-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆ ನೇಲ್ ಆರ್ಟ್ ಫ್ಯಾಷನ್ನಲ್ಲಿ (Summer Nail Art) ಇದೀಗ ಕಲ್ಲಂಗಡಿ ಹಣ್ಣಿನದ್ದೇ ಕಾರುಬಾರು. ಹೌದು. ವಾಟರ್‌ಮೆಲನ್ ವಿವಿಧ ವಿನ್ಯಾಸಗಳು ಸಮ್ಮರ್ ನೇಲ್ ಆರ್ಟ್‌ಗೆ ಎಂಟ್ರಿ ನೀಡಿವೆ. ನೋಡಲು ಮನಮೋಹಕವಾಗಿ ಕಾಣುವ ಈ ವಾಟರ್‌ಮೆಲನ್ ಭಾಗವನ್ನು ಪ್ರತಿಬಿಂಬಿಸುವ ಈ ನೇಲ್ ಆರ್ಟ್ ಸದ್ಯಕ್ಕೆ ಬ್ಯೂಟಿ ಪ್ರಿಯರನ್ನು ಸೆಳೆದಿವೆ. “ಬೇಸಿಗೆ ಸೀಸನ್ನಲ್ಲಿ ಸಾಕಷ್ಟು ಬಗೆಯ ನೇಲ್ ಆರ್ಟ್ಗಳು ಎಂಟ್ರಿ ನೀಡುತ್ತವೆ. ಒಂದಕ್ಕಿಂತ ಒಂದು ನೋಡಲು ಬ್ಯೂಟಿಫುಲ್ ಆಗಿ ಕಾಣುತ್ತವೆ. ಅವುಗಳಲ್ಲಿ ಇದೀಗ ವಾಟರ್‌ಮೆಲನ್ ನೇಲ್ ಆರ್ಟ್ ಪಾಪ್ಯುಲರ್ ಆಗಿದೆ. ಇವು ಬೇಸಿಗೆಯ ಬಿಸಿಲಲ್ಲಿ ಈ ನೇಲ್ ಆರ್ಟ್ ತಂಪನ್ನೆರೆಯುವ ಫೀಲ್ ನೀಡುತ್ತದೆ. ಮಾತ್ರವಲ್ಲ, ಮನಮೋಹಕವಾಗಿ ಕಾಣಿಸುತ್ತದೆ. ಆಯಾ ಸೀಸನ್ಗೆ ತಕ್ಕಂತೆ ನೇಲ್ ಆರ್ಟ್ ಬದಲಿಸುವವರಿಗೆ ಇದು ಸೂಪರ್ ಐಡಿಯಾ ಎನ್ನಬಹುದು ಎನ್ನುತ್ತಾರೆ ನೇಲ್ ಆರ್ಟ್ ಡಿಸೈನರ್ ಛಾಯಾ. ಅವರ ಪ್ರಕಾರ, ಸೀಸನ್ಗೆ ತಕ್ಕಂತೆ ನೇಲ್ ಆರ್ಟ್ ಆಗಾಗ್ಗೆ ಹೊಸ ಹೊಸ ಐಡಿಯಾ ಹಾಗೂ ಡಿಸೈನ್ಗಳನ್ನು ಬಿಡುಗಡೆಗೊಳಿಸುತ್ತದೆ. ನೇಲ್ ಆರ್ಟ್ ಪ್ರಿಯರು ತಮಗಿಷ್ಟವಾದ ಡಿಸೈನ್ಗೆ ಮತ್ತಷ್ಟು ಕ್ರಿಯಾತ್ಮಕವಾಗಿ ಚಿತ್ತಾರಗಳನ್ನು ಸೇರಿಸಿ ಕಸ್ಟಮೈಸ್ ಮಾಡಿ ಚಿತ್ರಿಸುತ್ತಾರೆ ಎನ್ನುತ್ತಾರೆ.
ನೇಲ್ಆರ್ಟ್ ಸಲೂನ್ನಲ್ಲಿ ಚಿತ್ತಾರ
ಅಂದಹಾಗೆ, ಯಾವುದೇ ನೇಲ್ ಆರ್ಟ್ ಸಲೂನ್ಗಳಲ್ಲಿ ಈ ಡಿಸೈನ್ದಗಳು ಲಭ್ಯ. ಕೆಲವಲ್ಲಿ ತಮ್ಮ್ದೇ ಆದ ಡಿಸೈನ್ಗಳನ್ನು ಮಾತ್ರ ಚಿತ್ರಿಸುತ್ತಾರೆ. ಆಗ ನಮಗೆ ಇಷ್ಟವಾದ ವಾಟರ್‌ಮೆಲನ್ ಚಿತ್ತಾರಗಳನ್ನು ತೋರಿಸಿ ಅದೇ ಬೇಕೆಂದಲ್ಲಿ, ಅವರು ಕಸ್ಟಮೈಸ್ ಸರ್ವಿಸ್ ನೀಡುತ್ತಾರೆ ಎನ್ನುತ್ತಾರೆ ನೇಲ್ ಪಾರ್ಲರ್ನಾ ರೀಟಾ.
ನೀವೂ ಬಿಡಿಸಬಹುದು
ನಿಮ್ಮ ಬಳಿ ನೇಲ್ ಆರ್ಟ್ ಕಿಟ್ ಇದ್ದಲ್ಲಿ, ಕೊಂಚ ಕಲಾವಿದರ ಮನಸ್ಸಿದ್ದಲ್ಲಿ ಈ ಚಿತ್ತಾರಗಳನ್ನು ನೀವೂ ಚಿತ್ತಾರ ಮೂಡಿಸಬಹುದು. ನಿಮ್ಮ ಬಳಿ ಕಲ್ಲಂಗಡಿ ಹಣ್ಣಿನ ಚಿತ್ತಾರಕ್ಕೆ ಬೇಕಾಗುವ ನೇಲ್ ಕಲರ್ಗಳಿರಬೇಕು. ಮೊದಲಿಗೆ ಹಸಿರು ಹಾಗೂ ರೆಡ್ ಶೇಡ್ಗಳನ್ನು ಹಚ್ಚಿ, ಕೊಂಚ ಒಣಗಿದ ನಂತರ ನೇಲ್ ಕಿಟ್ನಲ್ಲಿರುವ ನೀಡಲ್ನಿಂದ ಕಲ್ಲಂಗಡಿ ಹಣ್ಣಿನ ಸೀಡ್ಗಳನ್ನು ಚುಕ್ಕಿಯಂತೆ ಇಡಬಹುದು. ಇದಕ್ಕಾಗಿ ಕೊಂಚ ಕ್ರಿಯಾತ್ಮಕ ಮನಸ್ಸಿರಬೇಕು ಎಂದು ಸಲಹೆ ನೀಡುತ್ತಾರೆ ನೇಲ್ ಡಿಸೈನರ್ ರೀಟಾ ಚರ್ಕವರ್ತಿ.
ವಾಟರ್ ಮೆಲನ್ ನೇಲ್ ಆರ್ಟ್ ಪ್ರಿಯರಿಗಾಗಿ 3 ಸಲಹೆ
- ಅತಿ ಹೆಚ್ಚು ನೀರಿನಲ್ಲಿ ಕೆಲಸ ಮಾಡುವುದಾದಲ್ಲಿ ಹೆಚ್ಚು ದಿನ ನೇಲ್ ಆರ್ಟ್ ಉಳಿಯುವುದಿಲ್ಲ!
- ನೇಲ್ ಆರ್ಟ್‌ಗೆ ಮುನ್ನ ಮೆನಿಕ್ಯೂರ್ ಮಾಡಿಸಿ.
- ಬ್ರಾಂಡೆಡ್ ನೇಲ್ ಪಾಲಿಶ್ ಬಳಸಿದಲ್ಲಿ ಹೆಚ್ಚು ದಿನ ಕಲರ್ ಮಾಸುವುದಿಲ್ಲ.
ಲೇಖಕಿ : ಫ್ಯಾಷನ್ ಪತ್ರಕರ್ತೆ
ಇದನ್ನೂ ಓದಿ: Celebrities Ramanavami: ಎಥ್ನಿಕ್‌ವೇರ್ಸ್‌ನಲ್ಲಿ ರಾಮನನ್ನು ಜಪಿಸಿದ ಸೆಲೆಬ್ರೆಟಿಗಳಿವರು