-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಂಗಳೂರು: ನಾರ್ತ್ ಇಂಡಿಯನ್ ಮದುವೆಗಳಲ್ಲಿ ಟ್ರೆಂಡಿಯಾಗಿದ್ದ (Wedding Jewel Fashion) ನೋಸ್ ರಿಂಗ್ ಚೈನ್ ಜ್ಯುವೆಲ್ ಇದೀಗ ನಮ್ಮ ಸೌತ್ ಇಂಡಿಯನ್ ಮದುವೆಗಳಿಗೂ ಎಂಟ್ರಿ ನೀಡಿದ್ದು, ಮದುಮಗಳ ವಧನದ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಡಿಫರೆಂಟ್ ಇಮೇಜ್ ನೀಡುತ್ತಿದೆ.
ಮೂಗಿನ ಬೊಟ್ಟು, ನತ್ತು, ಮೂಗಿನ ರಿಂಗ್ ಇವೆಲ್ಲಾ ನಮ್ಮ ದಕ್ಷಿಣ ಭಾರತದಲ್ಲಿ ಮದುಮಗಳು ಧರಿಸುವ ಆಭರಣಗಳಾಗಿದ್ದವು. ದಿನ ಕಳೆದಂತೆ ಮೂಗನ್ನು ಚುಚ್ಚಿಸದೆಯೇ ಮೂಗಿನ ಆಭರಣಗಳನ್ನು ಧರಿಸುವ ಫ್ಯಾಷನ್ ಆಗಮಿಸಿತು. ಇದೀಗ ಉತ್ತರ ಹಾಗೂ ದಕ್ಷಿಣ ಭಾರತದ ಆಭರಣ ಸಂಸ್ಕೃತಿ ಬೆಸೆಯುವ ವಿನೂತನ ಜ್ಯುವೆಲ್ ಇಲ್ಲಿನ ಫ್ಯಾಷನ್ ಲಗ್ಗೆ ಇಟ್ಟಿದೆ. ಮೊದಮೊದಲು ಉತ್ತರ ಹಾಗೂ ದಕ್ಷಿಣ ಭಾರತದವರು ಆಗುವ ಪ್ರೇಮ ವಿವಾಹಗಳಲ್ಲಿ ಮಾತ್ರ ಇವು ಕಾಣಿಸುತ್ತಿದ್ದವು. ಇದೀಗ ಫೋಟೊಶೂಟ್ ಹಾಗೂ ವೆಡ್ಡಿಂಗ್‌ನಲ್ಲಿ ರಾಯಲ್ ಲುಕ್ ನೀಡುವ ಸಲುವಾಗಿ ಈ ಶೈಲಿಯ ನೋಸ್ ರಿಂಗ್ ಚೈನ್ ಧರಿಸುವ ಕಾನ್ಸೆಪ್ಟ್ ಬಂದಿದೆ ಎನ್ನುತ್ತಾರೆ ಬ್ಯೂಟಿ ತಜ್ಞರು. ಅವರ ಪ್ರಕಾರ, ನೋಸ್ ರಿಂಗ್ ಚೈನ್ ಧರಿಸುವುದರಿಂದ ಗ್ರ್ಯಾಂಡ್ ಲುಕ್ ಜತೆಗೆ ಮಹಾರಾಣಿ ಲುಕ್ ಪಡೆಯಬಹುದು ಎನ್ನುತ್ತಾರೆ.
ಟ್ರೆಂಡಿಯಾಗಿರುವ ಡಿಸೈನ್‌ಗಳಿವು
ಸಾದಾ ನೋಸ್ ರಿಂಗ್‌ಗೆ ಸಿಂಪಲ್ ಚೈನ್, ಹೂಪ್ ಶೈಲಿಯ ಬಿಗ್ ರಿಂಗ್‌ಗೆ ಗೋಲ್ಡನ್ ಬೀಡ್ಸ್, ಡಿಸೈನರ್ ಗೀಲ್ಡ್ ರಿಂಗ್‌ಗೆ ಪರ್ಲ್ ಚೈನ್, ನೋಸ್ ರಿಂಗ್‌ಗೆ ಲೇಯರ್ ಪರ್ಲ್ ಚೈನ್ ಸೇರಿದಂತೆ ಬಂಗಾರ ವರ್ಣದವು ಟ್ರೆಂಡ್‌ನಲ್ಲಿವೆ. ಇವು ಟ್ರೆಡಿಷನಲ್ ಉಡುಪಿಗೆ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುತ್ತವೆ ಎನ್ನುತ್ತಾರೆ ಬ್ಯೂಟಿ ಎಕ್ಸ್ಪಟ್ರ್ಸ್.
ಮುಖದ ಆಕಾರಕ್ಕೆ ತಕ್ಕಂತೆ ನೋಸ್ ರಿಂಗ್ ಚೈನ್
ಮದುಮಗಳು ಮುಖದ ಆಕಾರಕ್ಕೆ ತಕ್ಕಂತೆ ಇವನ್ನು ಧರಿಸುವುದು ಉತ್ತಮ. ಇದಕ್ಕಾಗಿ ಬ್ಯೂಟಿ ಎಕ್ಸ್‌ಪರ್ಟ್ ಸಲಹೆ ಪಡೆಯಬಹುದು. ಮದುವೆಯಲ್ಲಿ ಧರಿಸುವ ಇಚ್ಛೆಯಿರುವವರು ಮೊದಲೇ ಟ್ರಯಲ್ ನೋಡಿಕೊಳ್ಳುವುದು ಒಳ್ಳೆಯದು. ಮುಖ ಚಿಕ್ಕದಿದ್ದಲ್ಲಿ ಹೆವಿ ಡಿಸೈನ್ ಬೇಡ. ಇನ್ನು ಮುಖ ಅಗಲವಾಗಿದ್ದಲ್ಲಿ ಹೆವಿಹಾಗೂ ಲೇಯರ್ ಚೈನ್ನದ್ದನ್ನು ಧರಿಸಬಹುದು. ಮುಖವನ್ನು ಈ ಆಭರಣ ಕವರ್ ಮಾಡುವುದರಿಂದ ಯೋಚಿಸಿ ಧರಿಸಿ. ಯಾವ ಸೈಡ್‌ನಲ್ಲಿ ಧರಿಸಬೇಕೆಂಬುದನ್ನು ಮೊದಲೇ ಡಿಸೈಡ್ ಮಾಡಿ.
ಇದನ್ನೂ ಓದಿ: Fashion Show News: ಪ್ರೈಮ್ ಫ್ಯಾಷನ್ ವೀಕ್‌ನಲ್ಲಿ ಶ್ವೇತಾ ನಂದಕುಮಾರ್ ಚೀತಾ ಪ್ರಿಂಟ್ಸ್ ಡಿಸೈನರ್‌ವೇರ್ಸ್
ನೋಸ್ ರಿಂಗ್ ಚೈನ್ ಬಗ್ಗೆ ತಿಳಿದಿರಲಿ
- ಲೈಟ್ವೇಟ್ ನೋಸ್ ರಿಂಗ್ ಚೈನ್ ಧರಿಸುವುದು ಉತ್ತಮ.
- ಹೇರ್ಸ್ಟೈಲ್ ಮುಗಿದ ನಂತರ ಧರಿಸುವುದು ಒಳಿತು.
- ಕಂಫರ್ಟಬಲ್ ಎನಿಸಿದಲ್ಲಿ ಮಾತ್ರ ಧರಿಸಿ