ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್ ಇನ್ನೂ ಶುರುವಾಗಿಲ್ಲ! ಈಗಾಗಲೇ ಸಮ್ಮರ್ ಶಾಪಿಂಗ್ (Summer Shopping 2024) ಶುರುವಾಗಿದೆ. 2024 ಸಮ್ಮರ್ ಸೀಸನ್ ಆರಂಭವಾಗುವ ಮುನ್ನವೇ ಔಟ್‌ಫಿಟ್‌ಗಳು ಲಗ್ಗೆ ಇಟ್ಟಿವೆ. ಅದರಲ್ಲೂ ಉದ್ಯಾನನಗರಿಯ ನಾನಾ ಮಾಲ್‌ಗಳು ನ್ಯೂ ಅರೈವಲ್ ಹೆಸರಲ್ಲಿ ಹಿರಿಯರು, ಉದ್ಯೋಗಸ್ಥರು, ಮಹಿಳೆಯರು, ಯುವಕ-ಯುವತಿಯರು, ಮಧ್ಯವಯಸ್ಕರು, ಮಕ್ಕಳು ಸೇರಿದಂತೆ ನಾನಾ ಕೆಟಗರಿಯಲ್ಲಿ ಬಗೆಬಗೆಯ ಸೀಸನ್ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಇನ್ನು ಬಿಸಿಲಿಗೆ ಧರಿಸಬಹುದಾದ ಹ್ಯಾಟ್, ಕ್ಯಾಪ್, ಸ್ಕಾರ್ಫ್‌ನಂತಹ ಆಕ್ಸೆಸರೀಸ್‌ಗಳನ್ನು ಅನಾವರಣಗೊಳಿಸಿವೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.
ಸೈಡಿಗೆ ಸರಿದ ಬೆಚ್ಚಗಿನ ಡಿಸೈನರ್‌ವೇರ್ಸ್
ಯಾವುದೇ ಶಾಪಿಂಗ್ ಮಾಲ್‌ಗಳಲ್ಲಿ ಇಣುಕಿ ನೋಡಿ. ಬಿಸಿಲು ಕಾಲ ಮುಗಿಯುವ ಮುನ್ನವೇ, ಓವರ್‌ಕೋಟ್, ಶ್ರಗ್ಸ್‌ನಂತಹ ಮೇಲುಡುಗೆಯಂತಹ ಬೆಚ್ಚಗಿಡುವಂತಹ ಉಡುಪುಗಳು ಮಾಯವಾಗಿವೆ, ಇಲ್ಲವಾದಲ್ಲಿ, ಸೈಡಿಗೆ ಸರಿದಿವೆ. ಡಬ್ಬಲ್ ಲೇಯರ್‌ನ ಟಾಪ್‌ಗಳು, ಲೈನಿಂಗ್ ಇರುವಂತಹ ಔಟ್‌ಫಿಟ್‌ಗಳು, ದಪ್ಪನೆಯ ಫ್ಯಾಬ್ರಿಕ್ ಇರುವಂತಹ ಸೆಕೆಯಾಗುವಂತಹ ಉಡುಗೆಗಳು ಸೈಡ್ ಕಾಲಂಗೆ ಹೋಗಿವೆ. ಫುಲ್ ನೆಕ್, ಫುಲ್ ಸ್ಲೀವ್, ಹೈ ನೆಕ್, ಲಾಂಗ್ ಟಾಪ್, ಫುಲ್ ಕವರ್ಡ್ ಜಂಪ್‌ಸೂಟ್, ಲಾಂಗ್ ಸ್ಕಟ್ರ್ಸ್ನಂತಹ ಬೆಚ್ಚಗಿಡುವ ಡಿಸೈನರ್‌ವೇರ್‌ಗಳು ಕೂಡ ಮೈನ್ ಶೋಕೆಸ್‌ನಿಂದ ಒಳಗೆ ಸೇರಿವೆ. ಇದಕ್ಕೆ ಕಾರಣ, ಈಗಾಗಲೇ ಹವಾಮಾನದಲ್ಲಿ ಉಷ್ಣಾಂಶದಲ್ಲಿ ಏರಿಕೆಯಾಗಿರುವುದು ಹಾಗೂ ಚಳಿಮಾಯವಾಗಿರುವುದು. ಗಾಳಿ ಹೆಚ್ಚಗಿಯೇ ಇದ್ದರೂ ಸೆಕೆ ಆರಂಭವಾಗಿರುವುದು. ಹಾಗಾಗಿ ಧರಿಸುವ ಔಟ್‌ಫಿಟ್‌ಗಳಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ಹಾಗಾಗಿ ಸಮ್ಮರ್ ಸೀಸನ್ ಬರುವ ಮುನ್ನವೇ ಮಾಲ್‌ಗಳಲ್ಲಿ ಗ್ರಾಹಕರ ಮನೋಭಿಲಾಷೆಗೆ ಹೊಂದುವಂತಹ ಸಮ್ಮರ್ ಸೀಸನ್ ಟ್ರೆಂಡಿ ಔಟ್‌ಫಿಟ್‌ಗಳು ಲಗ್ಗೆ ಇಟ್ಟಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಗಾಳಿಯಾಡುವ ಔಟ್‌ಫಿಟ್‌ಗಳಿಗೆ ಬೇಡಿಕೆ
ಯುವತಿಯರು ಸ್ಲೀವ್‌ಲೆಸ್, ನೆಟ್ಟೆಡ್, ಕಾಟನ್, ಲೆನಿನ್, ಶೀರ್ ಫ್ಯಾಬ್ರಿಕ್‌ನ ಡಿಸೈನರ್‌ವೇರ್‌ಗಳ ಚಾಯ್ಸ್ ಮಾಡತೊಡಗಿದ್ದರೆ, ಮೆನ್ಸ್ ಫ್ಯಾಷನ್‌ನಲ್ಲಿ ಕಾಟನ್ ಹಾಗೂ ಲೆನಿನ್, ರಾಯನ್ ಫ್ಯಾಬ್ರಿಕ್‌ನ ಶರ್ಟ್‌ಗಳು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಶಾಪ್‌ವೊಂದರ ಮಾರಾಟಗಾರರು.
ಕೋಲ್ ಆಕ್ಸೆಸರೀಸ್
ಬಿಸಿಲ ಝಳಕ್ಕೆ ಬಳಸುವ ಕ್ಯಾಪ್, ಹ್ಯಾಟ್, ಹೆಡ್‌ಬ್ಯಾಂಡ್ ಶೈಲಿಯ ತೆಳುವಾದ ಸ್ಕಾರ್ಫ್‌ಗಳು ಈ ಸೀಸನ್‌ನಲ್ಲಿ ಎಂಟ್ರಿ ನೀಡಿವೆ.
ಒಟ್ಟಾರೆ, ಅಧಿಕೃತವಾಗಿ ಸೀಸನ್ ಆರಂಭಕ್ಕೂ ಮುನ್ನವೇ, ಮಾಲ್‌ಗಳಲ್ಲಿ ಸಮ್ಮರ್ ಔಟ್‌ಫಿಟ್‌ಗಳು ಆವರಿಸಿಕೊಂಡಿವೆ. ಇದಕ್ಕೆ ಪೂರಕ ಎಂಬಂತೆ ಶಾಪಿಂಗ್ ಮಾಡುವವರು ಹೆಚ್ಚಾಗಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Alia Cut Kurta Set Fashion: ಪಾಪ್ಯುಲರ್ ಆಯ್ತು, ಅಲಿಯಾ ಕಟ್ ಕುರ್ತಾ ಸೂಟ್ ಸೆಟ್!