ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಯಸ್ಸಿನ ಭೇದ ಭಾವವಿಲ್ಲದೇ ಮಹಿಳೆಯರು ಫ್ಯಾಷನ್ ಪೇಜೆಂಟ್‌ನಲ್ಲಿ (Fashion Pageant News) ಹೆಜ್ಜೆ ಹಾಕಿದರು. ಭಾಗವಹಿಸಿದ್ದ ಒಬ್ಬೊಬ್ಬರು ಒಂದೊಂದು ರೀತಿಯ ಉಡುಗೆಯಲ್ಲಿ ಕಾಣಿಸಿಕೊಂಡರು. ಇನ್ನು ಮಿಸ್ ಕೆಟಗರಿಗಾಗಿ ನಡೆದ ಬ್ಯೂಟಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಯುವತಿಯರು ಟ್ರೆಂಡಿ ಮೇಕಪ್ ಹಾಗೂ ಉಡುಪಿನಲ್ಲಿಸಿದ್ಧರಾಗಿ ರ‍್ಯಾಂಪ್ ಮೇಲೆ ವಾಕ್ ಮಾಡಿದರು. ಇನ್ನು ಮಕ್ಕಳ ಕೆಟಗರಿಯಲ್ಲಿ ಕ್ಯೂಟಾದ ಚಿಣ್ಣರು ತಮ್ಮದೇ ಆದ ತರ್ಲೆ ಪೋಸ್ ನೀಡುತ್ತಾ, ರ‍್ಯಾಂಪ್ ಮೇಲೆ ತುಂಟತನದಿಂದಲೇ ವಾಕ್ ಮಾಡಿ ಎಲ್ಲರ ಮನ ಗೆದ್ದರು. ಅಂದಹಾಗೆ, ಇದು ನಡೆದದ್ದು ಡ್ಯಾಝ್ಲಿಂಗ್ ಮಿಸ್, ಮಿಸೆಸ್ ಹಾಗೂ ಮಕ್ಕಳ ಫ್ಯಾಷೆನ್ ಪೇಜೆಂಟ್‌ನಲ್ಲಿ. ಒಂದರ ನಂತರ ಒಂದರಂತೆ ಎಲ್ಲಾ ಕೆಟಗರಿಗಳಿಗೂ ರ‍್ಯಾಂಪ್ ವಾಕ್ ನಡೆಸಲಾಯಿತು. ಬೆಳಗ್ಗೆಯಿಂದಲೇ ಆರಂಭವಾದ ಕಾರ್ಯಕ್ರಮದಲ್ಲಿ ಮೇಕಪ್ ಕುರಿತಂತೆಯೂ ನಡೆದ ಪ್ರೋಗ್ರಾಂನಲ್ಲಿ ಬ್ಯೂಟಿ ಎಕ್ಸ್‌ಫರ್ಟ್‌ಗಳು ಭಾಗವಹಿಸಿದ್ದರು. ಈ ಎಲ್ಲದರ ಕುರಿತಂತೆ ಇಲ್ಲಿದೆ ವರದಿ.
ಮಿಸ್ ಡ್ಯಾಝ್ಲಿಂಗ್ ಸ್ಟಾರ್ ವಿಜೇತರು
ಯುವತಿಯರಿಗಾಗಿ ನಡೆದ ಮಿಸ್ ಡ್ಯಾಝ್ಲಿಂಗ್ ಸ್ಟಾರ್ ಕಿರೀಟವನ್ನು ಕ್ರಮವಾಗಿ ವಿನ್ನರ್ ಹಾಗೂ ರನ್ನರ್ ಆಗಿ ಶ್ರಾವಣಿ ಹಾಗೂ ಸಾಧನಾ ಪಡೆದರು. ಜಡ್ಜ್‌ಗಳ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು.
ಮಿಸೆಸ್ ಡ್ಯಾಝ್ಲಿಂಗ್ ಸ್ಟಾರ್ ವಿಜೇತರು
ವಿವಾಹಿತ ಮಹಿಳೆಯರಿಗಾಗಿ ನಡೆದ ಮಿಸೆಸ್ ಡ್ಯಾಝ್ಲಿಂಗ್ ಸ್ಟಾರ್ ಟೈಟಲ್ ಅನ್ನು ಡಯಾನಾ ಗಳಿಸಿ, ಕೀರಿಟ ಮುಡಿಗೇರಿಸಿಕೊಂಡರು. ಇನ್ನು ಕ್ರಮವಾಗಿ, ಅನುಗೌಡ ಹಾಗೂ ಶಿಲ್ಪಾ ವಿಜೇತರಾದರು.
ಮಕ್ಕಳ ಕೆಟಗರಿಯ ವಿಜೇತರು
ಡ್ಯಾಝ್ಲಿಂಗ್ ಸ್ಟಾರ್ ಫ್ಯಾಷನ್ ಕಿಡ್ಸ್ ಕೆಟಗರಿಯಲ್ಲಿ ಭಾಗವಹಿಸಿದ ಮಕ್ಕಳೆಲ್ಲರಿಗೂ ಗಿಫ್ಟ್ ಹಾಗೂ ಸರ್ಟಿಫಿಕೇಟ್ ನೀಡಲಾಯಿತು. ಇನ್ನು ಆಕರ್ಷಕವಾಗಿ ವಾಕ್ ಮಾಡಿದ ರಿತ್ವಿಕ್ ಹಾಗೂ ಕನಸು ಹೆಸರಿನ ಮಕ್ಕಳು ವಿಜೇತರಾದರು.
ಸುನೀತಾ ರೆಡ್ಡಿ ಫ್ಯಾಷನ್ ಮಾತು
ಈ ಸಾಲಿನಲ್ಲಿ ನಡೆದ ಈ ಫ್ಯಾಷನ್ ಪೇಜೆಂಟ್‌ನಲ್ಲಿ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಹಾಗೂ ಮೇಕಪ್ ಕಲಾವಿದರಿಗೂ ಅವಕಾಶ ನೀಡಲಾಗಿತ್ತು. ಮಾಡೆಲಿಂಗ್‌ನಲ್ಲಿ ಮಾಡೆಲ್‌ಗಳು ತೆಳ್ಳಗೆ ಇರಬೇಕೆಂಬ ರೂಲ್ಸ್ ಅನ್ನು ಇಲ್ಲಿ ತೆಗೆದುಹಾಕಿ ಮಹಿಳೆಯರನ್ನು ಪ್ರೋತ್ಸಾಹಿಸಲಾಗಿತ್ತು. ಇದು ಮಾನಿನಿಯರನ್ನು ಪ್ರೋತ್ಸಾಹಿಸುವುದರೊಂದಿಗೆ ಆತ್ಮವಿಶ್ವಾಸ ತುಂಬಿಸುವ ಕೆಲಸವನ್ನು ಮಾಡುತ್ತದೆ. ಇಂತಹ ಫ್ಯಾಷನ್ ಪೇಜೆಂಟ್‌ಗಳು ಮಹಿಳೆಯರಿಗೆ ಟ್ಯಾಲೆಂಟ್ ಪ್ರದರ್ಶಿಸಲು ಅವಕಾಶ ನೀಡುತ್ತವೆ ಎಂದು ಪೇಜೆಂಟ್ ಸಂಸ್ಥಾಪಕರಾದ ಸುನೀತಾ ರೆಡ್ಡಿ ಹೇಳಿದರು.
ಜಯಶ್ರೀ ಬ್ಯಾನರ್ಜಿ, ಗ್ರೀಷ್ಮಾ ಹಾಗೂ ಚಂದನಾ ಜ್ಯೂರಿ ಪ್ಯಾನೆಲ್‌ನಲ್ಲಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)