-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯಲ್ಲಿ (Summer Fashion) ಟ್ರೆಂಡಿಯಾಗಿರುವ ನಯಾ ಡಿಸೈನ್ನ ಕ್ರಾಪ್ ಟೀ ಶರ್ಟ್ಗಳನ್ನು ನಾನಾ ಬಗೆಯಲ್ಲಿ ಸ್ಟೈಲಿಂಗ್ ಮಾಡಬಹುದು. ಅವುಗಳಲ್ಲಿ 3 ಬಗೆಯವು ಹೆಚ್ಚು ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಅದರಲ್ಲೂ ಟೀನೇಜ್ ಹುಡುಗಿಯರು ಈ ಕ್ರಾಪ್ ಟೀ ಶರ್ಟ್ಗಳನ್ನು ಸಮ್ಮರ್ ಸೀಸನ್ನ ಡ್ರೆಸ್ಕೋಡ್ಗಳಲ್ಲಿ ಸೇರಿಸಿಕೊಂಡಿದ್ದಾರೆ. ತಮ್ಮ ಸ್ಟೈಲಿಂಗ್ನಲ್ಲಿ ಇವುಗಳಿಗೆ ಡಿಫರೆಂಟ್ ಲುಕ್ ನೀಡಿದ್ದಾರೆ. ಹಾಗಾಗಿ ಇವು ಸಖತ್ ಪಾಪುಲರ್ ಆಗಿವೆ.
ಪಾಪುಲರ್ ಕ್ರಾಪ್ ಟೀ ಶರ್ಟ್ಸ್
ಕ್ರಾಪ್ ಟೀ ಶರ್ಟ್ಸ್ ಮೊದಲೆಲ್ಲಾ ಈ ಜನರೇಷನ್ನ ಹಾಗೂ ಟೀನೇಜ್ ಹುಡುಗಿಯರಿಗೆ ಮಾತ್ರ ಸೀಮಿತವಾಗಿದ್ದವು. ಆದರೆ, ಇದೀಗ ಉದ್ಯೋಗಸ್ಥ ಮಹಿಳೆಯರ ವೀಕೆಂಡ್ ಹಾಗೂ ಔಟಿಂಗ್ ಡ್ರೆಸ್ಕೋಡ್ನಲ್ಲೂ ಸೇರಿಕೊಂಡಿವೆ. ನೋಡಲು ಮಾಡರ್ನ್ ಲುಕ್ ನೀಡುವ ಇವು ಈ ಸೀಸನ್ಗೆ ಸಾಥ್ ನೀಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು .
- ಕ್ರಾಪ್ ಟೀ ಶರ್ಟ್ಸ್ ಜೊತೆಗೆ ಜೀನ್ಸ್ ಪ್ಯಾಂಟ್
- ಇದು ತೀರಾ ಕಾಮನ್ ಆಗಿರುವ ಸ್ಟೈಲಿಂಗ್ ಕಾನ್ಸೆಪ್ಟ್. ಬಹುತೇಕ ಹುಡುಗಿಯರು ಜೀನ್ಸ್ ಪ್ಯಾಂಟ್ ಜೊತೆಗೆ ಕ್ರಾಪ್ ಟೀ ಶರ್ಟ್ಸ್ ಪ್ರಿಫೆರ್ ಮಾಡುತ್ತಾರೆ. ಇದು ಅತಿ ಸರಳ ಹಾಗೂ ಸುಲಭವಾಗಿ ಕಾಂಬೀನೇಷನ್ ಮಾಡಬಹುದಾದ ಸ್ಟೈಲಿಂಗ್. ಒಂದು ಬ್ಲ್ಯೂ ಅಥವಾ ಯಾವುದೇ ಕಲರ್ನ ಜೀನ್ಸ್ ಪ್ಯಾಂಟ್ಗೆ ಯಾವ ಶೇಡ್ನದ್ದಾದರೂ ಸರಿಯೇ, ಕ್ರಾಪ್ ಟೀ ಶರ್ಟ್ ಮ್ಯಾಚ್ ಮಾಡಿದರಾಯಿತು. ನೋಡಲು ಸಿಂಪಲ್ ಲುಕ್ನೊಂದಿಗೆ ಮಾಡರ್ನ್ ಟಚ್ ನೀಡುತ್ತದೆ. ಟೋರ್ನ್ ಜೀನ್ಸ್ ಪ್ಯಾಂಟ್ ಜೊತೆ ಅಲ್ಟ್ರಾ ಮಾಡರ್ನ್ ಲುಕ್ ನೀಡುತ್ತದೆ. ಸಿಕ್ಸ್ ಪಾಕೆಟ್ ಕಾರ್ಗೋ ಪ್ಯಾಂಟ್ ಅಥವಾ ಪೇಂಟರ್ ಪ್ಯಾಂಟ್ ಕೂಡ ಈ ಕ್ರಾಪ್ ಟೀ ಶರ್ಟ್ ಜೊತೆ ಧರಿಸಬಹುದು.
- ಕ್ರಾಪ್ ಟೀ ಶರ್ಟ್ ಜೊತೆ ಸ್ಕರ್ಟ್
- ಮಿನಿ ಶಾರ್ಟ್ಸ್ ಆದರೂ ಓಕೆ, ಮಿಡಿಯಂತಹ ಪೆನ್ಸಿಲ್ ಸ್ಕರ್ಟ್ ಆದರೂ ಓಕೆ. ಕ್ರಾಪ್ ಟೀ ಶರ್ಟ್ ಧರಿಸಬಹುದು. ಸಾದಾ ಅಥವಾ ಮಾನೋಕ್ರೋಮ್ ಶೇಡ್ನ ಟೀ ಶರ್ಟ್ಗಿಂತ ಪ್ರಿಂಟೆಡ್ ಅದರಲ್ಲೂ ಟೆಕ್ಸ್ಟ್ ಇರುವಂತಹ ಕ್ರಾಪ್ ಟೀ ಶರ್ಟ್ಗಳು ಇವಕ್ಕೆ ಸೂಕ್ತ. ಅದರಲ್ಲೂ ಪಾಸ್ಟೆಲ್ ಶೇಡ್ನ ಕ್ರಾಪ್ ಟೀ ಶರ್ಟ್ಗಳು ಈ ಸೀಸನ್ನಲ್ಲೂ ಆಕರ್ಷಕವಾಗಿ ಕಾಣುವುದರೊಂದಿಗೆ ಮನಸ್ಸಿಗೆ ಉಲ್ಲಾಸ ನೀಡುತ್ತವೆ.
- ಶಾರ್ಟ್ಸ್ ಜೊತೆ ಕ್ರಾಪ್ ಟೀ ಶರ್ಟ್
- ಟೋರ್ನ್ ಜೀನ್ಸ್ ಶಾರ್ಟ್ ಜೊತೆ ಬಗೆಬಗೆಯ ಕ್ರಾಪ್ ಟೀ ಶರ್ಟ್ ಧರಿಸುವುದು ಜೆನ್ ಜಿ ಹುಡುಗಿಯರ ಕ್ರೇಝಿ ಫ್ಯಾಷನ್ ಲಿಸ್ಟ್ನಲ್ಲಿದೆ. ಇದು ಕಾಲನ್ನು ಎಕ್ಸ್ಪೋಸ್ ಮಾಡುತ್ತದೆ. ಬೇಸಿಗೆಗೆ ಬಿಂದಾಸ್ ಲುಕ್ ನೀಡುತ್ತದೆ. ಇದರೊಂದಿಗೆ ಕೆಲವು ಕಾಟನ್ ಶಾರ್ಟ್ಸ್ ಕೂಡ ಟ್ರೆಂಡ್ನಲ್ಲಿದೆ. ಚಿಕ್ಕ ಹೆಣ್ಣು ಮಕ್ಕಳು ಇವನ್ನು ಧರಿಸುವುದು ಸಾಮಾನ್ಯವಾಗಿದೆ. ಈ ಸ್ಟೈಲಿಂಗ್ ಕೂಡ ಈ ಸೀಸನ್ನ ಟ್ರೆಂಡ್ನಲ್ಲಿದೆ.
ಕ್ರಾಪ್ ಟೀ ಶರ್ಟ್ ಲುಕ್ ಹೀಗಿರಲಿ
- ಸಿಂಪಲ್ ಹೇರ್ಸ್ಟೈಲ್ ನಿಮ್ಮದಾಗಲಿ.
- ಆಕ್ಸೆಸರೀಸ್ ಮಿನಿಮಲ್ ಆಗಿರಲಿ.
- ಹಾಫ್ ಶೂ ಇವಕ್ಕೆ ಮ್ಯಾಚ್ ಆಗುತ್ತವೆ.
- ಮೇಕಪ್ ಹೆವ್ವಿಯಾಗದಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Cotton Saree Fashion: ಕಾಟನ್ ಸೀರೆ ಫ್ಯಾಷನ್ ಕುರಿತು ಚಂದ್ರಯಾನ 3 ಖ್ಯಾತಿ