ಶೀಲಾ ಸಿ, ಶೆಟ್ಟಿ, ಬೆಂಗಳೂರು
ಈ ವೆಡ್ಡಿಂಗ್ ಸೀಸನ್‌ನಲ್ಲಿ ನಾನಾ ಬಗೆಯ ಆರ್ಟಿಫಿಶಿಯಲ್ ಹೇರ್ ಎಕ್ಸ್‌ಟೆನ್ಷನ್‌ಗಳು (Wedding Season Hair Fashion) ಗ್ರ್ಯಾಂಡ್ ಹೇರ್ ಸ್ಟೈಲಿಂಗ್‌ಗೆ ಎಂಟ್ರಿ ನೀಡಿವೆ. ಬ್ರೈಡಲ್ ಹೇರ್‌ಸ್ಟೈಲ್‌ಗೆ ಮಾತ್ರವಲ್ಲ, ಎಲ್ಲಾ ವರ್ಗದ ಮಹಿಳೆಯರ ಬಗೆಬಗೆಯ ಕೂದಲ ವಿನ್ಯಾಸಕ್ಕೆ ಸಾಥ್ ನೀಡುವ ಇವು, ಲೆಕ್ಕವಿಲ್ಲದಷ್ಟು ಬಗೆಯಲ್ಲಿ ಆಗಮಿಸಿವೆ. ವೆಡ್ಡಿಂಗ್ ಸೀಸನ್‌ನ ಹೇರ್‌ಸ್ಟೈಲ್ ಟ್ರೆಂಡ್‌ನೊಳಗೆ ಸೇರಿಕೊಂಡಿವೆ. ಇದರೊಂದಿಗೆ ಮಿಕ್ಸ್ ಮ್ಯಾಚ್ ಹೇರ್‌ಸ್ಟೈಲ್‌ಗೆ ನಾಂದಿ ಹಾಡಿವೆ. ಕ್ಯಾಶುವಲ್ ಹೇರ್‌ಸ್ಟೈಲ್‌ಗಳಿಗಿಂತ ಎಥ್ನಿಕ್ ಲುಕ್ ನೀಡುವ ಕೂದಲ ವಿನ್ಯಾಸದೊಳಗೆ ಸೇರಿಕೊಂಡಿವೆ.
ಎಥ್ನಿಕ್ ಹೇರ್‌ಸ್ಟೈಲ್‌ಗೆ ಸಾಥ್
“ಕೇವಲ ವೆಡ್ಡಿಂಗ್ ಸಮಾರಂಭಗಳಲ್ಲಿ ಮಾತ್ರವಲ್ಲ, ಯಾವುದೇ ಎಥ್ನಿಕ್ ಲುಕ್ ನೀಡುವಂತಹ ಶುಭ-ಸಮಾರಂಭಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಈ ಹೇರ್ ಎಕ್ಸ್‌ಟೆನ್ಷನ್‌ಗಳು ತಮ್ಮ ಜಾದೂ ಮೂಡಿಸಿವೆ. ನೋಡಲು ಸೆಲೆಬ್ರೆಟಿ ಲುಕ್ ನೀಡುವ ಇವು ಎಂತಹದ್ದೇ ಕೂದಲಿಗೂ ಮ್ಯಾಚ್ ಆಗುತ್ತವೆ. ಅದರಲ್ಲೂ ಟ್ರೆಡಿಷನಲ್ ಲುಕ್ ನೀಡುವಂತವು ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ” ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇವು ಕೃತಕವಾದರೂ ನೈಜವಾಗಿ ಕಾಣುವಂತಹ ಮೆಟಿರಿಯಲ್‌ನಲ್ಲಿ ಬಂದಿವೆ ಎನ್ನುತ್ತಾರೆ.
ಟ್ರೆಂಡಿಯಾಗಿರುವ ಹೇರ್ ಎಕ್ಸ್ ಟೆನ್ಷನ್ಸ್
ಶಾರ್ಟ್ ಕರ್ಲಿ, ಲಾಂಗ್ ಕರ್ಲಿ, ಸ್ಟ್ರೇಟ್, ಮೆಸ್ಸಿ ರಿಂಕಲ್ಸ್ ಹೇರ್, ರಿಂಗ್ಲೇಟ್ಸ್, ಬ್ರೈಡಲ್ ಲುಕ್ಸ್ ಸ್ಟೈಲ್‌ನವು, ನಾನಾ ಶೈಲಿಯ ಹೇರ್ ಬನ್ ಪ್ಲಸ್ ಎಕ್ಸ್‌ಟೆನ್ಷನ್, ಹಾಫ್ ಆಂಡ್ ಹಾಫ್ ಮೆಸ್ಸಿ ಕರ್ಲಿ ಡಿಸೈನ್‌ನವು. ಸಿಂಪಲ್ ಹಾಗೂ ಡಿಸೈನ್ ಹೇರ್ ಎಕ್ಸ್‌ಟೆನ್ಷನ್‌ಗಳು ಇಂದು ಫ್ಯಾನ್ಸಿ ಸ್ಟೋರ್‌ಗಳಲ್ಲಿ ಲಭ್ಯ. ಅಷ್ಟೇಕೆ! ಆನ್‌ಲೈನ್ ಫ್ಯಾನ್ಸಿ ಸ್ಟೋರ್‌ಗಳಲ್ಲೂ ಬಗೆಬಗೆಯಾಗಿರುವಂತವನ್ನು ಕಾಣಬಹುದು. ಇನ್ನು, ಬೆಲೆಯ ವಿಷಯಕ್ಕೆ ಬಂದಲ್ಲಿ, ಆಯಾ ಡಿಸೈನ್‌ಗೊಂಡಿರುವ ಹೇರ್ ಎಕ್ಸ್‌ಟೆನ್ಷನ್ ವಿನ್ಯಾಸಕ್ಕೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ. ಒಂದೊಂದಕ್ಕೂ ಒಂದೊಂದು ಬೆಲೆ. ಉದಾಹರಣೆಗೆ., ಸಿಂಪಲ್ ರಿಂಕಲ್ ಲಾಂಗ್ ಹೇರ್ ಎಕ್ಸ್‌ಟೆನ್ಷನ್‌ಗೆ ಸರಿ ಸುಮಾರು 700 ರಿಂದ 800 ರೂ.ಗಳವರೆಗೂ ಬೆಲೆ ಇದೆ. ಹಾಫ್ ಆಂಡ್ ಹಾಫ್ ಹೇರ್ ಬನ್ ಫ್ರಿ ಕೂದಲಿನವಕ್ಕೆ ಡಿಸೈನ್‌ಗೆ ತಕ್ಕಂತೆ ಬೆಲೆ. ಇನ್ನು ಕ್ರಿಸ್ಟಲ್ ಹಾಗೂ ಪರ್ಲ್ ಹಾಕಿ ಡಿಸೈನ್ ಮಾಡಿದವಕ್ಕೆ ಹೆಚ್ಚು ಬೆಲೆ. ಕಡಿಮೆ ಎಂದರೂ 200 ರೂ. ಗಳಿಂದ ಆರಂಭವಾಗುತ್ತವೆ. ಹೆಚ್ಚೆಂದರೇ ಹತ್ತು ಸಾವಿರ ರೂ.ಗಳವರೆಗೂ ಇದೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ಗಳು.
ಯಾರಿಗೆ ಯಾವುದು?
ಶಾರ್ಟ್ ಹೇರ್‌ಸ್ಟೈಲ್‌ನವರಿಗೆ ಆದಷ್ಟೂ ಲೈಟ್‌ವೈಟ್ ಇರುವಂತವನ್ನು ಆಯ್ಕೆ ಮಾಡುವುದು ಉತ್ತಮ. ಯಾಕೆಂದರೇ, ಇವು ಭಾರವಾಗಿದ್ದಲ್ಲಿ, ಕಳಚಿ ಬೀಳಬಹುದು ಹಾಗೂ ತಲೆನೋವು ಬರಬಹುದು. ಇನ್ನು ಉದ್ದ ಕೂದಲಿನವರು ಆದಷ್ಟೂ ಮೆಸ್ಸಿ ಹೇರ್‌ಸ್ಟೈಲ್‌ನವನ್ನು ಆಯ್ಕೆ ಮಾಡಬಹುದು. ಇವು ಕೂದಲನ್ನು ಹರಡಿದಂತೆ ಹಾಗೂ ದಪ್ಪಗಿರುವಂತೆ ಬಿಂಬಿಸುತ್ತವೆ. ಇನ್ನು ಮೀಡಿಯಂ ಸೈಝ್ ಕೂದಲು ಹೊಂದಿರುವವರು ಅವರ ಕೂದಲಿನ ವಾಲ್ಯೂಮ್‌ಗೆ ತಕ್ಕಂತೆ ಆಯ್ಕೆ ಮಾಡಬೇಕು.
ಮದುವೆ ಸಮಾರಂಭಗಳಿಗಾದಲ್ಲಿ ಆಯ್ಕೆ ಹೀಗಿರಲಿ
- ಕ್ರಿಸ್ಟಲ್ ಹಾಗೂ ಪರ್ಲ್ ಡಿಸೈನ್ನವನ್ನು ಸೆಲೆಕ್ಟ್ ಮಾಡಿ.
- ಸುರುಳಿ ಸುತ್ತಿದಂತಿರುವವು ಇದೀಗ ಟ್ರೆಂಡ್ನಲ್ಲಿವೆ.
- ಮಿಕ್ಸ್ ಮ್ಯಾಚ್ ಇರುವಂತಹ ಬ್ರೈಡಲ್ ಲುಕ್ ನೀಡುವ ಗ್ರ್ಯಾಂಡ್ ವಿನ್ಯಾಸದವನ್ನು ಧರಿಸಿ.
- ಮೇಕಪ್ ಮುಗಿದ ನಂತರ ಹೇರ್‌ಸ್ಟೈಲ್‌ಗೆ ಸಿಕ್ಕಿಸಿ.
- ನಿಮ್ಮ ಹೇರ್ ಕಲರ್ಗೆ ಮ್ಯಾಚ್ ಆಗುವಂತ ಹೇರ್ ಎಕ್ಸ್‌ಟೆನ್ಷನ್ ಸೆಲೆಕ್ಟ್ ಮಾಡಿ.
(ಲೇಖಕಿ ಪತ್ರಕರ್ತೆ)
ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಹುಡುಗಿಯರನ್ನು ಸವಾರಿ ಮಾಡುತ್ತಿರುವ 5 ಶೈಲಿಯ ಗ್ಲಾಮರಸ್ ಟಾಪ್‌ಗಳಿವು