ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಗ್ರಾದಲ್ಲಿ ನಡೆದ (Taj india Fashion) ತಾಜ್ ಇಂಡಿಯಾ ಫ್ಯಾಷನ್ ರನ್ ವೇ, ರ‍್ಯಾಂಪ್ ಶೋನಲ್ಲಿ, ಬೆಂಗಳೂರಿನ ಸೆಲೆಬ್ರೆಟಿ ಡಿಸೈನರ್, ಕನ್ನಡಿಗ ಫಾರೆವರ್ ನವೀನ್ ಕುಮಾರ್ ತಮ್ಮ ವೆಡ್ಡಿಂಗ್ ಕಲೆಕ್ಷನ್‌ನ ಗೌನ್‌ಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ಕರ್ನಾಟಕದ ಹೊರತಾಗಿ ಹೊರ ರಾಜ್ಯದಲ್ಲಿ ಯಶಸ್ವಿಯಾಗಿ ನಡೆದ ರ‍್ಯಾಂಪ್ ಶೋನಲ್ಲಿ ಡಿಸೈನರ್‌ವೇರ್‌ಗಳನ್ನು ಅನಾವರಣಗೊಳಿಸುವುದು, ಮೆಚ್ಚುಗೆ ಗಳಿಸುವುದು ಹೆಮ್ಮೆಯ ವಿಷಯ. ನಾನು ದಕ್ಷಿಣ ಭಾರತವನ್ನು ಪ್ರತಿನಿಧಿಸಿದ್ದು ನನಗೆ ಖುಷಿ ತಂದಿದೆ ಎಂದು ಫಾರ್‌ಎವರ್ ನವೀನ್ ಕುಮಾರ್ ವಿಸ್ತಾರ ನ್ಯೂಸ್‌ನೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
ಗೌನ್‌ನಲ್ಲೂ ವೆಡ್ಡಿಂಗ್ ಕಲೆಕ್ಷನ್
ನಾರ್ತ್ ಇಂಡಿಯಾದಲ್ಲಿ ಮದುವೆಗಳಲ್ಲಿ ಅತಿ ಹೆಚ್ಚಾಗಿ ಲೆಹೆಂಗಾ ಪ್ರಿಫರ್ ಮಾಡುತ್ತಾರೆ. ನಾನು ಡಿಫರೆಂಟಾಗಿ ವೆಡ್ಡಿಂಗ್ ಗೌನ್ ಕಲೆಕ್ಷನ್‌ನ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದೆ. 12 ಪ್ರೊಫೆಷನಲ್ ಮಾಡೆಲ್‌ಗಳು ನನ್ನ ಕ್ರಿಯೇಷನ್‌ನಲ್ಲಿ ಸಿದ್ಧಗೊಂಡ ವಿಶೇಷ ವೆಡ್ಡಿಂಗ್ ಗೌನ್‌ಗಳನ್ನು ಧರಿಸಿ, ರ‍್ಯಾಂಪ್ ವಾಕ್ ಮಾಡಿದ್ದು, ನೆರೆದಿದ್ದ ಫ್ಯಾಷನ್ ಪ್ರಿಯರಿಗೆ ಮೆಚ್ಚುಗೆಯಾಯಿತು. ಇದು ಖುಷಿ ನೀಡಿತು” ಎಂದು ಹೇಳಿದರು.
ಶೋ ಸ್ಟಾಪರ್ ರಚಿಕಾ ಸುರೇಶ್ ವಾಕ್
ನಟಿ ಹಾಗೂ ಮಾಡೆಲ್ ಶೋ ಸ್ಟಾಪರ್, ರಚಿಕಾ ಸುರೇಶ್, ನವೀನ್ ಅವರ ಡಿಸೈನರ್ ಗೌನ್‌ನಲ್ಲಿ ಕಾಣಿಸಿಕೊಂಡು ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು. ಅಂದಹಾಗೆ, ರಚಿಕಾ, ಮಿಸ್ ಇಂಡಿಯಾ ಪೇಜೆಂಟ್‌ನಲ್ಲೂ ಭಾಗವಹಿಸಿದ್ದರು. ಮೂಲತಃ ಶ್ರವಣಬೆಳಗೊಳದವರು. ಮಾಡೆಲಿಂಗ್ ಪ್ರಪಂಚದಲ್ಲಿ ಸಕ್ರಿಯರಾಗಿರುವ ಇವರ ರ‍್ಯಾಂಪ್ ವಾಕ್ ಎಲ್ಲರನ್ನು ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಡಿಸೈನರ್‌ಗಳ ಸಂಗಮ
ಉತ್ತರ ಹಾಗೂ ದಕ್ಷಿಣ ಭಾರತದಿಂದ ಪಾಲ್ಗೊಂಡಿದ್ದ 8 ಡಿಸೈನರ್‌ಗಳು ತಂತಮ್ಮ ವೆಡ್ಡಿಂಗ್ ಕಲೆಕ್ಷನ್ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸಿದರು. ಒಬ್ಬರಿಗಿಂತ ಒಬ್ಬರ ಡಿಸೈನರ್‌ವೇರ್‌ಗಳು ವಿಭಿನ್ನವಾಗಿದ್ದವು. ನೋಡುಗರನ್ನು ಬೆರಗುಗೊಳಿಸಿದವು.
ಇನ್ನು, ಈ ರ‍್ಯಾಂಪ್ ಶೋನಲ್ಲಿ ಲ್ಯಾಕ್ಮೆ ಫ್ಯಾಷನ್ ವೀಕ್ ಮಾಡೆಲ್ಸ್ ಹಾಗೂ ಬ್ಲೆಂಡರ್ಸ್ ಫ್ಯಾಷನ್ ವೀಕ್ ಮಾಡೆಲ್‌ಗಳು ಕೂಡ ಪಾಲ್ಗೊಂಡಿದ್ದರು. ಐಟಿಸಿ ಮೊಗಲ್ ಆಗ್ರಾದಲ್ಲಿ ನಡೆದ ಈ ಶೋವನ್ನು ದಿ ರಾಯಲ್ ಫಿಯಾಸ್ಟಾ ಆಯೋಜಿತ್ತು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಗ್ಲಾಮರಸ್ ಕಟೌಟ್ ಡ್ರೆಸ್‌ನಲ್ಲಿ ನಟಿ ಮೌನ ಗುಡ್ಡೆಮನೆ ಹಾಲಿಡೇ ಫ್ಯಾಷನ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ