ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಧರಿಸಿದ, ಸಮ್ಮರ್ ಕೋ ಆರ್ಡ್ ಪ್ರಿಂಟೆಡ್ ಕೊಸ್ಟಾ ಪ್ಯಾಂಟ್ ಸೆಟ್ ಇದೀಗ ಸೀಸನ್ ಎಂಡ್‌ನಲ್ಲಿ ಟ್ರೆಂಡಿಯಾಗಿದೆ. ಅಂದಹಾಗೆ, ಇದ್ಯಾವ ಬಗೆಯ ಕೋ ಆರ್ಡ್ ಸೆಟ್ ಫ್ಯಾಷನ್ (Summer Star Fashion) ಎಂದು ಯೋಚಿಸುತ್ತಿದ್ದೀರಾ? ಅಂತಹದ್ದೇನಿಲ್ಲ! ಇವು ಸೆಲೆಬ್ರೆಟಿ ಲುಕ್ ನೀಡುವ ಶೋಲ್ಡರ್ಲೆಸ್ ಬಟನ್ ಟಾಪ್ ಹೊಂದಿರುವ ಕೋ ಆರ್ಡ್ ಸೆಟ್‌ಗಳಿವು. ಈಗಾಗಲೇ, ಈ ಬಾರಿಯ ಸಮ್ಮರ್‌ನಲ್ಲಿ ನಾನಾ ಬಗೆಯ ಕೋ ಆರ್ಡ್ ಪ್ಯಾಂಟ್ ಸೆಟ್‌ಗಳು ಬಿಡುಗಡೆಗೊಂಡಿದ್ದವು. ಅವುಗಳಲ್ಲಿ, ಇದೀಗ ಬಾಲಿವುಡ್ ಸೆಲೆಬ್ರೆಟಿಗಳು ಹಾಗೂ ಫ್ಯಾಷನ್ ಕ್ಷೇತ್ರದ ಮಾಡೆಲ್‌ಗಳು ಧರಿಸುತ್ತಿರುವ, ಈ ಡಿಸೈನ್‌ನ ಕೋ ಆರ್ಡ್ ಪ್ಯಾಂಟ್ ಸೆಟ್‌ಗಳು ಸದ್ಯ ಟ್ರೆಂಡಿಯಾಗಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಅದಿತಿ ರಾವ್ ಹೈದರಿ, ಕೂಡ ಈ ಔಟ್‌ಫಿಟ್ ಧರಿಸಿದ್ದು, ಪರಿಣಾಮ, ಈ ಶೈಲಿಯ ಪ್ರಿಂಟ್ಸ್ ಇರುವಂತಹ ಕೋ ಆರ್ಡ್ ಕೊಸ್ಟಾ ಪ್ಯಾಂಟ್ ಸೆಟ್ ಫ್ಯಾಷನ್ ಇದ್ದಕ್ಕಿದ್ದಂತೆ ಅಲ್ಟ್ರಾ ಮಾಡರ್ನ್ ಹುಡುಗಿಯರನ್ನು ಆವರಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಏನಿದು ಕೊಸ್ಟಾ ಪ್ಯಾಂಟ್ ಕೋ -ಆರ್ಡ್ ಸೆಟ್?
ಒಂದೇ ಬಗೆಯ ಶೇಡ್ ಅಥವಾ ಪ್ರಿಂಟ್ಸ್ ಇರುವ ಕೋ -ಆರ್ಡ್ ಸೆಟ್ ಪ್ಯಾಂಟ್ ಫ್ಯಾಷನ್‌ಗೆ ಇವು ಸೇರುತ್ತವೆ. ಆದರೆ, ಪ್ಯಾಂಟ್ ಮಾತ್ರ ಪಲ್ಹಾಜೊ ರೀತಿಯಲ್ಲಿರುತ್ತವೆ. ನೋಡಲು ಫ್ಲೇರ್ ಇದ್ದರೂ, ಲೂಸಾಗಿರುವುದಿಲ್ಲ. ಬೇಸಿಗೆಗೆ ಹೊಂದುವಂತಿರುತ್ತವೆ. ಇನ್ನು ಇವಕ್ಕೆ ಶೋಲ್ಡರ್ ಲೆಸ್ ಅಥವಾ ಬಾರ್ಡಾಟ್ ಶೈಲಿಯ ಬಾಡಿ ಫಿಟ್ ಇರುವ ಬಟನ್ ಟಾಪ್ ಮ್ಯಾಚ್ ಮಾಡಲಾಗಿರುತ್ತದೆ. ಈ ಔಟ್‌ಫಿಟ್‌ಗಳನ್ನು ಸೆಲೆಬ್ರೆಟಿಗಳು ಅತಿ ಹೆಚ್ಚಾಗಿ ಧರಿಸುವುದರಿಂದ ಇವು ಸೆಲೆಬ್ರೆಟಿ ಔಟ್‌ಫಿಟ್ಸ್ ಎಂದೇ ಕರೆಸಿಕೊಳ್ಳುತ್ತವೆ. ಆದರೆ, ಇದೀಗ, ಹಾಲಿ ಡೇ, ಔಟಿಂಗ್ ಎಂದೆಲ್ಲಾ ಅಲೆದಾಡುವ ಯುವತಿಯರು ಈ ಉಡುಗೆಯನ್ನು ಧರಿಸುವುದು ಸಾಮಾನ್ಯವಾಗತೊಡಗಿದ್ದು, ಸೀಸನ್ ಎಂಡ್‌ನ ಟಾಪ್ ಲಿಸ್ಟ್‌ನಲ್ಲಿವೆ. ಫ್ಲೋರಲ್ ಪ್ರಿಂಟ್ಸ್ ಅಥವಾ ಟ್ರಾಪಿಕಲ್ ಪ್ರಿಂಟ್ಸ್‌ನವು ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್‌ಗಳು.
ಅದಿತಿ ರಾವ್ ಹೈದರಿ ಸಮ್ಮರ್ ಕೋ ಆರ್ಡ್ ಸೆಟ್ ಲುಕ್
ಇನ್ನು, ಸದ್ಯ ಹೀರಾ ಮಂಡಿ ಬಾಲಿವುಡ್ ಚಿತ್ರದಲ್ಲಿ ಎಥ್ನಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ, ನಟಿ ಅದಿತಿ ರಾವ್ ಹೈದರಿಯವರಿಗೆ ಈ ಇಮೇಜ್‌ನಿಂದ ಕೊಂಚ ಬ್ರೇಕ್ ಬೇಕಿತ್ತು. ಹಾಗಾಗಿ ವೆಸ್ಟರ್ನ್ ಲುಕ್ ನೀಡುವ ಕೊಸ್ಟಾ ಪ್ಯಾಂಟ್ ಔಟ್‌ಫಿಟ್ ಧರಿಸಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಕೋ -ಆರ್ಡ್ ಕೊಸ್ಟಾ ಪ್ಯಾಂಟ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳು
- ಹಾಲಿ ಡೇ, ಔಟಿಂಗ್ ಹಾಗೂ ಲಂಚ್-ಬ್ರಂಚ್ ಪಾರ್ಟಿಗಳಿಗೆ ಧರಿಸಲು ಮಾತ್ರ ಇವು ಸೂಕ್ತ.
- ಫಿಟ್ಟಿಂಗ್ ಸರಿಯಾಗಿದ್ದಲ್ಲಿ ಮಾತ್ರ ಕಂಫರ್ಟಬಲ್ ಫೀಲ್ ನೀಡಬಲ್ಲವು.
- ಶೋಲ್ಡರ್ ಲೆಸ್ ಆಗಿರುವುದರಿಂದ ಎಕ್ಸ್ಪೋಸ್ ಆಗುವ ಸಾಧ್ಯತೆ ಹೆಚ್ಚು.
- ನೋಡಲು ಆಕರ್ಷಕವಾದರೂ ಟ್ರಯಲ್ ನೋಡದೇ ಧರಿಸುವುದು ಸೂಕ್ತವಲ್ಲ.
- ತೀರಾ ಸ್ಲಿಮ್, ತೀರಾ ಪ್ಲಂಪಿ ಇಬ್ಬರಿಗೂ ನಾಟ್ ಓಕೆ. ಸರಿಯಾದ ಬಿಎಂಐ ಹೊಂದಿರುವವರಿಗೆ ಚೆನ್ನಾಗಿ ಕಾಣಿಸುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Cannes Star Fashion: ಕ್ರಾಪ್ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್ ಬಬ್ಬರ್