ಶೀಲಾ ಸಿ. ಶೆಟ್ಟಿ, ಬೆಂಗಳೂರು
ಶಿಮ್ಮರ್ ಸೀರೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜಗಮಗಿಸಿದ್ದಾರೆ. ಹೌದು. ಬ್ರಿಟಿಷ್ ಅಕಾಡೆಮಿ ಫಿಲ್ಮ್ ಆವಾಡ್ರ್ಸ್ ಸಮಾರಂಭದಲ್ಲಿ ಭಾಗವಹಿಸಿದ್ದ, ದೀಪಿಕಾ ಉಟ್ಟಿದ್ದ ಈ ಶಿಮ್ಮರ್ ಸೀರೆ (deepika padukone Shimmer Saree fashion) ಇದೀಗ ಜಗತ್ತಿನಾದ್ಯಂತ ಸೀರೆ ಪ್ರಿಯರನ್ನು ಆಕರ್ಷಿಸಿದೆ.
ದೀಪಿಕಾ ಉಟ್ಟಿದ್ದ ಸೀರೆಯ ವಿಶೇಷತೆ
ಸೆಲೆಬ್ರೆಟಿ ಡಿಸೈನರ್ ಸಭ್ಯಸಾಚಿ ಲೆಬೆಲ್‌ನ ಆಕರ್ಷಕ ಸಿಲ್ವರ್ ಸಿಕ್ವಿನ್ ಸೀರೆಯಲ್ಲಿ, ಬಿಎಟಿಎಫ್ ಸಮಾರಂಭದಲ್ಲಿ, ಕಾಣಿಸಿಕೊಂಡ ದೀಪಿಕಾ, ಸೆಲೆಬ್ರೆಟಿಗಳ ಡಿಸೈನರ್‌ವೇರ್‌ಗಳ ನಡುವೆಯೂ ಈ ಸೀರೆಯಲ್ಲಿ ಮಿನುಗುತ್ತಿದ್ದರು. ಇದಕ್ಕೆ ಕಾರಣ, ಅವರ ಸ್ಟೈಲಿಂಗ್ ! ಲೈಮ್ ಲೈಟ್‌ನಲ್ಲಿದ್ದಾಗ ಗೋಲ್ಡನ್, ತಿರುಗಿದಾಗ ಸಿಲ್ವರ್ ಶೇಡ್‌ನಂತೆ ಕಾಣಿಸುತ್ತಿದ್ದ, ಈ ಸೀರೆಗೆ ಅವರು ಧರಿಸಿದ್ದ ಬ್ಯಾಕ್‌ಲೆಸ್ ಸ್ಟ್ರಾಪ್ ಬ್ಲೌಸ್ ಕಂಪ್ಲೀಟ್ ಗ್ಲಾಮರಸ್ ಲುಕ್ ನೀಡಿತ್ತು. ಇನ್ನು ಲೂಸಾದ ಸ್ಲೀಕ್ ಮೆಸ್ಸಿ ಬನ್, ಕಿವಿಯಲ್ಲಿದ್ದ ಸ್ಟೇಟ್‌ಮೆಂಟ್ ಇಯರಿಂಗ್ಸ್, ಕಣ್ಣಿನ ಕಾಡಿಗೆ, ತುಟಿಯ ನ್ಯೂಡ್ ಲಿಪ್‌ಸ್ಟಿಕ್ ಅವರನ್ನು ಸಾವಿರ ಜನರ ನಡುವೆಯೂ ಹೈಲೈಟ್ ಮಾಡಿತ್ತು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಫಟ್ರ್ಸ್.
ಸಾಮಾನ್ಯ ಹೆಣ್ಣುಮಕ್ಕಳಿಗೂ ಸೆಲೆಬ್ರೆಟಿ ಲುಕ್ ನೀಡುವ ಸೀರೆಗಳಿವು
ಇನ್ನು,ಬಾಲಿವುಡ್ ನಟಿಯರ ಫೆವರೇಟ್ ಲಿಸ್ಟ್‌ನಲ್ಲಿರುವ ಈ ಶಿಮ್ಮರ್ ಸೀರೆಗಳು, ಈಗಾಗಲೇ ಟ್ರೆಂಡ್ ಲಿಸ್ಟ್‌ನಲ್ಲಿದ್ದು, ಸಾಮಾನ್ಯ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ದೊಡ್ಡ ಲೆಬೆಲ್‌ನ ಈ ಸೀರೆಗಳನ್ನು ಕೊಳ್ಳಲಾಗದಿದ್ದವರಿಗೆ , ಲೋಕಲ್ ಬ್ರಾಂಡ್‌ಗಳು ಕಡಿಮೆ ದರದಲ್ಲಿ ಕೈಗೆಟಕುವಂತೆ ಮಾರಾಟ ಮಾಡುತ್ತಿವೆ. ಹಾಗಾಗಿ ಸಾಮಾನ್ಯ ಹೆಣ್ಣುಮಕ್ಕಳು ಕೂಡ ಈ ಸೀರೆ ಖರೀದಿಸುವುದು ಹೆಚ್ಚಾಗಿದೆ. ಎಲ್ಲರಿಗೂ ಗೊತ್ತಿರುವಂತೆ, ಈಗಾಗಲೇ ಕಾಜೋಲ್, ಮಾಧುರಿ ದೀಕ್ಷಿತ್, ದಿಶಾ ಪಟಾನಿ, ಶ್ರದ್ಧಾ, ಅನನ್ಯಾ ಪಾಂಡೇ ಸೇರಿದಂತೆ ಸಾಕಷ್ಟು ಬಾಲಿವುಡ್ ತಾರೆಯರು ಈ ಸೀರೆಯಲ್ಲಿ ಕಾಣಿಸಿಕೊಂಡು ಟ್ರೆಂಡ್ ಹುಟ್ಟುಹಾಕಿದ್ದಾರೆ. ಇದೀಗ, ದೀಪಿಕಾ ಸರದಿ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಶಿಮ್ಮರ್ ಸೀರೆಯಲ್ಲಿ ದೀಪಿಕಾರಂತೆ ಕಾಣಲು ಹೀಗೆ ಮಾಡಿ
- ಮೊದಲಿಗೆ ನಿಮ್ಮ ಬಾಡಿ ಟೈಪ್ ಹಾಘೂ ಸ್ಕಿನ್ ಟೋನ್ಗೆ ಹೊಂದುವಂತಹ ಸಿಕ್ವಿನ್ಸ್ ಶಿಮ್ಮರ್ ಶೇಡ್ಸ್ ಸೀರೆ ಆಯ್ಕೆ ಮಾಡಿ.
- ಮಿನಿಮಲ್ ಆಕ್ಸೆಸರೀಸ್ ರೂಲ್ಸ್ ಫಾಲೋ ಮಾಡಿ.
- ಸ್ಟೇಟ್‌ಮೆಂಟ್ ಆಕ್ಸೆಸರೀಸ್ ಧರಿಸಿ.
- ಫ್ರೀ ಹೇರ್ಸ್ಟೈಲ್ ಬದಲು ಬನ್ ವಿನ್ಯಾಸಕ್ಕೆ ಮೊರೆ ಹೋಗಿ.
- ಸ್ಲಿವ್ಲೆಸ್ ಅಥವಾ ಸ್ಟ್ರಾಪ್ ಬ್ಲೌಸ್ ಗ್ಲಾಮರಸ್ ಲುಕ್ ನೀಡಬಲ್ಲದು.
- ಹೈ ಹೀಲ್ಸ್ ಎತ್ತರವಾಗಿರುವಂತೆ ಹಾಗೂ ಸ್ಲಿಮ್ ಲುಕ್ ನೀಡಬಲ್ಲದು.
- ಮಿನಿಮಲ್ ಮೇಕಪ್ ಆಕರ್ಷಕವಾಗಿ ಕಾಣಿಸಬಲ್ಲದು.
- ಗೋಲ್ಡನ್ ಹಾಗೂ ಸಿಲ್ವರ್ ನಿಮ್ಮನ್ನೂ ಜಗಮಗಿಸಬಲ್ಲದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Online Saree Shopping: ಆನ್‌ಲೈನ್‌ನಲ್ಲಿ ಸೀರೆ ಖರೀದಿಸುವಾಗ ಗಮನದಲ್ಲಿ ಇಟ್ಟುಕೊಳ್ಳಬೇಕಾದ 5 ಸಂಗತಿಗಳಿವು