ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಲ್ಟ್ ಇಲ್ಲದ ಟೈಯಿಂಗ್ ಪ್ಯಾಂಟ್ಗಳು (Tieing Pants Fashion) ಇದೀಗ ಜೆನ್ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ನೋಡಲು ಕೂಲ್ ಲುಕ್ ನೀಡುವ ಇವು ಕ್ಯಾಶುವಲ್ ಲುಕ್ ನೀಡುವ ವೆಸ್ಟೆರ್ನ್ವೇರ್ ಹಾಗೂ ಫಾರ್ಮಲ್ ಸ್ಟೈಲ್ನಲ್ಲೂ ಕಾಣಿಸಿಕೊಳ್ಳುತ್ತಿವೆ.
“ಪ್ಯಾಂಟ್ಗಳನ್ನು ಧರಿಸಿದಾಗ ಬೆಲ್ಟ್ ಧರಿಸುವುದು ಸಾಮಾನ್ಯ. ಆದರೆ ಈ ಟೈಯಿಂಗ್ ಪ್ಯಾಂಟ್ಗಳ ಜೊತೆಯೇ ಅದೇ ಫ್ಯಾಬ್ರಿಕ್ನ ಬೆಲ್ಟ್ ರೀತಿ ಕಟ್ಟಬಹುದಾದ ಅಪ್ಷನ್ ಹೊಂದಿರುತ್ತವೆ. ಇವು ಒಂದೇ ಕಲರ್ ಹೊಂದಿರುತ್ತವೆ. ಜೊತೆಗೆ ಪ್ಯಾಂಟ್ ಫಿಟ್ ಆಗಿ ಕೂರಲು ಸಹಾಯ ಮಾಡುತ್ತವೆ. ಆಯಾ ಪ್ಯಾಂಟ್ನ ಡಿಸೈನ್ ಆಧಾರದ ಮೇಲೆ ಇವು ವಿನ್ಯಾಸಗೊಂಡಿರುತ್ತವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್. ಅವರ ಪ್ರಕಾರ, ಇದೀಗ ಜೆನ್ ಜಿ ಹುಡುಗಿಯರು ಮಾತ್ರವಲ್ಲ, ಫಾರ್ಮಲ್ ಸ್ಟೈಲ್ನಲ್ಲಿ ಇರುವಂತವು ಕಾರ್ಪೋರೇಟ್ ಕ್ಷೇತ್ರದ ಯುವತಿಯರನ್ನು ಸೆಳೆಯುತ್ತಿವೆ. ಕಾರಣ, ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ನೀಡುವಂತಿರುವುದು ಎನ್ನುತ್ತಾರೆ.
ಟೈಯಿಂಗ್ ಪ್ಯಾಂಟ್ ಮಿಕ್ಸ್ ಮ್ಯಾಚ್
ನೀವು ಯಾವುದೇ ಬಗೆಯ ಟೈಯಿಂಗ್ ಪ್ಯಾಂಟ್ ತೆಗೆದುಕೊಂಡರೂ ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದು. ಉದಾಹರಣೆಗೆ., ಬ್ಲಾಕ್ ಅಥವಾ ಬ್ರೌನ್ ಕಲರ್ನ ಟೈಯಿಂಗ್ ಪ್ಯಾಂಟ್ಗೆ ಶರ್ಟ್ ಧರಿಸಬಹುದು. ಆದರೆ, ಇದನ್ನು ಇನ್ಶರ್ಟ್ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಟೈಯಿಂಗ್ ಪ್ಯಾಂಟ್ ಲುಕ್ ಕಾಣುವುದಿಲ್ಲ. ಇನ್ನು ಜೀನ್ಸ್ನಲ್ಲಿ ಜೆಗ್ಗಿಂಗ್ಸ್ ಶೈಲಿಯ ಟೈಯಿಂಗ್ ಪ್ಯಾಂಟ್ಗಳು ಬಂದಿವೆ. ಇವು ಟ್ರಾವೆಲಿಂಗ್ ಹಾಗೂ ವೀಕೆಂಡ್ ಔಟಿಂಗ್ಗೆ ಮ್ಯಾಚ್ ಆಗುತ್ತವೆ. ನೋಡಲು ಕೂಲ್ ಆಗಿ ಬಿಂಬಿಸುತ್ತವೆ. ಅಷ್ಟು ಮಾತ್ರವಲ್ಲ, ಆರಾಮ ಎಂದೆನಿಸುತ್ತವೆ ಎನ್ನುತ್ತಾರೆ ಡಿಸೈನರ್ ರೀಟಾ. ಅವರು ಹೇಳುವಂತೆ, ಟೈಯಿಂಗ್ ಪ್ಯಾಂಟ್ಗಳು ಫ್ಯಾಷನ್ನಲ್ಲಿವೆ ಎಂದಾಕ್ಷಣಾ ಎಲ್ಲವೂ ಎಲ್ಲರಿಗೂ ಸೂಟ್ ಆಗುವುದಿಲ್ಲ. ಹಾಗಾಗಿ ಟ್ರಯಲ್ ನೋಡಿ, ಹೊಂದಿದಲ್ಲಿ ನಂತರ ಖರೀದಿಸುವುದು ಉತ್ತಮ ಎನ್ನುತ್ತಾರೆ.
ಪರ್ಸನಾಲಿಟಿಗೆ ತಕ್ಕಂತಿರಲಿ
ಟಮ್ಮಿ ಇದ್ದಲ್ಲಿ ಈ ಟೈಯಿಂಗ್ ಪ್ಯಾಂಟ್ ಧರಿಸುವುದು ಬೇಡ. ಇನ್ನು ಸ್ಲಿಮ್ ಇರುವವರಿಗೆ ಓಕೆ. ಪ್ಲಂಪಿ ಇರುವವರು ಆದಷ್ಟೂ ಗಿಡ್ಡನಾದ ಟೈಯಿಂಗ್ ಪ್ಯಾಂಟ್ ನೋಡಿ ಕೊಳ್ಳಿ.
ಟೈಯಿಂಗ್ ಪ್ಯಾಂಟ್ ಆಯ್ಕೆ ಹೇಗೆ ?
- ಆದಷ್ಟೂ ಕಾಮನ್ ಕಲರ್ನದ್ದು ಖರೀದಿಸಿ. ಯಾವುದೇ ಟಾಪ್ ಅಥವಾ ಶರ್ಟ್ಗೆ ಮ್ಯಾಚ್ ಮಾಡಬಹುದು.
- ಫಾರ್ಮಲ್ಸ್ ಟೈಯಿಂಗ್ ಪ್ಯಾಂಟ್ನಲ್ಲಿ ಇಂಡೋ ವೆಸ್ಟರ್ನ್ ಲುಕ್ ನೀಡಬಹುದು.
- ಟೈಯಿಂಗ್ ಪ್ಯಾಂಟ್ಗೆ ಆದಷ್ಟೂ ಟ್ರೆಂಡಿ ಟಾಪ್ ಅಥವಾ ಶರ್ಟ್ ಆಯ್ಕೆ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Pageant: ಅತ್ಯಾಕರ್ಷಕವಾಗಿ ನಡೆದ ಸೂಪರ್ ಮಾಡೆಲ್ ಆಫ್ ಇಂಡಿಯಾ ಪೇಜೆಂಟ್