Site icon Vistara News

Republic Day Bangle Styling: ಗಣರಾಜ್ಯೋತ್ಸವದ ಸಂಭ್ರಮಕ್ಕೆ ತಿರಂಗಾ ಬ್ಯಾಂಗಲ್ಸ್ ಸಾಥ್‌!

Republic Day Bangle Styling

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ಗಣರಾಜ್ಯೋತ್ಸವಕ್ಕೆ ಮಾನಿನಿಯರ ಸಂಭ್ರಮ ಹೆಚ್ಚಿಸಲು ತಿರಂಗಾ ಬ್ಯಾಂಗಲ್‌ ಸೆಟ್‌ಗಳು (Republic day Bangle styling) ಮಾರುಕಟ್ಟೆಗೆ ಕಾಲಿಟ್ಟಿವೆ. ಕೇಸರಿ, ಬಿಳಿ ಮತ್ತು ಹಸಿರು ವರ್ಣದ ನಾನಾ ಬಗೆಯ ಬಳೆಗಳು ಸುಂದರಿಯರ ಕೈಗಳ ಅಂದವನ್ನು ಹೆಚ್ಚಿಸುವುದರೊಂದಿಗೆ ರಾಷ್ಟ್ರಪ್ರೇಮಕ್ಕೆ ಸಾಥ್‌ ನೀಡುತ್ತಿವೆ.

ರಾಷ್ಟ್ರಪ್ರೇಮ ಬಿಂಬಿಸುವ ಬಳೆಗಳು

“ಗಣರಾಜ್ಯೋತ್ಸವದಂದು ಧರಿಸುವ ಡ್ರೆಸ್‌ಕೋಡ್‌ಗೆ ಮ್ಯಾಚ್‌ ಆಗುವಂತೆ ತಿರಂಗಾ ಬ್ಯಾಂಗಲ್‌ ಸೆಟ್‌ಗಳು ಮಾರುಕಟ್ಟೆಗೆ ಆಗಮಿಸಿದ್ದು, ಎಲ್ಲಾ ಫ್ಯಾನ್ಸಿ ಶಾಪ್‌ಗಳಲ್ಲಿ ದೊರೆಯುತ್ತಿವೆ. ನೋಡಲು ಆಕರ್ಷಕವಾಗಿ ಕಾಣುವುದು ಮಾತ್ರವಲ್ಲ, ಧರಿಸಿದಾಗಲೂ ಕೈಗಳು ಸುಂದರವಾಗಿ ಕಾಣಿಸುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ದೇಶ ಪ್ರೇಮವನ್ನು ಬಿಂಬಿಸುತ್ತವೆ. ಯಾವುದೇ ಉಡುಪಿಗಾದರೂ ಸರಿಯೇ, ಅದರಲ್ಲೂ ಎಥ್ನಿಕ್‌ ಅಥವಾ ದೇಸಿ ಲುಕ್‌ ನೀಡುವ ಸಲ್ವಾರ್‌ ಹಾಗೂ ಸೀರೆಗೂ ಮ್ಯಾಚ್‌ ಆಗುತ್ತವೆ. ಇನ್ನು, ಇವುಗಳಲ್ಲಿ ಗಾಜಿನ ಬಳೆಗಳು ಹೊಸ ಬಾಕ್ಸ್ ಡಿಸೈನ್‌ನಲ್ಲಿ ಬಂದಿವೆ. ಮೆಟಲ್‌ ಹಾಗೂ ನಾನಾ ಮೆಟಲ್‌ನಲ್ಲೂ ಈ ಸೆಟ್‌ಗಳು ಪ್ರಚಲಿತದಲ್ಲಿವೆ “ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಶಾಲಾ ಹೆಣ್ಣು ಮಕ್ಕಳ ಆಯ್ಕೆ

ಇನ್ನು ಮಾರಾಟಗಾರರಾದ ಜೀವನ್‌ ರಾಮ್‌ ಅವರು ಹೇಳುವಂತೆ, ಗಣರಾಜ್ಯೋತ್ಸವ ಹತ್ತಿರ ಬರುತ್ತಿದ್ದಂತೆ, ತಿರಂಗಾ ಶೇಡ್‌ನ ಸೆಟ್‌ಗಳನ್ನು ಕೊಳ್ಳುವುದು ಮಾತ್ರವಲ್ಲ ಕೆಲವರು ಗಾಜಿನ ಬಳೆಯನ್ನು ಖರೀದಿಸಿ, ಮಿಕ್ಸ್‌ ಮ್ಯಾಚ್‌ ಧರಿಸುವುದು ಹೆಚ್ಚಾಗಿದೆ. ಇವು ಕಡಿಮೆ ಬೆಲೆಗೆ ದೊರಕುತ್ತವಾದ್ದರಿಂದ ಖರೀದಿಸುವ ಮಹಿಳೆಯರು ಹೆಚ್ಚು. ಇನ್ನು ಶಾಲಾ ಕಾರ್ಯಕ್ರಮಗಳಿಗಾಗಿ ಹುಡುಗಿಯರು ಕೂಡ ಖರೀದಿಸುತ್ತಾರೆ. ಮಕ್ಕಳು ಮೆಟಲ್‌ ಸೆಟ್‌ಗಳನ್ನು ಕೊಂಡು ಕೊಳ್ಳುತ್ತಾರೆ ಎನ್ನುತ್ತಾರೆ.

ತಿರಂಗಾ ಬಳೆಗಳ ಜಾದೂ

ಕೇಸರಿ ಬಿಳಿ ಹಸಿರು ವರ್ಣಗಳ ತಿರಂಗಾ ಬಳೆಗಳ ಸೆಟ್‌ಗಳಲ್ಲಿ ಹೆಚ್ಚಿನವು ರಫ್‌ ಬಳಕೆ ಮಾಡಿದರೂ ಒಡೆದು ಹೋಗದ ನಾನಾ ಬಗೆಯ ಮೆಟಲ್‌ ಸೆಟ್‌ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇದರೊಂದಿಗೆ ಕಡಿಮೆ ಬೆಲೆಯಲ್ಲಿ ದೊರೆಯುವ ಗಾಜಿನ ಬಳೆಗಳು ಎಂದಿನಂತೆ ಬೇಡಿಕೆ ಕುಂದಿಸಿಕೊಂಡಿಲ್ಲ! ಗಾಜಿನ ಬಳೆಗಳನ್ನು ಮಿಕ್ಸ್‌ ಮ್ಯಾಚ್‌ ಮಾಡಿ ಧರಿಸುವ ಟೆಕ್ನಿಕ್‌ ಇಂದಿಗೂ ಮುಂದುವರಿದಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Saree Fashion: ಮೈಸೂರು ಸಿಲ್ಕ್ ಸೀರೆಯಲ್ಲಿ `ರಾಮಾಯಣ’ ಕಥಾನಕ ಅನಾವರಣ ಮಾಡಿದ ಆಲಿಯಾ ಭಟ್

Exit mobile version