ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ಯಾಟು ಸ್ಟೈಲ್ ಚೋಕರ್‌ಗಳು (Tatoo Chokers fashion) ಫಂಕಿ ಆಕ್ಸೆಸರೀಸ್ ಲೋಕಕ್ಕೆ ಮರಳಿವೆ. ತಕ್ಷಣಕ್ಕೆ ನೋಡಲು ಟ್ಯಾಟೂ ಡಿಸೈನ್ ಬಿಡಿಸಿದಂತೆ ಕಾಣುವ ಇವು ತೂಕವಿಲ್ಲದ ಚೋಕರ್ಸ್! ಮಾಡರ್ನ್ ಯುವತಿಯರಿಗೆ ಹೇಳಿಮಾಡಿಸಿದಂತಿವೆ. ಹಾಗೆಂದು ಇದೇನು ಹೊಸ ಕಾನ್ಸೆಪ್ಟ್ ಚೋಕರ್ಸ್‌ಗಳಲ್ಲ! ನಯಾ ಡಿಸೈನ್ ಹಾಗೂ ಹೊಸ ವೆರೈಟಿ ಕಾನ್ಸೆಪ್ಟ್‌ನಲ್ಲಿ ಆಗಮಿಸಿವೆ. ಸದ್ಯಕ್ಕೆ ಲೈಟ್‌ವೇಟ್ ಆಕ್ಸೆಸರೀಸ್ ಲಿಸ್ಟ್‌ನಲ್ಲಿರುವ ಇವು ಸುಲಭವಾಗಿ ಕ್ಯಾರಿ ಮಾಡಬಹುದಾದಂತಹ ಆಕ್ಸೆಸರೀಸ್‌ಗಳಿವು.
ಏನಿದು ಟ್ಯಾಟೂ ಚೋಕರ್ಸ್
ನೋಡಲು ಟ್ಯಾಟೂ ಡಿಸೈನ್ ಹೊಂದಿರುವ ಚೋಕರ್ ಧರಿಸಿದಾಗ ನೆಕ್‌ಗೆ ಅಂಟಿದಂತೆ, ನೋಡಲು ಟ್ಯಾಟೂ ಬಿಡಿಸಿದಂತೆ ಕಾಣುತ್ತವೆ. ನಾನಾ ಶೈಲಿಯ ಸಿಂಪಲ್ ಟ್ಯಾಟೂ ಡಿಸೈನ್‌ಗಳಿಂದ ಹಿಡಿದು ಕಾಂಪ್ಲಿಕೇಟೆಡ್ ಟ್ಯಾಟೂ ಚೋಕರ್ಸ್‌ಗಳು ಇದೀಗ ಲಭ್ಯ. ಲೈಟ್‌ವೇಟ್ ವೈರ್‌ನಂತಹ ಮೆಟಿರಿಯಲ್‌ನಲ್ಲಿ ಇವನ್ನು ಸಿದ್ಧಪಡಿಸಲಾಗಿರುತ್ತದೆ. ನೋಡಲು ನೆಕ್ ಮೇಲೆ ಟ್ಯಾಟೂ ಅಂಟಿಸಿದ ರೀತಿಯಲ್ಲೆ ಕಾಣಿಸುತ್ತವೆ. ಹಾಗೆಂದು ಇವನ್ನು ಧರಿಸುವುದರಿಂದ ಉಸಿರುಗಟ್ಟಿದಂತಾಗುವುದಿಲ್ಲ. ಧರಿಸಿದರೂ ಭಾರವೆನಿಸುವುದಿಲ್ಲ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಚೋಕರ್ಸ್ ವೆರೈಟಿ ಡಿಸೈನ್ಸ್
ಟ್ಯಾಟೂ ಹೆಸರೇ ಹೇಳುವಂತೆ ಲೆಕ್ಕವಿಲ್ಲದಷ್ಟು ಸೂಕ್ಷ್ಮ ಡಿಸೈನ್‌ಗಳವನ್ನು ಕಾಣಬಹುದು. ನೋಡಲು ಎಲ್ಲವೂ ಒಂದೇ ಬಗೆಯಂತೆ ಕಂಡರೂ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತವೆ. ಸುರುಳಿಯಾಕಾರ, ಮಧ್ಯೆ ಮಧ್ಯೆ ಬೀಡ್ಸ್, ಬ್ಲಾಕ್ ಪರ್ಲ್, ಬಾರ್ಡರ್ ಚಿತ್ತಾರ ಹೀಗೆ ಸಾಮಾನ್ಯ ಡಿಸೈನ್‌ಗಳಿಂದಿಡಿದು ಎರಡ್ಮೂರಿಂಚಿನ ಟ್ಯಾಟೂ ಡಿಸೈನ್‌ನ ಚೋಕರ್ಸ್ ಹುಡುಗಿಯರ ಕತ್ತನ್ನು ಸಿಂಗರಿಸುತ್ತಿವೆ.
ಬ್ಲಾಕ್ ಶೇಡ್‌ಗೆ ಬೇಡಿಕೆ
ಅತಿ ಹೆಚ್ಚು ಟ್ರೆಂಡ್‌ನಲ್ಲಿರುವ ಟ್ಯಾಟೂ ಚೋಕರ್ಸ್‌ನಲ್ಲಿ ಬ್ಲಾಕ್ ಕಲರ್‌ನದ್ದಕ್ಕೆ ಹೆಚ್ಚು ಬೇಡಿಕೆಯಿದೆ. ಇದು ಎಲ್ಲಾ ಬಗೆಯ ಉಡುಪುಗಳಿಗೂ ಮ್ಯಾಚ್ ಆಗುತ್ತವೆ. ಇದು ಒಂಥರ ಯೂನಿಕ್ ಮ್ಯಾಚಿಂಗ್ ಆಕ್ಸೆಸರೀಸ್ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರೀಟಾ. ಅವರ ಪ್ರಕಾರ, ಬ್ಲಾಕ್ ವರ್ಣಗಳ ಟ್ಯಾಟೂ ಚೋಕರ್ಸ್ ಯಾವುದೇ ವೆಸ್ಟರ್ನ್ ಕಾನ್ಸೆಪ್ಟ್‌ನ ಉಡುಪುಗಳಿಗಾದರೂ ಧರಿಸಬಹುದು. ಇದರ ತೆಳುವಾದ ಡಿಸೈನ್ಸ್ ಸಿಂಪಲ್ ಆಗಿ ಬಿಂಬಿಸುತ್ತವೆ.
ಟ್ಯಾಟೂ ಚೋಕರ್ಸ್ ಪ್ರಿಯರಿಗೆ 5 ಟಿಪ್ಸ್
- ಕೈಗೆಟಕುವ ಬೆಲೆಯಲ್ಲಿ ದೊರೆಯುತ್ತವೆ.
- ಸ್ಟ್ರೀಟ್ ಶಾಪಿಂಗ್ನಲ್ಲೆ ಖರೀದಿಸಬಹುದು.
- ಸ್ಪ್ರಿಂಗ್ನಂತಹ ಚೊಕರ್ಸ್ ಯಾರೂ ಬೇಕಾದರೂ ಧರಿಸಬಹುದು.
- ಬಾಳಿಕೆ ಹೆಚ್ಚು ಬರುತ್ತವೆ.
- ಕಲರ್ನವು ಇದೀಗ ದೊರೆಯುತ್ತಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star winter Fashion: ಸೀಸನ್‌ಗೆ ತಕ್ಕಂತೆ ಬದಲಾಯ್ತು ನಟಿ ಶಾನ್ವಿ ಶ್ರೀವಾತ್ಸವ್ ವಿಂಟರ್ ಫ್ಯಾಷನ್