Site icon Vistara News

Summer Fashion: ಬೇಸಿಗೆಯಲ್ಲಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ 5 ಶೈಲಿಯ ಗ್ಲಾಮರಸ್‌ ಟಾಪ್‌ಗಳಿವು

Summer Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬೇಸಿಗೆಯಲ್ಲಿ ಹುಡುಗಿಯರಿಗೆ (Summer Fashion) ಗ್ಲಾಮರಸ್‌ ಲುಕ್‌ ನೀಡುವ 5 ಬಗೆಯ ಫ್ಯಾಷೆನಬಲ್‌ ಟಾಪ್‌ಗಳು ಟ್ರೆಂಡಿಯಾಗಿವೆ. ಕಾಲೇಜು ಹುಡುಗಿಯರು ಮಾತ್ರವಲ್ಲ, ವೀಕೆಂಡ್‌ನಲ್ಲಿ ಉದ್ಯೋಗಸ್ಥ ಯುವತಿಯರು ಕೂಡ ಧರಿಸತೊಡಗಿದ್ದಾರೆ. ಇವು ನೋಡಲು ಗ್ಲಾಮರಸ್‌ ಆಗಿ ಕಾಣಿಸುವುದರೊಂದಿಗೆ ಇವು ಕಂಫರ್ಟಬಲ್‌ ಲುಕ್‌ ನೀಡುತ್ತವೆ ಎಂಬ ಕಾರಣದಿಂದಾಗಿ ಇವುಗಳ ಬೇಡಿಕೆ ಮೊದಲಿಗಿಂತ ಹೆಚ್ಚಾಗಿದೆ.

ಆನ್‌ಲೈನ್‌ನಲ್ಲಿ ಹೆಚ್ಚಿದ ಡಿಮ್ಯಾಂಡ್‌

ಶಾಪಿಂಗ್‌ ಸೆಂಟರ್‌ ಹಾಗೂ ಮಾಲ್‌ಗಳ ಶಾಪ್‌ಗಳಿಗಿಂತ ಆನ್‌ಲೈನ್‌ನಲ್ಲಿ ಸಮ್ಮರ್‌ ಟಾಪ್‌ಗಳ ಡಿಮ್ಯಾಂಡ್‌ ಹೆಚ್ಚಾಗಿದೆಯಂತೆ. ಹಾಗೆಂದು ಅಪರೆಲ್‌ ಸಂಸ್ಥೆಯ ಸಮೀಕ್ಷೆ ಬಹಿರಂಗಪಡಿಸಿದೆ. ಇದಕ್ಕೆ ಕಾರಣ, ಬೇಕಾದ ರೀತಿಯ ವಿನ್ಯಾಸ ಹಾಗೂ ಡಿಸೈನ್‌ಗಳು ಅತಿ ಸುಲಭವಾಗಿ ದೊರೆಯುತ್ತಿರುವುದು ಹಾಗೂ ಕಡಿಮೆ ಬೆಲೆಗೆ ಸಿಗುತ್ತಿರುವುದು. ಅದರಲ್ಲೂ ಬಾಲಿವುಡ್‌ ಸೆಲೆಬ್ರೆಟಿಗಳು ಧರಿಸುವಂತಹ ಡಿಸೈನ್‌ನವು ಅತಿ ಹೆಚ್ಚು ದೊರಕುತ್ತಿವೆ. ಇನ್ನು, ಇವುಗಳಿಗೆ ಬೇಡಿಕೆಯು ಹೆಚ್ಚಿದೆ ಎನ್ನುತ್ತಾರೆ ಫ್ಯಾಷನ್‌ ಸಮೀಕ್ಷೆ. ಇದರೊಂದಿಗೆ ಎಲ್ಲಾ ಸೈಝ್‌ನವರಿಗೂ ಆನ್‌ಲೈನ್‌ನಲ್ಲಿ ದೊರೆಯುತ್ತಿರುವುದು ಒಂದು ಕಾರಣವಾದರೇ, ರಿಟರ್ನ್‌ ಪಾಲಿಸಿ ಮತ್ತೊಂದು. ಪ್ಲಸ್‌ ಸೈಝಿನವರಿಗೂ ಇವು ಲಭ್ಯವಾಗುತ್ತಿರುವುದು ಮಹಿಳೆಯರನ್ನೂ ಸೆಳೆಯಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್‌ ಸಮೀಕ್ಷಾ ವರದಿಗಾರರು. ಅವರ ಪ್ರಕಾರ, ಸಮ್ಮರ್‌ ಸೀಸನ್‌ನಲ್ಲಿ ಸಾಕಷ್ಟು ಡಿಸೈನ್‌ನವು ಟ್ರೆಂಡಿಯಾಗಿರುವುದರೊಂದಿಗೆ ಆನ್‌ಲೈನ್‌ ವ್ಯಾಪಾರ ವಹಿವಾಟು ಹೆಚ್ಚಿಸಿವೆಯಂತೆ.

ಟ್ಯೂಬ್‌ ಟಾಪ್ಸ್‌

ಯಾವುದೇ ಸ್ಟ್ರಾಪ್‌ ಹಾಗೂ ಶೋಲ್ಡರ್‌ ಇಲ್ಲದ ಈ ಟಾಪ್‌ಗಳು ಸದ್ಯ ಜೆನ್‌ ಜಿ ಹುಡುಗಿಯರ ಫೇವರೇಟ್‌ ಲಿಸ್ಟ್‌ನಲ್ಲಿವೆ. ಬಾಲಿವುಡ್‌ ಸೆಲೆಬ್ರೆಟಿಗಳ ಮೊದಲ ಚಾಯ್ಸ್‌ನಲ್ಲಿವೆ. ಬಾಲಿವುಡ್‌ ತಾರೆಯರೇ ಈ ಟಾಪ್‌ಗಳನ್ನು ಅತಿ ಹೆಚ್ಚಾಗಿ ಧರಿಸುತ್ತಾರೆನ್ನಲಾಗಿದೆ. ಫಿಟ್ಟಿಂಗ್‌ ಇರುವಂತಹ ಟ್ಯೂಬ್‌ ಟಾಪ್‌ಗಳ ಆಯ್ಕೆ ಮಾಡುವುದು ಉತ್ತಮ.

ಬ್ಲೌಸ್‌ ಟಾಪ್‌

ನೋಡಲು ಸೀರೆಯ ಗಿಡ್ಡನಾದ ಬ್ಲೌಸ್‌ನಂತೆ ಕಾಣುವ ಇವು ಕೂಡ ಈ ಸೀಸನ್‌ನಲ್ಲಿವೆ. ಸ್ಕರ್ಟ್‌, ಪ್ಯಾಂಟ್‌ಗಳ ಮೇಲೆ ಹುಡುಗಿಯರು ಧರಿಸುವುದನ್ನು ಕಾಣಬಹುದು. ನಾನಾ ಶೈಲಿಯಲ್ಲಿ ಇವು ಲಭ್ಯ. ಬೇಕಿದ್ದಲ್ಲಿ ಸೀರೆಯೊಂದಿಗೂ ಇವನ್ನು ಮಿಕ್ಸ್‌ ಮ್ಯಾಚ್‌ ಮಾಡಿ ಇಂಡೋ-ವೆಸ್ಟರ್ನ್‌ ಲುಕ್‌ ನೀಡಬಹುದು.

ಕ್ಯಾಮಿಸೋಲ್‌ ಟಾಪ್‌

ಇವು ಕೂಡ ಅತಿ ಹೆಚ್ಚು ಚಾಲ್ತಿಯಲ್ಲಿರುವ ಸಮ್ಮರ್‌ ಟಾಪ್‌ಗಳು. ಇವು ದಶಕಗಳಿಂದಲೇ ಸಮ್ಮರ್‌ ಸೀಸನ್‌ ಟ್ರೆಂಡ್‌ನಲ್ಲಿವೆ. ಯಾವತ್ತೂ ಸೀಸನ್‌ ಫ್ಯಾಷನ್‌ನಿಂದ ಹೊರಗೆ ಬಿದ್ದಿಲ್ಲ! ಮುಂದಿನ ಸೀಸನ್‌ನಲ್ಲಿ ಇವುಗಳ ಮೇಲೆ ಜಾಕೆಟ್‌ ಧರಿಸಿ ಲೇಯರ್‌ ಲುಕ್‌ ನೀಡಬಹುದು.

ಆಫ್‌ ಶೋಲ್ಡರ್‌ ಕ್ರಾಪ್‌ ಟಾಪ್‌

ಟೀ ಶರ್ಟ್‌ನಂತೆ ಉದ್ದವಾಗಿದ್ದ ಆಫ್‌ ಶೋಲ್ಡರ್‌ ಟಾಪ್‌ಗಳು ಇದೀಗ ಕ್ರಾಪ್‌ ಆಗಿವೆ. ಹೊಟ್ಟೆಯ ಮೇಲೆ ನಿಲ್ಲುತ್ತವೆ. ಭುಜಗಳ ಹತ್ತಿರ ಎಕ್ಸ್‌ಪೋಸ್‌ ಆಗಿರುತ್ತವೆ. ಇವನ್ನು ಪ್ಯಾಂಟ್‌, ಮಿಡಿ, ಸ್ಕರ್ಟ್‌ ಎಲ್ಲವೊಂದಿಗೂ ಧರಿಸಬಹುದು.

ಸ್ಟ್ರಾಪ್‌ ಟಾಪ್‌

ನಾನಾ ಶೇಡ್‌ನ ಸ್ಟ್ರಾಪ್‌ ಟಾಪ್‌ಗಳು ಈ ಸೀಸನ್‌ನಲ್ಲಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಅವುಗಳಲ್ಲಿ ನೂಡಲ್ಸ್‌ ಸ್ಟ್ರಾಪ್‌, ಸ್ಪೆಗೆಟಿ ಕ್ರಾಪ್‌ ಟಾಪ್‌ಗಳು ಹೆಚ್ಚು ಟೀನೇಜ್‌ ಹುಡುಗಿಯರನ್ನು ಬರ ಸೆಳೆದಿವೆ. ಎಲ್ಲಾ ಬಗೆಯ ಪ್ಯಾಂಟ್‌ ಜೊತೆ ಲಾಂಗ್‌ ಸ್ಕರ್ಟ್‌ ಜೊತೆ ಮ್ಯಾಚ್‌ ಮಾಡಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Saanya Iyer: ಗ್ರ್ಯಾಂಡ್‌ ಲೆಹೆಂಗಾದಲ್ಲಿ ರಾಣಿಯಂತೆ ಕಂಗೊಳಿಸಿದ ನಟಿ ಸಾನ್ಯಾ ಅಯ್ಯರ್‌

Exit mobile version