Site icon Vistara News

Vintage Jewelery Fashion: ವಿಂಟೇಜ್‌ ಜ್ಯುವೆಲರಿ ಫ್ಯಾಷನ್‌‌‌ನಲ್ಲಿ ಮರಳಿದ ಕಾಸಗಲದ ಹರಳಿನ ಕಿವಿಯೋಲೆ!

Vintage Jewelery Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟೇಜ್‌ ಜ್ಯುವೆಲರಿಗಳಲ್ಲಿ (Vintage Jewelery Fashion) ಇದೀಗ ಕಾಸಗಲದ ಹರಳಿನ ಕಿವಿಯೊಲೆಗಳು ಟ್ರೆಂಡಿಯಾಗಿವೆ. ಹಾಗೆಂದು ಈ ವಿನ್ಯಾಸದ ಕಿವಿಯೊಲೆಗಳ ಸ್ಟೈಲಿಂಗ್‌ ಹೊಸತೇನಲ್ಲ! ಅಜ್ಜಿ ಕಾಲದ ಆಂಟಿಕ್‌ ವಿನ್ಯಾಸದಲ್ಲಿ ಬಹಳ ಕಾಲ ಪ್ರಚಲಿತದಲ್ಲಿದ್ದ ಕಿವಿಯೊಲೆಗಳಿವು. ಧರಿಸಿದಾಗ ನೋಡಲು ಪಕ್ಕಾ ಟ್ರೆಡಿಷನಲ್‌ ಲುಕ್‌ ನೀಡುವ ಈ ಕಾಸಗಲದ ಸ್ಟಡ್ಸ್, ಈ ಫೆಸ್ಟಿವ್‌ ಸೀಸನ್‌ನಲ್ಲಿ, ಅದರಲ್ಲೂ ವಿಂಟೇಜ್‌ ಜ್ಯುವೆಲರಿ ಕೆಟಗರಿಯಲ್ಲಿ ಮಹಿಳೆಯರ ಮನವನ್ನು ಗೆದ್ದಿವೆ.

ಕಾಸಗಲದ ಹರಳಿನ ವಿಂಟೇಜ್‌ ಜ್ಯುವೆಲರಿ ಫ್ಯಾಷನ್‌

ಅಂದಹಾಗೆ, ಕಿವಿಗೆ ಅಗಲವಾದ ಓಲೆಯನ್ನು ಧರಿಸುವುದು ರಾಜ-ಮಹಾರಾಜರ ಕಾಲದಿಂದಲೇ ಇದೆ. ಅಗಲವಾದ ಓಲೆ ಧರಿಸುವ ಮಹಿಳೆಯರು ಶ್ರೀಮಂತರು ಅಥವಾ ಗಣ್ಯ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತಿತ್ತು. ಅದರಲ್ಲೂ ಹರಳಿನ ಅಗಲವಾದ ಓಲೆಗಳನ್ನು ಧರಿಸುವ ಮಾನಿನಿಯರಿಗೆ ಹೆಚ್ಚು ಗೌರವ ನೀಡಲಾಗುತ್ತಿತ್ತು. ಕಾಲ ಕ್ರಮೇಣ, ಈ ಫ್ಯಾಷನ್‌ ಸೈಡಿಗೆ ಸರಿಯಿತು. ಪ್ರತಿಷ್ಠೆಯ ಸಂಕೇತವಾಗಿದ್ದ, ಈ ಶೈಲಿಯ ಕಾಸಗಲದ ಓಲೆಗಳು ಬರಬರುತ್ತಾ ಮತ್ತೊಮ್ಮೆ ಫ್ಯಾಷನ್‌ಗೆ ಸೇರಿಕೊಂಡಿತು. ಜೊತೆಗೆ ಒಂದಿಷ್ಟು ಬದಲಾವಣೆಗಳೊಂದಿಗೆ ವಿಂಟೇಜ್‌ ಜ್ಯುವೆಲರಿ ಕೆಟಗರಿಯಲ್ಲಿ ಮರು ಎಂಟ್ರಿ ನೀಡಿತು. ಅದರಲ್ಲೂ, ಯುವತಿಯರನ್ನು ಸೆಳೆಯತೊಡಗಿತು ಎನ್ನುತ್ತಾರೆ ಜ್ಯುವೆಲರಿ ಡಿಸೈನರ್‌ ರಾಘವ್‌ ಆಚಾರ್‌.

ಟ್ರೆಂಡ್‌ನಲ್ಲಿರುವ ವಿಂಟೇಜ್‌ ಹರಳಿನ ಕಿವಿಯೋಲೆಗಳು

ಭೂ ಚಕ್ರದಂತಹ ವಿನ್ಯಾಸ, ಹೂಗಳ ವಿನ್ಯಾಸ, ಚಕ್ರದೊಳಗೆ ನವಿಲಿನ ವಿನ್ಯಾಸ, ಸೂರ್ಯಕಾಂತಿ ಸೇರಿದಂತೆ ನಾನಾ ಬಗೆಯು ಹೂಗಳು ಅರಳಿರುವಂತೆ ಕಾಣಿಸುವ ವಿನ್ಯಾಸದವು ಅದರಲ್ಲೂ ಕುಂದನ್‌ ಅಥವಾ ಕೆಂಪು-ಹಸಿರು-ಬಿಳಿ ಹರಳಿನಲ್ಲಿ ಡಿಸೈನ್‌ ಮಾಡಲಾದ ಓಲೆಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

ಕಿವಿ ಸರಪಳಿ ಜೊತೆಗೆ ಬಂದ ಕಿವಿಯೋಲೆಗಳು

ಇನ್ನು, ಈ ಟ್ರೆಡಿಷನಲ್‌ ಲುಕ್‌ ನೀಡುವ ಹರಳಿನ ಕಿವಿಯೊಲೆಗಳಲ್ಲಿ ಇದೀಗ ಮುತ್ತಿನ ಲೈನ್‌ ಇರುವಂತಹ ಲೇಯರ್‌ ಲುಕ್‌ ನೀಡುವ ಕಿವಿ ಸರಪಳಿ ಡಿಸೈನ್‌ಗಳು ಜೊತೆಯಾಗಿವೆ. ಕಿವಿಯೋಲೆಯೊಂದಿಗೆ ಅಟ್ಯಾಚ್‌ ಆಗಿರುವಂತಹ ವಿನ್ಯಾಸದಲ್ಲೂ ಬಂದಿವೆ. ಇನ್ನು ಕೆಲವು ಜುಮಕಾ ಶೈಲಿಯಲ್ಲೂ ಎಂಟ್ರಿ ನೀಡಿವೆ.

ಇದನ್ನೂ ಓದಿ: Fashion Trend: ಜೆನ್‌ ಜಿ ಫ್ಯಾಷನ್‌‌‌ಗೆ ಎಂಟ್ರಿ ಕೊಟ್ಟ ವೈಬ್ರೆಂಟ್‌ ಕ್ವಿರ್ಕಿ ಲೆಗ್ಗಿಂಗ್ಸ್!

ಟ್ರೆಡಿಷನಲ್‌ ಲುಕ್‌ಗೆ ಸಾಥ್‌ ನೀಡುವ ಕಾಸಗಲದ ಹರಳಿನ ಓಲೆಗಳು

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Exit mobile version