Site icon Vistara News

Wedding Celebrity Look: ಮದುವೆಯಲ್ಲಿ ಮದುಮಗಳ ಸೆಲೆಬ್ರೆಟಿ ಲುಕ್‌ಗೆ ಸಾಥ್‌ ನೀಡುವ 5 ಪ್ರಮುಖ ಅಂಶಗಳಿವು

Wedding Celebrity Look

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ಸೆಲೆಬ್ರೆಟಿ ಲುಕ್‌ (Wedding celebrity look) ಟ್ರೆಂಡಿಯಾಗಿದೆ. ಈ ಲುಕ್‌ಗಾಗಿ ಸಾಕಷ್ಟು ಹೆಣ್ಣುಮಕ್ಕಳು ನಾನಾ ಕಸರತ್ತು ಮಾಡುತ್ತಾರೆ. ಇದಕ್ಕೆ ಕಾರಣ, ಈ ಲುಕ್‌ ಇಡೀ ಬಳಗವನ್ನೇ ಸೆಳೆಯುತ್ತದೆ. ಅಷ್ಟು ಮಾತ್ರವಲ್ಲ, ಜೀವನದ ಬ್ಯೂಟಿಫುಲ್‌ ನೆನಪಿನಂಗಳದಲ್ಲಿ ಉಳಿಯುತ್ತದೆ. ವಿಡಿಯೋ, ಫೋಟೋ ಹೀಗೆ ಎಲ್ಲವಲ್ಲೂ ಹೈಲೈಟಾಗುತ್ತದೆ. ನೋಡಿದಾಗ ಮದುಮಗಳ ಸುಂದರ ವಧನ ಹಾಗೂ ಅಲಂಕಾರ ಎಲ್ಲರನ್ನು ಸಮ್ಮೋಹನಗೊಳಿಸುತ್ತದೆ. ಪರಿಣಾಮ, ಸಾಮಾನ್ಯ ಹೆಣ್ಣುಮಕ್ಕಳು ಕೂಡ ಇತ್ತೀಚೆಗೆ ಈ ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿ ಮಾಡಬೇಕಾಗಿದ್ದು ಇಷ್ಟೇ! ಮದುಮಗಳ ಸೌಂದರ್ಯ ಹೆಚ್ಚಿಸುವ ಈ ಲುಕ್‌ಗಾಗಿ 5 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್‌.‌ ಅವರ ಪ್ರಕಾರ, ಮದುಮಗಳಿಗೆ ಸಿಂಗಾರ ಮಾಡಿದಾಗ ದೇವತೆಯಂತೆ ಕಾಣಿಸಬೇಕು. ನೋಡಿದಾಗ ಎಲ್ಲರ ಕಣ್ಮನ ಸೆಳೆಯಬೇಕು. ಆಗಷ್ಟೇ ಇಡೀ ಮದುವೆ ಮನೆಯ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಆಗಲು ಸಾಧ್ಯ ಎನ್ನುತ್ತಾರೆ.

ವೆಡ್ಡಿಂಗ್‌ಗೆ ಗ್ರ್ಯಾಂಡ್‌ ಮೇಕಪ್‌ ಆಯ್ಕೆ ಮಾಡಿ

ಮದುವೆಗಳಲ್ಲಿ ಮದುಮಗಳಿಗೆ ಆದಷ್ಟೂ ಗ್ರ್ಯಾಂಡ್‌ ಲುಕ್‌ ನೀಡುವ ವೆಡ್ಡಿಂಗ್‌ ಮೇಕಪ್‌ ಆಯ್ಕೆ ಮಾಡಿ. ಯಾಕೆಂದರೇ, ಸಿಂಪಲ್‌ ಲುಕ್‌ ಫೋಟೋಗ್ರಾಫಿ ಹಾಗೂ ವಿಡಿಯೋಗ್ರಾಫಿಯಲ್ಲಿ ಹೈಲೈಟ್‌ ಆಗುವುದಿಲ್ಲ. ವೆಡ್ಡಿಂಗ್‌ಗೆಂದು ಮಾಡಲಾಗುವ ನಾನಾ ಮೇಕಪ್‌ಗಳು ಮಾತ್ರ ಈ ಕೆಲಸ ಮಾಡಬಲ್ಲವು. ಉದಾಹರಣೆಗೆ., ಸೆಲೆಬ್ರೆಟಿ ಮೇಕಪ್‌, ಮಿನರಲ್‌ ಮೇಕಪ್‌, ಟ್ರೆಡಿಷನಲ್‌ ಮೇಕಪ್‌ನಲ್ಲಿ ಬರುವಂತಹ ಮೇಕಪ್‌ಗಳನ್ನು ಆರಿಸಿಕೊಳ್ಳಬೇಕು. ಹಣೆಗೆ ಬಿಂದಿ ಇಡುವುದನ್ನು ಮರೆಯಬಾರದು, ಕಣ್ಣಿಗೆ ಕಾಡಿಗೆ ಮಸ್ಟ್‌ ಮೇಕಪ್‌ ಲಿಸ್ಟ್‌ನಲ್ಲಿರಬೇಕು.

ಟ್ರೆಂಡಿ ಗ್ರ್ಯಾಂಡ್‌ ರೇಷ್ಮೆ ಸೀರೆಯ ಆಯ್ಕೆ

ಮದುವೆಗೆ ರೇಷ್ಮೆ ಸೀರೆಯನ್ನು ಉಡುವುದು ಪ್ರಮುಖ ಸಂಗತಿಗಳಲ್ಲೊಂದು. ಅದರಲ್ಲೂ ಗ್ರ್ಯಾಂಡ್‌ ಲುಕ್‌ ನೀಡುವ ಟ್ರೆಂಡಿ ಗೋಲ್ಡನ್‌ ಹಾಗೂ ಸಿಲ್ವರ್‌ ಶೇಡ್‌ನ ಬಾರ್ಡರ್‌ ರೇಷ್ಮೆ ಸೀರೆಗಳನ್ನು ಉಟ್ಟಾಗ ಎದ್ದು ಕಾಣುವುದು. ಪಾಸ್ಟೆಲ್‌ ಶೇಡ್‌ಗಳು ಚಾಲ್ತಿಯಲ್ಲಿವೆ.

ಟ್ರೆಡಿಷನಲ್‌ ಹೇರ್‌ಸ್ಟೈಲ್‌

ಇದೀಗ ಲಾಂಗ್‌ ಮೆಸ್ಸಿ ಜಡೆ ಹಾಗೂ ಉದ್ದುದ್ದದ ಕುಚ್ಚು ಹಾಕಿರುವಂತಹ ಇನ್‌ಸ್ಟಂಟ್‌ ಜಡೆಗಳು ಟ್ರೆಂಡಿಯಾಗಿವೆ. ಇವುಗಳಿಗೆ ಹೇರ್‌ ಎಕ್ಸ್‌ಟೆನ್‌ಷನ್‌ ಹಾಕಿ ವೈವಿಧ್ಯಮಯವಾಗಿ ಸಿಂಗರಿಸಲಾಗುತ್ತದೆ. ಹೂವುಗಳ ಸಿಂಗಾರ ಕೂಡ ಟ್ರೆಡಿಷನಲ್‌ ಲುಕ್‌ ಜೊತೆಗೆ ಮದುಮಗಳನ್ನು ಗ್ರ್ಯಾಂಡ್‌ ಆಗಿ ಬಿಂಬಿಸುತ್ತದೆ.

ಆಂಟಿಕ್‌ ಆಭರಣಗಳನ್ನು ಧರಿಸಿ

ಆಂಟಿಕ್‌ ಜ್ಯುವೆಲರಿಗಳು ಇಡೀ ಲುಕ್ಕನ್ನು ಹೈಲೈಟ್‌ ಮಾಡುತ್ತದೆ. ಆಯಾ ರೇಷ್ಮೆ ಸೀರೆ ಮ್ಯಾಚ್‌ ಆಗುವಂತಹ ಜ್ಯುವೆಲರಿ ಸೆಟ್‌ ಧರಿಸಿದಾಗ ದೇವತೆಯ ಲುಕ್‌ ಪಡೆಯಬಹುದು. ಜುಮಕಿ, ಕಿವಿಯ ಸರಪಳಿ, ನೆಕ್ಲೇಸ್‌, ಹಾರ, ಕಡಗ, ಕೈ ಉಂಗುರಗಳು ಹೀಗೆ ಎಲ್ಲವನ್ನೂ ಧರಿಸಬೇಕು. ಟೆಂಪಲ್‌ ಜ್ಯುವೆಲರಿ, ಕಾಸಿನ, ಅಡಕೆ ಡಿಸೈನ್‌ನ ನೆಕ್ಲೇಸ್‌ಗಳು ಟ್ರೆಡಿಷನಲ್‌ ಲುಕ್‌ ನೀಡಬಲ್ಲವು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬದಲಾಯ್ತು ಜೆನ್‌ ಜಿ ಹುಡುಗರ ಸಮ್ಮರ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌

Exit mobile version