Site icon Vistara News

Stars Valentines Day Fashion: ಹೀಗಿತ್ತು ಸೆಲೆಬ್ರೆಟಿಗಳ ವ್ಯಾಲೆಂಟೈನ್ಸ್ ಡೇ ಫ್ಯಾಷನ್‌ ಲುಕ್‌!

Stars Valentines Day Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ತಾರೆಯರು ಹಾಗೂ ಸೆಲೆಬ್ರೆಟಿಗಳು ವ್ಯಾಲೆಂಟೈನ್ಸ್ ಡೇಯಂದು ಟ್ರೆಂಡಿ ಫ್ಯಾಷನ್‌ ಲುಕ್‌ನಲ್ಲಿ (Stars Valentines Day Fashion) ಕಾಣಿಸಿಕೊಂಡರು. ಬಾಲಿವುಡ್‌ ಮಾತ್ರವಲ್ಲ, ಸ್ಯಾಂಡಲ್‌ವುಡ್‌, ಕಿರುತೆರೆ ಹಾಗೂ ಫ್ಯಾಷನ್‌ ಲೋಕದ ಸೆಲೆಬ್ರೆಟಿಗಳು ತಮ್ಮದೇ ಆದ ಸ್ಟೈಲ್‌ನಲ್ಲಿ ಕಾಣಿಸಿಕೊಂಡರು. ಮದುವೆಯಾದ ಸೆಲೆಬ್ರೆಟಿಗಳು ತಮ್ಮ ಸಂಗಾತಿಯೊಂದಿಗೆ ಫ್ಯಾಷನಬಲ್‌ ಆಗಿ ಕಾಣಿಸಿಕೊಂಡರೇ, ಇನ್ನು ಸಿಂಗಲ್‌ ಆಗಿರುವವರು ಇನ್ನೊಂದು ರೀತಿಯಲ್ಲಿ ಕಾಣಿಸಿಕೊಂಡರು. ಒಟ್ಟಿನಲ್ಲಿ , ವ್ಯಾಲೆಂಟೈನ್ಸ್ ಡೇಯ ಫ್ಯಾಷನ್‌ ಲುಕ್‌ ವೈವಿಧ್ಯಮಯವಾಗಿತ್ತು. ಕೆಲವರು ರೆಡ್‌ ಡ್ರೆಸ್‌ನಲ್ಲಿ ಮಿಂಚಿದರೇ, ಇನ್ನು ಕೆಲವರು, ಟ್ರೆಂಡಿ ಔಟ್‌ಫಿಟ್‌ಗಳ ಫ್ಯಾಷೆನಬಲ್‌ ಲುಕ್‌ನಲ್ಲಿ ಮಿನುಗಿದರು. ಈ ಕುರಿತಂತೆ ಇಲ್ಲಿದೆ ಸಂಕ್ಷೀಪ್ತ ವರದಿ.

Actor Arjun rampal & his wife

ಹಾಲಿವುಡ್‌ ತಾರೆಯರ ಸ್ಪೆಷಲ್‌ ಲುಕ್‌

ಹಾಲಿವುಡ್‌ ತಾರೆಯರಾದ ಕೌರ್ಟಿನ್‌ ಕರದೆಶಿಯಾ ಮತ್ತು ಟ್ರಾವಿಸ್‌ ಬಾರ್ಕೆರ್‌ ವಾರವೀಡಿ ತಮ್ಮ ಫ್ಯಾಷನಬಲ್‌ ಲುಕ್‌ನಲ್ಲಿ ಕಾಣಿಸಿಕೊಂಡ ಪೋಸ್ಟ್‌ಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿದರು. ಸೆಲೆಬ್ರೆಟಿ ಕಪಲ್‌ಗಳಾದ ಬೆಕಮ್ಸ್ ಹಾಗೂ ಬರಾಕ್‌ ಒಬಮಾ ದಂಪತಿಗಳು ತಮ್ಮದೇ ಆದ ಫ್ಯಾಷನ್‌ವೇರ್‌ಗಳಲ್ಲಿ ಕಾಣಿಸಿಕೊಂಡು ಮಿಂಚಿದರು. ಇನ್ನು ಮಾರಿಯಾ, ಪಮೇಲಾ ಅಂಡೆರ್‌ಸನ್‌, ಮಾರ್ಕ್, ಕೆನ್‌ ಜಿಯಾಂಗ್‌, ರೀಟಾ, ಜೂಯಿ ಸೇರಿದಂತೆ ಸಾಕಷ್ಟು ಹಾಲಿವುಡ್‌ಗರು ತಮ್ಮದೇ ಆದ ವೆಸ್ಟರ್ನ್‌ವೇರ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಂಡರು.

ಬಾಲಿವುಡ್‌ ಸೆಲೆಬ್ರೆಟಿಗಳ ಫ್ಯಾಷನ್‌ ರಂಗು

ಬಾಲಿವುಡ್‌ನ ಸ್ಟಾರ್‌ ಕಪಲ್‌ಗಳಾದ ಶಿಲ್ಪಾ ಶೆಟ್ಟಿ-ರಾಜ್‌ ಕುಂದ್ರಾ, ರಿತೇಶ್‌-ಜೆನಿಲಿಯಾ, ಬಿಪಾಶಾ-ಕರಣ್‌, ಫರ್ಹಾನ್‌ ಅಖ್ತಾರ್‌-ಶಿಬಾನಿ, ರಾಜ್‌ಕುಮಾರ್‌ ಯಾದವ್‌-ಪತ್ರಲೇಖಾ, ಮಲೈಕಾ-ಅರ್ಜುನ್‌ ಕಪೂರ್‌, ರಣ್‌ದೀಪ್‌ ಹೂಡಾ, ಅರ್ಜುನ್‌ ರಾಮ್‌ಪಾಲ್‌ ಸೇರಿದಂತೆ ಹಲವರು ಕಪಲ್‌ ಫ್ಯಾಷನ್‌ ವೇರ್‌ಗಳಲ್ಲಿ ಮಿಂಚಿದರು. ಬಹುತೇಕರು ವೆಸ್ಟರ್ನ್‌ವೇರ್‌ಗಳಿಗೆ ಆದ್ಯತೆ ನೀಡಿದ್ದರು. ಕೆಲವರು ಫೋಟೋ ಬದಲು ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್ ಅಪ್‌ಡೇಟ್‌ ಮಾಡುವ ಮೂಲಕ ತಮ್ಮ ವ್ಯಾಲೆಂಟೈನ್‌ ಲವ್‌ ವ್ಯಕ್ತಪಡಿಸಿದರು.

ಸ್ಯಾಂಡಲ್‌ವುಡ್‌ ತಾರೆಯರ ವ್ಯಾಲೆಂಟೈನ್ಸ್ ಲುಕ್‌

ಸ್ಯಾಂಡಲ್‌ವುಡ್‌ನ ಸ್ಟಾರ್‌ ಕಪಲ್‌ಗಳಾದ ಯಶ್‌-ರಾಧಿಕಾ, ಪ್ರಿಯಾಂಕಾ –ಉಪೇಂದ್ರ, ಅನು-ರಘು-ಮುಖರ್ಜಿ, ಪ್ರೇಮ್‌ ಸೇರಿದಂತೆ ಹಲವರು ಎಥ್ನಿಕ್‌ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡರು. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಸಂಗಾತಿಯೊಂದಿಗಿನ ಫ್ಯಾಷನಬಲ್‌ ಫೋಟೋಗಳನ್ನು ಹಾಕಿಕೊಂಡು ಸಂಭ್ರಮಿಸಿದರು. ಅಭಿಮಾನಿಗಳನ್ನು ಸೆಳೆದರು.

Actress Bipasha basu & karan grover

ಸಿಂಗಲ್ಸ್ ವ್ಯಾಲೆಂಟೈನ್ಸ್ ಲುಕ್‌

ಇನ್ನು ಮದುವೆಯಾಗದ ಅಥವಾ ಕಮಿಟ್‌ ಆಗದ ಸಿಂಗಲ್‌ ಆಗಿರುವ ಸೆಲೆಬ್ರೆಟಿಗಳು ಕೂಡ ವ್ಯಾಲೆಂಟೈನ್ಸ್ ಡೇ ಸೆಲೆಬ್ರೆಟ್‌ ಮಾಡಿದರು. ಕೆಲವರು ತಮ್ಮ ಗರ್ಲ್ ಫ್ರೆಂಡ್ಸ್ ಜೊತೆಗೂಡಿ ಗ್ಯಾಲೆಂಟೈನ್ಸ್ ಡೇ ಆಚರಿಸಿದರು. ಒಟ್ಟಾರೆ, ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ತಮಮ್ದೇ ಫ್ಯಾಷನ್‌ ಲುಕ್‌ನಲ್ಲಿ ಕಾಣಿಸಿಕೊಂಡರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Pageant: ಶಿವಮೊಗ್ಗದಲ್ಲಿ ಮಿಸ್‌, ಮಿಸ್ಟರ್, ಮಿಸೆಸ್‌ ಫ್ಯಾಷನ್‌ ಪೇಜೆಂಟ್‌

Exit mobile version