-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಸೀಸನ್‌ನ ಸಮ್ಮರ್ ಫ್ಯಾಷನ್‌ನಲ್ಲಿ (Summer Fashion) ಇದೀಗ ತಂಪೆರೆಯುವ ವಾಟರ್ ಫಾಲ್ ಇಯರಿಂಗ್‌ಗಳು ಟ್ರೆಂಡಿಯಾಗಿವೆ. ಮೇಲಿನಿಂದ ಕೆಳಗೆ ಇಳಿಯುವ ಜಲಧಾರೆಯಂತೆ ಕಾಣಿಸುವ ಕ್ರಿಸ್ಟಲ್ ಅಥವಾ ಅಮೆರಿಕನ್ ಡೈಮಂಡ್ ಹೊಂದಿರುವ ಈ ಇಯರಿಂಗ್ಸ್ ಸದ್ಯ ಹುಡುಗಿಯರ ಫೇವರೇಟ್ ಆಕ್ಸೆಸರೀಸ್ ಲಿಸ್ಟ್‌ಗೆ ಸೇರಿವೆ.
ಏನಿದು ವಾಟರ್ಫಾಲ್ ಇಯರಿಂಗ್ಸ್ ?
ನೋಡಲು ಥೇಟ್ ಜಲಪಾತದಂತೆ ಕಾಣಿಸುವ ಈ ಹ್ಯಾಂಗಿಂಗ್ಸ್‌ನಂತಹ ಕಿವಿಯೊಲೆಗಳು ನೋಡಲು ವಾಟರ್‌ಫಾಲ್‌ನಂತೆ ಕಾಣುತ್ತವೆ. ಹಾಗಾಗಿ ಇವನ್ನು ವಾಟರ್‌ಫಾಲ್ ಇಯರಿಂಗ್ಸ್ ಎನ್ನಲಾಗುತ್ತದೆ. ಕಿವಿಗೆ ಧರಿಸಿದಾಗ ಇಳೆ ಬೀಳುವ ಲೇಯರ್‌ನಂತಹ ಕ್ರಿಸ್ಟಲ್ ಸರಪಳಿಗಳು ವಾಟರ್‌ಫಾಲ್‌ನಂತೆ ಕಾಣಿಸುತ್ತವೆ. ಈ ವಿನ್ಯಾಸದಲ್ಲೆ ಇದೀಗ ಸಾಕಷ್ಟು ಡಿಸೈನ್‌ನವು ಆಕ್ಸೆಸರೀಸ್ ಲೋಕಕ್ಕೆ ಬಂದಿವೆ. ಮೈಕ್ರೋ ಕ್ರಿಸ್ಟಲ್ಸ್ ಅಂದರೇ, ಅಮೆರಿಕನ್ ಡೈಮಂಡ್ ಅಥವಾ ಆರ್ಟಿಫಿಷಿಯಲ್ ಅಮೆರಿಕನ್ ಡೈಮಂಡ್ ಹೊಂದಿರುವ ನಾಲ್ಕೈದು ಲೇಯರ್ ಹೊಂದಿರುವಂತಹ ಇಳೆ ಬೀಳುವಂತಹ ಇಯರಿಂಗ್‌ಗಳು ವೈಟ್ ಶೇಡ್‌ನಲ್ಲಿ ಲಭ್ಯ. ಇದೀಗ ಪಾಸ್ಟೆಲ್ ಶೇಡ್‌ಗಳಲ್ಲೂ ದೊರಕುತ್ತಿವೆ. ಲೈಟ್ ಪಿಂಕ್, ಪೀಚ್, ಬೀಚ್ ಬ್ಲ್ಯೂ, ಸ್ಕೈ ಬ್ಲ್ಯೂ, ಪಿಸ್ತಾ ಗ್ರೀನ್ ಶೇಡ್‌ನವು ಹೆಚ್ಚು ಪಾಪುಲರ್ ಆಗಿವೆ. ಹುಡುಗಿಯರನ್ನು ಸೆಳೆದಿವೆ.
ಪಾರ್ಟಿವೇರ್ ಆಕ್ಸೆಸರೀಸ್
ಪಾರ್ಟಿವೇರ್ ಆಕ್ಸೆಸರೀಸ್ ಕೆಟಗರಿಗೆ ಸೇರುವ ಈ ವಾಟರ್ ಫಾಲ್ ಇಯರಿಂಗ್‌ಗಳು ಕೆಲವು ಮೇಲ್ಭಾಗದಲ್ಲಿ ಬಿಗ್ ಸ್ಟೋನ್ ಅಥವಾ ಕಲರ್‌ಫುಲ್ ಇಮಿಟೇಡ್ ಸ್ಟೋನ್ಸ್ ಹೊಂದಿರುತ್ತವೆ. ಇಲ್ಲವೇ ಬೀಡ್ಸ್ ಅಥವಾ ಪರ್ಲ್ ಹೊಂದಿರುತ್ತವೆ. ಅದರ ಕೆಳಗೆ ಸುಮಾರು ನಾಲ್ಕೈದು ಇಂಚಿನಷ್ಟು ಉದ್ದದ ಹ್ಯಾಂಗಿಂಗ್ ಡಿಸೈನ್ ಹೊಂದಿರುತ್ತವೆ. ಕೆಲವು ಒಂದೇ ಸಮನಾಗಿ ಇದ್ದರೇ, ಇನ್ನು ಕೆಲವು ಆಸೆಮ್ಮಿಟ್ರಿಕಲ್ ಲೆಂಥ್ ಹೊಂದಿರುತ್ತವೆ. ಇವು ಇದೀಗ ಪಾರ್ಟಿವೇರ್ ಆಕ್ಸೆಸರೀಸ್ ಕೆಟಗರಿಯಲ್ಲಿ ಟಾಪ್ ಲಿಸ್ಟ್‌ನಲ್ಲಿವೆ. ಇವುಗಳ ವಿಶೇಷತೆಯೇಂದರೇ, ಯಾವುದೇ ಬಗೆಯ ಶಿಮ್ಮರ್ ಅಥವಾ ಶೈನಿಂಗ್ ಫ್ಯಾಬ್ರಿಕ್‌ನ ಪಾರ್ಟಿವೇರ್ ಔಟ್‌ಫಿಟ್‌ನೊಂದಿಗೆ ಇವನ್ನು ಧರಿಸಬಹುದು. ಎಲ್ಲವಕ್ಕೂ ಇವು ಮ್ಯಾಚ್ ಆಗುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇಡೀ ಮುಖವನ್ನು ಹೈ ಲೈಟ್ ಮಾಡುತ್ತವೆ. ಮಿರುಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ವಾಟರ್ ಫಾಲ್ ಕ್ಲಾಸಿ ಲುಕ್
“ಶಿಮ್ಮರ್ ಔಟ್‌ಫಿಟ್‌ಗಳಿಗೆ ಈ ವಾಟರ್‌ಫಾಲ್ ಇಯರಿಂಗ್‌ಗಳು ಹೇಳಿ ಮಾಡಿಸಿದಂತಿರುತ್ತವೆ. ಕಿವಿ ಮಾತ್ರವಲ್ಲ, ಇಡೀ ಲುಕ್‌ಗೆ ಇವು ಸಾಥ್ ನೀಡುತ್ತವೆ. ಆಕರ್ಷಕವಾಗಿ ಕಾಣಿಸುತ್ತವೆ. ಕ್ಲಾಸಿ ಲುಕ್ ನೀಡುವುದರೊಂದಿಗೆ ಸೆಲೆಬ್ರೆಟಿ ಇಮೇಜ್ ನೀಡುತ್ತವೆ” ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರೀಟಾ. ಅವರ ಪ್ರಕಾರ, ಯುವತಿಯರು ಮಾತ್ರವಲ್ಲ, ಎಲ್ಲಾ ವಯಸ್ಸಿನ ಮಹಿಳೆಯರು ಧರಿಸುವುದು ಹೆಚ್ಚಾಗಿದೆ.
ವಾಟರ್ ಫಾಲ್ ಇಯರಿಂಗ್ ಆಯ್ಕೆ ಹೀಗಿರಲಿ
- ಶಿಮ್ಮರ್ ಡಿಸೈನರ್ವೇರ್ ಶೇಡ್ಸ್ಗೆ ತಕ್ಕಂತೆ ವಾಟರ್ ಫಾಲ್ ಇಯರಿಂಗ್ ಆಯ್ಕೆ ಮಾಡಿ.
- ಪಾಸ್ಟೆಲ್ ಶೇಡ್ ಡಿಸೈನ್‌ನವು ಟ್ರೆಂಡ್ನಲ್ಲಿವೆ.
- ಆದಷ್ಟೂ ಮಿನುಗುವಂತವನ್ನು ಸೆಲೆಕ್ಟ್ ಮಾಡಿ.
- ಶೋಲ್ಡರ್ ತನಕ ನೇತಾಡುವಂತವು ಇದೀಗ ಜೆನ್ ಜಿ ಹುಡುಗಿಯರನ್ನು ಸೆಳೆದಿವೆ.
- ನಾಲ್ಕೈದು ಎಳೆ ಎಳೆಯಾಗಿರುವಂತವನ್ನು ಧರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ )
ಇದನ್ನೂ ಓದಿ: Star Summer Saree Fashion: ಬೇಸಿಗೆಯಲ್ಲೂ ಸೀರೆಯಲ್ಲಿ ಗ್ಲಾಮರಸ್ ಆಗಿ ಕಾಣಬೇಕೆ? ನಟಿ ಮೇಘಾಶ್ರೀ ಟಿಪ್ಸ್ ಫಾಲೋ ಮಾಡಿ!