ್ಯಾಷನ್‌!

Exit mobile version