Site icon Vistara News

Valentines Day: ಮಾಲ್‌ಗಳಲ್ಲಿ ಆರಂಭವಾಯ್ತು ವ್ಯಾಲೆಂಟೈನ್ಸ್ ಡೇ ಶಾಪಿಂಗ್‌!

Valentines Day

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾಲ್‌ಗಳಲ್ಲಿ ಈಗಾಗಲೇ ವ್ಯಾಲೆಂಟೈನ್ಸ್ ಡೇ (Valentines Day) ಶಾಪಿಂಗ್‌ ಆರಂಭಗೊಂಡಿದೆ. ಈ ಸೀಸನ್‌ನಲ್ಲಿ ಕೆಲವು ಶಾಪ್‌ಗಳು ಈ ದಿನಕ್ಕೆಂದು ನಾನಾ ಬಗೆಯ ಆಫರ್‌ಗಳನ್ನು ನೀಡುತ್ತಿದೆ. ಇನ್ನು ಕೆಲವು ಶಾಪ್‌ಗಳು ರೆಡ್‌ ಶೇಡ್‌ ಔಟ್‌ಫಿಟ್‌ಗಳನ್ನು ಪ್ರದರ್ಶನ ಮಾಡಿ ಗ್ರಾಹಕರನ್ನು ಸೆಳೆಯುತ್ತಿವೆ. ಮತ್ತೆ ಕೆಲವು ಇಂತಿಷ್ಟು ಶಾಪಿಂಗ್‌ ಮಾಡಿದವರಿಗೆ ನಾನಾ ಬಗೆಯ ಗಿಫ್ಟ್ ಐಟಂಗಳನ್ನು ಉಚಿತವಾಗಿ ನೀಡುತ್ತಿವೆ. ಇನ್ನು ಹೇಗೆಲ್ಲಾ ಆಫರ್‌ಗಳು ದೊರೆಯುತ್ತಿವೆ. ಯಾವ ಬಗೆಯ ಔಟ್‌ಫಿಟ್‌ಗಳು ಪ್ರೇಮಿಗಳನ್ನು ಆಕರ್ಷಿಸುತ್ತಿವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಎಲ್ಲಿ ನೋಡಿದರೂ ರೆಡ್‌ ಕಲರ್‌ ಮೇನಿಯಾ

ಮಾಲ್‌ಗಳಲ್ಲಿ ಸಾಕಷ್ಟು ಶಾಪ್‌ಗಳು ತಮ್ಮ ಶೋಕೇಸ್‌ಗಳಲ್ಲಿ ಮ್ಯಾನಿಕ್ಯೂರ್‌ಗಳಿಗೆ ರೆಡ್‌ನ ನಾನಾ ವರ್ಣದ ಔಟ್‌ಫಿಟ್‌ಗಳನ್ನು ತೊಡಿಸಿ ಪ್ರದರ್ಶನಕ್ಕಿಟ್ಟಿವೆ. ಹೊರಗೆ ಹೋಗುವ ಗ್ರಾಹಕರು ನೋಡಿದಾಕ್ಷಣಾ ಈ ಶಾಪ್‌ಗಳಲ್ಲಿ ಪ್ರೇಮಿಗಳ ದಿನಾಚಾರಣೆಗಳನ್ನು ಆಚರಿಸುವರಿಗೆಂದು ನಾನಾ ಬಗೆಯ ಔಟ್‌ಫಿಟ್‌ಗಳು ಲಭ್ಯ ಎಂಬುದನ್ನು ಈ ಮೂಲಕ ತೋರ್ಪಡಿಸುತ್ತಿವೆ. ಇದಕ್ಕೆ ಪೂರಕ ಎಂಬಂತೆ, ರೆಡ್‌ ಟ್ರೆಂಡಿ ಡ್ರೆಸ್‌ಗಳು ಎಲ್ಲೆಡೆ ರಾರಾಜಿಸುತ್ತಿವೆ ಎನ್ನುತ್ತಾರೆ ಶಾಪಿಂಗ್‌ ಎಕ್ಸ್ಪರ್ಟ್ ಹಾಗೂ ಸ್ಟೈಲಿಸ್ಟ್ ಜಾನ್‌ ಹಾಗೂ ದಿವ್ಯಾ. ಅವರ ಪ್ರಕಾರ, ಈ ಸೀಸನ್‌ನಲ್ಲಿ ಆದಷ್ಟೂ ರೆಡ್‌ ಉಡುಪುಗಳಿಗೆ ಬೇಡಿಕೆ ಹೆಚ್ಚಾಗುತ್ತದಂತೆ.

ಸೇಲ್ಸ್ ಪ್ರಕಟಣೆಗೂ ಬಳಕೆಯಾದ ರೆಡ್‌ ಶೇಡ್‌

ಇನ್ನು ಕೆಲವು ಶಾಪ್‌ಗಳಲ್ಲಿ ಇನ್ನೂ ಸೇಲ್‌ ಮುಂದುವರೆದಿದೆ. ಹೊಸ ವರ್ಷದ ಎರಡನೇ ತಿಂಗಳು ಬಂದರೂ ಕೂಡ ಸೇಲ್ಸ್ ಮಾತ್ರ ಮುಗಿದಿಲ್ಲ. ಅಂತಹ ಅಂಗಡಿಗಳಲ್ಲಿ ಪ್ರದರ್ಶನಕ್ಕಿಡುವ ಬೊಂಬೆಗಳಿಗೆ ರೆಡ್‌ ಟೀ ಶರ್ಟ್ ಹಾಗೂ ರೆಡ್‌ ಔಟ್‌ಫಿಟ್‌ಗಳನ್ನು ಹಾಕಿ ಪ್ರಚಾರ ಮಾಡಲಾಗುತ್ತಿದೆ. ಸೇಲ್‌ನಲ್ಲೂ ವ್ಯಾಲೆಂಟೈನ್ಸ್‌ ಡೇ ಔಟ್‌ಫಿಟ್‌ ದೊರೆಯುತ್ತವೆ ಎಂಬುದರ ಸಿಗ್ನಲ್‌ ನೀಡುತ್ತದೆ ಎನ್ನುತ್ತಾರೆ ಶಾಪ್‌ವೊಂದರ ಸೇಲ್ಸ್ ಮ್ಯಾನೇಜರ್‌.

ಶಾಪಿಂಗ್‌ ಮಾಡುವವರ ಗಮನಕ್ಕೆ

ಈ ವ್ಯಾಲೆಂಟೈನ್ಸ್ ಡೇ ಸಮಯದಲ್ಲಿ ಶಾಪಿಂಗ್‌ ಮಾಡುವವರು ಆದಷ್ಟೂ ಈ ಸೀಸನ್‌ ಕಲರ್‌ನ ಔಟ್‌ಫಿಟ್‌ಗಳನ್ನು ಕೊಳ್ಳುವುದಾದಲ್ಲಿ ಆದಷ್ಟೂ ಈ ಪ್ರೇಮಿಗಳ ದಿನಾಚರಣೆ ಮುಗಿದ ನಂತರವೂ ಧರಿಸಬಹುದಾದಂತಹ ಔಟ್‌ಫಿಟ್‌ಗಳನ್ನು ಆಯ್ಕೆ ಮಾಡಿ. ಇಲ್ಲವಾದಲ್ಲಿ ಒಮ್ಮೆ ಧರಿಸಿದ ನಂತರ ಈ ಡ್ರೆಸ್‌ಗಳು ಮೂಲೆಗೆ ಸೇರಬಹುದು ಎಂದು ಟಿಪ್ಸ್ ನೀಡುತ್ತಾರೆ ಸ್ಟೈಲಿಸ್ಟ್‌ಗಳು.

ವ್ಯಾಲೆಂಟೈನ್ಸ್ ಡೇ ಶಾಪಿಂಗ್‌ ಟಿಪ್ಸ್

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Printed Drape Skirt: ಪ್ರಿಂಟೆಡ್‌ ಡ್ರೇಪ್‌ ಸ್ಕರ್ಟ್‌ನಲ್ಲೂ ಬಂತು ಕೋ ಆರ್ಡ್ ಸೆಟ್‌ !

Exit mobile version