ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯ ಬಿರು ಬಿಸಿಲಲ್ಲೂ ಹಾಟ್ ಲುಕ್ ನೀಡುವಂತಹ ಕೋ-ಆರ್ಡ್ ಸೆಟ್‌ಗಳು ಫ್ಯಾಷನ್‌ಲೋಕಕ್ಕೆ (Summer Fashion) ಕಾಲಿಟ್ಟಿವೆ. ಸಮ್ಮರ್‌ನ ಹಾಟ್ ಬಿಸಿಲಿಗೆ ನಾನಾ ಬಗೆಯ ಪ್ರಿಂಟೆಡ್ ಹಾಗೂ ಮಾನೋಕ್ರೋಮ್ ಶೇಡ್‌ನ ಕೋ-ಆರ್ಡ್ ಸೆಟ್‌ಗಳು ಲಗ್ಗೆ ಇಟ್ಟಿದ್ದು, ಟಿನೇಜ್ ಹಾಗೂ ಕಾಲೇಜ್ ಹುಡುಗಿಯರ ಅಲ್ಟ್ರಾ ಫ್ಯಾಷನ್ ಅಂದರೆ, ಸಮ್ಮರ್ ಹೈ ಫ್ಯಾಷನ್‌ನಲ್ಲಿ ಟಾಪ್ ಲಿಸ್ಟ್‌ಗೆ ಎಂಟ್ರಿ ನೀಡಿವೆ.
“ಕೋ-ಆರ್ಡ್ ಸೆಟ್‌ಗಳು ಕಳೆದ ಸೀಸನ್‌ನಿಂದಲೂ ಟ್ರೆಂಡಿಯಾಗಿವೆ. ಹಾಗೆಂದು ಈ ಸೀಸನ್‌ನಲ್ಲಿ ಕಣ್ಮರೆಯಾಗಿಲ್ಲ! ಬದಲಿಗೆ ಹೊಸ ರೂಪದಲ್ಲಿ ಎಂಟ್ರಿ ನೀಡಿವೆ. ಅದರಲ್ಲೂ ಗ್ಲಾಮರಸ್ ಹಾಗೂ ಹಾಟ್ ಲುಕ್ ನೀಡುವ ನಾನಾ ಬೇಸಿಗೆಯ ವಿನ್ಯಾಸದಲ್ಲಿ ಬಂದಿವೆ. ಧರಿಸಿದಾಗ ಕೇವಲ ಫ್ಯಾಷನ್‌ಗೆ ಮಾತ್ರ ಮ್ಯಾಚ್ ಆಗುವುದಲ್ಲ, ಜೊತೆಗೆ ಸೀಸನ್‌ನಲ್ಲಿ ಸೆಕೆಯಾಗದಂತಹ ರೀತಿಯಲ್ಲಿ ವಿನ್ಯಾಸದಲ್ಲಿ ಇವು ಆಗಮಿಸಿವೆ. ಇನ್ನು ಫ್ರೆಶ್ ಲುಕ್ ನೀಡುವ ಪ್ರಿಂಟ್ಸ್ ಹಾಗೂ ಶೇಡ್‌ಗಳಲ್ಲಿ ಇವು ಹುಡುಗಿಯರನ್ನು ಸೆಳೆದಿವೆ. ಕೆಲವಂತು ಹೈ ಸ್ಟ್ರೀಟ್ ಫ್ಯಾಷನ್ ಸೂಟ್ ಆಗುವಂತಹ ಡಿಸೈನ್‌ನಲ್ಲಿ ಕಂಡು ಬಂದಿದ್ದು, ಟೀನೇಜ್ ಹುಡುಗಿಯರಿಂದಿಡಿದು, ಹೈ ಫ್ಯಾಷನ್ ಪ್ರಿಯ ಯುವತಿಯರನ್ನು ಸೆಳೆದಿವೆ. ಪರಿಣಾಮ, ಈ ಸಮ್ಮರ್ ಸೀಸನ್‌ನ ಟ್ರೆಂಡ್‌ನಲ್ಲಿ ಟಾಪ್‌ಗೆ ಸೇರಿವೆ” ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ರಿಯಾ. ಅವರ ಪ್ರಕಾರ, ಸದ್ಯ ಹಾಟ್ ಟ್ರೆಂಡ್‌ನ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ.
ಪ್ರಿಂಟೆಡ್ ಆಫ್ ಶೋಲ್ಡರ್ ಕೋ-ಆರ್ಡ್ ಸೆಟ್
ಫ್ಲೋರಲ್, ಟ್ರಾಪಿಕಲ್ ಹಾಗೂ ಜೆಮೆಟ್ರಿಕಲ್ ವಿನ್ಯಾಸದ ಆಪ್ ಶೋಲ್ಡರ್ ಅಥವಾ ಶೋಲ್ಡರ್ ಲೆಸ್ ಇರುವಂತಹ ಪ್ರಿಂಟೆಡ್ ಕೋ ಆರ್ಡ್ ಸೆಟ್‌ಗಳು ಈ ಬೇಸಿಗೆಯ ಹೈ ಫ್ಯಾಷನ್‌ನಲ್ಲಿವೆ. ಸೆಕೆಯಾಗದ ಇವು ಭುಜಕ್ಕೆ ಗ್ಲಾಮರಸ್ ಲುಕ್ ನೀಡುವುದರೊಂದಿಗೆ ಹೈ ಫ್ಯಾಷನ್ ಟಚ್ ನೀಡುತ್ತವೆ. ಇವುಗಳಲ್ಲೆ ಕೆಲವು ಕೋಲ್ಡರ್ ಶೋಲ್ಡರ್‌ನವು ಎಂಟ್ರಿ ನೀಡಿದ್ದು, ಅವು ಕೂಡ ಟೀನೇಜ್ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ರಾಂಪರ್ ಶೈಲಿಯ ಕೋ-ಆರ್ಡ್ ಸೆಟ್
ರಾಂಪರ್ ಶೈಲಿಯ ಕೋ-ಆರ್ಡ್ ಸೆಟ್‌ಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ. ಶಾರ್ಟ್ ಜಂಪ್‌ಸೂಟ್‌ನಂತೆ ಕಾಣುವ ಇವು ಚಿಕ್ಕ ಹೆಣ್ಣುಮಕ್ಕಳಿಗೂ ಪ್ರಿಯವಾಗಿವೆ. ಹಾಲಿಡೇ, ವೀಕೆಂಡ್ ಲುಕ್ ನೀಡುವ ಇವು ಬಿಂದಾಸ್ ಫ್ಯಾಷನ್‌ಗೆ ಸಾಥ್ ನೀಡುತ್ತಿವೆ. ಪ್ರಿಂಟೆಡ್ ಹೆಚ್ಚು ಚಾಲ್ತಿಯಲ್ಲಿವೆ. ಮಾನೋಕ್ರೋಮ್ ಶೇಡ್‌ನವು ಸೈಡಿಗೆ ಸರಿದಿವೆ.
ಶೋಲ್ಡರ್ ಲೆಸ್-ಸ್ಟ್ರಾಪ್‌ಲೆಸ್ ಕೋ-ಆರ್ಡ್ ಸೆಟ್
ತೋಳುಗಳಿಲ್ಲದ ಹಾಗೂ ಯಾವುದೇ ಚಿಕ್ಕ ಸ್ಟ್ರಾಪ್‌ಗಳಿಲ್ಲದ ಬಿಕಿನಿಯಂತೆ ಕಾಣುವ ಕೋ-ಆರ್ಡ್ ಸೆಟ್‌ಗಳು ಸದ್ಯ ಅಲಟ್ರಾ ಮಾಡರ್ನ್ ಹುಡುಗಿಯರ ವಾರ್ಡ್ರೋಬ್ ಸೇರಿವೆ. ಅದರಲ್ಲೂ ಬೀಚ್ ಫ್ಯಾಷನ್ ಅಥವಾ ರಿವರ್ ಸೈಡ್ ಫ್ಯಾಷನ್‌ನಲ್ಲಿ ಇವು ಟ್ರೆಂಡಿಯಾಗಿವೆ. ಬಾಲಿವುಡ್ ತಾರೆಯರ ಬಿಂದಾಸ್ ಸ್ಟೈಲ್‌ಸ್ಟೇಟ್‌ಮೆಂಟ್‌ನಲ್ಲೂ ಇವನ್ನು ಕಾಣಬಬಹುದು. ಅಷ್ಟೇಕೆ! ಗ್ಲಾಮರಸ್ ಲುಕ್ ಬಯಸುವ ಹುಡುಗಿಯರ ಹೈ ಹಾಲಿಡೇ ಫ್ಯಾಷನ್ ಸ್ಟೇಟ್‌ಮೆಂಟ್‌ನಲ್ಲೂ ಇವು ಇವೆ.
ಬೇಸಿಗೆ ಕೋ-ಆರ್ಡ್ ಸೆಟ್ ಪ್ರಿಯರಿಗಾಗಿ…
- ಟ್ರೆಂಡಿ ಫ್ಲೋರಲ್ ವಿನ್ಯಾಸದವನ್ನು ಆಯ್ಕೆ ಮಾಡಿ.
- ಮಿನಿಮಲ್ ಆಕ್ಸೆಸರೀಸ್ ಧರಿಸಿ.
- ಸಮ್ಮರ್ ಹೇರ್ಸ್ಟೈಲ್ ಮಾಡಿ, ನೋಡಿ.
- ಫುಟ್ವೇರ್ ಕೂಡ ಸೀಸನಬಲ್ ಆಗಿರಲಿ.
- ಯಾವುದೇ ಎಥ್ನಿಕ್ ಆಕ್ಸೆಸರೀಸ್ ಅಥವಾ ಸ್ಟೈಲಿಂಗ್ ಮಾಡಬೇಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Star Summer Fashion: ಸಮ್ಮರ್ ಬಾಡಿಕಾನ್ ಪಾರ್ಟಿ ಡ್ರೆಸ್‌ನಲ್ಲಿ ನಟಿ ಡೈಸಿ ಬೋಪಣ್ಣ ಫಂಕಿ ಲುಕ್!