ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಮೇಘಾ ಶೆಟ್ಟಿಯ (Mega Shetty) ದಾವಣಿ-ಲಂಗದ ಸಿಂಪಲ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹೆಚ್ಚು ಖರ್ಚಿಲ್ಲದೇ, ಮೇಕಪ್ ಹಚ್ಚದೇ ಇರುವ ಅವರ ಈ ಸಿಂಪಲ್ ದಾವಣಿ -ಲಂಗದ ಲುಕ್ ಎಲ್ಲರನ್ನು ಆಕರ್ಷಿಸಿದೆ. ನೋಡಲು ಮಾತ್ರವಲ್ಲ, ಈ ಔಟ್‌ಫಿಟ್‌ನ ಡಿಸೈನ್ ಕೂಡ ಡಿಸೆಂಟ್ ಲುಕ್ ನೀಡಿದೆ. ಅಂದಹಾಗೆ, ನಟಿ ಮೇಘಾ ಶೆಟ್ಟಿ, ಕಿರುತರೆಯ ಧಾರವಾಹಿಯ ಮೂಲಕ ಹೆಸರು ಮಾಡಿದವರು. ಈ ಮಧ್ಯೆ ಸಿನಿಮಾಗಳ ಮೂಲಕ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಆಗಾಗ್ಗೆ ಸಾಕಷ್ಟು ಫೋಟೋಶೂಟ್‌ಗಳ ಮೂಲಕ ಸೀಸನ್‌ನ ಟ್ರೆಂಡಿ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅವರು ಧರಿಸುವ ಔಟ್‌ಫಿಟ್‌ಗಳು ಕೂಡ ಒಂದಕ್ಕಿಂತ ಒಂದು ಗಮನ ಸೆಳೆಯುವಂತಿರುತ್ತವೆ.
ಮೇಘಾ ಶೆಟ್ಟಿಯ ದಾವಣಿ-ಲಂಗದ ಲವ್
ಮೇಘಾ ಶೆಟ್ಟಿ ಇತ್ತೀಚೆಗೆ ಅತಿ ಹೆಚ್ಚು ದಾವಣಿ-ಲಂಗ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅವುಗಳಲ್ಲಿ ಬಹಳಷ್ಟು ಡಿಸೈನರ್‌ವೇರ್‌ಗಳು ಸೆಲೆಬ್ರೆಟಿ ಲಕ್ಷ್ಮಿಕೃಷ್ಣ ಅವರದ್ದೇ ಆಗಿವೆ. ಸಿಂಪಲ್ ಡಿಸೈನ್‌ಗಳಿಂದಿಡಿದು ಟ್ರೆಡಿಷನಲ್ ಲುಕ್ ನೀಡುವ ಅವರ ನಾನಾ ಶೈಲಿಯ ಪ್ರಿಂಟ್ಸ್‌ನ ಹಾಗೂ ಬಾರ್ಡರ್‌ನ ದಾವಣಿ-ಲಂಗಗಳಲ್ಲಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕೆಲವು ಹಬ್ಬದ ಸಮಯದಲ್ಲಿ ಧರಿಸಿ ಕಾಣಿಸಿಕೊಂಡರೇ ಮತ್ತೇ ಕೆಲವು ಸಾಮಾನ್ಯ ದಿನಗಳಲ್ಲಿ ಧರಿಸಿ, ಅಭಿಮಾನಿಗಳನ್ನು ಸೆಳೆದಿದ್ದಾರೆ. ಆ ಮಟ್ಟಿಗೆ ದಾವಣಿ-ಲಂಗದ ಅವರ ಫೋಟೋಗಳು ಹಿಟ್ ಆಗಿವೆ. ಸಾಮಾನ್ಯ ಹುಡುಗಿಯರನ್ನು ಮಾತ್ರವಲ್ಲ, ಎಲ್ಲಾ ಕೆಟಗರಿಯವರನ್ನು ಸೆಳೆದಿವೆ. ಸೆಲೆಬ್ರೆಟಿ ಡಿಸೈನರ್ ಲಕ್ಷಿಕೃಷ್ಣ ಅವರ ಈ ದಾವಣಿ-ಲಂಗ ಡಿಸೈನರ್‌ವೇರ್‌ಗಳು ಸ್ಥಳೀಯ ಸಂಸ್ಕೃತಿ ಬಿಂಬಿಸುವಂತಹ ಫ್ಯಾಬ್ರಿಕ್ ಹಾಗೂ ಸಿಂಪಲ್ ಡಿಸೈನ್ ಹೊಂದಿರುವುದು ಎಲ್ಲರ ಗಮನಸೆಳೆಯಲು ಕಾರಣವಾಗಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಅವರ ಪ್ರಕಾರ, ಮೇಘಾ ಶೆಟ್ಟಿಯ ದಾವಣಿ-ಲಂಗದ ಲುಕ್ ಆವರನ್ನು ಪಕ್ಕದ ಮನೆ ಹುಡುಗಿಯಂತೆ ಬಿಂಬಿಸಿವೆ. ಇದು ಸಾಮಾನ್ಯ ಜನರನ್ನು ತಲುಪಲು ಸಾಧಯವಾಗಿಸಿವೆ ಎನ್ನುತ್ತಾರೆ.
ದಾವಣಿ-ಲಂಗ ಅಭಿಮಾನಿಗಳಿಗೆ ಟಿಪ್ಸ್
ದಾವಣಿ-ಲಂಗದಲ್ಲಿ ಮೇಘಾ ಶೆಟ್ಟಿಯಂತೆ ನೀವೂ ಕಾಣಿಸಬೇಕೇ! ಹಾಗಾದಲ್ಲಿ ಹೀಗೆ ಮಾಡಿ ನೋಡಿ ಎನ್ನುತ್ತಾರೆ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿಕೃಷ್ಣ. ಅವರು ಹೇಳುವಂತೆ, ದಾವಣಿ-ಲಂಗದಲ್ಲಿ ಸೆಲೆಬ್ರೆಟಿ ಲುಕ್ ಪಡೆಯಲು ಆದಷ್ಟೂ ಡಿಸೈನರ್ ಔಟ್‌ಫಿಟ್ ಚೂಸ್ ಮಾಡಬೇಕು. ಇಲ್ಲವಾದಲ್ಲಿ ಸಿಂಪಲ್ ಲುಕ್‌ಗಾಗಿ ಹೀಗೂ ಮಾಡಬಹುದು. ಟ್ರೆಡಿಷನಲ್ ಲುಕ್ ಇರುವಂತಹ ಸಮ್ಮರ್ ಸೀಸನ್‌ಗೆ ಹೊಂದುವಂತಹ ಫ್ಯಾಬ್ರಿಕ್ ಆಯ್ಕೆ ಮಾಡಿ, ಸ್ಟಿಚ್ ಮಾಡಿಸಬೇಕು. ಬ್ಲೌಸ್ ಹಾಗೂ ಲಂಗ ಡಿಸೈನ್ ಹೆವ್ವಿಯಾಗಿರಬಾರದು. ಟ್ರೆಡಿಷನಲ್ ಲುಕ್ ಬೇಕಿದ್ದಲ್ಲಿ ಬಾರ್ಡರ್ ಇರುವಂತದ್ದನ್ನು ಮಾತ್ರ ಚೂಸ್ ಮಾಡಬೇಕು.
ಸೀಸನ್ ದಾವಣಿ-ಲಂಗದ ಫ್ಯಾಬ್ರಿಕ್‌ಗೆ ಆದ್ಯತೆ
ಇನ್ನು, ಈ ಸಮ್ಮರ್‌ನಲ್ಲಿ ತೀರಾ ಸಿಂಪಲ್ ಲುಕ್ ಬೇಕಿದ್ದಲ್ಲಿ ಆದಷ್ಟೂ ಕಾಟನ್ ಫ್ಯಾಬ್ರಿಕ್‌ಗೆ ಆದ್ಯತೆ ನೀಡುವುದು ಉತ್ತಮ. ಇನ್ನು, ಇದಕ್ಕೆ ಪೂರಕ ಎಂಬಂತೆ. ಇದೀಗ ಪರಿಸರ ಸ್ನೇಹಿ ಫ್ಯಾಬ್ರಿಕ್‌ಗಳು ಆಗಮಿಸಿವೆ.
ಇದನ್ನೂ ಓದಿ: Chaitra Achar: ನೋಡುಗರ ಹುಬ್ಬೇರಿಸಿದ ನಟಿ ಚೈತ್ರಾ ಆಚಾರ್ ಪಾರದರ್ಶಕ ನಿಟ್‌ವೇರ್
ಸಿಂಪಲ್ ದಾವಣಿ
ಸಿಂಪಲ್ ದಾವಣಿ ಇಡೀ ಲುಕ್ಕನ್ನು ಮನಮೋಹಕವಾಗಿಸುವುದಲ್ಲದೇ, ತೀರಾ ಸಿಂಪಲ್ ಲುಕ್ ನೀಡುವುದು. ಮೇಘಾ ಶೆಟ್ಟಿಯ ದಾವಣಿಗಳು ಎಲ್ಲವೂ ಮಾನೋಕ್ರೋಮ್ ಶೇಡ್‌ನದ್ದಾಗಿವೆ ಹಾಗೂ ಸಿಂಪಲ್ ಹಾಗೂ ಸಾದಾ ಆಗಿವೆ. ಹಾಗಾಗಿ ಅವರಿಗೆ ಡಿಸೆಂಟ್ ಲುಕ್ ನೀಡಿವೆ ಎನ್ನುತ್ತಾರೆ ಡಿಸೈನರ್ ಲಕ್ಷ್ಮಿ ಕೃಷ್ಣ.
(ಲೇಖಕಿ ಫ್ಯಾಷನ್ ಪತ್ರಕರ್ತೆ)