-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವೆಡ್ಡಿಂಗ್ ಸೀಸನ್‌ನಲ್ಲಿ ಗ್ರ್ಯಾಂಡ್ ವೆರೈಟಿ ಲೆಹೆಂಗಾಗಳು (Wedding Lehenga Tips) ಎಂಟ್ರಿ ನೀಡಿವೆ. ಮದುಮಗಳು ಮಾತ್ರವಲ್ಲ, ಇತರರು ಧರಿಸಬಹುದಾದ ನಾನಾ ಡಿಸೈನ್‌ನ ಲೆಹೆಂಗಾಗಳು ಲಗ್ಗೆ ಇಟ್ಟಿವೆ. ಇನ್ನು, ಮದುವೆಗಳಲ್ಲಿ ಧರಿಸುವ ವೆಡ್ಡಿಂಗ್ ಲೆಹೆಂಗಾಗಳು ಕೇವಲ ದುಬಾರಿಯಾಗಿದ್ದರೇ ಸಾಲದು! ನೋಡಲು ಕೂಡ ಆಕರ್ಷಕವಾಗಿರಬೇಕು. ನಾವು ಕೊಡುವ ಬೆಲೆಗೆ ಅದು ತಕ್ಕನಾಗಿರಬೇಕು ಎನ್ನುತ್ತಾರೆ ವೆಡ್ಡಿಂಗ್ ಸ್ಟೈಲಿಸ್ಟ್ ಮೀರಜ್. ಈ ಕುರಿತಂತೆ ಒಂದೈದು ಸಿಂಪಲ್ ಟಿಪ್ಸ್ ನೀಡಿದ್ದಾರೆ.
ಥೀಮ್‌ಗೆ ತಕ್ಕಂತೆ ಲೆಹೆಂಗಾ ಸೆಲೆಕ್ಷನ್ ಮಾಡಿ
ಮದುವೆಯು ತೀರಾ ಟ್ರೆಡಿಷನಲ್, ಕಂಟೆಂಪರರಿ ಅಥವಾ ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ನಡೆಯುತ್ತಿದೆಯಾ! ಎಂಬುದನ್ನು ಮನಗಂಡು ಲೆಹೆಂಗಾ ಆಯ್ಕೆ ಮಾಡಬೇಕು. ಆಗಷ್ಟೇ ಥೀಮ್‌ಗೆ ತಕ್ಕಂತೆ ಕಾಣಿಸಬಹುದು.
ಸೆಲೆಬ್ರೆಟಿ ಲುಕ್ ಲೆಹೆಂಗಾ ಆಯ್ಕೆ
ಮದುವೆಗಳಲ್ಲಿ ಸೆಲೆಬ್ರೆಟಿಯಂತೆ ಕಾಣಿಸಲು ಆದಷ್ಟೂ ಮೊದಲೇ ತಾರೆಯರ ಲೆಹೆಂಗಾಗಳನ್ನು ನೋಡಿ, ಫೋಟೋಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ. ಕೇವಲ ಬಾಯಿ ಮಾತಿನಲ್ಲಾದಲ್ಲಿ ಹುಡುಕುವುದು ಕಷ್ಟವಾಗಬಹುದು. ನೀವು ಭೇಟಿ ನೀಡುವ ಬೋಟಿಕ್ ಅಥವಾ ಲೆಹೆಂಗಾ ಸೆಂಟರ್‌ಗಳಲ್ಲಿ ನಿಮ್ಮ ಆಯ್ಕೆ ಹಾಗೂ ಫೋಟೋ ತೋರಿಸಿ. ಹುಡುಕಲು ಸುಲಭವಾಗುವುದು.
ಟ್ರೆಂಡಿ ಲೆಹೆಂಗಾ ಆಯ್ಕೆಗಾಗಿ ಹೀಗೆ ಮಾಡಿ
ಲೆಹೆಂಗಾ ಕೊಳ್ಳುವ ಸಮಯದಲ್ಲಿ ಟ್ರೆಂಡಿಯಾಗಿರುವ ಡಿಸೈನ್ಸ್ ಕುರಿತಂತೆ ಅಂತರ್ಜಾಲದಲ್ಲಿ, ಫ್ಯಾಷನ್ ಮ್ಯಾಗಜೀನ್‌ಗಳಲ್ಲಿ ನೋಡಿ ತಿಳಿದುಕೊಳ್ಳಿ. ಉದಾಹರಣೆಗೆ., ಅಂಬಾನಿ ಫ್ಯಾಮಿಲಿಯ ಮಹಿಳೆಯರು ಧರಿಸಿದ್ದ ಲೆಹೆಂಗಾಗಳು ಇದೀಗ ಎಲ್ಲೆಡೆ ಟ್ರೆಂಡಿಯಾಗಿವೆ. ಲಕ್ಷ ರೂ. ಬೆಲೆಬಾಳುವ ಇವುಗಳ ರಿಪ್ಲೀಕಾ ಇದೀಗ ಮಾರುಕಟ್ಟೆಯಲ್ಲಿ ಲಭ್ಯ. ಇಂತವನ್ನು ಕೂಡ ಖರೀದಿಸಬಹುದು.
ಸೀಸನ್‌ಗೆ ತಕ್ಕಂತೆ ಫ್ಯಾಬ್ರಿಕ್ ಆಯ್ಕೆ ಮಾಡಿ
ಆಯಾ ಸೀಸನ್‌ಗೆ ತಕ್ಕಂತೆ ಲೆಹೆಂಗಾ ಫ್ಯಾಬ್ರಿಕ್ ಆಯ್ಕೆ ಮಾಡಿ. ಕೆಲವರು ಬೇಸಿಗೆಯಲ್ಲಿ ಭಾರಿ ತೂಕವಿರುವ ಲೆಹೆಂಗಾ ಆಯ್ಕೆ ಮಾಡಿ, ಭಾರ ಹೊರಲಾರದೇ, ಆರತಕ್ಷತೆಯಲ್ಲಿ ನಿಲ್ಲಲಾರದೇ ಒದ್ದಾಡುತ್ತಾರೆ. ಅದಕ್ಕಾಗಿ ಲೆಹೆಂಗಾ ಫ್ಯಾಬ್ರಿಕ್ ಆಯ್ಕೆ ಮಾಡುವಾಗ ಕೈಯಲ್ಲಿ ಹಿಡಿದು ಟ್ರಯಲ್ ನೋಡಿ, ಖರೀದಿಸಿ.
ಇದನ್ನೂ ಓದಿ: krishna janmashtami 2024: ಹೀಗಿತ್ತು ಸೆಲೆಬ್ರಿಟಿಗಳ ಕೃಷ್ಣ ಜನ್ಮಾಷ್ಟಮಿ ಸಂಭ್ರಮ!
ಕಲರ್ / ಡಿಸೈನ್‌ಗೆ ಆದ್ಯತೆ ನೀಡಿ
ಧರಿಸುವವರ ಸ್ಕಿನ್ ಟೋನ್‌ಗೆ ತಕ್ಕಂತೆ ಗ್ರ್ಯಾಂಡ್ ಆಗಿರಬೇಕು. ಹ್ಯಾಂಡ್ ಎಂಬ್ರಾಯ್ಡರಿ ಹಾಗೂ ಡಿಸೈನ್ಸ್ ಮತ್ತು ಕಲರ್‌ಗೆ ಆದ್ಯತೆ ನೀಡಬೇಕು. ಪರ್ಸನಾಲಿಟಿಗೆ ತಕ್ಕಂತೆ ಲೆಹೆಂಗಾದ ಉದ್ದ ಹೊಂದಬೇಕು. ಬೋಟಿಕ್‌ನ ಡಿಸೈನರ್ ಬಳಿ ಇವೆಲ್ಲಾ ಮಾತನಾಡಿಕೊಂಡು ಕಸ್ಟಮೈಸ್ ಮಾಡಿಸಿಕೊಳ್ಳಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )