Site icon Vistara News

Summer Fashion: ಹಾಟ್‌ಲುಕ್‌ಗಾಗಿ ಬಂತು 3 ಶೈಲಿಯ ಸ್ಲೀವ್‌ಲೆಸ್‌ ಸೀರೆ ಬ್ಲೌಸ್‌

Summer Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀರೆಗೆ ಸ್ಲಿವ್‌ಲೆಸ್‌ಬ್ಲೌಸ್‌ ಧರಿಸುವ ಟ್ರೆಂಡ್‌ (Summer Fashion) ಈ ಬೇಸಿಗೆಯಲ್ಲಿ ಮರಳಿದೆ. ಬೇಸಿಗೆಯಲ್ಲಿ ಉಡುವ ನಾನಾ ಬಗೆಯ ವೆರೈಟಿ ಸೀರೆಗಳಿಗೆ ಈಗಾಗಲೇ ಲೆಕ್ಕವಿಲ್ಲದಷ್ಟು ಶೈಲಿಯವು ಮಾರುಕಟ್ಟೆಗೆ ಬಂದಿದ್ದು ಅವುಗಳಲ್ಲಿ ಬ್ರಾಡ್‌ನೆಕ್‌ಲೈನ್‌, ಸ್ಟ್ರಾಪ್‌ಕ್ರಾಪ್‌ಟಾಪ್‌ ಶೈಲಿಯವು ಮತ್ತು ಬಿಕಿನಿ ಸ್ಟೈಲ್‌ಸ್ಲಿವ್‌ಲೆಸ್‌ ಬ್ಲೌಸ್‌ಗಳು ಹೆಚ್ಚು ಬಿಕರಿಯಾಗುತ್ತಿವೆ. “ಸ್ಲಿವ್‌ಲೆಸ್‌ ಸೀರೆ ಬ್ಲೌಸ್‌ಗಳು ಈ ಸೀಸನ್‌ನ ಹಾಟ್‌ಟ್ರೆಂಡ್‌. ಪ್ರತಿಬಾರಿಯಂತೆ ಈ ಬಾರಿಯು ಈ ಕಾನ್ಸೆಪ್ಟ್ ಸಮ್ಮರ್‌ಸೀರೆ ಫ್ಯಾಷನ್‌ಗೆ ಕಾಲಿಟ್ಟಿದ್ದು, ಮಾನಿನಿಯರ ಲುಕ್‌ಗೆ ಗ್ಲಾಮರಸ್‌ಟಚ್‌ನೀಡುತ್ತಿವೆ. ನೋಡಲು ಗ್ಲಾಮರಸ್‌ಲುಕ್‌ನೀಡುವ ಈ ಸ್ಲಿವ್‌ಲೆಸ್‌ಬ್ಲೌಸ್‌ಗಳು ಇದೀಗ ಕೇವಲ ಕಾರ್ಪೋರೇಟ್‌ಕ್ಷೇತ್ರದ ಮಾನಿನಿಯರನ್ನು ಮಾತ್ರವಲ್ಲ, ಅಲ್ಟ್ರಾ ಮಾಡರ್ನ್ ಯುವತಿಯರನ್ನು ಹಾಗೂ ಟೀನೇಜ್‌ಹುಡುಗಿಯರನ್ನು ಬರಸೆಳೆಯುತ್ತಿವೆ. ಸೀರೆಯೊಂದಿಗೆ ಧರಿಸುವ ಸ್ಟೈಲ್‌ಕೂಡ ಡಿಫರೆಂಟಾಗಿ ಬದಲಾಗುತ್ತಿದೆ. ನೋಡಲು ಒಂದೇ ಬಗೆಯ ಕಾನ್ಸೆಪ್ಟ್‌ನಂತೆ ಕಂಡರೂ, ಸ್ಲಿವ್‌ಲೆಸ್‌ ಬ್ಲೌಸ್‌ಗಳಲ್ಲೆ ನಾನಾ ಬಗೆಯವು ದೊರೆಯುತ್ತಿವೆ. ಹೊಸ ವಿನ್ಯಾಸದವನ್ನು ಟೈಲರ್‌ಗಳು ಪರಿಚಯಿಸುತ್ತಿದ್ದಾರೆ” ಎನ್ನುತ್ತಾರೆ ಬ್ಲೌಸ್ ಡಿಸೈನರ್‌ಗಳು.

ಅಗಲವಾದ ನೆಕ್‌ಲೈನ್‌ ಸ್ಲಿವ್‌ಲೆಸ್‌ ಬ್ಲೌಸ್‌

ತೀರಾ ಅಗಲವಾದ ನೆಕ್‌ಲೈನ್‌ ಇರುವಂತಹ ಸ್ಲಿವ್‌ಲೆಸ್‌ ಬ್ಲೌಸ್‌ಗಳು ಈ ಬೇಸಿಗೆಯಲ್ಲಿ ಟ್ರೆಂಡಿಯಾಗಿವೆ. ಇವು ಸೀರೆ ಉಟ್ಟಾಗ ಸೆಕೆಯಾಗದಂತೆ ತಡೆಯುತ್ತವೆ. ಅಲ್ಲದೆ, ನೋಡಲು ಕೂಡ ಗ್ಲಾಮರಸ್‌ ಲುಕ್‌ ನೀಡುತ್ತವೆ. ಬ್ರಾಡ್‌ ನೆಕ್‌ ಇರುವಂತಹ ಸ್ಲಿವ್‌ಲೆಸ್‌ ಬ್ಲೌಸ್‌ಗಳು ಆದಷ್ಟೂ ಫಿಟ್‌ಆಗಿರಬೇಕು. ಇಲ್ಲವಾದಲ್ಲಿ ಪರ್ಫೆಕ್‌ ಆಗಿ ಕಾಣಿಸದು. ಇನ್ನು, ಪ್ರಿಂಟೆಡ್‌ಸೀರೆಗೆ ಸಾದಾ ಬ್ಲೌಸ್‌, ಸಾದಾ ಸೀರೆಗೆ ಪ್ರಿಂಟೆಡ್‌ನವನ್ನು ಮಿಕ್ಸ್‌-ಮ್ಯಾಚ್‌ ಮಾಡಬಹುದು ಎಂದು ಸಿಂಪಲ್‌ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್‌ಗಳು.

ಸ್ಟ್ರಾಪ್‌ ಕ್ರಾಪ್‌ ಟಾಪ್‌ಸ್ಲಿವ್‌ಲೆಸ್‌ ಬ್ಲೌಸ್‌

ನೋಡಲು ಕ್ರಾಪ್‌ಟಾಪ್‌ನಂತೆ ಕಾಣುವ ಈ ಸ್ಲಿವ್‌ಲೆಸ್‌ ಬ್ಲೌಸ್‌ಗಳು ಸ್ಟ್ರಾಪ್‌ಟಾಪ್‌ನಂತೆ ಕಾಣುತ್ತವೆ. ಇವು ಇದೀಗ ಅತಿ ಹೆಚ್ಚು ಫ್ಯಾಷನ್‌ನಲ್ಲಿವೆ. ಯಂಗ್‌ಲುಕ್‌ಗಾಗಿ ಇವನ್ನು ಧರಿಸುವುದು ಹೆಚ್ಚಾಗಿದೆ. ಶೋಲ್ಡರ್ ಎಕ್ಸ್ಪೋಸ್‌ ಮಾಡುವ ಇವನ್ನು ಧರಿಸುವಾಗ ಸ್ಟ್ರಾಪ್‌ಲೆಸ್‌ ಇನ್ನರ್‌ವೇರ್‌ ಧರಿಸುವುದು ಸೂಕ್ತ. ಸನ್‌ಟ್ಯಾನ್‌ ಆಗುವ ಚಾನ್ಸ್ ಹೆಚ್ಚಾಗಿರುವುದರಿಂದ ಒಳಾಂಗಣದಲ್ಲಿರುವ ಸಮಯದಲ್ಲಿ ಧರಿಸಬಹುದು. ಇಂಡೋ-ವೆಸ್ಟರ್ನ್ ಲುಕ್‌ಗೆ ಬೆಸ್ಟ್ ಎಂಬುದು ಫ್ಯಾಷನಿಸ್ಟ್‌ಗಳ ಅಭಿಪ್ರಾಯ.

ಬಿಕಿನಿ ಸ್ಟೈಲ್‌ಸ್ಲಿವ್‌ಲೆಸ್‌ ಬ್ಲೌಸ್‌

ಇನ್ನು ಹಾಟ್‌ಲುಕ್‌ ಬಯಸುವವರಿಗೆಂದು ಬಿಕಿನಿ ಸ್ಟೈಲ್‌ನ ಸ್ಲಿವ್‌ಲೆಸ್‌ ಬ್ಲೌಸ್‌ ಬಂದಿವೆ. ಇವು ರೆಡಿಮೇಡ್‌ ಮಾತ್ರವಲ್ಲ, ಸ್ಟಿಚ್ಚಿಂಗ್‌ ಮಾಡಿಸಿ, ಧರಿಸುವವರು ಕೂಡ ಹೆಚ್ಚಾಗಿದ್ದಾರೆ. ಮಿಕ್ಸ್ ಮ್ಯಾಚ್‌ಮಾಡಿ ಧರಿಸಬಹುದಾದ ಇವನ್ನು ಇಂಡೋ-ವೆಸ್ಟರ್ನ್ ಶೈಲಿಯ ಸೀರೆಗೆ ಧರಿಸುವವರು ಹೆಚ್ಚಾಗಿದ್ದಾರೆ. ಕಾಟನ್‌, ಲೆನಿನ್‌, ರಯಾನ್‌ ಹೀಗೆ ನಾನಾ ಬಗೆಯ ಸೀರೆಗಳಿಗೆ ಇವನ್ನು ಪ್ರಯೋಗ ಮಾಡುವುದು ಕಂಡು ಬರುತ್ತಿದೆ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Travel Fashion Tips: ಬೇಸಿಗೆ ಪ್ರವಾಸದ ವೇಳೆ ಯುವತಿಯರು ಗಮನಿಸಲೇಬೇಕಾದ 5 ಸಂಗತಿಗಳು

Exit mobile version