Site icon Vistara News

Summer Fashion: ಬೇಸಿಗೆ ಬಿಸಿಲಿಗೆ ಮತ್ತೆ ಬಂತು ಸನ್‌ ಡ್ರೆಸ್‌ ಫ್ಯಾಷನ್‌!

Summer Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯಲ್ಲಿ (Summer Fashion) ಸನ್‌ ಡ್ರೆಸ್‌ಗಳು ಹಂಗಾಮ ಎಬ್ಬಿಸಿವೆ. ಹೌದು, ಪ್ರತಿ ಬಾರಿಯಂತೆ ಈ ಬಾರಿಯು ಈ ಸೀಸನ್‌ನಲ್ಲಿ ಮತ್ತೊಮ್ಮೆ ನಾನಾ ಶೈಲಿಯ ಸನ್‌ ಡ್ರೆಸ್‌ಗಳು ಕಾಲಿಟ್ಟಿವೆ. ಧರಿಸಿದಾಗ ಉಲ್ಲಾಸ ನೀಡುವ ಈ ಉಡುಪುಗಳು ಯುವತಿಯರ ಮನಸ್ಸನ್ನು ಗೆದ್ದಿವೆ.

ಆಕರ್ಷಕವಾಗಿ ಬಿಂಬಿಸುವ ಸನ್‌ ಡ್ರೆಸ್‌ಗಳು

“ಬೇಸಿಗೆಯಲ್ಲಿ ದಪ್ಪನೆಯ ಫ್ಯಾಬ್ರಿಕ್‌ನ ಔಟ್‌ಫಿಟ್‌ಗಳನ್ನು ಧರಿಸುವುದು ಕಷ್ಟ ಸಾಧ್ಯ! ಇವು ಅಂಟಿಕೊಳ್ಳುತ್ತವೆ ಜೊತೆಗೆ ಉಸಿರುಗಟ್ಟಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರತಿ ಬಾರಿಯು ಈ ಸೀಸನ್‌ನಲ್ಲಿ, ಬಗೆಬಗೆಯ ಕಲರ್‌ಫುಲ್‌ ಪ್ರಿಂಟ್ಸ್‌ನ ಹಾಗೂ ಮಾನೋಕ್ರೋಮ್‌ ಡಿಸೈನ್‌ನ ಆರಾಮದಾಯಕ ಎಂದೆನಿಸುವ ಸನ್‌ ಡ್ರೆಸ್‌ಗಳು ಎಂಟ್ರಿ ನೀಡುತ್ತವೆ. ಕೆಲವು ಸಿಂಪಲ್‌ ಡಿಸೈನ್‌ ಹೊಂದಿದ್ದರೇ, ಇನ್ನು ಕೆಲವು ಪ್ರಿಂಟೆಡ್‌ ಹಾಗೂ ಶಾರ್ಟ್ ಸ್ಲೀವ್‌ ಡಿಸೈನ್‌ ಹೊಂದಿರುತ್ತವೆ. ನೋಡಲು ಕೂಡ ಆಕರ್ಷಕವಾಗಿ ಕಾಣುತ್ತವೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳಾದ ರಿಚಾ ಹಾಗೂ ರಾಘವ್‌. ಅವರ ಪ್ರಕಾರ, ಅವರವರ ಪರ್ಸನಾಲಿಟಿಗೆ ತಕ್ಕಂತೆ ಇವನ್ನು ಆಯ್ಕೆ ಮಾಡಿಕೊಂಡಾಗ ನೋಡಲು ಆಕರ್ಷಕವಾಗಿ ಕಾಣಿಸುತ್ತವೆ ಎನ್ನುತ್ತಾರೆ.

ಟ್ರೆಂಡಿಯಾಗಿರುವ ಸನ್‌ ಡ್ರೆಸ್‌ಗಳು

ಸನ್‌ ಡ್ರೆಸ್‌ಗಳಲ್ಲಿ ಆಫ್‌ ಶೋಲ್ಡರ್‌ ಫ್ರಾಕ್‌, ಕೋಲ್ಡ್ ಶೋಲ್ಡರ್ ಫ್ರಾಕ್‌, ಮ್ಯಾಕ್ಸಿ ಡ್ರೆಸ್, ಮಿಡಿ ಡ್ರೆಸ್‌, ಟ್ಯಾಂಕ್‌ ಡ್ರೆಸ್, ಮಿನಿ ಸನ್‌ ಡ್ರೆಸ್‌, ಶಾರ್ಟ್ ಸ್ಕರ್ಟ್ ಸನ್‌ ಡ್ರೆಸ್‌, ಸ್ಪೆಗೆಟಿ, ವಿಂಟೇಜ್‌ ಸ್ಲೀವ್‌ ಸನ್‌ ಡ್ರೆಸ್, ಫಿಟ್‌ ಫ್ಲೋವಿ ಸನ್‌ ಡ್ರೆಸ್‌, ಎ ಲೈನ್‌, ಟೈ ಡ್ರೆಸ್‌, ಟ್ಯೂನಿಕ್‌, ಬಟನ್‌ ಡೌನ್‌, ಬೋಹೋ ಸೇರಿದಂತೆ ಲೆಕ್ಕವಿಲ್ಲದಷ್ಟು ಶೈಲಿಯಲ್ಲಿ ನಾನಾ ಬಗೆಯಲ್ಲಿ ಬಿಡುಗಡೆಗೊಂಡಿವೆ. ಅದರಲ್ಲೂ ಬೇಸಿಗೆಗೆ ಹೊಂದುವಂತಹ ವೈವಿಧ್ಯಮಯ ಫ್ಲೋರಲ್‌ ಪ್ರಿಂಟ್ಸ್‌ನವು ಹೆಚ್ಚು ಚಾಲ್ತಿಯಲ್ಲಿವೆ.

ಯಂಗ್‌ ಲುಕ್‌ ನೀಡುವ ಸನ್‌ ಡ್ರೆಸ್

ಇದೀಗ ಯುವತಿಯರು ಮಾತ್ರವಲ್ಲ, ಮಧ್ಯ ವಯಸ್ಕ ಮಾನಿನಿಯರು ಕೂಡ ಈ ಸನ್‌ ಡ್ರೆಸ್‌ಗಳಿಗೆ ಶರಣಾಗುತ್ತಿದ್ದಾರೆ. ಧರಿಸಿದಾಗ ಉಲ್ಲಾಸ ಹೆಚ್ಚಿಸುವ ಈ ಹೂವುಗಳ ಪ್ರಿಂಟ್ಸ್‌ನ ಡ್ರೆಸ್‌ಗಳು ಮೂಡನ್ನು ಕೂಡ ಸರಿ ಮಾಡುತ್ತವಂತೆ. ಇದಕ್ಕೆ ಕಾರಣ, ಈ ಡ್ರೆಸ್‌ನಲ್ಲಿ ಕಂಡು ಬರುವ ಹೂವುಗಳ ಅಂದ-ಚೆಂದ. ಹೂವುಗಳನ್ನು ನೋಡಿದಾಗ ಎಂತಹವರ ಮನಸ್ಸು ಕೂಡ ಉಲ್ಲಾಸಮಯವಾಗಿಸುತ್ತದಂತೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ. ಅವರು ಹೇಳುವುದರಲ್ಲೂ ಸತ್ಯವಿದೆ. ಯಾಕೆಂದರೇ, ಹೂವುಗಳ ಬಗೆಬಗೆಯ ಪ್ರಿಂಟ್ಸ್ ಇದಕ್ಕಾಗಿಯೇ ಬೇಡಿಕೆ ಹೆಚ್ಚಿಸಿಕೊಂಡಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಗಿಣಿ.

ಸನ್‌ ಡ್ರೆಸ್‌ ಲುಕ್‌ಗೆ 3 ಟಿಪ್ಸ್

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಸಮ್ಮರ್‌ ಸೀಸನ್‌ನಲ್ಲಿ ಜೆನ್‌ ಜಿ ಹುಡುಗಿಯರ ಸೆಳೆದ ಹಾಲ್ಟರ್‌ ನೆಕ್‌ ಟಾಪ್‌ ಫ್ಯಾಷನ್‌!

Exit mobile version