ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ (Star Hairstyle) ಕೂದಲಿಗೆ ಕತ್ತರಿ ಬಿದ್ದಿದೆ. ಉದ್ದ ಕೂದಲಿಗೆ ಮುಕ್ತಿ ನೀಡಿ ಇದೀಗ ಲೇಯರ್ ಕಟ್ ಮಾಡಿಸಿದ್ದಾರೆ. ಅವರ ಸೊಂಪಾದ ಕೂದಲಿನ ಆಕರ್ಷಕ ಹೇರ್‌ಸ್ಟೈಲಿಂಗ್‌ಗೆ ಕಾರಣಕರ್ತರು ಸಾಮಾನ್ಯದವರೇನಲ್ಲ! ಸಾಕಷ್ಟು ಬಾಲಿವುಡ್ ಸ್ಟಾರ್ ನಟಿಮಣಿಯರ ಕೂದಲು ಹೀಗೆಯೇ ಇರಬೇಕೆಂದು ನಿರ್ಧರಿಸುವ ಸೆಲೆಬ್ರೆಟಿ ಹೇರ್‌ಸ್ಟೈಲಿಸ್ಟ್ ಕ್ಲಾರಾಬೆಲ್ಲಾ. ಹೌದು. ಆಯಾ ತಾರೆಯ ಹೇರ್‌ಕಟ್ ಹೀಗಿದ್ದರೇ ಚೆನ್ನ! ಇಷ್ಟಿದ್ದರೇ ಸರಿ, ಈ ಕಟ್ ಮಾಡಿದರೇ ಬೆಸ್ಟ್! ಎಂದೆಲ್ಲಾ ನಿರ್ಧರಿಸುವುದು ಇವರೇ! ಹಾಗಾದಲ್ಲಿ ಇವರ್ಯಾರು? ಯಾಕಿಷ್ಟು ಫೇಮಸ್! ಯಾವ್ಯಾವ ತಾರೆಯರ ಕೂದಲಿಗೆ ಕತ್ತರಿ ಹಾಕಿದ್ದಾರೆ ನೋಡಿ!
ಯಾರಿದು ಕ್ಲಾರಾಬೆಲ್ಲಾ?
ಕ್ಲಾರಬೆಲ್ಲಾ ಸ್ಟಾರ್ ಹೇರ್ ಸ್ಟೈಲಿಸ್ಟ್. ಅವರದ್ದೇ ಆದ ಹೇರ್ ಸಲೂನ್ ಹೊಂದಿದ್ದಾರೆ. ಸುಮಾರು 43 ವರ್ಷಗಳಿಂದ ಮುಂಬಯಿಯ ಬಾಂದ್ರಾ ವೆಸ್ಟ್‌ನಲ್ಲಿ ವಾಸಿಸುತ್ತಿರುವ ಇವರು ಈಗಾಗಲೇ ಸಾಕಷ್ಟು ಸ್ಟಾರ್‌ಗಳ ಹೇರ್ ಕಟ್ ಮಾಡಿದ್ದಾರೆ. ಇಂತಹ ನಟಿಗೆ ಇದೇ ರೀತಿಯ ಹೇರ್ ಕಟ್ ಮ್ಯಾಚ್ ಆಗುತ್ತದೆ ಎಂಬುದನ್ನು ಕಂಡ ಕೂಡಲೇ ನಿರ್ಧರಿಸುತ್ತಾರಂತೆ.
ಲೆಜೆಂಡ್ ಸ್ಟಾರ್ಸ್ ಹೇರ್ ಸ್ಟೈಲಿಸ್ಟ್
ಹಿರಿಯ ನಟಿ ಹೆಲೆನ್, ವಹೀದಾ ರೆಹಮಾನ್, ಡಿಂಪಲ್ ಕಪಾಡಿಯಾ ಸೇರಿದಂತೆ ಸಾಕಷ್ಟು ಸಿನಿಯರ್ ನಟಿಯರು ಇವರ ರೆಗ್ಯುಲರ್ ಕಸ್ಟಮರ್ಸ್ ಆಗಿದ್ದರಂತೆ. ಅದರಲ್ಲೂ ಫ್ರೀ ಹೇರ್ ಕಟ್‌ಗಳಾದ ಲೇಯರ್ ಕಟ್, ಬಾಬ್ಬಿ ಕಟ್, ಸ್ಟ್ರೇಟ್ ಕಟ್ ಸೇರಿದಂತೆ ಕೆಲವು ಕಟ್‌ಗಳನ್ನು ಕರಾರುವಕ್ಕಾಗಿ ಕಾಣುವಂತೆ ಮಾಡುವ ಸ್ಪೆಷಲಿಸ್ಟ್ ಇವರಂತೆ. ಎಷ್ಟೇ ಇಂಟರ್‌ನ್ಯಾಷನಲ್ ಬ್ರಾಂಡ್ ಹೇರ್ ಸಲೂನ್‌ಗಳು ಇಂದು ಮುಂಬಯಿಯಲ್ಲಿ ಕಾಲಿಟ್ಟಿದ್ದರೂ, ಕೆಲವು ತಾರೆಯರು ಮಾತ್ರ ಇಂದಿಗೂ ಇವರ ಬಳಿಯೇ ಕಸ್ಟಮೈಸ್ಡ್ ಹೇರ್ ಕಟ್ ಮಾಡಿಸಿಕೊಳ್ಳುತ್ತಾರಂತೆ. ಹಾಗೆನ್ನುತ್ತವೆ ಮೂಲಗಳು. ಈ ಲಿಸ್ಟ್‌ನಲ್ಲಿ ಅನನ್ಯಾ ಪಾಂಡೇ, ಮಲೈಕಾ ಅರೋರಾ, ಲಾರಾ ದತ್ತಾ ಕೂಡ ಸೇರಿದಂತೆ ಸಾಕಷ್ಟು ನಟಿಯರ ಹೆಸರು ಸೇರಿದೆಯಂತೆ.
ದೀಪಿಕಾ ಪಡುಕೋಣೆ ಫೇವರೇಟ್ ಹೇರ್‌ಸ್ಟೈಲಿಸ್ಟ್
ಇನ್ನು, ನಟಿ ದೀಪಿಕಾ ಪಡುಕೋಣೆ ಮಾತ್ರ ಹೆಚ್ಚಾಗಿ ಇವರ ಬಳಿಯೇ ಹೇರ್ ಕಟ್ ಮಾಡಿಸಿಕೊಳ್ಳುವುದಂತೆ. ಕಣ್ಮುಚ್ಚಿ ಕುಳಿತರೇ ಸಾಕು, ನಾವಂದುಕೊಂಡ ಹೇರ್‌ಕಟ್ ಇವರು ಮಾಡುತ್ತಾರೆ ಎನ್ನುವ ದೀಪಿಕಾ, ಸದ್ಯದಲ್ಲೆ ತಾಯಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ತಮಗಿದ್ದ ಉದ್ದ ಕೂದಲನ್ನು ಶಾರ್ಟ್ ಆಗಿಸಿ ಲೇಯರ್ ಕಟ್ ಮಾಡಿಸಿ, ಖುಷಿ ಪಟ್ಟಿದ್ದಾರೆ. ಈ ಕಟ್‌ನಿಂದ ತಮಗಾದ ತೃಪ್ತಿ ಹಾಗೂ ಸಂತೋಷವನ್ನು ಈಗಾಗಲೇ ವಿಡಿಯೋದಲ್ಲಿ ಕ್ಲಾರಾಬೆಲ್ಲಾ ಜೊತೆ ತೋರ್ಪಡಿಸಿಕೊಂಡಿದ್ದು, ಈಗಾಗಲೇ ಈ ಕ್ಲಿಪ್ ವೈರಲ್ ಕೂಡ ಆಗಿದೆ.
ಅಂದಹಾಗೆ, ನೀವು ಕ್ಲಾರಾಬೆಲ್ಲಾ ಬಳಿ ಹೇರ್‌ಕಟ್ ಮಾಡಿಸಬೇಕೇ! ಇದಕ್ಕಾಗಿ ನೀವು ಯೋಚಿಸಬೇಕಾಗಿಲ್ಲ! ಅಪಾಯಿಂಟ್‌ಮೆಂಟ್ ತೆಗೆದುಕೊಂಡು, ಅವರ ಶುಲ್ಕ 5000 ರೂ.ಗಳನ್ನು ಪಾವತಿಸಿದರಾಯಿತು. ಕಣ್ಮುಚ್ಚಿ ಕುಳಿತರೇ, ನಿಮಗೂ ಸೆಲೆಬ್ರೆಟಿ ಲುಕ್ ನೀಡುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Summer Fashion: ಸಾನ್ಯಾ ಅಯ್ಯರ್ ಬಟನ್ ಓಪನ್ ಪೋಸ್! ಸಮ್ಮರ್ ಹಾಟ್ ಫ್ಯಾಷನ್!