ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್ ಸೀಸನ್‌ನಲ್ಲಿ (Wedding Fashion) ಮಿರ ಮಿರ ಮಿನುಗುವ ಬಗೆಬಗೆಯ ಗ್ರ್ಯಾಂಡ್ ಲೆಹೆಂಗಾಗಳು ಟ್ರೆಂಡಿಯಾಗಿವೆ. ಮದುವೆಯಲ್ಲಿ ಧರಿಸಿದಾಗ ಗ್ರ್ಯಾಂಡ್ ಲುಕ್ ನೀಡುವ ಈ ಡಿಸೈನರ್‌ವೇರ್‌ಗಳು ಸಾದಾ, ಪ್ರಿಂಟೆಡ್, ಲೈನ್ಸ್, ಫ್ಲೋರಲ್, ಟ್ರಾಪಿಕಲ್ ಹಾಗೂ ಜೆಮೆಟ್ರಿಕಲ್ ಸೇರಿದಂತೆ ನಾನಾ ವೆರೈಟಿ ಡಿಸೈನ್‌ನಲ್ಲಿ ಆಗಮಿಸಿವೆ. ಪಾಸ್ಟೆಲ್ ಶೇಡ್‌ನವು ಹೆಚ್ಚು ಯುವತಿಯರನ್ನು ಸೆಳೆದಿವೆ. ಒಂದಕ್ಕಿಂತ ಒಂದು ಲೆಹೆಂಗಾಗಳು ಮನಮೋಹಕ ಡಿಸೈನ್‌ನಲ್ಲಿ ಆಗಮಿಸಿದ್ದು, ಹ್ಯಾಂಡ್‌ವರ್ಕ್ ಹಾಗೂ ಮೆಷಿನ್ ವರ್ಕ್‌ನಲ್ಲೂ ಪ್ರಚಲಿತದಲ್ಲಿವೆ.
ಟ್ರೆಂಡ್‌ನಲ್ಲಿರುವ ಶಿಮ್ಮರ್ ಲೆಹೆಂಗಾಗಳು
ಶಿಮ್ಮರ್ ಫ್ಯಾಬ್ರಿಕ್‌ನವು, ಸಾದಾ ವರ್ಣದ ,ಮಾನೋಕ್ರೋಮ್ ಸಿಕ್ವೀನ್ಸ್‌ನವು, ಮಲ್ಟಿ ಶೇಡ್ ಸಿಕ್ವೀನ್ಸ್, ಪ್ರಿಂಟೆಡ್ ಶೈನಿಂಗ್ ಡಿಸೈನ್‌ನವು, ಶಿಫಾನ್ ಶಿಮ್ಮರ್ ಪ್ರಿಂಟ್ಸ್, ಜಾರ್ಜೆಟ್ ಶಿಮ್ಮರ್ ಲೈನ್ಸ್, ಡಿಸೈನರ್ ಬಾರ್ಡರ್ ಶಿಮ್ಮರ್‌ನ ಲೆಹೆಂಗಾಗಳು ಈ ವೆಡ್ಡಿಂಗ್ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿವೆ.
ಪಾಸ್ಟೆಲ್ ಶೇಡ್ಸ್‌ಗೆ ಬೇಡಿಕೆ
ಶಿಮ್ಮರ್ ಡಿಸೈನ್‌ನಲ್ಲಿ ಪಾಸ್ಟೆಲ್ ಶೇಡ್ಸ್‌ನ ಲೆಹೆಂಗಾಗಳು, ವೆಡ್ಡಿಂಗ್ ಫ್ಯಾಷನ್‌ನಲ್ಲಿ ಚಾಲ್ತಿಯಲ್ಲಿವೆ. ರೋಸ್, ಪಿಸ್ತಾ ಗ್ರೀನ್, ಪೀಚ್, ಲೈಟ್ ಬ್ಲ್ಯೂ, ಹೀಗೆ ನಾನಾ ತಿಳಿ ವರ್ಣದ ಪಾಸ್ಟೆಲ್ ಶೇಡ್‌ನ ಗ್ರ್ಯಾಂಡ್ ಲೆಹೆಂಗಾಗಳು ಮದುವೆಯಾಗುವ ಮದುಮಗಳನ್ನು ಮಾತ್ರವಲ್ಲ, ಮದುವೆಯಲ್ಲಿ ಪಾಲ್ಗೊಳ್ಳುವ ಮಾನಿನಿಯರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಗ್ರ್ಯಾಂಡ್ ಶಿಮ್ಮರ್ ಮಿಕ್ಸ್ ಮ್ಯಾಚ್ ಡಿಸೈನ್ ದುಪಟ್ಟಾ
ಈ ಶಿಮ್ಮರ್ ಲೆಹೆಂಗಾಗಳು ಕಂಪ್ಲೀಟ್ ಶೈನಿಂಗ್ ಇರಲಿ, ಬಿಡಲಿ, ಇವುಗಳಿಗೆ ಹೊಂದುವಂತಹ ಮಿಕ್ಸ್ ಮ್ಯಾಚ್ ಅಥವಾ ಮಾನೋಕ್ರೋಮ್ ಶೇಡ್‌ನ ಮಿರಮಿರ ಮಿನುಗುವ ಡಿಸೈನ್ ಒಳಗೊಂಡ ದುಪಟ್ಟಾಗಳು ಈ ಶೈಲಿಯ ಲೆಹೆಂಗಾಗಳ ಸೌಂದರ್ಯವನ್ನು ಹೆಚ್ಚಿಸಿವೆ.
ಇದನ್ನೂ ಓದಿ: Summer Star Fashion: ಏನಿದು ನಟಿ ಅದಿತಿ ರಾವ್ ಹೈದರಿಯ ಕೋ-ಆರ್ಡ್ ಕೊಸ್ಟಾ ಪ್ಯಾಂಟ್ ಟ್ರೆಂಡ್?
ಶಿಮ್ಮರ್ ಲೆಹೆಂಗಾ ಆಯ್ಕೆಗೆ 7 ಸೂತ್ರ
- ಒಂದೇ ಶೇಡ್‌ನ ಶಿಮ್ಮರ್ ಲೆಹೆಂಗಾಗಳು ಹೆಚ್ಚು ಡಿಸೈನ್‌ನಲ್ಲಿ ಲಭ್ಯ.
- ಪಾಸ್ಟೆಲ್ ಶೇಡ್ನವನ್ನು ಸ್ಕಿನ್ಟೋನ್ಗೆ ತಕ್ಕಂತೆ ಆಯ್ಕೆ ಮಾಡಿ.
- ದುಪಟ್ಟಾ ಕೂಡ ಗ್ರ್ಯಾಂಡ್ ಆಗಿರುವುದನ್ನು ಚೂಸ್ ಮಾಡಿ.
- ಬಾರ್ಡರ್ ಲೆಹೆಂಗಾಗಳು ನೋಡಲು ಆಕರ್ಷಕವಾಗಿ ಕಾಣುತ್ತವೆ.
- ಸಿಕ್ವಿನ್ಸ್ನವು ದುಬಾರಿಯಾದರೂ ನೋಡಲು ಸೆಲೆಬ್ರೆಟಿ ಲುಕ್ ನೀಡುತ್ತವೆ.
- ಆದಷ್ಟೂ ಲೈಟ್ವೈಟ್ ಗ್ರ್ಯಾಂಡ್ ಲೆಹೆಂಗಾ ಆಯ್ಕೆ ನಿಮ್ಮದಾಗಿರಲಿ.
- ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ಲೆಹೆಂಗಾ ನೋಡಿಕೊಳ್ಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)