-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪರ್ಫೆಕ್ಟ್ ಟ್ವಿನ್ನಿಂಗ್ ಫ್ಯಾಷನ್‌ಗೆ (Twinning Fashion) ಇಲ್ಲಿದೆ 5 ಸಿಂಪಲ್ ಐಡಿಯಾ. ಹೌದು, ಯಾರೇ ಟ್ವಿನ್ನಿಂಗ್ ಮಾಡಿದಾಗ ಅದನ್ನು ನೋಡಿದವರಿಗೆ ಈ ಫ್ಯಾಷನ್ ಮಾಡುವುದು ಸುಲಭ ಎಂದೆನಿಸಬಹುದು. ಆದರೆ, ಇದಕ್ಕೂ ಒಂದಿಷ್ಟು ಫ್ಯಾಷನ್ ಹಾಗೂ ಸ್ಟೈಲಿಂಗ್ ರೂಲ್ಸ್‌ಗಳಿವೆ. ಅವನ್ನು ಪಾಲಿಸಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು ಈ ಕುರಿತಂತೆ ಒಂದೈದು ಐಡಿಯಾ ನೀಡಿದ್ದಾರೆ.
ಒಂದೇ ಬಗೆಯ ಡ್ರೆಸ್ಕೋಡ್ ಆಯ್ಕೆ
ಟ್ವಿನ್ನಿಂಗ್ ಮಾಡಲು ಬಯಸುವ ಸಹೋದರಿಯರು, ಸ್ನೇಹಿತರು ಅಥವಾ ಯಾರೇ ಆಗಲಿ ಒಂದೇ ಬಗೆಯ ಡ್ರೆಸ್ ಕೋಡ್ ಆಯ್ಕೆ ಮಾಡಬೇಕು. ನೋಡಲು ಒಂದೇ ಶೈಲಿ ಹಾಗೂ ಬಣ್ಣದ್ದಾಗಿರಬೇಕು. ಡಿಸೈನ್ ಕೂಡ ಸೇಮ್ ಟು ಸೇಮ್ ಆಗಿದ್ದರಂತೂ, ಪರ್ಫೆಕ್ಟ್ ಟ್ವಿನ್ನಿಂಗ್ ಎಂದನಿಸಿಕೊಳ್ಳುವುದು.
ಟ್ವಿನ್ನಿಂಗ್‌ಗೆ ಮೇಕಪ್ ಸಾಥ್
ಒಂದೇ ಬಗೆಯ ಡ್ರೆಸ್ ಧರಿಸಿ ಟ್ವಿನ್ನಿಂಗ್ ಮಾಡಿದರೇ ಸಾಲದು. ಮುಖದ ಮೇಕಪ್ ಕೂಡ ಹೊಂದಬೇಕು. ಒಬ್ಬರು ಸಿಂಪಲ್ ಮೇಕಪ್ ಮತ್ತೊಬ್ಬರು ಮಿನೆರಲ್ ಮೇಕಪ್, ಇಲ್ಲವೇ ಗ್ರ್ಯಾಂಡ್ ಮೇಕಪ್ ಮಾಡಿದಲ್ಲಿ, ನೋಡುಗರಿಗೆ ಒಂದೇ ಬಗೆಯದ್ದಾಗಿ ಕಾಣದು. ವಿಭಿನ್ನವಾಗಿ ಕಾಣಿಸಬಹುದು. ಹಾಗಾಗಿ ಟ್ವಿನ್ನಿಂಗ್ ಮಾಡುವವರು ಒಂದೇ ಬಗೆಯ ಮೇಕಪ್ ಮಾಡುವುದು ಉತ್ತಮ. ಆಕರ್ಷಕವಾಗಿ ಕಾಣಿಸುವುದು.
ಹೇರ್‌ಸ್ಟೈಲ್ ಮ್ಯಾಚಿಂಗ್
ಡ್ರೆಸ್‌ಕೋಡ್, ಮೇಕಪ್ ಜೊತೆಜೊತೆಗೆ ಹೇರ್‌ಸ್ಟೈಲ್ ಕೂಡ ಇವೆಲ್ಲಕ್ಕೂ ಮ್ಯಾಚಿಂಗ್ ಆಗಬೇಕು. ಆಗ ಟ್ವಿನ್ನಿಂಗ್ ಕಾನ್ಸೆಪ್ಟ್ ಚೆನ್ನಾಗಿ ಕಾಣಿಸುವುದು. ಅದು ಯಾವುದೇ ಬಗೆಯ ಹೇರ್‌ಸ್ಟೈಲ್ ಆಗಬಹುದು. ಇಬ್ಬರದು ಸೇಮ್ ಟು ಸೇಮ್ ಹೇರ್‌ಸ್ಟೈಲ್ ಆಗಿದ್ದರೇ ಸಾಕು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಆಕ್ಸೆಸರೀಸ್ ಒಂದೇ ಬಗೆಯದ್ದಾಗಿರಲಿ
ಉಡುಪು, ಮೇಕಪ್, ಹೇರ್‌ಸ್ಟೈಲ್ ಇವೆಲ್ಲದರ ಜೊತೆಗೆ ಹೊಂದುವಂತೆ ಧರಿಸುವ ಆಕ್ಸೆಸರೀಸ್ ಆಯಾ ಡ್ರೆಸ್‌ಕೋಡ್‌ಗೆ ಸರಿಯಾದಲ್ಲಿ ಟ್ವಿನ್ನಿಂಗ್‌ಗೆ ಫುಲ್ ಮಾರ್ಕ್ಸ್ ದೊರೆತಂತೆ. ಸ್ಟೇಟ್‌ಮೆಂಟ್ ಜ್ಯುವೆಲರಿಗಳು ಈ ಟ್ವಿನ್ನಿಂಗ್ ಡ್ರೆಸ್‌ಕೋಡ್‌ಗೆ ಬೆಸ್ಟ್ ಜ್ಯುವೆಲರಿಗಳು ಎನ್ನುತ್ತಾರೆ ಡಿಸೈನರ್ಸ್.
ಫೋಟೋಶೂಟ್‌ಗೆ ತಕ್ಕಂತೆ ಪೋಸ್
ಟ್ವಿನ್ನಿಂಗ್ ಮಾಡುವವರು ಫ್ಯಾಷನೆಬಲ್ ಆಗಿ ಕಾಣಿಸಿಕೊಳ್ಳುವುದು ಮಾತ್ರ ಮುಖ್ಯವಲ್ಲ, ಅದರ ಜೊತೆಗೆ ಫೋಟೋಗಳಿಗೆ ಪೋಸ್ ನೀಡುವಾಗ ಇಬ್ಬರ ಮೇಕೋವರ್‌ನಿಂದಿಡಿದು ಧರಿಸಿದ ಡ್ರೆಸ್ ಹಾಗೂ ಎಲ್ಲವೂ ಒಂದೇ ಬಗೆಯದ್ದಾಗಿ ಬಿಂಬಿಸಲು, ಒಂದೇ ಬಗೆಯ ಪೋಸ್ ನೀಡುವುದು ಮುಖ್ಯ ಎಂಬುದು ಸ್ಟೈಲಿಸ್ಟ್ ರಿಂಕು ಅಭಿಪ್ರಾಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Floral Jumpsuit fashion: ಔಟಿಂಗ್‌ಗೆ ಪರ್ಫೆಕ್ಟ್ ಔಟ್ ಫಿಟ್ ಈ ಫ್ಲೋರಲ್ ಜಂಪ್ ಸೂಟ್!