Site icon Vistara News

Sheer Puff Sleeve Blouse Fashion: ಮಹಿಳೆಯರ ಡಿಸೈನರ್‌ ಸೀರೆಗೆ ಬಂತು ಪಾರದರ್ಶಕ ಶೀರ್‌ ಪಫ್‌ ಬ್ಲೌಸ್‌ ಫ್ಯಾಷನ್‌!

Sheer Puff Sleeve Blouse Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪಾರದರ್ಶಕ ಶೀರ್‌ ಸೀರೆ ಬ್ಲೌಸ್‌ಗಳು (Sheer Puff Sleeve Blouse Fashion) ಇದೀಗ ಡಿಸೈನರ್‌ ಸೀರೆಗಳಿಗೆ ಸಾಥ್‌ ನೀಡುತ್ತಿದ್ದು, ಮಾನಿನಿಯರ ಮನಗೆದ್ದಿವೆ. ನೋಡಲು ಮನಮೋಹಕವಾಗಿ ಕಾಣುವ ಈ ರೆಟ್ರೊ ಸ್ಟೈಲ್‌ ವಿನ್ಯಾಸ ವೈವಿಧ್ಯಮಯ ಡಿಸೈನರ್‌ ಸೀರೆಗಳ ಬ್ಲೌಸ್‌ಗಳಲ್ಲಿ ಕಾಣಿಸಿಕೊಳ್ಳ್ಳತೊಡಗಿವೆ.

ರೆಟ್ರೊ ಸ್ಟೈಲ್‌ನಲ್ಲಿದ್ದ ಬ್ಲೌಸ್‌ಗಳಿವು

“ಈ ಹಿಂದೆ ರೇಷ್ಮೆ ಸೀರೆಗಳಿಗೆ ಮ್ಯಾಚ್‌ ಮಾಡಲಾಗುತ್ತಿದ್ದ ಪಫ್‌ ಬ್ಲೌಸ್‌ಗಳು ಇದೀಗ ಕೊಂಚ ರೂಪ ಬದಲಿಸಿಕೊಂಡು ಪಾರದರ್ಶಕ ಡಿಸೈನರ್‌ ಸೀರೆಗಳ ಬ್ಲೌಸ್‌ಗಳಿಗೆ ಶೀರ್‌ ವಿನ್ಯಾಸದಲ್ಲಿ ಜೊತೆಯಾಗುತ್ತಿವೆ. ಒಂದೇ ಶೇಡ್‌ನದ್ದಾದರೂ ನೋಡಲು ಆಕರ್ಷಕವಾಗಿ ಕಾಣುವ ಈ ಮ್ಯಾಚಿಂಗ್‌ ಕಾನ್ಸೆಪ್ಟ್‌ ಸದ್ಯಕ್ಕೆ ಮಹಿಳೆಯರ ನೆಚ್ಚಿನ ಡಿಸೈನ್‌ನಲ್ಲಿ ಸೇರಿವೆ. ರೆಟ್ರೊ ಸ್ಟೈಲ್‌ನಲ್ಲಿದ್ದ ಈ ಬ್ಲೌಸ್‌ ಡಿಸೈನ್‌ ಇದೀಗ ಈ ಸೀಸನ್‌ನಲ್ಲಿ ಸೇರಿಕೊಂಡಿವೆ” ಎನ್ನುತ್ತಾರೆ ಡಿಸೈನರ್‌ ರಾಶಿ. ಅವರ ಪ್ರಕಾರ, ಶೀರ್‌ ಪಫ್‌ ಸೀರೆ ಬ್ಲೌಸ್‌ಗಳು ಗ್ಲಾಮರಸ್‌ ಲುಕ್‌ ನೀಡುತ್ತವೆ.

ಏನಿದು ಶೀರ್‌ ಪಫ್‌ ಬ್ಲೌಸ್‌

ಪಾರದರ್ಶಕವಾಗಿರುವ ಸ್ಲೀವ್‌ ವಿನ್ಯಾಸವೇ ಶೀರ್‌ ಬ್ಲೌಸ್‌ನ ವಿಶೇಷತೆ. ಮೊದಲೆಲ್ಲಾ ದಪ್ಪನೆಯ ಫ್ಯಾಬ್ರಿಕ್‌ನ ಸೀರೆಗಳಲ್ಲಿ ಮಾತ್ರ ಪಫ್‌ ವಿನ್ಯಾಸ ಕಂಡು ಬರುತ್ತಿತ್ತು. ಇದೀಗ ಸ್ಕಿನ್‌ ಕಾಣಿಸುವಂತಹ ಪಾರದರ್ಶಕ ಫ್ಯಾಬ್ರಿಕ್‌ನ ಸೀರೆಯ ಬ್ಲೌಸ್‌ಗಳಲ್ಲಿ ಟ್ರೆಂಡಿಯಾಗಿದೆ. ಹಾಗಾಗಿ ಇದನ್ನು ಶೀರ್‌ ಪಫ್‌ ಬ್ಲೌಸ್‌ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಸೀರೆ ಬ್ಲೌಸ್‌ ವಿನ್ಯಾಸಕಾರರು. ತೆಳುವಾದ ಸೀರೆಯಲ್ಲೆ ದೊರೆಯುವ ಬ್ಲೌಸ್‌ ಪೀಸ್‌ನಿಂದಲೇ ಇದನ್ನು ಹೊಲೆಯಲಾಗಿರುತ್ತದೆ. ಹಾಗಾಗಿ ಇವು ಮ್ಯಾಚ್‌ ಆಗುವುದರೊಂದಿಗೆ ಸೀರೆಗೆ ಕಂಪ್ಲೀಟ್‌ ಮಾನೋಕ್ರೋಮ್‌ ಶೇಡ್‌ ನೀಡುತ್ತವೆ ಎನ್ನುತ್ತಾರೆ.

ಡಿಸೈನರ್‌ ಸೀರೆಗಳಿಗೆ ಆಕರ್ಷಕ ಲುಕ್‌

ಹಳೆಯ ಡಿಸೈನರ್‌ ಸೀರೆಗಳಿಗೂ ಅದೇ ವರ್ಣದ ತೆಳುವಾದ ಫ್ಯಾಬ್ರಿಕ್‌ನಿಂದ ಶೀರ್‌ ಪಫ್‌ ಬ್ಲೌಸ್‌ ಹೊಲೆಸಿ ಹೊಸ ಲುಕ್‌ ನೀಡಬಹುದು. ಇದು ರೆಟ್ರೊ ಲುಕ್‌ ಆದರೂ ನೋಡಲು ಡಿಫರೆಂಟ್‌ ಆಗಿ ಕಾಣಿಸುತ್ತದೆ.

ಶೀರ್‌ ಪಫ್‌ ಬ್ಲೌಸ್‌ ಪ್ರಿಯರಿಗೆ 5 ಟಿಪ್ಸ್

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Winter Wedding Fashion: ವೆಡ್ಡಿಂಗ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಥ್ನಿಕ್ ಲೇಯರ್ ಕೋ ಆರ್ಡ್ ಸೂಟ್ !

Exit mobile version