ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯಲ್ಲಿ (Summer Travel Fashion Tips) ಪ್ರಯಾಣ ಮಾಡುವ ಯುವತಿಯರು, ಹೊರಗಿನ ಬಿಸಿಲ ಝಳಕ್ಕೆ ಹೊಂದುವಂತಹ ಕಂಫರ್ಟಬಲ್ ಕೂಲ್ ಫ್ಯಾಷನ್ ತಮ್ಮದಾಗಿಸಿಕೊಳ್ಳಬೇಕು. ಇದಕ್ಕಾಗಿ 5 ಸಿಂಪಲ್ ಟಿಪ್ಸ್ ಫಾಲೋ ಮಾಡಿದರೇ ಸಾಕು ಎನ್ನುತ್ತಾರೆ ಎಕ್ಸ್‌ಪರ್ಟ್ಸ್.
“ಸಮ್ಮರ್‌ನಲ್ಲಿ ಟ್ರಾವೆಲ್ ಮಾಡುವುದು ಸಾಕು ಸಾಕಪ್ಪ ಎಂದನಿಸುತ್ತದೆ. ಧರಿಸಿರುವ ಉಡುಪು ಕೆಲವೊಮ್ಮೆ ಉಸಿರುಗಟ್ಟಿಸುತ್ತವೆ. ಸೋ, ಸಮ್ಮರ್ ಶಾರ್ಟ್ ಹಾಗೂ ಲಾಂಗ್ ಟ್ರಾವೆಲ್ ಮಾಡುವವರು ಒಂದಿಷ್ಟು ಸಲಹೆ ಪಾಲಿಸುವುದು ಅಗತ್ಯ. ಕಲರ್ ಆಯ್ಕೆ ಮಾಡುವುದರಲ್ಲಿ ಜಾಣತನ ತೋರಬೇಕು. ಹೆವ್ವಿ ಡಿಸೈನ್‌ನದ್ದನ್ನು ಸೈಡಿಗಿಡಬೇಕು. ಕಳೆದ ಸೀಸನ್‌ನಲ್ಲಿದ್ದ ಡಾರ್ಕ್ ಶೇಡನ್ನು ಆದಷ್ಟೂ ದೂರವಿಡಬೇಕು. ಗಾಳಿಯಾಡುವಂತಹ ಪಾದರಕ್ಷೆಗಳನ್ನು ಧರಿಸಬೇಕು. ಅಗಲವಾದ ನೆಕ್‌ಲೈನ್ ಇರುವ ಡುಪುಗಳಿಗೆ ಆದ್ಯತೆ ನೀಡಬೇಕು. ಹೀಗೆ ಈ ಹವಾಮಾನಕ್ಕೆ ಹೊಂದುವಂತಹ ಕಾನ್ಸೆಪ್ಟ್‌ಗಳನ್ನು ಅಳವಡಿಸಿಕೊಂಡಲ್ಲಿ ಬೇಸಿಗೆ ಟ್ರಾವೆಲ್ ಫ್ಯಾಷನ್ ಅಹ್ಲಾದಕರವಾಗಿರುವುದು. ನೋಡಲು ಚೆನ್ನಾಗಿ ಕಾಣಿಸುವುದು” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸಮ್ಮರ್‌ಗೆ ಮ್ಯಾಚ್ ಆಗಲಿ ಔಟ್‌ಫಿಟ್ಸ್
ನೀವು ಧರಿಸುವ ಉಡುಪು ಸಮ್ಮರ್‌ಗೆ ಸೂಟ್ ಆಗುವಂತಿರಬೇಕು. ಸೆಕೆಗೆ ಅಂಟುವಂತಿರಬಾರದು. ಹಾಗಾಗಿ ಭಾರಿ ಡಿಸೈನರ್‌ವೇರ್‌ಗಳನ್ನು ಅವಾಯ್ಡ್ ಮಾಡಿ. ಆದಷ್ಟೂ ಆರಾಮ ಏನಿಸುವ ಉಡುಪುಗಳನ್ನು ಪ್ರಿಫರ್ ಮಾಡಿ. ಶಾರ್ಟ್ ಹಾಗೂ ಸ್ಲಿವ್‌ಲೆಸ್‌ಗೆ ಆದ್ಯತೆ ನೀಡಿ. ಅದರಲ್ಲೂಸಿಂಪಲ್ ಕ್ಯಾಶುಯಲ್‌ವೇರ್ ಆಯ್ಕೆ ಮಾಡಿ. ಆದಷ್ಟೂ ಸೀರೆ ಹಾಗೂ ಗಾಗ್ರ, ಲೆಹೆಂಗಾದಂತಹ ಉಡುಪುಗಳಿಗೆ ಬೈ ಹೇಳಿ.
ಉಲ್ಲಾಸ ಹೆಚ್ಚಿಸುವಂತಹ ಡ್ರೆಸ್‌ಕೋಡ್
ಪ್ರಯಾಣಿಸುವಾಗ ಆದಷ್ಟೂ ಫ್ರೆಶ್ ಎಂದೆನಿಸುವ ಶೇಡ್ಸ್, ಕಲರ್ಸ್ ಚೂಸ್ ಮಾಡಿ. ನಿಯಾನ್ ಫ್ಲೋರಲ್ಸ್ ಹಾಗೂ ಪೀಚ್, ಬೇಬಿ ಪಿಂಕ್, ಬ್ಲ್ಯೂ, ಲ್ಯಾವೆಂಡರ್ ಸೇರಿದಂತೆ ಪಾಸ್ಟೆಲ್ ಶೇಡ್‌ನವಕ್ಕೆ ಪ್ರಾಮುಖ್ಯತೆ ನೀಡಿ.
ಬ್ರಿಥೆಬಲ್ ಫ್ಯಾಬ್ರಿಕ್ ಔಟ್‌ಫಿಟ್‌ಗೆ ಸೈ ಹೇಳಿ
ಧರಿಸಿದಾಗ ಗಾಳಿಯಾಡುವಂತಹ ಫ್ಯಾಬ್ರಿಕ್ ಹೊಂದಿರುವ ಡ್ರೆಸ್‌ಗಳಿಗೆ ಸೈ ಹೇಳಿ. ಉದಾಹರಣೆಗೆ., ಕಾಟನ್, ಲೆನಿನ್ ಹಾಗೂ ಇಕೋ ಫ್ರೆಂಡ್ಲಿಯಾಗಿರುವಂತಹ ಫ್ಯಾಬ್ರಿಕ್‌ನ ಫ್ಯಾಷನ್‌ಗೆ ಮೊರೆ ಹೋಗಿ.
ಲೈಟ್‌ವೈಟ್ ಡ್ರೆಸ್‌ಗಳಿಗೆ ಆದ್ಯತೆ
ಧರಿಸಿದಲ್ಲಿ ಭಾರವೆನಿಸುವ ಉಡುಪುಗಳನ್ನು ಸದ್ಯಕ್ಕೆ ಬೀರುವಿನಲ್ಲಿಡಿ. ತೂಕವಿಲ್ಲದ ಲೈಟ್‌ವೈಟ್ ಉಡುಪುಗಳು ಈ ಸೀಸನ್‌ನಲ್ಲಿ ಲಗ್ಗೆಯಿಟ್ಟಿವೆ. ಅಂತವನ್ನು ಧರಿಸಿ.
ಅವಾಯ್ಡ್ ಮಾಡಿ
ಕಾಲರ್ ನೆಕ್, ಟೈಟ್ ಫಿಟ್ಟಿಂಗ್, ಮೈಗೆ ಅಂಟಿಕೊಳ್ಳುವಂತಹ ಹಗ್ಗಿಂಗ್ ಡ್ರೆಸ್, ಫುಲ್ ಸ್ಲೀವ್ ಸಲ್ವಾರ್, ಲಾಂಗ್ ಸಲ್ವಾರ್ ಸೇರಿದಂತೆ ಅಡಿಯಿಂದ ಮುಡಿಯವರೆಗೆ ಗಾಳಿಯಾಡದಂತೆ ಕ್ಲೋಸ್ ಆಗಿರುವಂತಹ ಉಡುಪುಗಳು ಬೇಸಿಗೆ ಟ್ರಾವೆಲ್ ಟೈಮ್‌ಗೆ ಯಾವುದೇ ಕಾರಣಕ್ಕೂ ಆಯ್ಕೆ ಮಾಡಬೇಡಿ. ಇವು ಉಸಿರುಗಟ್ಟಿಸುವುದರೊಂದಿಗೆ ನಿಮ್ಮನ್ನು ನಿತ್ರಾಣರಾಗಿಸುತ್ತವೆ. ಫುಲ್ ಸ್ಲೀವ್ ಧರಿಸಬೇಕೆನಿಸದಲ್ಲಿ ಶೀರ್ ಫ್ಯಾಷನ್‌ಗೆ ಮೊರೆ ಹೋಗಿ.
ಬೇಸಿಗೆಯ ಟ್ರಾವೆಲ್‌ನಲ್ಲಿ ನೀವು ನೋ ಹೇಳಬೇಕಾದ್ದು…
- ಲೇಯರ್ ಲುಕ್ಗೆ ಗುಡ್ ಬೈ ಹೇಳಿ.
- ಹೆವಿ ಡ್ರೆಸ್‌ಗಳಿಗೆ ನೋ ಹೇಳಿ.
- ದುಪಟ್ಟಾ, ಸ್ಟೋಲ್ಸ್ಗೆ ಟಾಟಾ ಹೇಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸಮ್ಮರ್ ಫ್ಯಾಷನ್‌ನಲ್ಲಿ ವನ್ ಶೋಲ್ಡರ್ ಡ್ರೆಸ್ ಕ್ರೇಜ್!