-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟೊರ್ನ್ ಜೀನ್ಸ್ ಧರಿಸುವ ಹುಡುಗಿಯರು (Torn Jeans Styling Tips) ಕೇವಲ ಫ್ಯಾಷನ್‌ಗೆ ಮಾತ್ರ ಬೆಲೆ ನೀಡದೇ, ಇವನ್ನು ಧರಿಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಟೈಲಿಂಗ್ ಮಾಡುವುದು ಉತ್ತಮ ಎನ್ನುತ್ತಾರೆ. ಇಲ್ಲವಾದಲ್ಲಿ, ನೋಡುಗರ ಕೆಂಗಣ್ಣಿಗೆ ಗುರಿಯಾಗಬಹುದು ಅಥವಾ ಧರಿಸುವವರಿಗೆ ಮುಜುಗರವಾಗಬಹುದು. ಹಾಗಾಗಿ ಈ ಪ್ಯಾಂಟ್ ಪ್ರಿಯರು ಆದಷ್ಟೂ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಅಂದಹಾಗೆ, ಟೊರ್ನ್ ಜೀನ್ಸ್ ಫ್ಯಾಷನ್ ನಿನ್ನೆ ಮೊನ್ನೆಯದಲ್ಲ! ಸುಮಾರು ವರ್ಷಗಳಿಂದಲೂ ಇದು ನಾನಾ ಅವತಾರಗಳಲ್ಲಿ ಮಾಡರ್ನ್ ಹುಡುಗಿಯರನ್ನು ಆವರಿಸಿಕೊಂಡಿದೆ. ಕೆಲವು ಚಿಂದಿ ಉಡುಗೆಯಂತೆ ಕಂಡರೇ, ಇನ್ನು ಕೆಲವು ಫ್ಯಾಷೆನಬಲ್ ಪ್ಯಾಂಟ್‌ನಂತೆ ಕಾಣಬಹುದು. ಇದು ಆಯ್ಕೆ ಮಾಡುವವರ ಹಾಗೂ ಧರಿಸುವವರ ಮೇಲೆ ನಿರ್ಧರಿತವಾಗಿರುತ್ತದೆ. ಇದಕ್ಕೆ ಪೂರಕ ಎಂಬಂತೆ, ಇಂದಿನ ಜೆನ್ ಜಿ ಹುಡುಗಿಯರ ಫೇವರೇಟ್ ವಾರ್ಡ್ರೋಬ್ ಲಿಸ್ಟ್‌ನಲ್ಲೂ ಇವು ಸ್ಥಾನ ಪಡೆದುಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಟೊರ್ನ್ ಪ್ಯಾಂಟ್ ಆಯ್ಕೆ ಹೀಗಿರಲಿ
ಟೊರ್ನ್ ಪ್ಯಾಂಟ್ ಆಯ್ಕೆ ಮಾಡುವಾಗ ಮೊದಲು ಆ ಪ್ಯಾಂಟ್‌ನ ವಿನ್ಯಾಸ ಅದರಲ್ಲೂ, ಯಾವ ಮಟ್ಟಿಗೆ ಟೊರ್ನ್ ಆಗಿದೆ ಎಂಬುದನ್ನು ಮೊದಲು ಗಮನಿಸಬೇಕು. ಯಾವ ಭಾಗದಲ್ಲಿ ಈ ಟೊರ್ನ್ ವಿನ್ಯಾಸವಿದೆ. ಕಾಲಿನ ಭಾಗದಲ್ಲಾದರೇ ಓಕೆ. ಅದೇ ತೊಡೆ ಅಥವಾ ಹಿಂಭಾಗದಲ್ಲಿ ಇದ್ದರೇ ಖರೀಸಬೇಡಿ. ಇದ್ದರೂ ಧರಿಸುವುದನ್ನು ಆವಾಯ್ಡ್ ಮಾಡಿ. ಇದು ನಿಮ್ಮನ್ನು ಇತರರ ಮುಂದೆ ಮುಜುಗರಕ್ಕೆ ಈಡುಮಾಡಬಹುದು.
ಸಂದರ್ಭಕ್ಕೆ ತಕ್ಕಂತೆ ಧರಿಸಿ
ಯಾವುದೇ ಟ್ರೆಡಿಷನಲ್ ಕಾರ್ಯಕ್ರಮಕ್ಕೆ ಇವನ್ನು ಧರಿಸಬೇಡಿ. ಅದರಲ್ಲೂ ಶುಭ ಸಮಾರಂಭಗಳಲ್ಲಿ ಈ ಪ್ಯಾಂಟ್‌ನಲ್ಲಿ ಕಾಣಿಸಿಕೊಳ್ಳಲೇಬೇಡಿ. ಹಿರಿಯರ ಸಮ್ಮುಖದಲ್ಲಿ ನಡೆಯುವ ಪ್ರೋಗ್ರಾಂಗಳಲ್ಲೂ ಕೂಡ ಇವನ್ನು ಧರಿಸಬೇಡಿ. ಅವರ ಕಂಗೆಣ್ಣಿಗೆ ನೀವು ಗುರಿಯಾಗಬೇಕಾದಿತು.
ಚಿಂದಿ ಚಿಂದಿಯಾಗಿರುವ ಟೊರ್ನ್ ಪ್ಯಾಂಟ್ ಬೇಡ
ಫ್ಯಾಷನ್‌ನಲ್ಲಿದೆ ಎಂದು ಚಿಂದಿ ಚಿಂದಿಯಾಗಿರುವ ಟೊರ್ನ್ ಪ್ಯಾಂಟ್ ಆಯ್ಕೆ ಬೇಡ. ಇವು ನಿಮ್ಮನ್ನು ಬಿಕ್ಷುಕರಂತೆ ಬಿಂಬಿಸಬಹುದು. ನೀವು ಹುಡುಗ ಅಥವಾ ಹುಡುಗಿಯಾಗಿರಬಹುದು. ಅದು ಯಾರೇ ಆಗಿರಲಿ, ನಿಮ್ಮ ಘನತೆಗೆ ತಕ್ಕುದಾದುದಲ್ಲ ಎಂಬುದು ನೆನಪಿರಲಿ. ಕಚೇರಿಗಂತೂ ಧರಿಸುವುದೇ ಬೇಡ. ಆಫೀಸ್‌ನ ಮೀಟಿಂಗ್‌ಗಳಲ್ಲೂ ಇವನ್ನು ಧರಿಸಬೇಡಿ.
ಔಟಿಂಗ್ -ವೀಕೆಂಡ್‌ಗೆ ಮಾತ್ರ ಸೀಮಿತವಾಗಿರಲಿ
ಸ್ನೇಹಿತರೊಂದಿಗೆ ಅಥವಾ ಔಟಿಂಗ್-ವೀಕೆಂಡ್ ಹೋಗುತ್ತಿದ್ದಲ್ಲಿ ಆಗ ಮಾತ್ರ ಟೊರ್ನ್ ಪ್ಯಾಂಟ್ ಧರಿಸಿ. ಇದು ಹಾಲಿಡೇ ಲುಕ್‌ಗೂ ಮ್ಯಾಚ್ ಆಗುತ್ತದೆ. ಫ್ಯಾಷೆನಬಲ್ ಆಗಿ ಕಾಣಿಸುತ್ತದೆ.
ಇದನ್ನೂ ಓದಿ: Wedding Season Hair Fashion: ವೆಡ್ಡಿಂಗ್ ಸೀಸನ್‌ನಲ್ಲಿ ಎಂಟ್ರಿ ನೀಡಿದ ಆರ್ಟಿಫಿಶಿಯಲ್ ಹೇರ್ ಎಕ್ಸ್‌ಟೆನ್ಷನ್ಸ್!
ಟೊರ್ನ್ ಪ್ಯಾಂಟ್ ಲೆಂಥ್
ಕೇಪ್ರಿಸ್‌ನಂತಿರುವ, ಆಂಕೆಲ್ ಲೆಂಥ್ ಅಥವಾ ಶಾರ್ಟ್ಸ್ ಟೊರ್ನ್ ಲೆಂಥ್‌ನವು ಇಂದು ಟ್ರೆಂಡ್‌ನಲ್ಲಿವೆ. ಸೀಸನ್‌ಗೆ ಹೊಂದುವಂತದ್ದನ್ನು ಸೆಲೆಕ್ಟ್ ಮಾಡಬಹುದು. ಇವಕ್ಕೆ ಸೂಕ್ತ ಟಾಪ್‌ಗಳನ್ನು ಮ್ಯಾಚ್ ಮಾಡಬಹುದು. ಒಟ್ಟಿನಲ್ಲಿ, ನಿಮ್ಮ ಪಸನಾಲಿಟಿಗೆ ಹೊಂದುವಂತದ್ದನ್ನು ಮಾತ್ರ ಧರಿಸಿ, ಕಾಣಿಸಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)