-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ವರಮಹಾಲಕ್ಷ್ಮಿ (Varamahalakshmi Festival 2024) ಹಬ್ಬದ ಸಂಭ್ರಮ ಹೆಚ್ಚಿಸಲು ಈ ಬಾರಿ ನಾನಾ ಬಗೆಯ ಬಾರ್ಡರ್ ಸೀರೆಗಳು ಫೆಸ್ಟಿವ್ ಸೀಸನ್‌ಗೆ ಲಗ್ಗೆ ಇಟ್ಟಿವೆ.
ಹಬ್ಬಕ್ಕೆ ವೈವಿಧ್ಯಮಯ ಬಾರ್ಡರ್ ಸೀರೆಗಳು
ಸಡಗರ ಸಂಭ್ರಮದಿಂದ ಆಚರಿಸುವ ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ನೆಚ್ಚಿನ ಹಬ್ಬ. ಈ ಹಬ್ಬಕ್ಕೆ ದೇವಿ ಲಕ್ಷ್ಮಿಗೆ ಸೀರೆ ಉಡಿಸಿ ಸಿಂಗರಿಸುವುದು ಮಾತ್ರವಲ್ಲ, ತಾವು ಕೂಡ ಸೀರೆಗಳನ್ನು ಉಟ್ಟು ಸಂತಸ ಪಡುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ, ಮಾನಿನಿಯರ ಬೇಡಿಕೆಗೆ ತಕ್ಕಂತೆ, ಸೀರೆ ಲೋಕವು ಲೆಕ್ಕವಿಲ್ಲದಷ್ಟು ಸೀರೆಗಳನ್ನು ಬಿಡುಗಡೆಗೊಳಿಸಿದೆ. ಅವುಗಳಲ್ಲಿ ರೇಷ್ಮೆ ಸೀರೆಗಳು ಮಾತ್ರವಲ್ಲ, ನಾನಾ ಬಗೆಯ ವೈವಿಧ್ಯಮಯ ಸೀರೆಗಳು ಸೇರಿವೆ. ಇದಕ್ಕೆ ಪೂರಕ ಎಂಬಂತೆ, ಈ ಬಾರಿ ಅತಿ ಹೆಚ್ಚು ಬಾರ್ಡರ್ ಸೀರೆಗಳು, ಅತಿ ಹೆಚ್ಚು ಕಾಂಬಿನೇಷನ್ ಹಾಗೂ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಪರಿಣಾಮ, ಲೆಕ್ಕವಿಲ್ಲದಷ್ಟು ಬಗೆಯ ವೈವಿಧ್ಯಮಯ ಫ್ಯಾಬ್ರಿಕ್‌ನಲ್ಲಿ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ ಎನ್ನುತ್ತಾರೆ ಡಿಸೈನರ್ಸ್ ಜಾನಕಿ ಹಾಗೂ ದೀಪ್‌ವೀರ್.
ಟ್ರೆಂಡಿ ಬಾರ್ಡರ್ ಸೀರೆಗಳು
ರೇಷ್ಮೆ ಬಾರ್ಡರ್ ಸೀರೆಗಳಲ್ಲಿ ಇದೀಗ ಸಿಂಗಲ್, ಡಬ್ಬಲ್, ಬಿಗ್ ಬಾರ್ಡರ್‌ನವು ಮೊದಲಿನಿಂದಲೂ ಎವರ್‌ಗ್ರೀನ್ ಟ್ರೆಂಡ್ ಲಿಸ್ಟ್‌ನಲ್ಲಿವೆ. ಇನ್ನು, ಇತರೇ ಫ್ಯಾಬ್ರಿಕ್‌ನ ಸೀರೆಗಳಲ್ಲಿ ಇದೀಗ ಗೋಲ್ಡ್ ಜರಿ ಬಾರ್ಡರ್, ಕಾಂಟ್ರಾಸ್ಟ್ ಬಾರ್ಡರ್, ಸಿಲ್ವರ್ ವರ್ಕ್ ಬಾರ್ಡರ್, ಎಂಬ್ರಾಯ್ಡರಿ ಡಿಸೈನ್ ಬಾರ್ಡರ್, ಲೇಸ್ ಡಿಸೈನ್ ಬಾರ್ಡರ್, ಫ್ಲೋರಲ್ ಬಾರ್ಡರ್, ಬುಟ್ಟಾ ವರ್ಕ್, ಟೆಂಪಲ್ ಡಿಸೈನ್ ಬಾರ್ಡರ್‌ನವು ಟ್ರೆಂಡಿಯಾಗಿವೆ. ಇನ್ನು, ಪ್ಯಾಚ್ ಬಾರ್ಡರ್, ಟ್ಯಾಸೆಲ್ಸ್ , ಮಿರರ್ ವರ್ಕ್, ಕಟ್ ವರ್ಕ್ ಬಾರ್ಡರ್ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಬಾರ್ಡರ್ ಸೀರೆಗಳು ಊಹೆಗೂ ಮೀರಿದ ಡಿಫರೆಂಟ್ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಕೆಲವಂತೂ ಯೂನಿಕ್ ಡಿಸೈನ್ ಇರುವಂತಹ ಡಿಸೈನರ್ ಬಾರ್ಡರ್ ಸೀರೆಗಳು, ಬೆರಳೆಣಿಕೆ ಲೆಕ್ಕದಲ್ಲಿ ಲಭ್ಯ. ಹಾಗಾಗಿ ಅವುಗಳ ಡಿಸೈನ್ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತವೆ ಎನ್ನುತ್ತಾರೆ ಸೀರೆ ಶಾಪ್‌ವೊಂದರ ಸೇಲ್ಸ್ ಮ್ಯಾನೇಜರ್ ವರದರಾಜು.
ಬಾರ್ಡರ್ ಸೀರೆ ಟ್ರೆಂಡಿಯಾಗಿರುವುದು ಯಾಕೆ?
ಅಂದಹಾಗೆ, ಹಬ್ಬಗಳ ಸೀಸನ್‌ನಲ್ಲಿ ಅತಿ ಹೆಚ್ಚು ವಿನ್ಯಾಸದ ಬಾರ್ಡರ್ ಸೀರೆಗಳು ಟ್ರೆಂಡಿಯಾಗುತ್ತವೆ. ಇದಕ್ಕೆ ಕಾರಣವೂ ಇದೆ. ರೇಷ್ಮೆ ಸೀರೆಯಾಗಲಿ ಅಥವಾ ಯಾವುದೇ ಸೀರೆಯಾಗಲಿ ಬಾರ್ಡರ್ ಇದ್ದಾಗ ಅವು ಟ್ರೆಡಿಷನಲ್ ಲುಕ್ ನೀಡುತ್ತವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ ರಾಮಕೃಷ್ಣ.
- ಸೀರೆಯು ಫ್ಯಾಬ್ರಿಕ್ಗೆ ತಕ್ಕಂತೆ ಬಾರ್ಡರ್ ಡಿಸೈನ್ ಅನ್ನು ಒಳಗೊಂಡಿರುತ್ತವೆ.
- ರೇಷ್ಮೆಯ ಬಾರ್ಡರ್ ಸೀರೆ ಕೊಳ್ಳುವಾಗ ಸಿಲ್ಕ್ ಮಾರ್ಕ್ ಗಮನಿಸಿ.
- ಕಂಟೆಂಪರರಿ ಬಾರ್ಡರ್ ಡಿಸೈನ್ನವು ಟ್ರೆಂಡ್ನಲ್ಲಿವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Blazer Saree Fashion: ಮಾನ್ಸೂನ್ ಸೀಸನ್ ಬ್ಲೇಜರ್ ಸೀರೆಯಲ್ಲಿ ಶ್ವೇತಾ ಚಂಗಪ್ಪ ಕಮಾಲ್