Site icon Vistara News

Sunny Leon Trendy Partywear: ಬೆಂಗಳೂರಿನ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿಕೃಷ್ಣ ಡಿಸೈನರ್‌ವೇರ್‌ನಲ್ಲಿ ಸನ್ನಿ ಲಿಯೋನ್‌ ಡಿಜೆ ಪಾರ್ಟಿ

Sunny Leon Trendy Partywear

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ಸನ್ನಿ ಲಿಯೋನ್‌ ಬೆಂಗಳೂರಿನ ಸೆಲೆಬ್ರೆಟಿ ಡಿಸೈನರ್‌ ಡಿಸೈನ್‌ (Sunny Leon Trendy Partywear) ಮಾಡಿದ ಪಾರ್ಟಿವೇರ್‌ನಲ್ಲಿ ಡಿಜೆ ಪಾರ್ಟಿಯಲ್ಲಿ ಮಿಂಚಿದ್ದಾರೆ. ಅರರೆ! ಅದರಲ್ಲೇನು ವಿಶೇಷ ಎಂದು ಯೋಚಿಸುತ್ತಿದ್ದೀರಾ! ವಿಶೇಷವಿದೆ. ಎಲ್ಲರ ಮೆಚ್ಚುಗೆ ಗಳಿಸಿದ ಈ ಡಿಸೈನರ್‌ ಪಾರ್ಟಿವೇರ್ ಡಿಸೈನ್‌ ಮಾಡಿದ್ದು ಬೇರ್ಯಾರು ಅಲ್ಲ! ನಮ್ಮ ಉದ್ಯಾನನಗರಿಯ ಸೆಲೆಬ್ರೆಟಿ ಡಿಸೈನರ್‌ ಹಾಗೂ ಸ್ಟೈಲಿಸ್ಟ್‌ ಲಕ್ಷ್ಮಿ ಕೃಷ್ಣ. ಎಲ್ಲರಿಗೂ ಗೊತ್ತಿರುವಂತೆ, ಸನ್ನಿ ಲಿಯಾನ್‌ ಮೊದಲಿನಿಂದಲೂ ಸ್ಟೈಲಿಶ್‌ ತಾರೆ. ಅವರಿಗೆ ಇಷ್ಟವಾಗುವಂತಹ ಗ್ಲಾಮರಸ್‌ ಔಟ್‌ಫಿಟ್‌ ಡಿಸೈನ್‌ ಮಾಡಿ ಸೈ ಎನಿಸಿಕೊಳ್ಳುವುದು ತುಸು ಅಸಾಧ್ಯ! ಆದರೆ, ಲಕ್ಷ್ಮಿ ಕೃಷ್ಣ ಅವರು ಸನ್ನಿಗೆ ಟ್ರೆಂಡಿ ಪಾರ್ಟಿವೇರ್‌ ಸಿದ್ಧಪಡಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾ, ವೆಬ್‌ ಸೀರೀಸ್‌ ಹಾಗೂ ಫ್ಯಾಷನ್‌ ಸೆಲೆಬ್ರೆಟಿಗಳಿಗೆ ಡಿಸೈನ್‌ ಹಾಗೂ ಸ್ಟೈಲಿಂಗ್‌ ಮಾಡುತ್ತಿರುವ ಲಕ್ಷ್ಮಿ ಕೃಷ್ಣ ಪ್ರಯೋಗಾತ್ಮಕ ಡಿಸೈನರ್‌ವೇರ್‌ಗಳ ಪ್ರವೀಣೆ ಕೂಡ.

ಮೆಚ್ಚುಗೆ ಪಡೆದ ಸನ್ನಿ ಲಿಯೋನ್‌ ಪಾರ್ಟಿವೇರ್‌

ಗುವಾಹಟಿಯಲ್ಲಿ ನಡೆದ ಡಿಜೆ ಪಾರ್ಟಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸನ್ನಿ ಲಿಯೋನ್‌, ಧರಿಸಿದ್ದ ಈ ಪಾರ್ಟಿವೇರ್‌ ಬೆಂಗಳೂರಿನಿಂದ ಹೊರಟು ಪಾರ್ಟಿಯಲ್ಲಿ ಅವರನ್ನು ಸವಾರಿ ಮಾಡಿತ್ತು. ಸದ್ಯ ಮಾನ್ಸೂನ್‌ ಟ್ರೆಂಡಿ ಲಿಸ್ಟ್‌ನಲ್ಲಿರುವ ಈ ಸಿಕ್ವೀನ್ಸ್ ಕೋ-ಆರ್ಡ್ ಸೆಟ್‌ ಅಭಿಮಾನಿಗಳನ್ನು ಮಾತ್ರವಲ್ಲ, ಪಾರ್ಟಿ ಪ್ರಿಯರ ಮೆಚ್ಚುಗೆಗೂ ಪಾತ್ರವಾಗಿತ್ತು.

ಸಿಕ್ವೀನ್ಸ್ ಜಾಕೆಟ್‌ ಕೋ – ಆರ್ಡ್ ಸೆಟ್‌

ಎಮರಾಲ್ಡ್ ಶೈನಿಂಗ್‌ ಸಿಕ್ವೀನ್ಸ್ ಡಿಸೈನ್‌ನ ಜಾಕೆಟ್‌ ಜೊತೆಗೆ ಬ್ಲಾಕ್‌ ಕ್ರಾಪ್‌ ಟಾಪ್‌ ಹಾಗೂ ಅದೇ ಶೇಡ್‌ನ ಸ್ಕರ್ಟ್ ಹೊಂದಿದ ಪಾರ್ಟಿವೇರ್‌ ಇಡೀ ಪಾರ್ಟಿಯ ರಂಗೇರಿಸಿತ್ತು. ಅಷ್ಟ್ಯಾಕೆ! ಸನ್ನಿ ಲಿಯೋನ್‌ ಕೂಡ ಈ ಔಟ್‌ಫಿಟ್‌ನಲ್ಲಿ ಆರಾಮವಾಗಿದ್ದರು. ಅಲ್ಲದೇ, ಔಟ್‌ಫಿಟ್‌ ಕಂಫರ್ಟಬಲಿಟಿಯ ಬಗ್ಗೆ ಖುಷಿಯಾಗಿದ್ದರು ಎನ್ನುತ್ತಾರೆ ಲಕ್ಷ್ಮಿ ಕೃಷ್ಣ.

ಬೆಂಗಳೂರಿನ ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿಕೃಷ್ಣ

ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡ ಲಕ್ಷ್ಮಿ ಕೃಷ್ಣ

ಈಗಾಗಲೇ ಸಾಕಷ್ಟು ಸೆಲೆಬ್ರೆಟಿಗಳಿಗೆ ಡಿಸೈನ್‌ ಮಾಡಿರುವ ನಾನು ಆಯಾ ಸೆಲೆಬ್ರೆಟಿಯ ಆಯ್ಕೆ ಹಾಗೂ ಅಭಿರುಚಿಯನ್ನು ತಿಳಿದುಕೊಂಡು ವಿನ್ಯಾಸಗೊಳಿಸುತ್ತೇನೆ. ಇದೇ ರೀತಿ ಸನ್ನಿ ಲಿಯೋನ್‌ ಅವರ ಡ್ರೆಸ್‌ಕೋಡ್‌ ಹಾಗೂ ಸ್ಟೈಲಿಂಗ್‌ ಬಗ್ಗೆಯೂ ಸ್ಟಡಿ ಮಾಡಿ ಈ ಪಾರ್ಟಿವೇರ್‌ ಸಿದ್ಧಪಡಿಸಿದ್ದೇನೆ. ಫ್ಯಾಷನ್‌ ಪ್ರಿಯರ ಹಾಗೂ ಅವರ ಮೆಚ್ಚುಗೆ ಗಳಿಸಿದ್ದು, ನನಗೆ ಮತ್ತಷ್ಟು ಹುಮ್ಮಸ್ಸು ತುಂಬಿದೆ ಎಂದು ಲಕ್ಷ್ಮಿ ಕೃಷ್ಣ ವಿಸ್ತಾರ ನ್ಯೂಸ್‌ನೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Fashion: ನಟಿ ಮೋಕ್ಷಿತಾ ಪೈ ಕ್ಯಾಶುವಲ್‌ ಲುಕ್‌ ನಿಮ್ಮದಾಗಿಸಿಕೊಳ್ಳಬೇಕೇ? ಹೀಗೆ ಮಿಕ್ಸ್‌ ಮ್ಯಾಚ್‌ ಮಾಡಿ!

Exit mobile version