Site icon Vistara News

Summer Fashion: ಬೇಸಿಗೆಗೆ ಬಂತು ವೈವಿಧ್ಯಮಯ ಕಾಟನ್‌ ವೆಸ್ಟರ್ನ್ ವೇರ್ಸ್ ಫ್ಯಾಷನ್‌!

Summer Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಸ್ಟರ್ನ್ ಸ್ಟೈಲಿಂಗ್‌ಗೆ ಸಾಥ್‌ ನೀಡುವ ಕಾಟನ್‌ ಔಟ್‌ಫಿಟ್‌ಗಳು ಬೇಸಿಗೆಯ ಫ್ಯಾಷನ್‌ಗೆ (Summer Fashion) ಎಂಟ್ರಿ ನೀಡಿವೆ. ನೋಡಲು ಸಿಂಪಲ್‌ ಆಗಿರುವ ಈ ಔಟ್‌ಫಿಟ್‌ಗಳು ಕಾಲೇಜು ಹುಡುಗಿಯರಿಂದ ಹಿಡಿದು, ಉದ್ಯೋಗಸ್ಥ ಮಹಿಳೆಯರು ಧರಿಸಬಹುದಾದ ವೈವಿಧ್ಯಮಯ ಡಿಸೈನ್‌ಗಳಲ್ಲಿ ಆಗಮಿಸಿವೆ.

ಆರಾಮದಾಯಕ ಉಡುಪುಗಳಿವು

“ಸಮ್ಮರ್‌ ಸೀಸನ್‌ನಲ್ಲಿ ಭಾರಿ ಡಿಸೈನ್‌ನ ಎಥ್ನಿಕ್‌ ಉಡುಪುಗಳನ್ನು, ಪ್ರತಿದಿನ ಧರಿಸುವುದು ಹಾಗೂ ಕ್ಯಾರಿ ಮಾಡುವುದು ಅಸಾಧ್ಯ. ಅದರಲ್ಲೂ ಎರಡೆರಡು ಲೇಯರ್‌ ಇರುವಂತಹ ಉಡುಪುಗಳನ್ನು ಧರಿಸಿ, ಕೆಲಸ ಮಾಡುವುದು , ಕಾಲೇಜಿಗೆ ತೆರಳುವುದು ಉಸಿರುಗಟ್ಟಿಸುತ್ತದೆ. ಈ ಸೀಸನ್‌ಗೆ ಒಪ್ಪುವಂತಹ ತೀರಾ ಸಿಂಪಲ್‌ ಡಿಸೈನ್‌ ಹಾಗೂ ಗಾಳಿಯಾಡುವಂತಹ ಉಡುಪುಗಳನ್ನು ಧರಿಸುವಂತೆ ಮನ ಬಯಸುತ್ತದೆ. ಇಂತಹವರಿಗೆಂದೇ ಫ್ಯಾಷನ್‌ ಲೋಕವು ಕಾಟನ್‌ ಫ್ಯಾಬ್ರಿಕ್‌ನಲ್ಲಿ ವೆಸ್ಟರ್ನ್ ಸ್ಟೈಲ್‌ನ ಔಟ್‌ಫಿಟ್‌ಗಳನ್ನು ಬಿಡುಗಡೆಗೊಳಿಸಿದೆ. ಇವು ಗಾಳಿಯಾಡುವುದರೊಂದಿಗೆ ಆರಾಮದಾಯಕ ಎನಿಸುತ್ತವೆ” ಎನ್ನುತ್ತಾರೆ ಸ್ಟೈಲಿಸ್ಟ್ ಜೀವನ್‌. ಅವರ ಪ್ರಕಾರ, ಕಾಟನ್‌ ಫ್ಯಾಬ್ರಿಕ್‌ನಲ್ಲಿ ಊಹೆಗೂ ಮೀರಿದ ವೆಸ್ಟರ್ನ್ ಔಟ್‌ಫಿಟ್‌ಗಳು ಈ ಬಾರಿ ಕಾಲಿಟ್ಟಿವೆ ಎನ್ನುತ್ತಾರೆ.

ಟ್ರೆಂಡಿಯಾಗಿರುವ ಕಾಟನ್‌ ವೆಸ್ಟರ್ನ್ವೇರ್ಸ್

ಕಾಟನ್‌ ಕ್ರಾಪ್‌ ಟಾಪ್, ಶಾರ್ಟ್ ಅಸ್ಸೆಮ್ಮಿಟ್ರಿಕಲ್‌ ಶರ್ಟ್, ಟೀ ಶರ್ಟ್ ಶೈಲಿಯ ಟಾಪ್‌, ವಿ ನೆಕ್‌ ಟಾಪ್ಸ್, ಸ್ಲಿವ್‌ಲೆಸ್‌ ಟಾಪ್ಸ್, ಪೆಪ್ಲಮ್‌ ಶೈಲಿಯವು. ಸಾದಾ ವಿನ್ಯಾಸದ ಕೀ ಹೋಲ್‌ ಟಾಪ್ಸ್, ಮಲ್‌ಮಲ್‌ ಕಾಟನ್ ಟಾಪ್ಸ್, ಟ್ಯಾಂಕ್‌ ಟಾಪ್ಸ್, ಸ್ಕಟ್ರ್ಸ್, ಶಾಟ್ರ್ಸ್, ಡಿವೈಡರ್ಸ್, ಕೇಪ್ರೀಸ್‌. ಫ್ರಾಕ್ಸ್, ಮಿನಿ ಫ್ರಾಕ್ಸ್, ಮಿಡಿ, ಕೋ ಆರ್ಡ್ ಸೆಟ್‌ ಶಾಟ್ರ್ಸ್ ಸೇರಿದಂತೆ ನಾನಾ ಬಗೆಯ ಕಾಟನ್‌ ವೆಸ್ಟರ್ನ್ ವೇರ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಅದರಲ್ಲೂ ಲೈಟ್‌ ಶೇಡ್‌ನವು, ಪಾಸ್ಟೆಲ್‌ ಕಲರ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪಟ್ರ್ಸ್.

ಮಿಕ್ಸ್ ಮ್ಯಾಚ್‌ ಮಾಡಿ ನೋಡಿ

ಒಂದೇ ರೀತಿಯ ಡ್ರೆಸ್‌ ಧರಿಸಿ ಬೋರಾಗಿದ್ದಲ್ಲಿ, ಕಾಟನ್‌ ಔಟ್‌ಫಿಟ್‌ಗಳನ್ನು ಮಿಕ್ಸ್‌ ಮಾಡಿಯೂ ಧರಿಸಬಹುದು. ಉದಾಹರಣೆಗೆ., ಶಾಟ್ರ್ಸ್ ಸ್ಕರ್ಟ್‌ಗೆ ಕ್ರಾಪ್‌ ಟಾಪ್‌, ಲಾಂಗ್‌ ಸ್ಕರ್ಟ್‌ಗೆ ಟ್ಯಾಂಕ್‌ ಕಾಟನ್‌ ಟಾಪ್‌, ಸ್ಲಿವ್‌ಲೆಸ್‌ ಟಾಪ್‌ಗೆ ಪ್ಯಾಂಟ್‌, ವಿ ನೆಕ್‌ ಟಾಪ್‌ಗೆ ಮಿಡಿ ಹೀಗೆ ನಾನಾ ಶೈಲಿಯಲ್ಲಿ ಮ್ಯಾಚ್‌ ಮಾಡಿ ಡಿಫರೆಂಟ್‌ ಲುಕ್‌ ನೀಡಬಹುದು.

ಕಾಟನ್‌ ವೆಸ್ಟರ್ನ್‌ ವೇರ್ಸ್‌ ಪ್ರಿಯರು ಗಮನಿಸಬೇಕಾದ್ದು

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Actress Pearl Lehenga Fashion: ಮುತ್ತಿನ ಲೆಹೆಂಗಾದಲ್ಲಿ ಧರೆಗಿಳಿದು ದೇವತೆಯಂತೆ ಮಿಂಚಿದ ನಟಿ!

Exit mobile version