Site icon Vistara News

Valentines week shopping: ವೀಕೆಂಡ್‌ನಲ್ಲಿ ಹೆಚ್ಚಾಯ್ತು ವ್ಯಾಲೆಂಟೈನ್ಸ್‌ ವೀಕ್‌ ಶಾಪಿಂಗ್‌ ಸಂಭ್ರಮ

Valentines week shopping

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವ್ಯಾಲೆಂಟೈನ್ಸ್‌ ವೀಕ್‌ ಹಿನ್ನೆಲೆಯಲ್ಲಿ ಇದೀಗ ಈ ವೀಕೆಂಡ್​​ನಲ್ಲಿ (Valentines week shopping) ಪ್ರೇಮಿಗಳಿಗಾಗಿ ಹಾಗೂ ಸಂಗಾತಿಗಾಗಿ ಶಾಪಿಂಗ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ಶಾಪಿಂಗ್‌ ಸೆಂಟರ್‌ಗಳು , ಮಾಲ್‌ಗಳು ಹಾಗೂ ಸ್ಟ್ರೀಟ್‌ ಶಾಪ್‌ಗಳು ಕೆಂಪು ಕೆಂಪಾಗಿ ಅಲಂಕೃತಗೊಂಡಿದ್ದು, ಗ್ರಾಹಕರನ್ನು ಸೆಳೆಯುವುದರೊಂದಿಗೆ ನಾನಾ ಬಗೆಯ ಆಫರ್ಸ್‌ಗಳನ್ನು ನೀಡುತ್ತಿವೆ.

ರೆಡ್ ಬ್ಯಾಕ್‌ಗ್ರೌಂಡ್‌ ನಲ್ಲಿ ಅಲಂಕೃತಗೊಂಡ ಶಾಪಿಂಗ್‌ ಸೆಂಟರ್‌ಗಳು

ನಗರದ ಬಹುತೇಕ ಮಾಲ್‌ಗಳಲ್ಲಿ ಇರುವ ಶಾಪಿಂಗ್‌ ಸೆಂಟರ್‌ಗಳು ಗ್ರಾಹಕರನ್ನು ಅದರಲ್ಲೂ ಪ್ರೇಮಿಗಳನ್ನು ಸೆಳೆಯಲು ರೆಡ್‌ ಬ್ಯಾಕ್‌ಗ್ರೌಂಡ್‌ ಹಾಗೂ ಅದರ ಛಾಯೆ ಇರುವಂತಹ ವಸ್ತುಗಳಿಂದ ಅಲಂಕಾರಗೊಂಡಿವೆ. ನೋಡಲು ಎಲ್ಲೆಡೆ ಕೆಂಪು ಕೆಂಪಾಗಿ ರಂಗಾಗಿರುವ ಶಾಪಿಂಗ್‌ ಮಾಲ್‌ಗಳು ಕಪಲ್‌ಗಳಿಗಾಗಿ ನಾನಾ ಬಗೆಯ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿವೆ.

ಸೆಳೆಯುತ್ತಿರುವ ಗಿಫ್ಟ್‌ ಸೆಂಟರ್‌ಗಳು

ಪ್ರೇಮಿಗಳ ದಿನಾಚರಣೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಾನಾ ಬಗೆಯ ಆಕರ್ಷಕ ಗಿಫ್ಟ್ಗಳು ಶಾಪ್‌ಗಳಿಗೆ ಲಗ್ಗೆ ಇಟ್ಟಿವೆ. ಊಹೆಗೂ ಮೀರಿದ ಕೊಡುಗೆಗಳ ರಾಶಿ ಶಾಪಿಂಗ್‌ ಪ್ರಿಯರನ್ನು ಸೆಳೆಯುತ್ತಿವೆ. ಅವುಗಳಲ್ಲಿ ಎಂದಿನಂತೆ ಕಪಲ್‌ ಡಾಲ್ಸ್‌, ಟೆಡ್ಡಿಬೇರ್ಸ್, ರೆಡ್‌ಪಿಲ್ಲೋಸ್‌, ಬ್ರೇಸ್‌ಲೆಟ್ಸ್ ಸೇರಿದಂತೆ ಮನೆಯನ್ನು ಸಿಂಗರಿಸಬಲ್ಲ ಬಗೆಬಗೆಯ ಶೋಪೀಸ್‌ಗಳು, ಡೆಕೋರೇಟಿವ್‌ ಐಟಂಗಳು ಹೊಸ ರೂಪದಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ. ಇನ್ನು ಅಲಂಕಾರಕ್ಕಾಗಿ ಬಳಸುವ ರೆಡ್‌ ಶೇಡ್‌ನ ಬಲೂನ್‌ಗಳು ಹೃದಯಾಕಾರ ಸೇರಿದಂತೆ ನಾನಾ ಶೇಪ್‌ಗಳಲ್ಲಿ ದೊರೆಯುತ್ತಿವೆ.

ಪ್ರೇಮಿಗಳಿಗೆ ಆಭರಣಗಳ ಕೊಡುಗೆ

ಇನ್ನು ಪ್ರೇಮಿಗೆ ಹಾಗೂ ಸಂಗಾತಿಗೆ ಆಭರಣಗಳನ್ನು ಕೊಡುಗೆಯಾಗಿ ಕೊಡಲು ಬಯಸುವವರಿಗೆಂದೇ ಜ್ಯುವೆಲರಿ ಶಾಪ್‌ಗಳು ನಾನಾ ಬಗೆಯ ಆಫರ್‌ಗಳನ್ನು ನೀಡುತ್ತಿವೆ. ಇವುಗಳಲ್ಲಿ ಹೆಸರು ಅಥವಾ ಇನ್ಶಿಯಲ್‌ ಬರೆದಿರುವ ಕಪಲ್‌ ಫಿಂಗರ್‌ ರಿಂಗ್ಸ್, ಚೈನ್‌ನ ಪೆಂಡೆಂಟ್‌ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.‌

ಪ್ರೇಮಿಗಳಿಗಾಗಿ ಔಟ್‌ಫಿಟ್ಸ್‌

ಇನ್ನು ವ್ಯಾಲೆಂಟೈನ್ಸ್‌ ವೀಕ್‌ ಸಂಭ್ರಮಿಸುವ ಪ್ರೇಮಿಗಳು ಹಾಗೂ ಜೋಡಿಗಳಿಗೆಂದೇ ನಾನಾ ಬಗೆಯ ವ್ಯಾಲೆಂಟೈನ್ ಕಪಲ್‌ ಔಟ್‌ಫಿಟ್‌ಗಳು ಬಿಡುಗಡೆಗೊಂಡಿವೆ. ಟ್ವಿನ್ನಿಂಗ್‌ ಮಾಡಬಹುದಾದಂತಹ ಉಡುಪುಗಳು ಲಭ್ಯ. ಇ ಜನರೇಷನ್‌ನವರಿಗೆ ಸೂಟ್‌ ಆಗುವಂತಹ ಯೂನಿಸೆಕ್ಸ್‌ ಡಿಸೈನ್‌ನವು ಎಂಟ್ರಿ ನೀಡಿದ್ದು, ಹೆಚ್ಚು ಮಾರಾಟವಾಗುತ್ತಿದೆ. ಇನ್ನು ಎಂದಿನಂತೆ ರೆಡ್‌ ಡ್ರೆಸ್‌ಗಳನ್ನು ಕೊಳ್ಳುವವರ ಸಂಖ್ಯೆಯೂ ಜಾಸ್ತಿಯಾಗಿದೆ ಎನ್ನುತ್ತಾರೆ ಮಾರಾಟಗಾರರು.

#image_title

ವ್ಯಾಲೆಂಟೈನ್ಸ್‌ ವೀಕ್‌ ಶಾಪಿಂಗ್‌ ಪ್ರಿಯರಿಗೆ ಸಲಹೆ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version