ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ನಲ್ಲಿ (Summer Fashion) ಇದೀಗ ಸ್ಲಿವ್‌ಲೆಸ್ ಗೌನ್‌ಗಳ ಹಂಗಾಮ ಹೆಚ್ಚಾಗಿದೆ. ನೋಡಲು ಮಾತ್ರವಲ್ಲ, ಧರಿಸಿದಾಗ ಈ ಸೀಸನ್‌ನಲ್ಲಿ ಹೆಚ್ಚು ಸೆಕೆಯಾಗದಂತೆ, ಕಂಫರ್ಟಬಲ್ ಫೀಲ್ ಆಗುವಂತಹ ನಾನಾ ಡಿಸೈನ್ನ ಅದರಲ್ಲೂ ಲೈಟ್‌ವೈಟ್ ಫ್ಯಾಬ್ರಿಕ್‌ನ ತೋಳಿಲ್ಲದ ಈ ಗೌನ್‌ಗಳು ನಾನಾ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಕಾಲಿಟ್ಟಿವೆ.
ಕಂಫರ್ಟಬಲ್ ಡಿಸೈನ್ ಗೌನ್
“ಸ್ಲಿವ್‌ಲೆಸ್ ಗೌನ್‌ಗಳು ಸಮ್ಮರ್ ಸೀಸನ್‌ನ ಟ್ರೆಂಡಿ ಗೌನ್‌ಗಳು ಎನ್ನಬಹುದು. ಇವು ಸೆಕೆಯಾಗುವುದಿಲ್ಲ. ಆರಾಮ ಎಂದೆನಿಸುತ್ತವೆ. ಇನ್ನು, ಈ ಸೀಸನ್‌ಗೆ ಪೂರಕ ಎಂಬಂತೆ, ಡಿಸೈನ್‌ಗಳನ್ನು ಹೊಂದಿರುತ್ತವೆ. ತೀರಾ ಟೈಟ್ ಫಿಟ್ಟಿಂಗ್ ಆಗಿರುವುದಿಲ್ಲ. ಅದರಲ್ಲೂ ಲೇಯರ್ ಇನ್ನರ್ ಲೈನಿಂಗ್ ಹೊಂದಿರುವುದಿಲ್ಲ. ಲೈಟ್‌ವೈಟಾಗಿರುತ್ತವೆ. ಅಂತಹ ಫ್ಯಾಬ್ರಿಕನ್ನೇ ಇವುಗಳನ್ನು ವಿನ್ಯಾಸ ಮಾಡಲು ಆಯ್ಕೆ ಮಾಡಲಾಗಿರುತ್ತದೆ. ವೆಡ್ಡಿಂಗ್ ಸೀಸನ್‌ಗೆ ಸೂಕ್ತವಾಗಿರುವುದು ಮಾತ್ರವಲ್ಲ, ಪಾರ್ಟಿವೇರ್ ಗೌನ್‌ಗಳು ಹಾಗೂ ಫೋಟೋಶೂಟ್ ಗೌನ್‌ಗಳು ಈ ಸೀಸನ್‌ಗೆ ತಕ್ಕಂತೆ ಬಿಡುಗಡೆಗೊಂಡಿವೆ” ಎನ್ನುತ್ತಾರೆ ಗೌನ್ ಡಿಸೈನರ್ ರಾಜನ್. ಅವರ ಪ್ರಕಾರ, ಇಂತಹ ಗೌನ್‌ಗಳು ಈ ಸೀಸನ್‌ಗೆಂದೇ ಸಿದ್ಧಪಡಿಸಲಾಗಿರುತ್ತದೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಗೌನ್ ಡಿಸೈನ್ಸ್
ಸ್ಲಿವ್‌ಲೆಸ್ ಬಾರ್ಡರ್ ಗೌನ್ಸ್, ಎಥ್ನಿಕ್ ಡಿಸೈನ್ಸ್, ಸ್ಯಾಟಿನ್ ಗೌನ್ಸ್, ನೆಟ್ಟೆಡ್ ಸ್ಲಿವ್‌ಲೆಸ್ ಗೌನ್ಸ್, ಹಾಲ್ಟರ್ ನೆಕ್ ಗೌನ್ಸ್, ಸ್ವಿಂಗ್ ನೆಕ್‌ಲೈನ್ ಗೌನ್ಸ್, ಟೈಯಿಂಗ್ ಸ್ಲಿವ್‌ಲೆಸ್ ಗೌನ್ಸ್, ಶೋಲ್ಡರ್‌ಲೆಸ್ ಗೌನ್‌ಗಳು ಸೇರಿದಂತೆ ನಾನಾ ಬಗೆಯವು ಈ ಸೀಸನ್‌ಗೆ ಎಂಟ್ರಿ ನೀಡಿವೆ. ಇನ್ನು ಫುಲ್‌ಸ್ಲೀವ್ ಗೌನ್‌ಗಳು ಹಾಗೂ ಪಫ್ ಸ್ಲೀವ್, ಟೈಟ್ ಸ್ಲೀವ್ ಗೌನ್‌ಗಳು ಸದ್ಯಕ್ಕೆ ಸೈಡಿಗೆ ಸರಿದಿವೆ. ಮಾನ್ಸೂನ್‌ವರೆಗೂ ಇವು ಹಿಂದಿರುಗುವ ಯಾವುದೇ ಮುನ್ಸೂಚನೆಗಳು ಕಾಣುತ್ತಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ ಖಾನ್. ಅವರು ಹೇಳುವಂತೆ, ಈ ಸೀಸನ್ ಗೌನ್‌ಗಳು ಆದಷ್ಟೂ ಶಾರ್ಟ್ ಸ್ಲಿವ್ ಅಥವಾ ಸ್ಲಿವ್‌ಲೆಸ್ ಹೊಂದಿರುತ್ತವಂತೆ.
ಪಾರ್ಟಿವೇರ್ ಸ್ಲಿವ್‌ಲೆಸ್ ಗೌನ್‌ಗಳು
ಪಾರ್ಟಿವೇರ್ ಸ್ಲಿವ್‌ಲೆಸ್ ಗೌನ್‌ಗಳು ತೀರಾ ಉದ್ದವಾಗಿರುವುದಿಲ್ಲ! ಬದಲಿಗೆ ನೋಡಲು ಕೊಂಚ ಮ್ಯಾಕ್ಸಿಯಂತಿರುತ್ತವೆ. ಅಥವಾ ಲಾಂಗ್ ಸ್ಕರ್ಟ್‌ನಂತಿರುತ್ತವೆ. ಡಿಸೈನ್‌ಗಳು ಅಷ್ಟೇ! ಸಿಂಪಲ್ ಆಗಿರುತ್ತವೆ. ಕೊಂಚ ಶಿಮ್ಮರ್ ಆಗಿರುತ್ತವೆ ಎನ್ನುತ್ತಾರೆ ಡಿಸೈನರ್ ಡಿಂಪಲ್.
ಸ್ಲಿವ್‌ಲೆಸ್ ಗೌನ್‌ಗಳ ಆಯ್ಕೆಗೆ 3 ಟಿಪ್ಸ್
- ಆದಷ್ಟೂ ಸಿಂಪಲ್ ಡಿಸೈನ್ ಆಯ್ಕೆ ಮಾಡಿ.
- ಟ್ರೆಂಡಿ ಕಲರ್ಸ್ ಸೆಲೆಕ್ಟ್ ಮಾಡಿ.
- ತೀರಾ ಟೈಟ್ ಆಗಿರುವುದು ಬೇಡ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Womens Awareness Fashion: ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಮೂಡಿಸಿದ ಫ್ಯಾಷನ್ ಶೋ