Site icon Vistara News

Ugadi Ramzan Fashion: ರಂಜಾನ್-ಯುಗಾದಿ ಫೆಸ್ಟೀವ್‌ ಸೀಸನ್‌ನಲ್ಲಿ ಒಟ್ಟೊಟ್ಟಿಗೆ ಲಗ್ಗೆ ಇಟ್ಟ ಗ್ರ್ಯಾಂಡ್‌ ಎಥ್ನಿಕ್‌ವೇರ್ಸ್

Ugadi Ramzan Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಫೆಸ್ಟೀವ್‌ ಸೀಸನ್‌ನಲ್ಲಿ ಊಹೆಗೂ ಮೀರಿದ ಡಿಸೈನ್‌ಗಳಲ್ಲಿ ನಾನಾ ಬಗೆಯ ಗ್ರ್ಯಾಂಡ್‌ ಎಥ್ನಿಕ್‌ವೇರ್ಸ್ ಎಂಟ್ರಿ ನೀಡಿವೆ. ಹೌದು, ಇದಕ್ಕೆ ಕಾರಣವೂ ಇದೆ. ರಂಜಾನ್‌ ಹಾಗೂ ಯುಗಾದಿ (Ugadi Ramzan Fashion) ಹಬ್ಬ ಒಂದೇ ವಾರದಲ್ಲಿ ಬಂದಿರುವುದು. ಪರಿಣಾಮ, ಸದ್ಯಕ್ಕೆ ಕ್ಯಾಶುವಲ್‌ ಹಾಗೂ ವೆಸ್ಟರ್ನ್‌ವೇರ್‌ಗಳು ಸೈಡಿಗೆ ಸರಿದಿದ್ದು, ಲೆಕ್ಕವಿಲ್ಲದಷ್ಟು ಬಗೆಯ ಎಥ್ನಿಕ್‌ ಫ್ಯಾಷನ್‌ವೇರ್‌ಗಳು ಟ್ರೆಂಡಿಯಾಗಿವೆ.

ಊಹೆಗೂ ಮೀರಿದ ಡಿಸೈನರ್‌ವೇರ್ಸ್

“ರಂಜಾನ್‌ ಹಾಗೂ ಯುಗಾದಿ ಹಬ್ಬ ಒಂದೇ ವಾರದಲ್ಲಿ ಆಚರಿಸುತ್ತಿರುವ ಸಂಭ್ರಮ ಒಂದೆಡೆಯಾದರೇ, ಮಾರಾಟಗಾರರಿಗೆ ಸುಗ್ಗಿಯೋ ಸುಗ್ಗಿ. ಎರಡು ಹಬ್ಬಗಳ ಹಿನ್ನೆಲೆಯಲ್ಲಿ, ಅಂಗಡಿ ಹಾಗೂ ಶಾಪ್‌ಗಳಲ್ಲಿ ಬಗೆಬಗೆಯ ಎಥ್ನಿಕ್‌ವೇರ್ಸ್‌ ಹಾಗೂ ಟ್ರೆಡಿಷನಲ್‌ವೇರ್ಸ್ ಎಂಟ್ರಿ ನೀಡಿವೆ. ಇದಕ್ಕೆ ಪೂರಕ ಎಂಬಂತೆ, ಖರೀದಿಯೂ ಜೋರಾಗಿದೆ. ಪುರುಷರು, ಮಹಿಳೆಯರು ಹಾಗೂ ಮಕ್ಕಳು ಮತ್ತು ಹಿರಿಯರು ಸೇರಿದಂತೆ ಎಲ್ಲಾ ವಯಸ್ಸಿನವರಿಗೂ ವೆರೈಟಿ ಡಿಸೈನ್‌ನಲ್ಲಿ ಡಿಸೈನರ್‌ವೇರ್‌ಗಳು ಸ್ವಾಗತಿಸುತ್ತಿವೆ. ಇದರೊಂದಿಗೆ ಈ ಬೇಸಿಗೆ ಸೀಸನ್‌ಗೆ ತಕ್ಕಂತಹ ಫ್ಯಾಬ್ರಿಕ್‌ನಲ್ಲಿ ಡಿಸೈನರ್‌ವೇರ್‌ಗಳು ಬಂದಿರುವುದು ಕೂಡ ಹೊಸ ಡ್ರೆಸ್‌ಗಳ ಖರೀದಿಗೆ ಕಾರಣವಾಗಿದೆ. ಒಟ್ಟಿನಲ್ಲಿ, ಎರಡೆರಡು ಹಬ್ಬಗಳಿಗೆ ಮಾರಾಟ ಹಾಗೂ ಖರೀದಿ ಭರಾಟೆ ಎಲ್ಲೆಡೆ ಭರದಿಂದ ಸಾಗಿದೆ” ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಫರ್ಟ್ಸ್‌.

ರಂಜಾನ್‌ ಸಂಭ್ರಮಕ್ಕೆ ಹೆವ್ವಿ ಡಿಸೈನರ್‌ವೇರ್ಸ್

ಎಂದಿನಂತೆ, ಗ್ರ್ಯಾಂಡ್‌ ಲುಕ್‌ ನೀಡುವ ಹೆವ್ವಿ ಡಿಸೈನರ್‌ವೇರ್ಸ್ ರಂಜಾನ್‌ ಹಬ್ಬದ ಸಂಭ್ರಮಕ್ಕೆ ಕಾಲಿಟ್ಟಿವೆ. ಆನ್‌ಲೈನ್‌ ಮಾತ್ರವಲ್ಲ, ಆಫ್‌ಲೈನ್‌ನಲ್ಲೂ ಇವುಗಳ ಮಾರಾಟ ಭರಾಟೆ ಹೆಚ್ಚಾಗಿದೆ. ಪುರುಷರಿಗೆ ಜಗಮಗಿಸುವ ಕುರ್ತಾಗಳು ಮಕ್ಕಳಿಗೆ ಮಿನಿ ಕುರ್ತಾಗಳು ಬಂದಿದ್ದರೇ, ಮಾನಿನಿಯರಿಗೆ ಹೆವ್ವಿ ಡಿಸೈನ್‌ನ ಡಿಸೈನರ್‌ವೇರ್‌ಗಳು ಸೆಳೆದಿವೆ. ಒಂದಕ್ಕಿಂತ ಒಂದು ಸಖತ್‌ ಡಿಸೈನ್‌ನಲ್ಲಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

ಯುಗಾದಿ ಆಚರಿಸುವವರಿಗೂ ಬಂತು ಎಥ್ನಿಕ್‌ವೇರ್ಸ್

ಹಿಂದೂಗಳ ಹೊಸ ವರ್ಷದ ಸಂಕೇತವಾದ ಯುಗಾದಿ ಹಬ್ಬಕ್ಕೆ ಮಾಮೂಲಿನಂತೆ ಗ್ರ್ಯಾಂಡ್‌ ಹಾಗೂ ಟ್ರೆಡಿಷನಲ್‌ ಲುಕ್‌ ನೀಡುವ, ಎಥ್ನಿಕ್‌ವೇರ್ಸ್ ಆಗಮಿಸಿವೆ. ಟ್ರೆಡಿಷನಲ್‌ ಲುಕ್‌ ನೀಡುವ ಸೀರೆಗಳು, ಉದ್ದ-ಲಂಗ, ಲಂಗದಾವಣಿಯೊಂದಿಗೆ ಎಥ್ನಿಕ್‌ ರೇಷ್ಮೆಯ ಗೌನ್‌ ಈ ಬಾರಿ ವಿನೂತನ ವಿನ್ಯಾಸದಲ್ಲಿ ಆಗಮಿಸಿದ್ದು, ಹಂಗಾಮ ಎಬ್ಬಿಸಿವೆ. ಮಹಿಳೆಯರಿಗಂತೂ ಅಪ್ಷನ್‌ಗಳಿಗೆ ಲೆಕ್ಕವೇ ಇಲ್ಲ. ಆ ಮಟ್ಟಿಗೆ ಲಕ್ಷಗಟ್ಟಲೆ ಸೀರೆಗಳ ಮಹಾಪೂರವೇ ಹರಿದಿದೆ. ಪುರುಷರಿಗೆ ಮಾತ್ರ ಎಂದಿನಂತೆ ಶರ್ಟ್–ಶಲ್ಯ,-ಪಂಚೆ ಹಾಗೂ ಸಿಂಪಲ್‌ ಕುರ್ತಾಗಳು ಒಂದಿಷ್ಟು ಹೊಸ ಡಿಸೈನ್‌ನಲ್ಲಿ ಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಜತ್‌ ಹಾಗೂ ದೀಕ್ಷಾ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Ramadan Shopping: ರಂಜಾನ್‌ ಶಾಪಿಂಗ್‌ನಲ್ಲಿ ಹೊಸ ಹೊಸ ಫ್ಯಾಷನ್ ಕಲರವ

Exit mobile version