-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡೆನಿಮ್ ಗೌನ್ ಹಾಗೂ ಲಾಂಗ್ ಮಿಡಿ ಫ್ರಾಕ್‌ಗಳು ಮಾನ್ಸೂನ್ ಫ್ಯಾಷನ್‌ಗೆ ಲಗ್ಗೆ ಇಟ್ಟಿವೆ. ಇದೇನಿದು? ಡೆನಿಮ್‌ನಲ್ಲಿ ಗೌನ್ ಹಾಗೂ ಲಾಂಗ್ ಫ್ರಾಕಾ? ಎಂದು ಹುಬ್ಬೇರಿಸುತ್ತಿದ್ದೀರಾ! ಹೌದು. ಈ ಸೀಸನ್‌ನಲ್ಲಿ ಭಾರವಿಲ್ಲದ ಲೈಟ್‌ವೈಟ್ ಡೆನಿಮ್ ಗೌನ್‌ಗಳು ಕಾಲಿಟ್ಟಿದ್ದು, ಹುಡುಗಿಯರನ್ನು ಹಾಗೂ ಯುವತಿಯರನ್ನುಬರ ಸೆಳೆದಿವೆ.
ಎಂದಿನಂತೆ, ಜೆನ್ ಜಿ ಹುಡುಗಿಯರಿಗೆ ಪ್ರಿಯವಾಗುವಂತಹ ಗ್ಲಾಮರಸ್ ಲುಕ್ ಇರುವ ಸಿಂಪಲ್ ಕಟೌಟ್ ಗೌನ್‌ಗಳು ಹಾಗೂ ಸ್ಲಿಟ್ ಶಾರ್ಟ್, ಲಾಂಗ್ ಗೌನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಇನ್ನು ಉದ್ಯೋಗಸ್ಥ ಮಹಿಳೆಯರಿಗೂ ಪ್ರಿಯವಾಗುವಂತಹ ವಿನ್ಯಾಸದ ಫುಲ್ ಲೆಂಥ್ ಹಾಗೂ ಮಿಡಿ ಸ್ಟೈಲ್ ಗೌನ್‌ಗಳು ಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಸಿಂಗಲ್ ಪೀಸ್ ಡೆನಿಮ್ ಡ್ರೆಸ್
ಕೇವಲ ಜಾಕೆಟ್, ಪ್ಯಾಂಟ್ ಹಾಗೂ ಕ್ರಾಪ್ ಟಾಪ್‌ಗೆ ಸೀಮಿತವಾಗಿದ್ದ, ಈ ಫ್ಯಾಷನ್ ಇದೀಗ ಒಂದು ಹೆಜ್ಜೆ ಮುಂದೆ ಹೋಗಿದೆ. ಆರಾಮವಾಗಿ ಧರಿಸಬಹುದಾದ ವಿನ್ಯಾಸದಲ್ಲಿ ಅದರಲ್ಲೂ ಸಿಂಗಲ್ ಪೀಸ್ ಡ್ರೆಸ್ ಶೈಲಿಯಲ್ಲಿ ಬಿಡುಗಡೆಗೊಂಡಿವೆ. ಇದು ಸ್ತ್ರೀಯರನ್ನು ಆಕರ್ಷಿಸಿದ್ದು, ನೋಡಲು ಭಿನ್ನ-ವಿಭಿನ್ನ ಡಿಸೈನ್‌ಗಳಲ್ಲಿ ದೊರಕುತ್ತಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಯಾವುದೇ ಬಾಡಿ ಮಾಸ್ ಇಂಡೆಕ್ಸ್ ಹೊಂದಿರುವವರಿಗೂ ಕೂಡ ಫಿಟ್ಟಿಂಗ್‌ನಲ್ಲಿ ಬಂದಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಯಾರಿಗೆ ಯಾವುದು ?
ಮಾನ್ಸೂನ್ ಸೀಸನ್‌ನಲ್ಲಿ ಆದಷ್ಟೂ ತೀರಾ ಲಾಂಗ್ ಅಥವಾ ಪಾದಗಳನ್ನು ಮುಟ್ಟುವಂತಹ ಡೆನಿಮ್ ಸಿಂಗಲ್ ಪೀಸ್ ಡ್ರೆಸ್ ಆಯ್ಕೆ ಬೇಡ. ಉದ್ದವಿರುವವರು ಆದಷ್ಟೂ ತ್ರೀ ಫೋರ್ತ್ ಡೆನಿಮ್ ಸ್ಲಿಟ್ ಗೌನ್ ಅಥವಾ ಫ್ರಾಕ್ ಆಯ್ಕೆ ಮಾಡಬಹುದು. ಇನ್ನು ಪ್ಲಂಪಿಯಾಗಿರುವವರು ಹೆಚ್ಚು ವಿನ್ಯಾಸವಿಲ್ಲದ ಎ ಲೈನ್ ಡೆನಿಮ್ ಗೌನ್ ಅಥವಾ ಫ್ರಾಕ್ ಧರಿಸುವುದು ಬೆಸ್ಟ್. ಇದು ಸ್ಲೀಕ್ ಲುಕ್ ನೀಡುತ್ತದೆ. ಇನ್ನು ಕುಳ್ಳಗಿರುವವರು. ಶಾರ್ಟ್ ಡೆನಿಮ್ ಡಿವೈಡೆಡ್ ಡಿಸೈನ್ ಇರುವಂತಹ ಇಲ್ಲವೇ ಫ್ರಿಲ್ ಫ್ಲೇರ್ ಲಾಂಗ್ ಕುರ್ತಾದಂತೆ ಬಿಂಬಿಸುವ ಡೆನಿಮ್ ಗೌನ್ ಸೆಲೆಕ್ಟ್ ಮಾಡುವುದು ಉತ್ತಮ. ಇದು ಉದ್ದನಾಗಿರುವಂತೆ ಬಿಂಬಿಸುತ್ತದೆ.
ಇದನ್ನೂ ಓದಿ : Monsoon Food: ಮಳೆಗಾಲದಲ್ಲಿ ನಿದ್ದೆ ಹೊಡೆದೋಡಿಸಬೇಕೆ? ಹಾಗಾದರೆ ಇವನ್ನೆಲ್ಲ ಸೇವಿಸಬಹುದು!
ಡೆನಿಮ್ ಗೌನ್/ಫ್ರಾಕ್ ಸ್ಟೈಲಿಂಗ್
- · ಫಂಕಿ ಲುಕ್ಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ.
- · ಎಥ್ನಿಕ್ ಲುಕ್ ನೀಡುವ ಸಿಂಗಾರ ಬೇಡ.
- · ಸಿಂಪಲ್ ಮೇಕಪ್ ಮಾಡಿ ನೋಡಿ.
- · ಹೇರ್ಸ್ಟೈಲ್ ಲುಕ್ಗೆ ಮ್ಯಾಚ್ ಆಗಬೇಕು.
- · ಡಿಸೈನರ್ ಸ್ಲೀವ್ನವು ಯಂಗ್ ಲುಕ್ ನೀಡುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)