-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೆಣ್ಣು ಮಕ್ಕಳಿಗೆ ಟ್ರೆಡಿಷನಲ್ ಲುಕ್ ನೀಡುವ (Varamahalakshmi Festival Fashion) ಉದ್ದ ಲಂಗದ ಫ್ಯಾಷನ್ ಈ ಫೆಸ್ಟಿವ್ ಸೀಸನ್‌ನಲ್ಲಿ ಹೊಸ ವಿನ್ಯಾಸಗಳೊಂದಿಗೆ ಮರಳಿದೆ. ಹೌದು. ವರಮಹಾಲಕ್ಷ್ಮಿ ಹಬ್ಬ ಹೆಣ್ಣು ಮಕ್ಕಳ ಹಬ್ಬ. ಆ ದಿನದಂದು ಮಕ್ಕಳು ಹಾಗೂ ಮಹಿಳೆಯರೆಲ್ಲರೂ ಸಾಂಪ್ರದಾಯಿಕವಾಗಿ ಸಿಂಗರಿಸಿಕೊಂಡು ಹಬ್ಬ ಆಚರಿಸುವುದು ಸಂಪ್ರದಾಯ. ಇದಕ್ಕೆ ಪೂರಕ ಎಂಬಂತೆ, ನಾನಾ ಬಗೆಯ ದೇಸಿ ಲುಕ್ ನೀಡುವ ಉಡುಗೆ-ತೊಡುಗೆಗಳು ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದು, ಅವುಗಳಲ್ಲಿ ಇದೀಗ ಹೆಣ್ಣು ಮಕ್ಕಳನ್ನು ಅಂದವಾಗಿ ಬಿಂಬಿಸಬಲ್ಲ, ನಮ್ಮ ಸಂಸ್ಕೃತಿಗೆ ಸಾಥ್ ನೀಡಬಲ್ಲ ಟ್ರೆಡಿಷನಲ್ ಲುಕ್ ನೀಡುವಂತಹ ಉದ್ದ –ಲಂಗದ ಡ್ರೆಸ್‌ಗಳು ಮರಳಿವೆ.
ಹೊಸ ಲುಕ್‌ನೊಂದಿಗೆ ಉದ್ದ-ಲಂಗ ರೀ ಎಂಟ್ರಿ
ಉದ್ದ ಲಂಗ ಧರಿಸುವುದು ನಮ್ಮ ಸಂಸ್ಕೃತಿಯಲ್ಲಿ ಹೊಸತೇನಲ್ಲ! ಆದರೆ, ಇತ್ತೀಚಿನ ಹೆಣ್ಣು ಮಕ್ಕಳು ವೆಸ್ಟರ್ನ್ ಉಡುಗೆ ತೊಡುಗೆಗಳನ್ನು ಹೆಚ್ಚಾಗಿ ಪ್ರಿಫರ್ ಮಾಡುವುದರಿಂದ ಈ ಟ್ರೆಡಿಷನಲ್ ಉದ್ದ-ಲಂಗದ ಫ್ಯಾಷನ್ ಸೈಡಿಗೆ ಸರಿದಿತ್ತು. ಆದರೆ, ಕೆಲವು ಡಿಸೈನರ್‌ಗಳು ಇವಕ್ಕೆ ಕೊಂಚ ಗ್ರ್ಯಾಂಡ್ ಲುಕ್ ಹಾಗೂ ಆಕರ್ಷಕ ವಿನ್ಯಾಸವನ್ನು ಸೇರಿಸಿ ಅನಾವರಣಗೊಳಿಸಲಾರಂಭಿಸಿದರು. ಪರಿಣಾಮ, ಹೆಣ್ಣು ಮಕ್ಕಳನ್ನು ಇವು ಆಕರ್ಷಿಸತೊಡಗಿದವು. ಹೈಲೈಟಾಗುವ ಕಲರ್ ಕಾಂಬಿನೇಷನ್ ಹಾಗೂ ಮನ ಸೆಳೆಯುವ ವಿನ್ಯಾಸ, ಹಬ್ಬಗಳಲ್ಲಿ ಇವನ್ನು ಧರಿಸಲು ಆರಂಭಿಸುವಂತೆ ಮನಪರಿವರ್ತಿಸಿದವು. ಪರಿಣಾಮ ಲೆಕ್ಕವಿಲ್ಲದಷ್ಟು ಬಗೆಯ ವಿನ್ಯಾಸದ ಉದ್ದ-ಲಂಗಗಳು ಮಾರುಕಟ್ಟೆಯನ್ನು ಪ್ರವೇಶಿಸಿದವು. ಹಾಗಾಗಿ ಫೆಸ್ಟಿವ್ ಸೀಸನ್‌ನಲ್ಲಿ ಇವುಗಳ ರೀ ಎಂಟ್ರಿ ಟ್ರೆಂಡಿಯಾಗಲು ಕಾರಣವಾಯಿತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಜಾನ್ ಹಾಗೂ ರಚ್ಚು.
ಟ್ರೆಂಡ್‌ನಲ್ಲಿರುವ ಉದ್ದ ಲಂಗದ ವಿನ್ಯಾಸಗಳು
ಕ್ವೀನ್ ಡಿಸೈನ್, ಕಾಂಟ್ರಾಸ್ಟ್ ಉದ್ದ-ಲಂಗ, ಬಿಗ್ ಬಾರ್ಡರ್ ಉದ್ದ-ಲಂಗ, ಫ್ಲೋರಲ್ ಸಿಲ್ಕ್, ರೇಷ್ಮೆಯ ಕಾಂಟ್ರಾಸ್ಟ್ ಶೇಡ್ ಉದ್ದ-ಲಂಗ, ಕಮರ್‌ಬಾಂದ್ ಬ್ಲೌಸ್‌ನವು, ಪಫ್, ಫೆದರ್ ಸ್ಲೀವ್‌ನ ಉದ್ದಲಂಗ, ಗೌನ್ ಶೈಲಿಯ ಉದ್ದ-ಲಂಗಗಳು ಈ ಫೆಸ್ಟಿವ್ ಸೀಸನ್‌ನ ಟ್ರೆಂಡ್ ಲಿಸ್ಟ್‌ನಲ್ಲಿ ಸೇರಿವೆ.
ಆಕರ್ಷಕವಾಗಿರುವ ಉದ್ದ ಲಂಗ ಆಯ್ಕೆ ಮಾಡುವುದು ಹೇಗೆ?
- ಟ್ರೆಂಡಿಯಾಗಿರುವ ಕಾಂಟ್ರಸ್ಟ್ ಶೇಡ್ನವು ಮಕ್ಕಳಿಗೆ ಆಕರ್ಷಕವಾಗಿ ಕಾಣಿಸುತ್ತವೆ.
- ಟ್ರೆಡಿಷನಲ್ ಸ್ಲೀವ್ ಹಾಗೂ ಬಾರ್ಡರ್ ಉದ್ದ-ಲಂಗ ಸಾಂಪ್ರದಾಯಿಕ ಲುಕ್ ನೀಡುತ್ತವೆ.
- ಪಾದಗಳಿಗಿಂತ ಕೆಳಗಿರುವ ಲಂಗವನ್ನು ಆಯ್ಕೆ ಮಾಡಬಾರದು.
- ಬ್ಲೌಸ್ ಮಕ್ಕಳಿಗೆ ಫಿಟ್ ಆಗಿ ಕಾಣಿಸಬೇಕು. ದೊಗಲೆಯಾಗಿರಬಾರದು.
- ಬ್ರೋಕೆಡ್ ಪ್ರಿಂಟ್ನವು ಹಬ್ಬಕ್ಕೆ ಅಂದವಾಗಿ ಕಾಣಿಸುತ್ತವೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Varamahalakshmi Festival 2024: ಹಬ್ಬಕ್ಕೆ ಮಾರುಕಟ್ಟೆ ಪ್ರವೇಶಿಸಿವೆ ರೆಡಿಮೇಡ್ ವರಮಹಾಲಕ್ಷ್ಮಿ ಮೂರ್ತಿಗಳು!