ಫ್ಯಾಷನ್
Wedding Jewel Fashion: ಸೌತ್ ಇಂಡಿಯನ್ ವೆಡ್ಡಿಂಗ್ ಜ್ಯುವೆಲ್ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ನೋಸ್ ರಿಂಗ್ ಚೈನ್
Wedding Jewel Fashion: ಇದುವರೆಗೂ ನಾರ್ತ್ ಇಂಡಿಯನ್ಸ್ ಮದುವೆಗಳಲ್ಲಿ ಮದುಮಗಳ ಜ್ಯುವೆಲ್ ಫ್ಯಾಷನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನೋಸ್ ರಿಂಗ್ ಚೈನ್ ಆಭರಣ ಇದೀಗ ನಮ್ಮ ದಕ್ಷಿಣ ಭಾರತದ ಮದುವೆಗೂ ಎಂಟ್ರಿ ನೀಡಿದೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೆಂಗಳೂರು: ನಾರ್ತ್ ಇಂಡಿಯನ್ ಮದುವೆಗಳಲ್ಲಿ ಟ್ರೆಂಡಿಯಾಗಿದ್ದ (Wedding Jewel Fashion) ನೋಸ್ ರಿಂಗ್ ಚೈನ್ ಜ್ಯುವೆಲ್ ಇದೀಗ ನಮ್ಮ ಸೌತ್ ಇಂಡಿಯನ್ ಮದುವೆಗಳಿಗೂ ಎಂಟ್ರಿ ನೀಡಿದ್ದು, ಮದುಮಗಳ ವಧನದ ಸೌಂದರ್ಯವನ್ನು ಹೆಚ್ಚಿಸುವುದರೊಂದಿಗೆ ಡಿಫರೆಂಟ್ ಇಮೇಜ್ ನೀಡುತ್ತಿದೆ.
ಮೂಗಿನ ಬೊಟ್ಟು, ನತ್ತು, ಮೂಗಿನ ರಿಂಗ್ ಇವೆಲ್ಲಾ ನಮ್ಮ ದಕ್ಷಿಣ ಭಾರತದಲ್ಲಿ ಮದುಮಗಳು ಧರಿಸುವ ಆಭರಣಗಳಾಗಿದ್ದವು. ದಿನ ಕಳೆದಂತೆ ಮೂಗನ್ನು ಚುಚ್ಚಿಸದೆಯೇ ಮೂಗಿನ ಆಭರಣಗಳನ್ನು ಧರಿಸುವ ಫ್ಯಾಷನ್ ಆಗಮಿಸಿತು. ಇದೀಗ ಉತ್ತರ ಹಾಗೂ ದಕ್ಷಿಣ ಭಾರತದ ಆಭರಣ ಸಂಸ್ಕೃತಿ ಬೆಸೆಯುವ ವಿನೂತನ ಜ್ಯುವೆಲ್ ಇಲ್ಲಿನ ಫ್ಯಾಷನ್ ಲಗ್ಗೆ ಇಟ್ಟಿದೆ. ಮೊದಮೊದಲು ಉತ್ತರ ಹಾಗೂ ದಕ್ಷಿಣ ಭಾರತದವರು ಆಗುವ ಪ್ರೇಮ ವಿವಾಹಗಳಲ್ಲಿ ಮಾತ್ರ ಇವು ಕಾಣಿಸುತ್ತಿದ್ದವು. ಇದೀಗ ಫೋಟೊಶೂಟ್ ಹಾಗೂ ವೆಡ್ಡಿಂಗ್‌ನಲ್ಲಿ ರಾಯಲ್ ಲುಕ್ ನೀಡುವ ಸಲುವಾಗಿ ಈ ಶೈಲಿಯ ನೋಸ್ ರಿಂಗ್ ಚೈನ್ ಧರಿಸುವ ಕಾನ್ಸೆಪ್ಟ್ ಬಂದಿದೆ ಎನ್ನುತ್ತಾರೆ ಬ್ಯೂಟಿ ತಜ್ಞರು. ಅವರ ಪ್ರಕಾರ, ನೋಸ್ ರಿಂಗ್ ಚೈನ್ ಧರಿಸುವುದರಿಂದ ಗ್ರ್ಯಾಂಡ್ ಲುಕ್ ಜತೆಗೆ ಮಹಾರಾಣಿ ಲುಕ್ ಪಡೆಯಬಹುದು ಎನ್ನುತ್ತಾರೆ.
ಟ್ರೆಂಡಿಯಾಗಿರುವ ಡಿಸೈನ್‌ಗಳಿವು
ಸಾದಾ ನೋಸ್ ರಿಂಗ್‌ಗೆ ಸಿಂಪಲ್ ಚೈನ್, ಹೂಪ್ ಶೈಲಿಯ ಬಿಗ್ ರಿಂಗ್‌ಗೆ ಗೋಲ್ಡನ್ ಬೀಡ್ಸ್, ಡಿಸೈನರ್ ಗೀಲ್ಡ್ ರಿಂಗ್‌ಗೆ ಪರ್ಲ್ ಚೈನ್, ನೋಸ್ ರಿಂಗ್‌ಗೆ ಲೇಯರ್ ಪರ್ಲ್ ಚೈನ್ ಸೇರಿದಂತೆ ಬಂಗಾರ ವರ್ಣದವು ಟ್ರೆಂಡ್‌ನಲ್ಲಿವೆ. ಇವು ಟ್ರೆಡಿಷನಲ್ ಉಡುಪಿಗೆ ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುತ್ತವೆ ಎನ್ನುತ್ತಾರೆ ಬ್ಯೂಟಿ ಎಕ್ಸ್ಪಟ್ರ್ಸ್.
ಮುಖದ ಆಕಾರಕ್ಕೆ ತಕ್ಕಂತೆ ನೋಸ್ ರಿಂಗ್ ಚೈನ್
ಮದುಮಗಳು ಮುಖದ ಆಕಾರಕ್ಕೆ ತಕ್ಕಂತೆ ಇವನ್ನು ಧರಿಸುವುದು ಉತ್ತಮ. ಇದಕ್ಕಾಗಿ ಬ್ಯೂಟಿ ಎಕ್ಸ್‌ಪರ್ಟ್ ಸಲಹೆ ಪಡೆಯಬಹುದು. ಮದುವೆಯಲ್ಲಿ ಧರಿಸುವ ಇಚ್ಛೆಯಿರುವವರು ಮೊದಲೇ ಟ್ರಯಲ್ ನೋಡಿಕೊಳ್ಳುವುದು ಒಳ್ಳೆಯದು. ಮುಖ ಚಿಕ್ಕದಿದ್ದಲ್ಲಿ ಹೆವಿ ಡಿಸೈನ್ ಬೇಡ. ಇನ್ನು ಮುಖ ಅಗಲವಾಗಿದ್ದಲ್ಲಿ ಹೆವಿಹಾಗೂ ಲೇಯರ್ ಚೈನ್ನದ್ದನ್ನು ಧರಿಸಬಹುದು. ಮುಖವನ್ನು ಈ ಆಭರಣ ಕವರ್ ಮಾಡುವುದರಿಂದ ಯೋಚಿಸಿ ಧರಿಸಿ. ಯಾವ ಸೈಡ್‌ನಲ್ಲಿ ಧರಿಸಬೇಕೆಂಬುದನ್ನು ಮೊದಲೇ ಡಿಸೈಡ್ ಮಾಡಿ.
ಇದನ್ನೂ ಓದಿ: Fashion Show News: ಪ್ರೈಮ್ ಫ್ಯಾಷನ್ ವೀಕ್‌ನಲ್ಲಿ ಶ್ವೇತಾ ನಂದಕುಮಾರ್ ಚೀತಾ ಪ್ರಿಂಟ್ಸ್ ಡಿಸೈನರ್‌ವೇರ್ಸ್
ನೋಸ್ ರಿಂಗ್ ಚೈನ್ ಬಗ್ಗೆ ತಿಳಿದಿರಲಿ
- ಲೈಟ್‌ವೇಟ್ ನೋಸ್ ರಿಂಗ್ ಚೈನ್ ಧರಿಸುವುದು ಉತ್ತಮ.
- ಹೇರ್‌ಸ್ಟೈಲ್ ಮುಗಿದ ನಂತರ ಧರಿಸುವುದು ಒಳಿತು.
- ಕಂಫರ್ಟಬಲ್ ಎನಿಸಿದಲ್ಲಿ ಮಾತ್ರ ಧರಿಸಿ
ಫ್ಯಾಷನ್
Mens Fashion: ಸೀಸನ್ ಎಂಡ್‌ನಲ್ಲಿ ಮೆನ್ಸ್ ಫ್ಯಾಷನ್‌ಗೆ ಎಂಟ್ರಿ ಕೊಟ್ಟ ಲಿನನ್ ಶರ್ಟ್ ಜಾಕೆಟ್
ಈ ಸೀಸನ್ ಕೊನೆಯಲ್ಲಿ ಇದೀಗ ಲಿನಿನ್ ಶರ್ಟ್ ಜಾಕೆಟ್‌ಗಳು ಮೆನ್ಸ್ ಫ್ಯಾಷನ್‌ಗೆ (Mens Fashion) ಎಂಟ್ರಿ ನೀಡಿದ್ದು, ಪುರುಷರ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸಾಥ್ ನೀಡುತ್ತಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀಸನ್‌ನ ಫ್ಯಾಷನ್‌ನಲ್ಲಿ ಇದೀಗ ಮೆನ್ಸ್ ಫ್ಯಾಷನ್‌ಗೆ (Mens Fashion) ಸಾಥ್ ನೀಡುವ ಲಿನನ್ ಶರ್ಟ್ ಜಾಕೆಟ್‌ಗಳು ಎಂಟ್ರಿ ನೀಡಿವೆ. ಯುವಕರ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ತಕ್ಕಂತೆ ಧರಿಸಬಹುದಾದ ಈ ಶರ್ಟ್ ಜಾಕೆಟ್‌ಗಳು ಇದೀಗ ಯುವಕರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಪುರುಷರನ್ನು ಬರಸೆಳೆಯುತ್ತಿವೆ.
ಆದರೆ, ಇದೀಗ ಮಲ್ಟಿಪಲ್ ಪಾಕೆಟ್ ಹೊಂದಿರುವ ಸಾಲಿಡ್ ಶೇಡ್‌ನ ಲಿನನ್ ಶರ್ಟ್ ಜಾಕೆಟ್‌ಗಳು ಟ್ರೆಂಡ್‌ನಲ್ಲಿದ್ದು, ನೋಡಲು ಆಕರ್ಷಕವಾಗಿ ಕಾಣುತ್ತಿವೆ. ಸಾಲಿಡ್ ಕಲರ್‌ಗಳಲ್ಲಿ ಲಭ್ಯವಿರುವ ಈ ಶರ್ಟ್ ಜಾಕೆಟ್‌ಗಳು ಪುರುಷರ ಫ್ಯಾಷನ್‌ನಲ್ಲಿ ನಾನಾ ಶೇಡ್‌ಗಳಲ್ಲೂ ಲಭ್ಯವಿದೆ. ಲೈಟ್ ಶೇಡ್ಸ್ ಪಾಸ್ಟೆಲ್ ಶೇಡ್ಸ್ ಹಾಗೂ ಫೆಮಿನೈನ್ ಜಾಕೆಟ್ ಶೇಡ್‌ಗಳು ದೊರೆಯುತ್ತಿವೆ. ಅಚ್ಚರಿ ಎಂಬಂತೆ ಯೂನಿಸೆಕ್ಸ್ ಡಿಸೈನ್‌ನ ಶರ್ಟ್ ಜಾಕೆಟ್‌ಗಳು ಕೂಡ ದೊಡ್ಡ ಬ್ರಾಂಡ್‌ಗಳಲ್ಲಿ ಸಿಗುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕೂಲ್ ಲುಕ್
“ಲಿನನ್ ಶರ್ಟ್‌ಗಳು ಹಾಗೂ ಪ್ಯಾಂಟ್ ಸೂಟ್‌ಗಳು ಟ್ರೆಂಡಿಯಾಗಿದ್ದವು, ಇದೀಗ ಲಿನನ್ ಶರ್ಟ್ ಜಾಕೆಟ್ ಲಗ್ಗೆ ಇಟ್ಟಿದ್ದು, ಈ ಜಾಕೆಟ್ ಕೇವಲ ಈ ಸೀಸನ್‌ನಲ್ಲಲ್ಲ, ಇತರೇ ಯಾವುದೇ ಸೀಸನ್‌ನಲ್ಲೂ ಧರಿಸಬಹುದು. ನಟ ಅಭಿಮನ್ಯು ದಾಸನಿ ಧರಿಸಿರುವ ಈ ಜಾಕೆಟ್ ಸಾಕಷ್ಟು ಫ್ಯಾಷನ್ ಪ್ರಿಯರನ್ನು ಸೆಳೆದಿತ್ತು. ನೋಡಲು ಫಾರ್ಮಲ್ ಕೂಲ್ ಲುಕ್ ನೀಡುವ ಈ ಜಾಕೆಟನ್ನು ಆಫೀಸ್‌ವೇರ್ ಆಗಿಯೂ ಬಳಸಬಹುದು. ಔಟಿಂಗ್‌ನಲ್ಲೂ ಬಳಬಹುದು” ಎನ್ನುತ್ತಾರೆ ಮೆನ್ಸ್ ಸ್ಪೆಷಲ್ ಸ್ಟೈಲಿಸ್ಟ್ ರಿಚರ್ಡ್.
ಲಿನನ್ ಶರ್ಟ್ ಜಾಕೆಟ್ ಮಿಕ್ಸ್-ಮ್ಯಾಚ್
ಲಿನನ್ ಶರ್ಟ್ ಜಾಕೆಟನ್ನು ಪ್ಯಾಂಟ್ ಹಾಗೂ ಶರ್ಟ್ ಜೊತೆಗೆ ಸೆಟ್ ತೆಗೆದುಕೊಂಡಿದ್ದಲ್ಲಿ, ಮುಂದಿನ ಬಾರಿ ಧರಿಸುವಾಗ ಇತರೇ ಪ್ಯಾಂಟ್ ಹಾಗೂ ಶರ್ಟ್ ಜೊತೆಗೂ ಮ್ಯಾಚ್ ಮಾಡಬಹುದು. ಫಾರ್ಮಲ್ ಲುಕ್ ಜೊತೆಗೆ ಫಂಕಿ ಲುಕ್ ಕೂಡ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ರಾಜನ್. ಅವರ ಪ್ರಕಾರ, ಶರ್ಟ್ ಜಾಕೆಟ್ ಖರೀದಿಸುವಾಗ ಆದಷ್ಟೂ ಎಲ್ಲಾ ಬಗೆಯ ಶರ್ಟ್, ಟೀ ಶರ್ಟ್ ಅಥವಾ ಪ್ಯಾಂಟ್‌ಗೆ ಹೊಂದುವಂತಹ ಶೇಡ್‌ನದ್ದನ್ನು ಆಯ್ಕೆ ಮಾಡಬೇಕು ಎನ್ನುತ್ತಾರೆ.
ಬರ್ಮಡಾ ಜೊತೆಗೆ ಔಟಿಂಗ್ ಲುಕ್
ಬರ್ಮಡಾ ಅಥವಾ ಜೀನ್ಸ್ ಶಾರ್ಟ್ಸ್ ಜೊತೆ ಧರಿಸಿದಲ್ಲಿ ಔಟಿಂಗ್ ಲುಕ್ ಪಡೆಯಬಹುದು. ಡಿಫರೆಂಟ್ ಲುಕ್ ನೀಡುವ ಇದು ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟನ್ನು ಎತ್ತಿ ಹಿಡಿಯುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಲಿನಿನ್ ಶರ್ಟ್ ಜಾಕೆಟ್ ಟಿಪ್ಸ್
- ಫಿಟ್ಟಿಂಗ್ ಇರುವಂತಹ ಲಿನನ್ ಶರ್ಟ್ ಜಾಕೆಟ್ ಆಯ್ಕೆ ಮಾಡಿ.
- ಹಾಫ್ ವೈಟ್‌ಮ ಕ್ರೀಮಿಶ್, ಐವರಿ ವೈಟ್ ಟ್ರೆಂಡ್‌ನಲ್ಲಿದೆ.
- ಸಂದರ್ಭಕ್ಕೆ ತಕ್ಕಂತೆ ಮ್ಯಾಚ್ ಮಾಡುವುದನ್ನು ಕಲಿಯಿರಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Pageant: ಯಶಸ್ವಿಯಾದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ 2023 ಸೌಂದರ್ಯ ಸ್ಪರ್ಧೆ
ಫ್ಯಾಷನ್
Season Fashion: ಸೆಲೆಬ್ರೆಟಿ ಲುಕ್‌ಗಾಗಿ ಹೈ ಫ್ಯಾಷನ್ ಲೋಕಕ್ಕೆ ಬಂತು ಒನ್ ಶೋಲ್ಡರ್ ಡ್ರೆಸ್!
ಹೈ ಫ್ಯಾಷನ್ ಲೋಕದಲ್ಲಿ (Season Fashion) ಇದೀಗ ಒನ್ ಶೋಲ್ಡರ್ ಡ್ರೆಸ್‌ಗಳು ಟ್ರೆಂಡಿಯಾಗಿವೆ. ನೋಡಿದಾಗ ಸೆಲೆಬ್ರೆಟಿ ಲುಕ್ ನೀಡುವ ಈ ಉಡುಪುಗಳು ವೈವಿಧ್ಯಮಯ ವಿನ್ಯಾಸದಲ್ಲಿ ಆಗಮಿಸಿವೆ. ಯಾವ ಬಗೆಯವು ಹೆಚ್ಚು ಪಾಪುಲರ್ ಆಗಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೈ ಫ್ಯಾಷನ್ ಲೋಕದಲ್ಲಿ (Season Fashion) ಇದೀಗ ಒನ್ ಶೋಲ್ಡರ್ ಡ್ರೆಸ್‌ಗಳು ಟ್ರೆಂಡಿಯಾಗಿವೆ. ತಾರೆಯರು ಮಾತ್ರವಲ್ಲ, ಸೆಲೆಬ್ರೆಟಿ ಲುಕ್‌ಗಾಗಿ ಈ ಜನರೇಷನ್ ಹುಡುಗಿಯರು ಧರಿಸುವುದು ಹೆಚ್ಚಾಗಿದೆ. ಗ್ಲಾಮರ್ ಲುಕ್ ನೀಡುವ ಈ ಔಟ್‌ಫಿಟ್ಸ್ ಆನ್‌ಲೈನ್ ಫ್ಯಾಷನ್‌ನಲ್ಲಿ ವೈವಿಧ್ಯಮಯ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.
ಹಾಲಿವುಡ್ ತಾರೆಯರ ಟ್ರೆಂಡಿ ಡ್ರೆಸ್‌ಗಳಲ್ಲಿ ಒಂದಾಗಿದ್ದ ಒನ್ ಶೋಲ್ಡರ್ ಡ್ರೆಸ್‌ಗಳು, ಬಾಲಿವುಡ್ ತಲುಪಿ, ಅಲ್ಲಿನ ತಾರೆಯರ ಮೇಲೆ ಸವಾರಿ ಮಾಡಿದವು. ರ್ಯಾಂಪ್ ಲೋಕದಲ್ಲೂ ಹಂಗಾಮ ಎಬ್ಬಿಸಿದವು. ಪೇಜ್ ತ್ರೀ ಪಾರ್ಟಿಗಳಲ್ಲಿ ಕಾಮನ್ ಆಗಿದ್ದವು. ಇದೀಗ ಸಾಮಾನ್ಯ ಯುವತಿಯರನ್ನು ತಲುಪಿವೆ. ಹೈ ಫ್ಯಾಷನ್ ಲಿಸ್ಟ್‌ನಲ್ಲಿದ್ದ ಈ ಔಟ್‌ಫಿಟ್ ಇದೀಗ ಸೆಲೆಬ್ರೆಟಿ ಲುಕ್ ಪಡೆಯಲು ಬಯಸುವ ಹುಡುಗಿಯರನ್ನು ಸೆಳೆಯತೊಡಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಒನ್ ಶೋಲ್ಡರ್ ಡ್ರೆಸ್ ವಿನ್ಯಾಸ
ತಕ್ಷಣಕ್ಕೆ ನೋಡಲು ಇವು ಹೆಚ್ಚು ವಿನ್ಯಾಸ ಇಲ್ಲದಂತೆ ಕಂಡರೂ ಇವುಗಳಲ್ಲಿ ಸ್ಟಿಚ್ಚಿಂಗ್ ಪ್ಯಾಟರ್ನ್ ಬೇರೆ ಬೇರೆಯಾಗಿರುತ್ತವೆ. ಉದಾಹರಣೆಗೆ., ಪ್ರೋಮೊ ಒನ್ ಶೋಲ್ಡರ್ ಡ್ರೆಸ್, ಶಿಫ್ಟ್, ಎ ಲೈನ್, ಶೀತ್, ಫೀಟ್ ಹಾಗೂ ಫ್ಲೇರ್, ವ್ರಾಪ್ ಸ್ಟೈಲ್, ರಫಲ್, ಬಾಡಿಕಾನ್, ಶಿರ್ರೆಡ್, ಸ್ಕೆಟರ್ ಡ್ರೆಸ್ ಸೇರಿದಂತೆ ನಾನಾ ಬಗೆಯವು ದೊರೆಯುತ್ತಿವೆ.
ಒನ್ ಶೋಲ್ಡರ್ ಆಯ್ಕೆ ಮಾಡುವುದು ಹೇಗೆ?
ಒನ್ ಶೋಲ್ಡರ್ ಡ್ರೆಸ್ ಆಯ್ಕೆ ಮಾಡುವವರು ಸಾಕಷ್ಟು ವಿಷಯಗಳ ಬಗ್ಗೆ ಗಮನವಹಿಸಬೇಕಾಗುತ್ತದೆ. ಮೊದಲು ಪರ್ಸನಾಲಿಟಿಗೆ ತಕ್ಕಂತೆ ವಿನ್ಯಾಸವಿರುವುದನ್ನು ಹುಡುಕಿ ಖರೀದಿಸಬೇಕು. ಟ್ರಯಲ್ ನೋಡದೇ ಕೊಳ್ಳಲೇಬಾರದು. ಒಳ ಉಡುಪು ಪಾರದರ್ಶಕವಾಗದಂತೆ ಎಚ್ಚರವಹಿಸಬೇಕು. ಇದಕ್ಕಾಗಿ ಸ್ಟೈಲಿಸ್ಟ್‌ಗಳ ಸಹಾಯ ಪಡೆಯಬಹುದು. ಸ್ಲಿಮ್ ಆಗಿರುವವರು ಆದಷ್ಟು ಬಾಡಿಕಾನ್ ಒನ್ ಶೋಲ್ಡರ್ ಔಟ್‌ಫಿಟ್ ಆವಾಯ್ಡ್ ಮಾಡಬೇಕು. ಅದರ ಬದಲು ರಫಲ್, ಸ್ಕೆಟರ್, ಫಿಟ್ ಹಾಗೂ ಫ್ಲೇರ್‌ನಂತವನ್ನು ಆಯ್ಕೆ ಮಾಡಬಹುದು. ಇನ್ನು ಪ್ಲಂಪಿಯಾಗಿರುವವರು ಬಾಡಿಕಾನ್, ಎ ಲೈನ್, ಶಿರ್ರೆಡ್ ವಿನ್ಯಾಸದವನ್ನು ಧರಿಸಬಹುದು.
ಮ್ಯಾಚಿಂಗ್ ಹೀಗೆ
ಗ್ಲಾಮರ್ ಲುಕ್‌ಗಾಗಿ ಒನ್ ಶೋಲ್ಡರ್ ಡ್ರೆಸ್ ಧರಿಸುವವರು ಧರಿಸುವ ಜ್ಯುವೆಲರಿಗಳನ್ನು ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಬೇಕು. ಹ್ಯಾಂಗಿಂಗ್ಸ್, ಚೋಕರ್, ಲೇಯರ್ ಚೈನ್ಸ್ ಧರಿಸಬಹುದು. ಹೇರ್‌ಸ್ಟೈಲ್ ಶೋಲ್ಡರ್ ಸ್ಲೀವ್ ಇಲ್ಲದ ಕಡೆಯೂ ಬರುವಂತಹ ಕೇಶ ವಿನ್ಯಾಸ ಮಾಡಬಹುದು. ಲೂಸ್ ಹೇರ್ ಸ್ಟೈಲ್ ಕೂಡ ಆಕರ್ಷಕವಾಗಿ ಕಾಣುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Partywear Fashion: ಪಾರ್ಟಿವೇರ್ ಫ್ಯಾಷನ್‌ನಲ್ಲಿ ಬಿಂದಾಸ್ ಬ್ಯಾಕ್‌ಲೆಸ್ ಗೌನ್ಸ್ ಹಂಗಾಮ
ಫ್ಯಾಷನ್
Partywear Fashion: ಪಾರ್ಟಿವೇರ್ ಫ್ಯಾಷನ್‌ನಲ್ಲಿ ಬಿಂದಾಸ್ ಬ್ಯಾಕ್‌ಲೆಸ್ ಗೌನ್ಸ್ ಹಂಗಾಮ
ಇದೀಗ ಪಾರ್ಟಿವೇರ್‌ನಲ್ಲಿ (Partywear fashion) ಬಿಂದಾಸ್ ಬ್ಯಾಕ್‌ಲೆಸ್ ಗೌನ್‌ಗಳು ಟ್ರೆಂಡಿಯಾಗಿವೆ. ನೋಡಲು ಗ್ಲಾಮರಸ್ ಆಗಿ ಕಾಣಿಸುವ ಈ ಗೌನ್‌ಗಳು ಸದ್ಯಕ್ಕೆ ಅಲ್ಟ್ರಾ ಮಾಡರ್ನ್ ಯುವತಿಯರನ್ನು ಅಲಂಕರಿಸುತ್ತಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪಾರ್ಟಿವೇರ್ ಫ್ಯಾಷನ್‌ನಲ್ಲಿ (Partywear fashion) ಇದೀಗ ಬ್ಯಾಕ್‌ಲೆಸ್ ಗೌನ್‌ಗಳದ್ದೇ ಕಾರುಬಾರು. ನೋಡಲು ಬಿಂದಾಸ್ ಲುಕ್ ನೀಡುವ ಇವು ಗ್ಲಾಮರಸ್ ಫ್ಯಾಷನ್‌ಗೆ ಸಾಥ್ ನೀಡುತ್ತಿದ್ದು, ಬಿಂದಾಸ್ ಯುವತಿಯರ ಫೇವರೆಟ್ ಲಿಸ್ಟ್‌ಗೆ ಸೇರಿವೆ.
ಬಗೆಬಗೆಯ ಬ್ಯಾಕ್‌ಲೆಸ್ ಪಾರ್ಟಿವೇರ್ ಗೌನ್ಸ್
ಪಾರ್ಟಿವೇರ್‌ಗಳಲ್ಲಿ ನಾನಾ ಬಗೆಯ ಗೌನ್‌ಗಳಿದ್ದು, ಅವುಗಳಲ್ಲಿ ಇದೀಗ ಸ್ಟ್ರಾಪ್ ಟೈಯಿಂಗ್ ಬ್ಯಾಕ್‌ಲೆಸ್ ಗೌನ್, ಬ್ಯಾಕ್ ಕಟೌಟ್ ಡಿಸೈನ್ ಗೌನ್, ಹಾಲ್ಟರ್ ಬ್ಯಾಕ್ಲೆಸ್ ಗೌನ್, ಟ್ವಿಸ್ಟೆಡ್ ಬ್ಲೌಸ್ ಶೈಲಿಯಲ್ಲಿ ಬ್ಯಾಕ್‌ಲೆಸ್ ಗೌನ್, ಬ್ಯಾಕ್‌ಲೆಸ್ ಫ್ರಾಕ್ ಹಾಗೂ ಮ್ಯಾಕ್ಸಿ ಶೈಲಿಯವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇನ್ನು ಸೆಲೆಬ್ರೆಟಿ ಲುಕ್‌ಗಾಗಿ ಸಿಕ್ವಿನ್ಸ್ ಬ್ಯಾಕ್‌ಲೆಸ್ ಗೌನ್ ಹಾಗೂ ವೆಲ್ವೆಟ್ ಲಾಂಗ್ ಸ್ಲಿಟ್ ಬ್ಯಾಕ್‌ಲೆಸ್ ಗೌನ್, ಮೆರ್ಮರೈಡ್ ಗೌನ್‌ಗಳನ್ನು ಖರೀದಿಸುವವರು ಹೆಚ್ಚಾಗಿದ್ದಾರೆ. ಇದರೊಂದಿಗೆ ನಾನಾ ಬಗೆಯ ಬ್ಯಾಕ್‌ಸೈಡ್‌ನಲ್ಲಿ ಟೈಯಿಂಗ್ ಅಪ್ಷನ್ ಇರುವಂತಹ ಗೌನ್‌ಗಳು ಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್. ಅವರ ಪ್ರಕಾರ, ಬ್ಯಾಕ್‌ಲೆಸ್ ಗೌನ್‌ಗಳು ಈ ಸೀಸನ್‌ನ ಬ್ರಂಚ್-ಲಂಚ್ ಪಾರ್ಟಿ ಮಾತ್ರವಲ್ಲ, ನೈಟ್ ಪಾರ್ಟಿ, ಬೀಚ್ ಪಾರ್ಟಿ ಸೇರಿದಂತೆ ನಾನಾ ಕಡೆ ಡ್ರೆಸ್‌ಕೋಡ್‌ಗಳಂತೆ ಜಾರಿಯಾಗಿವೆ ಎನ್ನುತ್ತಾರೆ.
ಸೆಲೆಬ್ರೆಟಿ ಲುಕ್‌ಗಾಗಿ ಮಿಂಚುವ ಬ್ಯಾಕ್‌ಲೆಸ್ ಗೌನ್
ಸೆಲೆಬ್ರೆಟಿ ಲುಕ್‌ಗಾಗಿ ಇದೀಗ ಸಿಕ್ವಿನ್ಸ್, ಶೈನಿಂಗ್ ಹಾಗೂ ಶಿಮ್ಮರಿಂಗ್ ಫ್ಯಾಬ್ರಿಕ್‌ನ ಮಿಂಚುವ ಬ್ಯಾಕ್‌ಲೆಸ್ ಗೌನ್‌ಗಳನ್ನು ಧರಿಸುವವರು ಹೆಚ್ಚಾಗಿದ್ದಾರೆ. ಇವು ಯುವತಿಯರನ್ನು ಆಕರ್ಷಕವಾಗಿ ಬಿಂಬಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್. ಅವರು ಹೇಳುವಂತೆ, ಇವು ನೈಟ್ ಪಾರ್ಟಿವೇರ್‌ಗೆ ಗ್ಲಾಮರಸ್ ಲುಕ್ ನೀಡುತ್ತವೆ ಎನ್ನುತ್ತಾರೆ.
ಪರ್ಸನಾಲಿಟಿಗೆ ತಕ್ಕಂತಿರಲಿ ಬ್ಯಾಕ್‌ಲೆಸ್ ಗೌನ್
ಧರಿಸುವವರು ಮೊದಲು ತಮ್ಮ ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಬ್ಯಾಕ್‌ಲೆಸ್ ಗೌನ್ ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ಮುಜುಗರಕ್ಕೊಳಗಾಗುವ ಸಾಧ್ಯತೆ ಇರುತ್ತದೆ. ಎತ್ತರವಿರುವವರಿಗೆ ಯಾವುದೇ ಬಗೆಯ ಬ್ಯಾಕ್‌ಲೆಸ್ ಗೌನ್‌ಗಳು ಮ್ಯಾಚ್ ಆಗುತ್ತವೆ. ಅದೇ ಪ್ಲಂಪಿಯಾಗಿರುವವರು ಆದಷ್ಟೂ ಇಂತಹ ಗೌನ್‌ಗಳನ್ನು ಧರಿಸುವಾಗ ಎಚ್ಚರವಹಿಸಬೇಕು. ದೇಹದ ಭಾಗಗಳು ಎದ್ದು ಕಾಣಬಹುದು ಅಥವಾ ಅಗತ್ಯಕ್ಕಿಂತ ಹೆಚ್ಚು ದೇಹ ಅಂಗಾಗಗಳು ಎಕ್ಸ್‌ಪೋಸ್ ಆಗಬಹುದು. ಹಾಗಾಗಿ ಟ್ರಯಲ್ ನೋಡಿ ಎಲಿಗೆಂಟ್ ಲುಕ್ ನೀಡಿದಲ್ಲಿ ಮಾತ್ರ ಖರೀದಿಸಬಹುದು ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್‌ಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಸೀಸನ್‌ನಲ್ಲಿ ಟ್ರೆಂಡಿಯಾದ ಬಣ್ಣಬಣ್ಣದ ಕಾಟನ್ ಸೀರೆಗಳು
ಫ್ಯಾಷನ್
Fashion Pageant: ಯಶಸ್ವಿಯಾದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ 2023 ಸೌಂದರ್ಯ ಸ್ಪರ್ಧೆ
ಉದ್ಯಾನನಗರಿಯಲ್ಲಿ ನಡೆದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ 2023 ಸೌಂದರ್ಯ ಸ್ಪರ್ಧೆ (Fashion Pageant) ಯಶಸ್ವಿಯಾಗಿ ನಡೆಯಿತು, ಸಾಮಾಜಿಕ ಕಳಕಳಿಯನ್ನು ಗಮನದಲ್ಲಿಟ್ಟುಕೊಂಡು ನಡೆಸಿದ ಈ ಸ್ಪರ್ಧೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳ ದೇಣಿಗೆಗಾಗಿ ಹಮ್ಮಿಕೊಳ್ಳಲಾಗಿತ್ತು. ಈ ಬಗ್ಗೆ ಇಲ್ಲಿದೆ ವರದಿ.
ಶೀಲಾ ಸಿ. ಶೆಟ್ಟಿ, ಬೆಂಗಳೂರು
ತಮ್ಮದೇ ಆದ ಸ್ಟೈಲ್ ಹಾಗೂ ಫ್ಯಾಷನ್ ಸ್ಟೇಟ್‌ಮೆಂಟ್‌ನಲ್ಲಿ (Fashion Pageant) ಒಬ್ಬೊಬ್ಬರು ರ್ಯಾಂಪ್ ಮೇಲೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದರು. ಮದುವೆಯಾಗಿದ್ದರೂ, ಒಂದಲ್ಲ ಒಂದು ದಿನ ತಾವು ರ್ಯ್ಯಾಂಪ್ ವಾಕ್ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದ ಈ ಮಹಿಳೆಯರು ಆತ್ಮವಿಶ್ವಾಸದಿಂದ ಉದ್ಯಾನನಗರಿಯಲ್ಲಿ ನಡೆದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ 2023 ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ವಾಕ್ ಮಾಡಿ, ಸೈ ಎನಿಸಿಕೊಂಡರು.
ಒಬ್ಬರಿಗಿಂತ ಒಬ್ಬರು ತಾವೇನೂ ಕಮ್ಮಿಯಿಲ್ಲ ಎಂಬಂತೆ, ಟ್ರೆಡಿಷನಲ್ ಹಾಗೂ ಕ್ಯಾಶುವಲ್ ರೌಂಡ್‌ಗಳಲ್ಲಿ ವಾಕ್ ಮಾಡಿ, ಜ್ಯುರಿ ಟೀಮ್‌ನ ಪ್ರಶ್ನೆಗಳಿಗೆ ತಮ್ಮದೇ ಆದ ಸ್ಟೈಲ್‌ನಲ್ಲಿ ಉತ್ತರಿಸಿದರು. ಸನ್ ರೈಸರ್ಸ್ ಇವೆಂಟ್ ಪ್ಲಾನರ್ ಹಾಗೂ ಸ್ವರ್ಣ ಭಾರತ ಫೌಂಡೇಷನ್‌ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ 2023 ಸೌಂದರ್ಯ ಸ್ಪರ್ಧೆಯಲ್ಲಿ ನಾನಾ ಕಡೆಗಳಿಂದ ವಿವಾಹಿತ ಮಹಿಳೆಯರು ಆಗಮಿಸಿ, ಪಾಲ್ಗೊಂಡಿದ್ದರು.
ಪೇಜೆಂಟ್ ವಿಜೇತರ ಪಟ್ಟಿ
ಮಿಸೆಸ್ ಕೆಟಗರಿಯಲ್ಲಿ ಶಿಲ್ಪಾ ವಿಜೇತರಾದರು. ಅಶ್ವಿನಿ, ಅನುಷಾ ರೆಡ್ಡಿ ಕ್ರಮವಾಗಿ ಮುಂದಿನೆರಡು ಸ್ಥಾನಗಳನ್ನು ಪಡೆದರು. 40ರಿಂದ 60 ವರ್ಷದೊಳಗಿನ ಕೆಟಗರಿಯಲ್ಲಿ ಮಾಧವಿ ಅಭಿಷೇಕ್ ವಿಜೇತರಾದರು. ಮಾನಿನಿ ಸಾವಂತ್, ವಿಜಯಲಕ್ಷ್ಮಿ ಕ್ರಮವಾಗಿ ಪ್ರಶಸ್ತಿ ಮುಂದಿನ ಗಳಿಸಿದರು. ಮಿಸ್ ಕೆಟಗರಿಯಲ್ಲಿ ಭಾವನಾ ಪ್ರಶಸ್ತಿ ಪಡೆದರು. ಕ್ರಮವಾಗಿ ಅಭಿಲಾಷಾ, ಸುಷ್ಮಾ ಮುಂದಿನೆರಡು ಸ್ಥಾನಗಳನ್ನು ಗಳಿಸಿದರು.
ಸೌಂದರ್ಯ ಸ್ಪರ್ಧೆಯಿಂದ ಹೆಚ್ಚಾಗುವ ಆತ್ಮವಿಶ್ವಾಸ
ಹಿರಿಯ ಸಮಾಜ ಸೇವಕಿ, ಯೋಗ ಎಕ್ಸ್‌ಪರ್ಟ್ ಆರ್. ವಿ. ಮಮತಾ ದೇವರಾಜ್ ಅವರು ಕೂಡ ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. “ಮಹಿಳೆಯರು ಆತ್ಮವಿಶ್ವಾಸವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಗುರಿಯತ್ತ ಸಾಗಬೇಕು. ಹಾಗಾದರೆ ಮಾತ್ರ ಮಹಿಳೆಯರು ತಾವು ಮಾತ್ರವಲ್ಲ, ತಮ್ಮ ಕುಟುಂಬವನ್ನು ಅಭಿವೃದ್ಧಿಪಡಿಸಬಹುದು. ಸ್ವಾವಲಂಬಿಗಳಾಗಿ ಬದುಕಬಹುದು ಎಂದು ಕರೆ ನೀಡಿದರು.
ಸಾಮಾಜಿಕ ಕಳಕಳಿ
ಕಾರ್ಯಕ್ರಮದ ಆಯೋಜಕರಾದ ಸಂತೋಷ್ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಸೌಂದರ್ಯ ಸ್ಪರ್ಧೆಯೂ ನಡೆದಿದ್ದು, ಎಂದಿನಂತೆ ಇಲ್ಲಿ ಸಂಗ್ರಹವಾದ ದೇಣಿಗೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಸಹಾಯಕ್ಕಾಗಿ ಬಳಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸೌಂದರ್ಯ ಸ್ಪರ್ಧೆಯ ಮೆಂಟರ್ ನಿತ್ಯಾ ದೀಕ್ಷಿತ್, ಪದಾಧಿಕಾರಿ ವಿಜಯ್‌ಕುಮಾರ್, ಮಾಡೆಲ್ ಸಂಗೀತಾ ಹೊಳ್ಳ ಉಪಸ್ಥಿತರಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಕಾರ್ಪೆಂಟರ್ ಪ್ಯಾಂಟ್‌ನಲ್ಲಿ ನಟಿ ಶುಭಾರಕ್ಷಾ ಸಮ್ಮರ್ ಕೂಲ್ ಲುಕ್
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ14 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ17 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ24 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಕರ್ನಾಟಕ8 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
-
ಪ್ರಮುಖ ಸುದ್ದಿ24 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?