-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವೆಲ್ವೆಟ್ ಸೀರೆ (Velevet Saree Fashion) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಇನ್ನು, ಇದಕ್ಕೆ ಪೂರಕ ಎಂಬಂತೆ ಬಾಲಿವುಡ್ ಸೆಲೆಬ್ರೆಟಿಗಳಿಂದಿಡಿದು ಸ್ಯಾಂಡಲ್‌ವುಡ್ ತಾರೆಯರು ಕೂಡ ಈ ಸೀರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ. ಇದೀಗ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್ ನಟಿ ಮೇಘಾ ಶೆಟ್ಟಿ ಕೂಡ ಇವೆಂಟ್‌ವೊಂದರಲ್ಲಿ ಟೀಲ್ ಬ್ಲ್ಯೂ ಶೇಡ್‌ನ ವೆಲ್ವೆಟ್ ಸೀರೆಯಲ್ಲಿ ಅಂದವಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆದಿದ್ದಾರೆ.
ಆಕರ್ಷಕವಾಗಿ ಕಾಣಿಸುವ ವೆಲ್ವೆಟ್ ಸೀರೆಗಳು
ನೋಡಲು ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ನೀಡುವ ಈ ವೆಲ್ವೆಟ್ ಸೀರೆಗಳು, ಸೀಸನ್‌ನಲ್ಲಿ ಬೆಚ್ಚಗಿಡುವುದು ಮಾತ್ರವಲ್ಲ, ಸಿಂಪಲ್ ಲುಕ್‌ನಲ್ಲೆ ಆಕರ್ಷಕವಾಗಿ ಬಿಂಬಿಸುತ್ತವೆ. ಸದ್ಯ ಮೇಘಾ ಶೆಟ್ಟಿ ಉಟ್ಟಿರುವ ಈ ವೆಲ್ವೆಟ್ ಸೀರೆ, ಯುವತಿಯರನ್ನು ಸೆಳೆದಿದ್ದು, ಈ ಸೀರೆಯನ್ನು ಡಿಸೈನ್ ಹಾಗೂ ಸ್ಟೈಲಿಂಗ್ ಮಾಡಿರುವ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಅವರು, ಈ ಲುಕ್ ಬಯಸುವ ಯುವತಿಯರಿಗೆ 5 ಸಿಂಪಲ್ ಐಡಿಯಾ ನೀಡಿದ್ದಾರೆ.
ರಾಯಲ್ ಲುಕ್‌ಗಾಗಿ ವೆಲ್ವೆಟ್ ಸೀರೆ
ರಾಯಲ್ ಲುಕ್‌ಗಾಗಿ ವೆಲ್ವೆಟ್ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಸಮಾರಂಭಗಳಲ್ಲೂ ಇತರರಿಗಿಂತ ವಿಭಿನ್ನವಾಗಿ ಕಾಣಿಸಲು ಕೂಡ ವೆಲ್ವೆಟ್ ಸೀರೆ ಉಡಬಹುದು.
ಸ್ಕಿನ್ ಟೋನ್‌ಗೆ ತಕ್ಕಂತೆ ಕಲರ್ ಚಾಯ್ಸ್
ನಿಮ್ಮ ಸ್ಕಿನ್ ಟೋನ್‌ಗೆ ತಕ್ಕಂತೆ ವೆಲ್ವೆಟ್ ಸೀರೆ ಆಯ್ಕೆ ಮಾಡಿ. ಪಾರ್ಟಿಗಳಿಗಾದಲ್ಲಿ ಡಾರ್ಕ್ ಶೇಡ್, ಡೇ ಟೈಮ್ ಸಮಾರಂಭಗಳಿಗಾದಲ್ಲಿ ಲೈಟ್ ಶೇಡ್ಸ್ ಹೀಗೆ ನಿಮ್ಮ ಸ್ಕಿನ್ ಟೋನ್ ಹಾಗೂ ಕಾರ್ಯಕ್ರಮಕ್ಕೆ ತಕ್ಕಂತೆ ಆಯ್ಕೆ ಮಾಡಬಹುದು.
ಸೆಲೆಬ್ರೆಟಿ ಲುಕ್‌ಗಾಗಿ ಸ್ಟೈಲಿಂಗ್
ವೆಲ್ವೆಟ್ ಸೀರೆಯಲ್ಲಿ ಸೆಲೆಬ್ರೆಟಿ ಲುಕ್ ಪಡೆಯಲು ಆದಷ್ಟೂ ಸ್ಟೈಲಿಂಗ್‌ಗೆ ಪ್ರಾಮುಖ್ಯತೆ ನೀಡಬೇಕು. ಮಿನಿಮಲ್ ಹಾಗೂ ಅಗತ್ಯವಿರುವಷ್ಟು ಆಕ್ಸೆಸರೀಸ್ ಧರಿಸಬೇಕು. ಹಾಗಾಗಿ ಧರಿಸುವ ಆಕ್ಸೆಸರೀಸ್ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು.
ವೆಲ್ವೆಟ್ ಸೀರೆ ಲೈಟ್‌ವೈಟಾಗಿರಲಿ
ಉಡುವ ವೆಲ್ವೆಟ್ ಸೀರೆಯ ಫ್ಯಾಬ್ರಿಕ್ ಆದಷ್ಟೂ ಲೈಟ್‌ವೈಟ್ ಆಗಿರಲಿ. ಆಗ ಧರಿಸಿದಾಗ ನೋಡಲು ಚೆನ್ನಾಗಿ ಕಾಣಿಸುವುದಲ್ಲದೇ, ಉಟ್ಟವರಿಗೂ ಕಂಫರ್ಟಬಲ್ ಫೀಲ್ ಆಗುತ್ತದೆ.
ಇದನ್ನೂ ಓದಿ: Shalini Rajaneesh: ಸೀರೆ, ಹಣೆಗೆ ಅಗಲವಾದ ರೆಡ್ ಬಿಂದಿ ಎಂದಿಗೂ ಬದಲಾಗದ ನನ್ನ ಯೂನಿಕ್ ಫ್ಯಾಷನ್ ಸ್ಟೇಟ್ಮೆಂಟ್!
ವೆಲ್ವೆಟ್ ಸೀರೆಗೆ ತಕ್ಕಂತೆ ಮೇಕಪ್-ಹೇರ್‌ಸ್ಟೈಲ್
ವೆಲ್ವೆಟ್ ಸೀರೆ ಉಟ್ಟಾಗ ಆ ಸೀರೆಗೆ ತಕ್ಕಂತೆ ಮೇಕಪ್ ಕೂಡ ಮಾಡಬೇಕು. ಹೇರ್‌ಸ್ಟೈಲ್ ಕೂಡ ಹೊಂದಬೇಕು. ಅತಿಯಾದ ಮೇಕಪ್ ಬೇಡ. ನೋಡಲು ಎಲಿಗೆಂಟ್ ಲುಕ್ ನೀಡುವ ಮೇಕಪ್‌ಗೆ ಸೈ ಎನ್ನಿ. ಇನ್ನು ಸೀರೆಯ ಶೇಡ್‌ಗೆ ತಕ್ಕಂತೆ ಲಿಪ್‌ಸ್ಟಿಕ್ ಹಾಗೂ ಐ ಮೇಕಪ್ ಮಾಡಬೇಕು.
(ಲೇಖಕಿ ಫ್ಯಾಷನ್ ಪತ್ರಕರ್ತೆ)