ಶೀಲಾ ಸಿ. ಶೆಟ್ಟಿ, ಬೆಂಗಳೂರು
ರ‍್ಯಾಂಪ್ ಮೇಲೆ (Fashion Pageant News) ಒಬ್ಬರಿಗಿಂತ ಒಬ್ಬರು ವಾಕ್ ಮಾಡುತ್ತಿದ್ದರೇ, ಅವರಲ್ಲಿನ ಆತ್ಮವಿಶ್ವಾಸ ಎದ್ದುಕಾಣುತ್ತಿತ್ತು. ಒಬ್ಬೊಬ್ಬರು ತಾವು ಧರಿಸಿದ ಡಿಸೈನರ್‌ವೇರ್‌ಗಳಲ್ಲಿ ತಮ್ಮದೇ ಆದ ಸ್ಟೈಲ್ ಸ್ಟೇಟ್‌ಮೆಂಟ್ ಫಾಲೋ ಮಾಡುತ್ತಾ ಕ್ಯಾಟ್‌ವಾಕ್ ಮಾಡಿದ್ದು,ನೋಡುಗರನ್ನು ಸೆಳೆಯಿತು.
ಪೇಜೆಂಟ್‌ನಲ್ಲಿ 60 ಸ್ಪರ್ಧಾಳುಗಳು
ಅಂದಹಾಗೆ, ಇದು ನಡೆದದ್ದು, ಉದ್ಯಾನನಗರಿಯಲ್ಲಿ. ಪೇಜೆಂಟ್ ಡೈರೆಕ್ಟರ್ ನಂದಿನಿ ನಾಗರಾಜ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ, ಮಿಸ್ ಹಾಗೂ ಮಿಸೆಸ್ ಇಂಡಿಯಾ ರೋಲ್ ಮಾಡೆಲ್ 2024 ಬ್ಯೂಟಿ ಪೇಜೆಂಟ್‌ನಲ್ಲಿ, ಸುಮಾರು 60ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಮಿಸ್ ಹಾಗೂ ಮಿಸೆಸ್ ಕೆಟಗರಿಯನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಟ್ರೆಡಿಷನಲ್ ಹಾಗೂ ವೆಸ್ಟರ್ನ್ ರೌಂಡ್‌ಗಳಲ್ಲಿ ಭಾಗವಹಿಸಿದ್ದ ಯುವತಿಯರು ಹಾಗೂ ಮಹಿಳೆಯರು ಅತ್ಯುತ್ಸಾಹದಿಂದ ಎಲ್ಲಾ ರೌಂಡ್‌ಗಳಲ್ಲೂ ಪಾಲ್ಗೊಂಡರು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಭಿನ್ನ-ವಿಭಿನ್ನವಾಗಿ ಸಿಂಗರಿಸಿಕೊಂಡಿದ್ದರು. ಜ್ಯೂರಿ ಪ್ಯಾನೆಲ್‌ನ ಪ್ರತಿ ಪ್ರಶ್ನೆಗೂ ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡಿದರು.
ನಂದಿನಿ ನಾಗರಾಜ್ ನೇತೃತ್ವದ ಪೇಜೆಂಟ್
ಪ್ರತಿ ವರ್ಷದಂತೆ ಈ ವರ್ಷವೂ ನಡೆದ ಮಿಸ್ ಹಾಗೂ ಮಿಸೆಸ್ ಇಂಡಿಯಾ ರೋಲ್ ಮಾಡೆಲ್ ಹೆಸರಿನ ಬ್ಯೂಟಿ ಪೇಜೆಂಟ್, ಯುವತಿಯರು ಹಾಗೂ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಿತಲ್ಲದೇ, ಅವರ ಸಬಲೀಕರಣಕ್ಕೆ ಆದ್ಯತೆ ನೀಡಿತು. ಜೊತೆಗೆ ಅವರ ಟ್ಯಾಲೆಂಟ್ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿತು ಎಂದು ನಂದಿನಿ ನಾಗರಾಜ್ ಹೇಳಿದರು.
ಪೇಜೆಂಟ್ ವಿಜೇತರ ಪಟ್ಟಿ
ಮಿಸೆಸ್ ಇಂಡಿಯಾ ಕೆಟಗರಿಯಲ್ಲಿ ಶೆರ್ಲಿ, ಶೀಲಾ, ಜೀಲು, ಅಪೇಕ್ಷಾ ಹಾಗೂ ಶೋಭ ಕ್ರಮವಾಗಿ ವಿಜೇತರ ಪಟ್ಟಿ ಸೇರಿದರು. ಇನ್ನು ಕರ್ವಿ ಕೆಟಗರಿಯಲ್ಲಿ ಗೀತಾಂಜಲಿ, ತೇಜಾ ಮತ್ತು ಸುಮತಿ ಟೈಟಲ್ ವಿಜೇತರಾದರು.
ಮಿಸ್ ಕೆಟಗರಿ ವಿಜೇತರು
ಮಿಸ್ ಕೆಟಗರಿಯಲ್ಲಿ ತೇಜಸ್ವಿನಿ, ಎಂಜೆಲಿನ್ ಡಿಸೋಜಾ ಹಾಗೂ ವಿಭಾ ವಿಜೇತರಾಗಿದರು.
ಪೇಜೆಂಟ್ ಜ್ಯೂರಿ ಟೀಮ್
ಮಿಸೆಸ್ ಗ್ಲೋಬಲ್ ಯೂನಿವರ್ಸ್ ಸಪ್ನಾ ಸಾವಂತ್, ಮಿಸೆಸ್ ವಲ್ರ್ಡ್ ವೈಡ್ ಅಂಬಾಸಡರ್ ಜನನಿ ರಂಜನ್, ಮಿಸೆಸ್ ಇಂಡಿಯಾ ರೋಲ್ ಮಾಡೆಲ್ ಜನನಿ, ಮಿಸೆಸ್ ಇಂಡಿಯಾ ಅಂಬಾಸಡರ್ ಸುಚಿತ್ರಾ ವೇಣುಗೋಪಾಲ್, ಮಿಸೆಸ್ ಇಂಡಿಯಾ ವಲ್ರ್ಡ್ ವೈಡ್ ಶ್ವೇತಾ ಮಯೂರ ಪೇಜೆಂಟ್‌ನ ಜ್ಯೂರಿ ಟೀಮ್‌ನಲ್ಲಿದ್ದರು. ಸ್ಪರ್ಧಾಳುಗಳಿಗೆ ಸೆಲೆಬ್ರೆಟಿ ಡಿಸೈನರ್ ಚಂದನ್‌ಗೌಡ ಡಿಸೈನರ್‌ವೇರ್‌ಗಳನ್ನು ಡಿಸೈನ್ ಮಾಡಿದ್ದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Eshani Fashion Interview: ಬಿಗ್ ಬಾಸ್ ಸ್ಪರ್ಧಿ, ಕನ್ನಡ ರ‍್ಯಾಪರ್ ಇಶಾನಿಯ ಫ್ಯಾಷನ್ ಟಿಪ್ಸ್ ಹೀಗಿದೆ…