ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುತ್ತಿನ ಲೆಹೆಂಗಾದಲ್ಲಿ (Actress Pearl Lehenga Fashion) ಧರೆಗಿಳಿದ ದೇವತೆಯಂತೆ ಕಾಣಿಸಿಕೊಂಡಿದ್ದಾರೆ ನಟಿ ಶ್ವೇತಾ ಪ್ರಸಾದ್. ಸೆಲೆಬ್ರೆಟಿ ಡಿಸೈನರ್ ಬೃಂದಾ ಗೌಡ ಅವರ ಪರ್ಲ್ ಮೆರ್ಮೈಡ್ ಡಿಸೈನರ್ ಲೆಹೆಂಗಾದಲ್ಲಿ ದೇವತೆಯಂತೆ ಕಾಣಿಸಿಕೊಂಡಿರುವ ಶ್ವೇತಾ ಪ್ರಸಾದ್‌ಗೆ ಈಗಾಗಲೇ ಮುತ್ತಿನ ರಾಣಿ, ಪರ್ಲ್ ಕ್ವೀನ್ ಎಂದೆಲ್ಲಾ ಅಭಿಮಾನಿಗಳ ಪ್ರಶಂಸೆಯ ಸುರಿಮಳೆಯೇ ಸುರಿದಿದೆಯಂತೆ.
ಸೆಲೆಬ್ರೆಟಿ ಡಿಸೈನರ್ ಬೃಂದಾಗೌಡ ಡಿಸೈನರ್‌ವೇರ್
ಈಗಾಗಲೇ ಸಾಕಷ್ಟು ಸೆಲೆಬ್ರೆಟಿಗಳಿಗೆ ಡಿಸೈನರ್‌ವೇರ್ ಸಿದ್ಧಪಡಿಸಿರುವ ಸೆಲೆಬ್ರೆಟಿ ಡಿಸೈನರ್ ಬೃಂದಾಗೌಡ, ಈ ಪರ್ಲ್ ಮೆರ್ಮೈಡ್ ಲೆಹೆಂಗಾದ ಸೃಷ್ಟಿಕರ್ತರು. ನೋಡಲು ಮನಮೋಹಕವಾಗಿರುವ ಈ ಮುತ್ತಿನ ಲೆಹೆಂಗಾದಲ್ಲಿ ನಟಿ ಶ್ವೇತಾ ಪ್ರಸಾದ್ ಅವರನ್ನು ಥೇಟ್ ಗಂಧರ್ವ ಕನ್ಯೆಯಂತೆ ಬಿಂಬಿಸಿದ್ದಾರೆ.
ಅತ್ಯಾಕರ್ಷಕ ಪರ್ಲ್ ಮೆರ್ಮೆಐಡ್ ಲೆಹೆಂಗಾ
ಕಲ್ಚರ್ ಪರ್ಲ್ ಗಳಿಂದ ಸಿದ್ಧಪಡಿಸಲಾಗಿರುವ ಈ ಲೆಹೆಂಗಾ ಪವಿತ್ರತೆಯನ್ನು ಸೂಚಿಸುತ್ತದೆ. ಲೆಹೆಂಗಾದ ತುಂಬೆಲ್ಲಾ ಮುತ್ತಿನಿಂದ ವರ್ಕ್ ಮಾಡಲಾಗಿದೆ. ಲೆಹೆಂಗಾಗೆ ಬ್ಯಾಕ್‌ಲೆಸ್ ಬ್ಲೌಸ್ ಗ್ಲಾಮರಸ್ ಟಚ್ ನೀಡಿದೆ. ಇದರೊಂದಿಗೆ ಹೆವ್ವಿ ಬೀಡೆಡ್ ದುಪಟ್ಟಾವನ್ನು ಅತ್ಯಾಕರ್ಷಕವಾಗಿಸಲಾಗಿದೆ. ಗೋಲ್ಡ್ ಫಾಯಿಲ್‌ಫ್ಯಾಬ್ರಿಕ್, ಶಿಮ್ಮರ್ ಲುಕ್ ನೀಡಿದೆ ಎಂದು ಸೆಲೆಬ್ರೆಟಿ ಡಿಸೈನರ್ ಬೃಂದಾ ಗೌಡ ತಿಳಿಸಿದ್ದಾರೆ. ಅವರು ಹೇಳುವಂತೆ, ಹಿಂದಿನ ಕಾಲದ ಸಿನಿಮಾಗಳಲ್ಲಿರುವ ದೇವತೆಗಳ ಉಡುಗೆಗಳು ಈ ಡಿಸೈನರ್‌ವೇರ್ ಸಿದ್ಧಪಡಿಸಲು ಸ್ಪೂರ್ತಿಯಾಗಿದೆಯಂತೆ.
ನಟಿ ಶ್ವೇತಾ ಪ್ರಸಾದ್ ಫ್ಯಾಷನ್ ಟಾಕ್
ನಟಿ ಶ್ವೇತಾ ಪ್ರಸಾದ್ ಈ ಪರ್ಲ್ ಲೆಹೆಂಗಾ ಧರಿಸಿ ಸಖತ್ ಖುಷಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದೇ ತಡ, ಅಭಿಮಾನಿಗಳ ಪ್ರಶಂಸೆಯ ಸುರಿಮಳೆ ಹೆಚ್ಚಾಗಿದೆಯಂತೆ. ಮುತ್ತಿನ ರಾಣಿ, ಮುತ್ತಿನ ದೇವತೆ, ಪರ್ಲ್ ಕ್ವೀನ್ ಹೀಗೆಲ್ಲಾ ಹೊಗಳುವುದು ಹೆಚ್ಚಾಗಿದೆಯಂತೆ. ಹಾಗೆನ್ನುತ್ತಾರೆ ಶ್ವೇತಾ. ಇನ್ನು, ಈ ಉಡುಪು ಏಂಜೆಲ್ ಫೀಲ್ ನೀಡಿದೆಯಂತೆ. ಅಪರೂಪದ ಈ ಡಿಸೈನ್ ಬಾಲಿವುಡ್ ಸ್ಟಾರ್‌ನಂತೆ ಲುಕ್ ನೀಡಿದೆ. ಡಿಸೈನರ್ ಬೃಂದಾ ಗೌಡರ ಕ್ರಿಯೇಟಿವಿಟಿಗೆ ಈ ಲೆಹೆಂಗಾ ಸಾಕ್ಷಿಯಂತಿದೆ. ಅತ್ಯಾಕರ್ಷಕ ಪರ್ಲ್ ಡಿಸೈನಿದು ಎಂದು ವಿಸ್ತಾರ ನ್ಯೂಸ್‌ಗೆ ಶ್ವೇತಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಒಟ್ಟಾರೆ, ಬಾಲಿವುಡ್ ದೀಪಿಕಾ ಪಡುಕೋಣೆ ಧರಿಸಿದ್ದ, ಪರ್ಲ್ ಡಿಸೈನರ್‌ವೇರ್‌ಗೆ ಸರಿ ಸಾಟಿಯೆಂಬಂತೆ, ಈ ಡಿಸೈನರ್‌ವೇರನ್ನು ಇಲ್ಲಿಯವರೇ ಸಿದ್ಧಪಡಿಸಿರುವುದು ಡಿಸೈನರ್ ಕ್ರಿಯೆಟಿವಿಟಿಗೆ ಸಾಕ್ಷಿ ಎನ್ನಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Gladiator Sandal Fashion: ಬೇಸಿಗೆಯಲ್ಲಿ ಮರಳಿದ ಗ್ಲಾಡಿಯೆಟರ್ಸ್ ಸ್ಯಾಂಡಲ್ ಫ್ಯಾಷನ್