ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಡಿಸೈನರ್ ಕಾಟನ್ ಬ್ಲೌಸ್‌ಗಳ ಕಾಲ! ಹೌದು, ಬೇಸಿಗೆ ಕಾಲಿಡುತ್ತಿದ್ದಂತೆ, ವೈವಿಧ್ಯಮಯ ಡಿಸೈನರ್ ಬ್ಲೌಸ್‌ಗಳು (Summer Fashion) ಟ್ರೆಂಡಿಯಾಗಿದ್ದು, ಮಾನಿನಿಯರನ್ನು ಸವಾರಿ ಮಾಡತೊಡಗಿವೆ. ರೇಷ್ಮೆ ಫ್ಯಾಬ್ರಿಕ್‌ನಲ್ಲಿರುವ ಡಿಸೈನಿಂಗ್‌ಗೆ ಸರಿಸಾಟಿ ಎಂಬಂತೆ, ಲೆಕ್ಕವಿಲ್ಲದಷ್ಟು ಬಗೆಯವು, ಊಹೆಗೂ ಮೀರಿದ ಡಿಸೈನ್‌ನವು ಕಾಟನ್ ಫ್ಯಾಬ್ರಿಕ್‌ನಲ್ಲಿ ಎಂಟ್ರಿ ನೀಡಿವೆ. ಇನ್ನು, ಧರಿಸಿದಾಗ ಈ ಸೀಸನ್‌ಗೆ ಹೊಂದುತ್ತವೆ, ಮಾತ್ರವಲ್ಲದೇ, ನೋಡಲು ಆಕರ್ಷಕವಾಗಿ ಕಾಣಿಸುತ್ತವೆ.
ಬೇಸಿಗೆಗೆ ತಕ್ಕ ಡಿಸೈನರ್ ಕಾಟನ್ ಬ್ಲೌಸ್‌ಗಳು
ಬೇಸಿಗೆಯ ಬಿಸಿಲಿನಲ್ಲಿ ಸೀರೆಯೊಂದಿಗೆ ಇವನ್ನು ಧರಿಸಿದಾಗ ಇವು ನೋಡಲು ಚೆನ್ನಾಗಿ ಕಾಣಿಸುವುದು ಮಾತ್ರವಲ್ಲ, ಆರಾಮ ಎಂದೆನಿಸುತ್ತವೆ. ಯಾಕೆಂದರೇ, ಧರಿಸಿದಾಗ ಇವು ಗಾಳಿಯಾಡುತ್ತವೆ. ಸಿಂಥೆಟಿಕ್ ಫ್ಯಾಬ್ರಿಕ್‌ನಂತೆ ಉಸಿರುಗಟ್ಟಿಸುವುದಿಲ್ಲ! ಅಲ್ಲದೇ, ಬೆವರು ಕೂಡ ಇಳಿಯುವುದಿಲ್ಲ! ಬ್ರಿಥೆಬಲ್ ಕಾಟನ್ ಆಗಿರುವುದರಿಂದ ಕಂಫರ್ಟಬಲ್ ಎಂದೆನಿಸುತ್ತದೆ ಎನ್ನುತ್ತಾರೆ ಡಿಸೈನರ್ ಕಾಟನ್ ಬ್ಲೌಸ್ ಎಕ್ಸ್‌ಫರ್ಟ್ ಮಧು ಸದಾಶಿವ್. ಅವರ ಪ್ರಕಾರ, ಇತ್ತೀಚೆಗೆ ಮಹಿಳೆಯರು ಬೇಸಿಗೆಯಲ್ಲಿ ಡಿಸೈನ್‌ಗಳಿಗೆ ಆದ್ಯತೆ ನೀಡುವುದರೊಂದಿಗೆ ಕಂಫರ್ಟಬಲ್ ಬ್ಲೌಸ್‌ಗಳಿಗೂ ಮಾನ್ಯತೆ ನೀಡುತ್ತಾರೆ. ಹಾಗಾಗಿ ಕಾಟನ್ ಡಿಸೈನರ್ ಬ್ಲೌಸ್‌ಗಳ ಡಿಮ್ಯಾಂಡ್ ಮೊದಲಿಗಿಂತಲೂ ಹೆಚ್ಚಾಗಿದೆ ಎನ್ನುತ್ತಾರೆ.
ಗ್ರ್ಯಾಂಡ್ ಲುಕ್ ನೀಡುವ ಗ್ಲೇಝ್ ಕಾಟನ್ ಬ್ಲೌಸ್
ಸಿಂಥೆಟಿಕ್ ಡಿಸೈನರ್ ಬ್ಲೌಸ್‌ನಂತೆಯೇ ಕಾಣಿಸುವ ಗ್ಲೇಝ್ ಕಾಟನ್ ಫ್ಯಾಬ್ರಿಕ್‌ನ ಡಿಸೈನರ್ ಬ್ಲೌಸ್‌ಗಳು ಇಂದು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇವು ನೋಡಲು ಗ್ರ್ಯಾಂಡ್ ಲುಕ್ ನೀಡುತ್ತವೆ. ಇನ್ನು ತಂಜಾವೂರು ಪೇಂಟಿಂಗ್ ಮಾಡಿದಂತಹ ಹ್ಯಾಂಡ್ ವರ್ಕ್ ಇರುವಂತಹ ಬ್ಲೌಸ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಅಲ್ಲದೇ, ಹ್ಯಾಂಡ್ ಎಂಬ್ರಾಯ್ಡರಿ ಇರುವಂತವು, ಮೈಕಾ-ಮಿರರ್ ಶೈಲಿಯವು ಯುವತಿಯರ ಮನ ಗೆದ್ದಿವೆ ಎಂದು ವಿವರಿಸುತ್ತಾರೆ ಮಧು.
ಕಾಂಟ್ರಾಸ್ಟ್ ಮ್ಯಾಚಿಂಗ್ ಬ್ಲೌಸ್‌ಗಳಿವು
“ಡಿಸೈನರ್ ಕಾಟನ್ ಬ್ಲೌಸ್‌ಗಳ ಮತ್ತೊಂದು ಹೆಗ್ಗಳಿಕೆ. ಇವನ್ನು ಕಾಂಟ್ರಾಸ್ಟ್ ಶೇಡ್‌ಗೆ ಮ್ಯಾಚ್ ಮಾಡಬಹುದು ಹಾಗೂ ಮಿಸ್ ಮ್ಯಾಚ್ ಮಾಡಿಯೂ ಧರಿಸಬಹುದು. ಈ ಟ್ರೆಂಡ್ ಇದೀಗ ಪ್ರಚಲಿತದಲ್ಲಿದೆ. ಇದು ಈ ಜನರೇಷನ್ ಯುವತಿಯರ ಸೀರೆ-ಬ್ಲೌಸ್ ಫ್ಯಾಷನ್‌ನಲ್ಲಿದೆ” ಎನ್ನುತ್ತಾರೆ ವಸ್ತ್ರ ಬೋಟಿಕ್‌ನ ಭಾಗ್ಯ ಕೊಟ್ರೇಶ್.
ಕಾಟನ್ ಡಿಸೈನರ್ ಬ್ಲೌಸ್‌ಗಳ ಬಗ್ಗೆ ತಿಳಿದರಬೇಕಾದ ಅಂಶಗಳು
- ಧರಿಸಿದಾಗ ಕೂಲ್ ಎನಿಸುವ ಈ ಡಿಸೈನರ್ ಕಾಟನ್ ಬ್ಲೌಸ್ಗಳನ್ನು ಮನೆಯಲ್ಲೆ ಹ್ಯಾಂಡ್ ವಾಶ್ ಮಾಡಿ.
- ಗ್ರ್ಯಾಂಡ್ ಬ್ಲೌಸ್ ಧರಿಸಿದರೂ ಬೆವರುವುದು ಕಡಿಮೆ.
- ನೋಡಲು ಆಕರ್ಷಕವಾಗಿ ಕಾಣುವ ಇವನ್ನು ಧರಿಸಿದ ನಂತರ ಗಾಳಿಯಲ್ಲಿ ಒಣಗಿ ಹಾಕಬೇಕು.
- ಪೇಂಟಿಂಗ್ ಇರುವಂತವನ್ನು ಹೆಚ್ಚು ಉಜ್ಜಿ ಉಜ್ಜಿ ವಾಶ್ ಮಾಡಬಾರದು.
- ಸೀರೆಯೊಂದಿಗೆ ಇರಿಸುವ ಬದಲು ಪ್ರತ್ಯೇಕವಾಗಿ ಬ್ಲೌಸ್ ಪೌಚ್ಗಳಲ್ಲಿ ಇರಿಸುವುದು ಉತ್ತಮ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Lakme Fashion Week 2024: ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಸಂಚಲನ ಮೂಡಿಸಿದ ಸಸ್ಟೈನಬಲ್ ಫ್ಯಾಷನ್