-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದುಮಗಳ ಐ ಮೇಕಪ್ (Wedding Eye Makeup Tips) ಮದುವೆಯಲ್ಲಿ ಎಲ್ಲರ ಗಮನ ಸೆಳೆಯುವಂತಿರಬೇಕು. ಅದನ್ನು ಬಿಟ್ಟು ಇಡೀ ಲುಕ್ಕನ್ನು ಓವರ್‌ಟೇಕ್ ಮಾಡಬಾರದು. ನೋಡುಗರಿಗೆ ಆಭಾಸ ಎಂದೆನಿಸುವಂತಿರಬಾರದು. ಎಲ್ಲದಕ್ಕಿಂತ ಹೆಚ್ಚಾಗಿ ಪಾರ್ಟಿ ಲುಕ್ ನೀಡಬಾರದು ಎನ್ನುತ್ತಾರೆ ಮೇಕಪ್ ಎಕ್ಸ್ಪರ್ಟ್ಸ್ ಮಂಗಲಾ. “ಮದುವೆಯಲ್ಲಿ ಮೇಕಪ್‌ಗಾಗಿ ಸಾಕಷ್ಟು ಹೆಣ್ಣು ಮಕ್ಕಳು ಹಣ ಸುರಿಯುತ್ತಾರೆ. ಬ್ಯೂಟಿ ಎಕ್ಸ್‌ಫರ್ಟ್ಸ್ ಕೂಡ ಯಾವುದೋ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿ ಈ ರೀತಿಯ ಮೇಕಪ್ ಮಾಡುತ್ತೇವೆ ಎಂದು ಹೇಳಿ, ಅದು ನಿಮಗೆ ಹೊಂದುತ್ತದೆ ಎಂದು ಒಪ್ಪಿಸಿ, ಕೆಲವೊಮ್ಮೆ ಕೊನೆಗೆ ಮದುವೆಯ ದಿನ ಬದಲಿಸುತ್ತಾರೆ. ಇದು ಮದುಮಗಳ ಇಡೀ ಲುಕ್ಕನ್ನು ಹಾಳು ಮಾಡಬಹುದು. ಅಲ್ಲದೇ ಮದುವೆಯ ಮೇಕಪ್ ಬದಲು ಇತರೇ ಲುಕ್ ನೀಡಬಹುದು. ಅದಕ್ಕಾಗಿ ಮದುವೆಯಾಗುವ ಪ್ರತಿ ಹೆಣ್ಣುಮಕ್ಕಳು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಮೊದಲೇ ಬ್ಯೂಟಿ ಎಕ್ಸ್‌ಫರ್ಟ್ಸ್‌ಗಳ ಬಳಿ ಮಾತನಾಡಿಕೊಂಡು ಡಿಸೈಡ್ ಮಾಡುವುದು, ಟ್ರಯಲ್ ಮಾಡಿ ನೋಡುವುದು ಉತ್ತಮ” ಎನ್ನುತ್ತಾರೆ ಸೌಂದರ್ಯ ಪರಿಣಿತರು.
ಸೀರೆ/ಔಟ್‌ಫಿಟ್‌ಗೆ ಮ್ಯಾಚ್ ಆಗುವಂತಿರಲಿ
ಮದು ಮಗಳು ಧರಿಸುವ ಲೆಹೆಂಗಾ, ಗೌನ್ ಅಥವಾ ಮಹೂರ್ತದ ಸೀರೆಗೆ ಮದುಮಗಳ ಐ ಮೇಕಪ್ ಮ್ಯಾಚ್ ಆಗುವಂತಿರಬೇಕು. ಹಾಗೆಂದು ಅಭಾಸ ಹುಟ್ಟಿಸುವಂತಹ ಶೇಡ್‌ಗಳ ಬಳಕೆ ಬೇಡ. ತೀರಾ ಡಿಟ್ಟು ಡಿಟ್ ಮ್ಯಾಚಿಂಗ್ ಮಾಡುವುದೂ ಕೂಡ ಬೇಡ. ನೋಡಲು ವಿಚಿತ್ರವಾಗಿ ಕಾಣಿಸಬಹುದು. ತಿಳಿಯಾದ ಶೇಡ್ಸ್ ಆಕರ್ಷಕವಾಗಿ ಕಾಣಿಸುವುದು.
ಐ ಮೇಕಪ್ ಹಿತ ಮಿತವಾಗಿರಲಿ
ಮದುಮಗಳ ಐ ಮೇಕಪ್ ನೋಡಲು ಹಿತ ಮಿತವಾಗಿರಬೇಕು. ಯಾಕೆಂದರೇ, ಹೆಚ್ಚಾದರೂ ಅದು ಪಾರ್ಟಿ ಲುಕ್ ನೀಡಬಹುದು. ಕಡಿಮೆಯಾದರೂ ಪರವಾಗಿಲ್ಲ. ಆದಷ್ಟೂ ನೋಡುಗರಿಗೆ ಹಿತವೆನಿಸುವ ಶೇಡ್‌ಗಳ ಬಳಕೆ ಮಾಡಲು ಬ್ಯೂಟಿ ಎಕ್ಸ್‌ಫರ್ಟ್ಸ್‌ಗೆ ತಿಳಿಸಿ. ಲೈಟ್ ಶೇಡ್‌ಗಳ ಬಳಕೆ ಉತ್ತಮ. ಕಂಗಳ ಸೌಂದಯ ಕುಂದಿಸುವಂತಹ ಡಾರ್ಕ್ ಶೇಡ್ ಬಳಕೆ ಬೇಡ, ಉದಾಹರಣೆಗೆ ಬ್ಲ್ಯೂ, ಹಸಿರು, ಪಿಂಕ್ ಹೀಗೆ ಇವುಗಳ ಬಳಕೆ ಹೆಚ್ಚಾಗದಿರಲಿ. ಇನ್ನು, ಕಾಜಲ್, ಐ ಲೈನರ್ ತೆಳುವಾಗಿ ಹಚ್ಚುವುದು ಉತ್ತಮ.
ಸ್ಮಡ್ಜ್ ಪ್ರೂಫ್ ಐ ಮೇಕಪ್‌ಗೆ ಆದ್ಯತೆ
ಮದುವೆಯಲ್ಲಿ ಮದು ಮಗಳು ಆದಷ್ಟೂ ಸ್ಮಡ್ಜ್ ಫ್ರೂಫ್ ಐ ಮೇಕಪ್‌ಗೆ ಆದ್ಯತೆ ನೀಡುವುದು ಉತ್ತಮ. ಅದರಲ್ಲೂ ಮಹೂರ್ತದ ನಂತರ ತವರು ಮನೆಯವರ ವಿದಾಯದ ಸಮಯದಲ್ಲಿ ಕಣ್ಣಿರು ಹಾಕಿದಾಗ, ಕಣ್ಣಿನ ಮೇಕಪ್ ಹರಡಿ ನೋಡಲು ವಿಚಿತ್ರವಾಗಿ ಕಾಣಿಸಬಹುದು. ಹಾಗಾಗಿ ಆ ದಿನ ವಾಟರ್ ಪ್ರೂಫ್ ಮತ್ತು ಸ್ಮಡ್ಜ್ ಫ್ರೂಫ್ ಐ ಮೇಕಪ್‌ಗೆ ಪ್ರಾಮುಖ್ಯತೆ ನೀಡುವುದು ಬೆಸ್ಟ್.
ಕಂಗಳು ಅರಳಿದಂತಹ ಲುಕ್
ಯಾವುದೇ ಕಾರಣಕ್ಕೂ ಕಂಗಳು ಚಿಕ್ಕದಾಗಿ ಕಾಣಿಸುವಂತಹ ಐ ಮೇಕಪ್ ಬೇಡ. ಯಾಕೆಂದರೇ, ಇದು ಇಡೀ ಮುಖದ ಲುಕ್ ಬದಲಿಸುತ್ತದೆ. ಹಾಗಾಗಿ ಆದಷ್ಟೂ ಕಣ್ಣುಗಳ ಅಗಲವಾಗಿ ಕಾಣಿಸುವಂತಹ ಮೇಕಪ್‌ಗೆ ಸೈ ಎನ್ನಿ. ಮುಖದ ಮೇಕಪ್‌ಗೆ ಹೊಂದುವಂತಿರಲಿ.
ಲೆನ್ಸ್ ಹಾಕಿದ ಐ ಮೇಕಪ್
ಕೆಲವು ಹೆಣ್ಣುಮಕ್ಕಳು ಡಿಫರೆಂಟ್ ಲುಕ್ ಹಾಗೂ ಸೆಲೆಬ್ರೆಟಿ ಲುಕ್‌ಗಾಗಿ ಐ ಬಾಲ್ ಬಣ್ಣ ಬದಲಿಸಲು ಲೆನ್ಸ್ ಹಾಕುತ್ತಾರೆ. ಕೆಲವೊಮ್ಮೆ ಇದು ಹೊಂದುವುದಿಲ್ಲ. ಇಂತಹವರು ಆದಷ್ಟೂ ಮೊದಲೇ ಪ್ರಯೋಗಾತ್ಮಕವಾಗಿ ಈ ಮೇಕಪ್ ಮಾಡಿ ನೋಡಿ. ಮುಖಕ್ಕೆ ಮ್ಯಾಚ್ ಆದರೆ ಮಾತ್ರ ಮುಂದುವರೆಯಿರಿ. ಲೆನ್ಸ್ ತೆಗೆಯುವಾಗ, ಹಾಕುವಾಗ ಸಾವಧಾನವಿರಲಿ. ಇಲ್ಲವಾದಲ್ಲಿ, ಕಣ್ಣು ಕೆಂಪಾಗಾಗಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Actress Summer Fashion: ಬಾಲಿವುಡ್‌ನವರನ್ನು ಮೀರಿಸಿದ ನಟಿ ಶಿಲ್ಪಾ ಮಂಜುನಾಥ್ ಪೂಲ್‌ಸೈಡ್ ಹಾಟ್ ಲುಕ್!