-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್ ಜಿ ಹುಡುಗರ ಫ್ಯಾಷನ್ ಈ ಸೀಸನ್‌ಗೆ (Summer Fashion) ತಕ್ಕಂತೆ ಬದಲಾಗಿದೆ. ಹಾಗೆಂದು ಯಾವುದು ಹೊಸತೆನಿಸುವುದಿಲ್ಲ! ಬದಲಿಗೆ ಇರುವ ಫ್ಯಾಷನ್‌ವೇರ್‌ಗಳ ರೂಪದಲ್ಲಿ ಬದಲಾವಣೆ ಕಂಡಿದೆ. ಜೊತೆಗೆ ಧರಿಸುವ ಸ್ಟೈಲಿಂಗ್ ಮೊದಲಿಗಿಂತ ಕೊಂಚ ಮಾಡರ್ನ್ ಕಾನ್ಸೆಪ್ಟ್‌ನಲ್ಲಿ ಕಾಣಿಸಿಕೊಂಡಿದೆ.
ಅಭಿರುಚಿಗೆ ತಕ್ಕಂತೆ ಬದಲಾಗುವ ಸ್ಟೈಲಿಂಗ್
“ಈ ಜನರೇಷನ್‌ನಲ್ಲಿ, ಜೆನ್ ಜಿ ಹುಡುಗರ ಸ್ಟೈಲೇ ಬೇರೇ! ಫ್ಯಾಷನ್ನೇ ಬೇರೇ! ಈ ಬಾರಿಯ ಸಮ್ಮರ್ ಫ್ಯಾಷನ್‌ನಲ್ಲಿ ಹುಡುಗರ ಸಾಕಷ್ಟು ಫ್ಯಾಷನ್‌ವೇರ್‌ಗಳ ಸ್ಟೈಲಿಂಗ್ ಬದಲಾಗಿದೆ. ಡಿಫರೆಂಟ್ ಸ್ಟೈಲಿನಲ್ಲಿ ಕಾಣಬಯಸುತ್ತಿದ್ದಾರೆ. ಮಿಕ್ಸ್ ಮ್ಯಾಚ್, ಕಾಂಟ್ರಾಸ್ಟ್ ಹಾಗೂ ರೆಟ್ರೊ ಔಟ್‌ಫಿಟ್ಸ್ ವಿತ್ ಡಿಫರೆಂಟ್ ಸ್ಟೈಲಿಂಗ್ ಸೇರಿದಂತೆ ನಾನಾ ಬಗೆಯ ಔಟ್‌ಫಿಟ್ ಧರಿಸುವ ವರಸೆ ಚೇಂಜ್ ಆಗಿದೆ. ಸಮೀಕ್ಷೆಯೊಂದರ ಪ್ರಕಾರ, ಈ ಜನರೇಷನ್‌ನ ಹುಡುಗರ ಸ್ಟೈಲಿಂಗ್ ಒಂದೇ ಬಗೆಯದ್ದಾಗಿರುವುದಿಲ್ಲ. ಬದಲಿಗೆ ಒಬ್ಬೊಬ್ಬರದು ಒಂದೊಂದು ಬಗೆಯದ್ದಾಗಿರುತ್ತದೆ. ಪ್ರತಿಯೊಬ್ಬರದು ಯೂನಿಕ್ ಸ್ಟೈಲಿಂಗ್ ಎಂದರೂ ತಪ್ಪಲ್ಲ! ಒಟ್ಟಿನಲ್ಲಿ ಈ ಜನರೇಷನ್‌ನ ಹೈಕಳು ಕಂಪ್ಲೀಟ್ ಡಿಫರೆಂಟಾಗಿ ಕಾಣಲು ಬಯಸುತ್ತಾರೆ. ನಾವು ಅವರಂತೆ ಕಾಣಬಾರದು, ನಾವು ಅವರಿಗಿಂತ ಭಿನ್ನವಾಗಿ ಕಾಣಿಸಬೇಕು ಎಂಬುದು ಅವರ ಚಾಯ್ಸ್ ಆಗಿದೆ. ಹಾಗಾಗಿ ಎಲ್ಲರದ್ದೂ ಒಂದೇ ಬಗೆಯ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಆಗಲು ಸಾಧ್ಯವಿಲ್ಲ!” ಎನ್ನುತ್ತಾರೆ ಫ್ಯಾಷನ್ ಸ್ಪೆಷಲಿಸ್ಟ್ ರಜತ್ ಗಾಂದಿ. ಅವರ ಪ್ರಕಾರ, ಹುಡುಗರ ಅಭಿರುಚಿ ಆಗಾಗ್ಗೆ ಬದಲಾಗುತ್ತಿರುತ್ತದಂತೆ. ಹಾಗೆಂದು ವಿಚಿತ್ರವಾಗಿರುವುದಿಲ್ಲ ಎನ್ನುತ್ತಾರೆ.
ರೆಟ್ರೊ ಫ್ಯಾಷನ್‌ವೇರ್ಸ್‌ನ ವಿನೂತನ ಸ್ಟೈಲಿಂಗ್
ದೊಗಲೆ ಪ್ಯಾಂಟ್, ಟ್ಯಾಪರ್, ರಿಪ್ಪಡ್ ಪ್ಯಾಂಟ್ಸ್, ರಿಂಕಲ್ಸ್ ಪುಶ್‌ಬ್ಯಾಕ್ ಪ್ಯಾಂಟ್ಸ್, ಕಾರ್ಪೆಂಟರ್ ಪ್ಯಾಂಟ್ಸ್, ಜಾಗರ್ಸ್ ಸೇರಿದಂತೆ ನಾನಾ ಬಗೆಯ ರೆಟ್ರೊ ಲುಕ್ ನೀಡುವ ಪ್ಯಾಂಟ್‌ಗಳು ಮತ್ತೊಮ್ಮೆ ಫ್ಯಾಷನ್‌ನಲ್ಲಿ ಮರಳಿವೆ. ಹಾಗೆಂದು ಹಳೆಯ ಕಾಲದ ಪುರುಷರು ಧರಿಸುತ್ತಿದ್ದ ಸ್ಟೈಲಿಂಗ್‌ನಲ್ಲಿ ಅಲ್ಲ, ಬದಲಿಗೆ ಬದಲಾದ ರೂಪದಲ್ಲಿ, ಧರಿಸುವ ಬಗೆ ಮಾತ್ರ ಹೀಗೂ ಉಂಟಾ? ಎನ್ನುವ ಮಟ್ಟಿಗೆ ಬದಲಾಗಿದೆ ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್ ಜಾನ್.
ಸ್ಲಿಮ್ ಫಿಟ್ ಶರ್ಟ್ಸ್
ಸ್ಲಿಮ್ ಫಿಟ್ ಟೀ-ಶರ್ಟ್ಸ್ ಇದೀಗ ಈ ದೊಗಲೆಯಂತಹ ಪ್ಯಾಂಟ್‌ಗಳಿಗೆ ಜೊತೆಯಾಗಿವೆ. ಫುಲ್ ಸ್ಲೀವ್ ಇದೀಗ ಸೈಡಿಗೆ ಸರಿದಿದ್ದು ಹಾಫ್ ಸ್ಲೀವ್‌ನವು ಈ ಸೀಸನ್‌ನಲ್ಲಿ ಬಂದಿವೆ. ಪ್ರಿಂಟೆಡ್ ಅದರಲ್ಲೂ ಲೈಟ್ ಪ್ರಿಂಟೆಡ್ ಶರ್ಟ್ಸ್ ಬ್ರಾಂಡ್‌ಗಳಲ್ಲಿ ಬಿಡುಗಡೆಯಾಗಿದ್ದು, ಸಖತ್ ಟ್ರೆಂಡಿಯಾಗಿವೆ. ಚೆಕ್ಸ್ ಶರ್ಟ್ಸ್ ಹುಡುಗರಿಂದ ದೂರ ಓಡಿವೆ.
ದೊಗಲೆ ಟೀ ಶರ್ಟ್ಸ್
ರೌಂಡ್ ನೆಕ್ ಹಾಗೂ ವೀ ನೆಕ್‌ನ ದೊಗಲೆ ಟೀ ಶರ್ಟ್ಸ್ ಇದೀಗ ಹುಡುಗರನ್ನು ಅಪ್ಪಿಕೊಂಡಿವೆ. ನೋಡಲು ಲೂಸಾಗಿ ಕಂಡರೂ ಇವು ಜೆನ್ ಜಿ ಹುಡುಗರ ಫ್ಯಾಷನ್‌ನಲ್ಲಿ ಜಾಗ ಪಡೆದುಕೊಂಡಿವೆ.
ಲಾಂಗ್ ಶಾರ್ಟ್ಸ್
ಸಮ್ಮರ್ ಲುಕ್ ಹಾಗೂ ಟ್ರಾವೆಲ್ ಫ್ಯಾಷನ್‌ನಲ್ಲಿ ಲಾಂಗ್ ಶಾರ್ಟ್ಸ್ ಆಗಮಿಸಿವೆ. ಇತ್ತ ಬರ್ಮಡಾ ಅಲ್ಲ, ಅತ್ತ ಶಾರ್ಟ್ಸ್ ಅಲ್ಲ, ಆ ಲೆಂಥ್‌ನ ಲಾಂಗ್ ಶಾರ್ಟ್ಸ್ ನಾನಾ ಪಾಕೆಟ್ ಡಿಸೈನ್‌ಗಳಲ್ಲಿ ಬಂದಿವೆ. ಹುಡುಗರನ್ನು ಸವಾರಿ ಮಾಡತೊಡಗಿವೆ.
ಗ್ರಾಫಿಕ್ ಟೀ ಶರ್ಟ್ಸ್
ತಮ್ಮಲ್ಲಿರುವ ಆಸಕ್ತಿ ತೋರ್ಪಡಿಸಲು ಸಹಕಾರಿಯಾಗಿರುವ ಗ್ರಾಫಿಕ್ ಟೀ ಶರ್ಟ್ಸ್ ಇದೀಗ ಹುಡುಗರನ್ನು ಸೆಳೆದಿವೆ. ಆಯಾ ಹುಡುಗನ ಕಲರ್ ಆಯ್ಕೆಗೆ ತಕ್ಕಂತೆ ನಾನಾ ಬ್ರಾಂಡ್‌ಗಳಲ್ಲೂ ಕಂಡು ಬರುತ್ತಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸಮ್ಮರ್ ಫ್ಯಾಷನ್‌ನಲ್ಲಿ ಬಂತು ತಂಪೆರೆಯುವ ವಾಟರ್‌ಫಾಲ್ ಇಯರಿಂಗ್ಸ್